

Team Udayavani, Aug 18, 2018, 12:04 PM IST
ಔರಾದ: ನವದೆಹಲಿಯಲ್ಲಿ ಭಾರತ ಸಂವಿಧಾನದ ಪ್ರತಿಯನ್ನು ಸುಟ್ಟು ಹಾಕಿರುವ ಕೋಮುವಾದಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಕನ್ನಡಾಂಬೆ ವೃತ್ತದ ಬಳಿ ಸೇರಿದ ದಲಿತ ಸಂಘಟನೆಯ ಮುಖಂಡರು ಹಾಗೂ ಸದಸ್ಯರು, ಮುಖ್ಯರಸ್ತೆ ಮಾರ್ಗವಾಗಿ ತಹಶೀಲ್ದಾರ್ ಕಚೇರಿಗೆ ತೆರಳಿ ಈ ಕುರಿತು ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ್‌ಗೆ ಸಲ್ಲಿಸಿದರು.
ಈ ವೇಳೆ ಮುಖಂಡ ಬಂಟಿ ದರ್ಬಾರೆ, ಹಿಂದುಳಿದ ಹಾಗೂ ದಲಿತರ ಜೀವನಕ್ಕೆ ದಾರಿ ದೀಪವಾಗಿರುವ ಭಾರತೀಯ ಸಂವಿಧಾನಕ್ಕೆ ಬೆಂಕಿ ಹಚ್ಚಿರುವ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಮನವಿ ಮಾಡಿದರು.
ಈ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು ಮೌನಕ್ಕೆ ಶರಣಾಗದೇ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ
ನೀಡಲು ಮುಂದಾಗಬೇಕು ಎಂದು ಮನವಿ ಮಾಡಿದರು. ಶಿವುಕುಮಾರ ಕಾಂಬಳೆ ಮಾತನಾಡಿ, ದೇಶದ ಸಂವಿಧಾನ ಆಪತ್ತಿಗೆ ಒಳಗಾಗುತ್ತಿದೆ. ಕೋಮುವಾದಿಗಳು ಸಂವಿಧಾನ ವಿರೋಧಿ ನಂಬಿಕೆಗಳನ್ನು ಬಿತ್ತಿ ಬೆಳೆಯುತ್ತಿದ್ದಾರೆ. ಮನುಸ್ಮೃತಿ ಆಧಾರವಿಲ್ಲವೆಂಬ ಕಾರಣಕ್ಕಾಗಿ ತಾವು ಸಂವಿಧಾನ ಒಪ್ಪುವುದಿಲ್ಲ ಎಂದು ಆರ್‌ಎಸ್‌ಎಸ್ ಹಾಗೂ ಬಿಜೆಪಿಯ ನಾಯಕರು ತಮ್ಮ ನಿಲುವನ್ನು ಪ್ರಕಟಿಸಿದ್ದು,
ಇತಿಹಾಸದಲ್ಲಿ ದಾಖಲೆಯಾಗಿದೆ.
ಬಿಜೆಪಿಯು ಆರ್‌ಎಸ್‌ಎಸ್‌ನ ರಾಜಕೀಯ ವಿಭಾಗವಾಗಿದ್ದು ಸಹಜವೆ. ಅದು ಸಂವಿಧಾನದ ಆಧಾರದಲ್ಲಿ ಚುನಾವಣೆಯಲ್ಲಿ ಆಯ್ಕೆಯಾಗಿ ಬಂದರೂ ಸಂವಿಧಾನ ವಿರೋಧಿ ನಿಲುವನ್ನು ದೃಢಗೊಳಿಸಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಸಂವಿಧಾನ ವಿರೋಧಿ ನಿಲುವು ಹೊಂದಿರುವ ಆರ್‌ಎಸ್‌ಎಸ್ ವಿರುದ್ಧ ಕಾನೂನು ಕ್ರಮ ಕೈಗೋಳ್ಳಬೇಕೆಂದು ಒತ್ತಾಯಿಸಿದರು.
