ಅಚ್ಚರಿ ಮೂಡಿಸಿದ ನೀರಾವರಿ ಇಲಾಖೆ ನಡೆ


Team Udayavani, Oct 28, 2021, 12:48 PM IST

16water

ಸಿಂಧನೂರು: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಪೈಪ್‌ಗ್ಳನ್ನು ಹಾಕಿ ಉಪ ಕಾಲುವೆಗೆ ನೀರು ಡಂಪ್‌ ಮಾಡುತ್ತಿರುವ ಪ್ರಕ್ರಿಯೆ ರೈತ ವಲಯದಲ್ಲಿ ಅಸಮಾಧಾನ ಸೃಷ್ಟಿಸಿದೆ.

ತಾಲೂಕಿನ 36ನೇ ಉಪ ಕಾಲುವೆಯ ಎರಡು ಪೈಪ್‌ಗ್ಳು ಕುಸಿದ ಹಿನ್ನೆಲೆಯಲ್ಲಿ ಅದರ ಬದಲಾಗಿ ಬೇರೆ ಪೈಪ್‌ಗ್ಳ ಮೂಲಕ ನೀರು ಹರಿಸಲು ಪ್ರಯತ್ನಿಸಲಾಗಿದೆ. ಮುಖ್ಯ ಕಾಲುವೆಗೆ ಹಾಕಿದ ನಾಲ್ಕು ಪೈಪ್‌ಗ್ಳಲ್ಲಿ ತಲಾ 3 ಅಡಿ ನೀರು ಹರಿಸಿದಾಗ ಉಪ ಕಾಲುವೆ ಭರ್ತಿಯಾಗಿ ಹರಿಯುತ್ತದೆ. ಇದನ್ನು ತಪ್ಪಿಸಲು ನಾಲ್ಕು ಹೊಸ ಪೈಪ್‌ ಹಾಕಿ, ಹರಸಾಹಸಕ್ಕೆ ಕೈ ಹಾಕಿದ್ದು, ರೈತ ವಲಯವನ್ನು ಕೆರಳಿಸಿದೆ.

ಎಂಜಿನಿಯರಿಂಗ್‌ ಇಲಾಖೆ ವಿಫಲ

ರಾಯಚೂರಿಗೆ ಸಾಗುವ ತುಂಗಭದ್ರಾ ಎಡದಂಡೆಗೆ ಹಾಕಿರುವ ನಾಲ್ಕು ಪೈಪ್‌ಗಳ ಮೂಲಕ ಅವುಗಳು ಭರ್ತಿಯಾಗಿ ಒಡ್ಡು ದಾಟಿ, ಮತ್ತೆ ಉಪ ಕಾಲುವೆಗೆ ಇಳಿಯಬೇಕು. ಎತ್ತರದ ಒಡ್ಡು ದಾಟಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಇಳಿಯುತ್ತಿಲ್ಲ. ಮೂರ್‍ನಾಲ್ಕು ಇಂಚಿನಷ್ಟು ನೀರು ಮಾತ್ರ ಬರುತ್ತಿದೆ. ಆದರೆ, ಉಪ ಕಾಲುವೆಯ ಎರಡು ಕಾಲುವೆ ಗೇಟ್‌ನಿಂದ ತಲಾ 3 ಅಡಿಯಷ್ಟು ನೀರು ಭೋರ್ಗರೆಯುತ್ತಿತ್ತು. ಭೋರ್ಗರೆಯುವ ನೀರಿನ ಪ್ರಮಾಣ ಹಾಗೂ ನಲ್ಲಿ ಮಾದರಿಯಲ್ಲಿ ಹರಿಯುವ ನೀರು ನೋಡಿ ರೈತರೇ ಆತಂಕಕ್ಕೆ ಸಿಲುಕಿದ್ದಾರೆ.

ಪರ್ಯಾಯ ಕ್ರಮ ಇಲ್ಲ

ತಾತ್ಕಾಲಿಕವಾಗಿ ಮುಖ್ಯ ಕಾಲುವೆ ಒಡ್ಡು ಕುಸಿಯದಂತೆ ಮಾತ್ರ ನೀರಾವರಿ ಇಲಾಖೆ ಮುನ್ನೆಚ್ಚರಿಕೆ ವಹಿಸಿದಂತಾಗಿದೆ. ಆದರೆ, ಮುಚ್ಚಿಹೋಗಿರುವ ಎರಡು ಪೈಪ್‌ಗ್ಳ ಮೂಲಕ 44 ಸಾವಿರಕ್ಕೂ ಹೆಚ್ಚಿನ ಜಮೀನಿಗೆ ನೀರು ಹರಿಸುವ ಬಗ್ಗೆ ಅಷ್ಟಾಗಿ ಗಮನ ಹರಿಸಿಲ್ಲ.

ತಾತ್ಕಾಲಿಕವಾಗಿ ಸಮಾಧಾನಕ್ಕೆ ಹಾಕಿರುವ ಪೈಪ್‌ಗ್ಳಿಂದಲೂ ನೀರು ಹರಿಯುತ್ತಿಲ್ಲ. ಮುಖ್ಯ ಕಾಲುವೆ ಶೂನ್ಯ ಪಾಯಿಂಟ್‌ನಿಂದಲೇ ಗೇಜ್‌ ಕಡಿತಗೊಳಿಸಲಾಗಿದೆ. ನೀರಿನ ಹರಿವು ತಗ್ಗಿಸದ ರೀತಿಯಲ್ಲಿ 36ನೇ ಉಪ ಕಾಲುವೆ ಭಾಗದ ಹತ್ತಾರು ಹಳ್ಳಿಯ ರೈತರ ಜಮೀನುಗಳಿಗೆ ನೀರೊದಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿಲ್ಲವೆಂಬ ಕೂಗು ಬಲವಾಗಿದೆ.

ಇದನ್ನೂ ಓದಿ: ಶಾಸಕರ ಭವನ ನಿರ್ಮಾಣಕ್ಕೆ ಗುತ್ತಿಗೆ ವಿಘ್ನ!

ಸದ್ಯ ಒಡ್ಡಿಗೆ ಚೀಲಗಳನ್ನು ಹಾಕಿ, ಕಪ್ಪು ಮಣ್ಣು ಹಾಕಲಾಗಿದೆ. ಗೇಟ್‌ಗಳ ಥ್ರಡ್‌ ಇಳಿಸಿ ನೀರಿನ ಹರಿವು ಕಡಿಮೆ ಮಾಡಿದ್ದು, ಪ್ರತ್ಯೇಕವಾಗಿ ಪೈಪ್‌ ಮುಖ್ಯ ಕಾಲುವೆಗೆ ಹಾಕಿ, ಅಲ್ಲಿಂದ ಉಪ ಕಾಲುವೆಗೆ ನೀರು ಕೊಡಲು ಪ್ರಯತ್ನಿಸಲಾಗಿದೆ. ನೀರಿನ ಕೊರತೆ ನಿವಾರಿಸುವುದಕ್ಕೆ ಮೇಲಧಿಕಾರಿಗಳ ಗಮನ ಸೆಳೆಯಲಾಗಿದೆ. -ಹನುಮಂತಪ್ಪ, ಎಇಇ, ನಂ.3 ನೀರಾವರಿ ಇಲಾಖೆ ಉಪವಿಭಾಗ, ಸಿಂಧನೂರು

-ಯಮನಪ್ಪ ಪವಾರ

ಟಾಪ್ ನ್ಯೂಸ್

rape

ಮೈಸೂರು ಗ್ಯಾಂಗ್ ರೇಪ್: 1499 ಪುಟಗಳ ಆರೋಪಪಟ್ಟಿ ಸಲ್ಲಿಸಿದ ಪೊಲೀಸರು

byv

ನಾನು ಎಲ್ಲಿಂದ ಸ್ಪರ್ಧಿಸಬೇಕೆಂದು ಪಕ್ಷ ತೀರ್ಮಾನ ಮಾಡಬೇಕು: ಬಿ.ವೈ.ವಿಜಯೇಂದ್ರ

ಅಧಿಪತ್ಯ ಸಾಧಿಸಲು ಸಿದ್ದು ಮತ್ತೆ ಅಖಾಡಕ್ಕೆ

ಅಧಿಪತ್ಯ ಸಾಧಿಸಲು ಸಿದ್ದು ಮತ್ತೆ ಅಖಾಡಕ್ಕೆ

bommai

ಗಡಿ ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣಕ್ಕೆ ಕಟ್ಟೆಚ್ಚರ: ಸಿಎಂ ಬಸವರಾಜ ಬೊಮ್ಮಾಯಿ