ಬಿಜೆಪಿ ಶಾಸಕ ಪ್ರಭು ಚವ್ಹಾಣ, ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವ ಅನಂತಕುಮಾರ ಹೆಗಡೆ ವಿರುದ್ಧ ಪ್ರತಿಭಟನಕಾರರು ಘೋಷಣೆ ಕೂಗಿದರು. ಮುಖಂಡ ಬಾಬುರಾವ್ ತಾರೆ, ರಾಜಾಜೀವನ ಮಹಿಕರ್, ರಹಿಮಶಾಬ, ಸುನೀಲ ಮಿತ್ರಾ, ಸಂಜು ಯನಗುಂದಾ, ರಾಜಕುಮಾರ ಮೈಲಾರೆ, ದಯಾಸಾಗರ ಭಂಡೆ, ರಾಜಕುಮಾರ ಮೈಲಾರೆ, ಸುಭಾಷ
ಲಾಧಾ, ಸ್ವಾಮೀದಾಸ ಮೇಘಾ, ಸತೀಶ ವಗ್ಗೆ, ಅಶೋಕ ದರ್ಬಾರೆ, ಪ್ರಕಾಶ ಭಂಗಾರೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Ad
Bidar: ‘ಅಕ್ಕ ಪಡೆ’ ರಾಜ್ಯಾದ್ಯಂತ ವಿಸ್ತರಣೆಗೆ ಸಿದ್ಧತೆ
ಗೃಹಲಕ್ಷ್ಮಿ ಸಂಘಗಳ ರಚನೆಗೆ ಚಿಂತನೆ: ಸ್ತ್ರೀ ಆರ್ಥಿಕ ಬಲಕ್ಕಾಗಿ ಯೋಜನೆ :ಸಚಿವೆ ಹೆಬ್ಬಾಳಕರ್
Bidar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳಗೊಳಿಸಲು ಕ್ರಮ ಕೈಗೊಳ್ಳಿ: ಹೆಬ್ಬಾಳ್ಕರ್
Bidar: ರವಿಕುಮಾರ ಹೇಳಿಕೆ ಇಡೀ ಹೆಣ್ಣು ಕುಲಕ್ಕೆ ಮಾಡಿರುವ ಅವಮಾನ: ಹೆಬ್ಬಾಳಕರ್ ಟೀಕೆ
Bidar; ವಾಹನ ಬಾವಿಗೆ ಬಿದ್ದು ಇಬ್ಬರು ಸಾ*ವು,ತಾಯಿಗೂ ಹೃದಯಾಘಾತ!
ಶಾಸಕ ಸಿ.ಪಿ.ಯೋಗೇಶ್ವರ್ ವಿರುದ್ಧ ಮೊದಲ ಪತ್ನಿ, ಪುತ್ರಿಯಿಂದ ಸುರ್ಜೇವಾಲಗೆ ದೂರು
ಉಗ್ರರಿಗೆ ಜೈಲಿನಲ್ಲೇ ಅನುಕೂಲ: ರಾಜ್ಯದಲ್ಲಿ ಗೃಹ ಇಲಾಖೆ ಸತ್ತೇ ಹೋಗಿದೆ: ಆರ್.ಅಶೋಕ್
FATF; ಪಾಕ್ ಹಣ ಬೆಂಬಲ: ಭಾರತದ ವಾದಕ್ಕೆ ಮೊದಲ ಜಯ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣ ಶೀಘ್ರ ಸಿಐಡಿ ವರದಿ ಸಲ್ಲಿಕೆ?
ಉಗ್ರನ ಪರಾರಿ ಮಾಡಿಸಲು ಸಜ್ಜಾಗಿದ್ದ ಎಎಸ್‌ಐ, ಮಹಿಳೆ! ಎನ್‌ಐಎ ತನಿಖೆಯಲ್ಲಿ ಬಹಿರಂಗ
You seem to have an Ad Blocker on.
To continue reading, please turn it off or whitelist Udayavani.