1-ffff

ಬೆಂಗಳೂರು: ಮುನಾವರ್ ಫಾರೂಕಿ ಹಾಸ್ಯ ಕಾರ್ಯಕ್ರಮಕ್ಕೆ ಪೊಲೀಸರ ತಡೆ

ಆರಂಭಿಕ ಆಘಾತದಿಂದ ಚೇತರಿಸಿದ ಭಾರತ: ಕಿವೀಸ್ ಗೆ 284 ರನ್ ಗುರಿ

ಆರಂಭಿಕ ಆಘಾತದಿಂದ ಚೇತರಿಸಿದ ಭಾರತ: ಕಿವೀಸ್ ಗೆ 284 ರನ್ ಗುರಿ

Arvind Kejriwal

ಒಮಿಕ್ರಾನ್ ಪೀಡಿತ ದೇಶಗಳಿಂದ ಬರುವ ವಿಮಾನಗಳನ್ನು ಕೂಡಲೇ ನಿಲ್ಲಿಸಿ: PMಗೆ ಕೇಜ್ರಿವಾಲ್ ಪತ್ರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

23students

ವಿದ್ಯಾರ್ಥಿಗಳೇ ದೇಶದ ಅಮೂಲ್ಯ ಸಂಪತ್ತು

22emergency

ತುರ್ತು ಸೇವೆಗೆ 112 ಸಹಾಯವಾಣಿ

21protest

ಹೆದ್ದಾರಿ ತಡೆದು ಪ್ರತಿಭಟನೆ

20farmer

ನಷ್ಟಕ್ಕೊಳಗಾದ ಪ್ರತಿಯೊಬ್ಬ ರೈತಗೂ ಪರಿಹಾರ

16sheep

ಟಗರು ಸಾಕಾಣಿಕೆಯಿಂದ ಖುಲಾಯಿಸಿದ ಅದೃಷ್ಟ

MUST WATCH

udayavani youtube

ಬೂದು ಬಾಳೆ ಸೇವನೆಯಿಂದ ಆರೋಗ್ಯವಾಗಿರುವುದು ನಿಮ್ಮ ನಾಳೆ

udayavani youtube

4.2 ಕಿ.ಮೀ. ಸೈಕಲ್ ಚಾಲನೆ ಮಾಡಿದ ಸಚಿವ ಅಶ್ವತ್ಥ ನಾರಾಯಣ

udayavani youtube

ವಾಹನ ತಪಾಸಣೆಗೆ ಇಳಿದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಯಾಣಿಕರು.!

udayavani youtube

ದಾಂಡೇಲಿ: ಗಬ್ಬು ನಾರುತ್ತಿದೆ ಸಂಡೆ ಮಾರ್ಕೆಟ್ ಹೊರ ಆವರಣ

udayavani youtube

ನೀರಿನಿಂದ ಮಲ್ಲಿಗೆ ಗಿಡವನ್ನು ಬೆಳೆಯಬಹುದೇ ?

ಹೊಸ ಸೇರ್ಪಡೆ

rape

ಮೈಸೂರು ಗ್ಯಾಂಗ್ ರೇಪ್: 1499 ಪುಟಗಳ ಆರೋಪಪಟ್ಟಿ ಸಲ್ಲಿಸಿದ ಪೊಲೀಸರು

ಶ್ರೀರಂಗಪಟ್ಟಣ: ಪ್ರತ್ಯೇಕ ಘಟನೆಯಲ್ಲಿ 3 ಸಾವು

ಶ್ರೀರಂಗಪಟ್ಟಣ: ಪ್ರತ್ಯೇಕ ಘಟನೆಯಲ್ಲಿ 3 ಸಾವು

ಬಿಜೆಪಿ ಅಭ್ಯರ್ಥಿ ಗೆಲುವು ಶತಸಿದ್ಧ    

ಬಿಜೆಪಿ ಅಭ್ಯರ್ಥಿ ಗೆಲುವು ಶತಸಿದ್ಧ    

ಅಭಿವೃದ್ಧಿಗಾಗಿ ಪರಿಷತ್‌ಗೆ ಸ್ಪರ್ಧಿಸಿದ್ದೇನೆ: ನಾರಾಯಣಸ್ವಾಮಿ 

ಅಭಿವೃದ್ಧಿಗಾಗಿ ಪರಿಷತ್‌ಗೆ ಸ್ಪರ್ಧಿಸಿದ್ದೇನೆ: ನಾರಾಯಣಸ್ವಾಮಿ 

ಪಾದಯಾತ್ರೆ ಹಿನ್ನೆಲೆ: ಮೇಕದಾಟುವಿಗೆ ಭೇಟಿ ನೀಡಿದ ಡಿಕೆಶಿ

ಪಾದಯಾತ್ರೆ ಹಿನ್ನೆಲೆ: ಮೇಕದಾಟುವಿಗೆ ಭೇಟಿ ನೀಡಿದ ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.