“ಸಹಕಾರಿ’ಗಳು ರೈತರ ಆಶಾಕಿರಣ


Team Udayavani, Dec 13, 2020, 4:16 PM IST

“ಸಹಕಾರಿ’ಗಳು ರೈತರ ಆಶಾಕಿರಣ

ಬೀದರ: ಸಹಕಾರ ಕ್ಷೇತ್ರವು ಸಮಾಜಕ್ಕೆ ಸೇವೆ ಸಲ್ಲಿಸಬೇಕೆಂದು ಅಭಿಲಾಷೆ ಇರುವ ಜನರಿಗೆ ಅತ್ಯುತ್ತಮ ಅವಕಾಶ ಒದಗಿಸುವ ಕ್ಷೇತ್ರವಾಗಿದೆ. ಜನರಿಗೆ ಆರ್ಥಿಕ ಪ್ರಗತಿ ಜೊತೆಗೆ ಸಾಮಾಜಿಕ ಪ್ರಗತಿ ಸಾಧಿ ಸಲು ನೆರವಾಗುವ ಸಹಕಾರಿ ಸಂಘಗಳು ಗ್ರಾಮೀಣರೈತರ ಆಶಾಕಿರಣಗಳಾಗಿವೆ ಎಂದು ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕ ಸಂಗಮ ಬಾಬುರಾವ ಹೇಳಿದರು.

ನಗರದ ಸಹಾರ್ದ ತರಬೇತಿ ಸಂಸ್ಥೆಯಲ್ಲಿಕಲಬುರ್ಗಿ, ಯಾದಗಿರಿ ಮತ್ತು ಬೀದರ ಜಿಲ್ಲೆಗಳಪ್ಯಾಕ್ಸಗಳ ಆಡಳಿತ ಮಂಡಳಿ ಸದಸ್ಯರಿಗಾಗಿ ಆಯೋಜಿಸಿರುವ 3 ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಅವರು, ಸಂಘಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಲು ಸಹಕಾರಿ ಸಂಘದ ಆಡಳಿತ ಮಂಡಳಿ ಸದಸ್ಯರಿಗೆ ಸಹಕಾರಿ ತತ್ವಗಳಬಗ್ಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಸಂಘದಿಂದ ಅದರ ಸದಸ್ಯರಿಗೆ ಆರ್ಥಿಕ ಅನುಕೂಲಗಳನ್ನು ಒದಗಿಸಿಕೊಡಲು ವಿಶ್ವಾಸ ಉಳಿಸಿಕೊಳ್ಳುವುದು ಮುಖ್ಯವಾಗಿದೆ ಎಂದರು.

ಸಹಕಾರಿ ಬ್ಯಾಂಕ್‌ಗಳ ಮೇಲಿನ ವಿಶ್ವಾಸಾರ್ಹತೆಗೆ ಧಕ್ಕೆಯಾಗುತ್ತಿರುವಇಂದಿನ ದಿನಗಳಲ್ಲಿ ಸಂಘಗಳು ಯಶಸ್ವಿಯಾಗಬೇಕಾದರೆ ಆಡಳಿತ ಮಂಡಳಿ ಸದಸ್ಯರಲ್ಲಿ ವಿಶಾಲ ಮನೋಭಾವ,ಪ್ರಾಮಾಣಿಕತೆ ಮತ್ತು ಜನಸೇವೆ ಮಾಡುವ ಇಚ್ಚೆಯಿರಬೇಕು. ಸಿಬ್ಬಂದಿಗಳಲ್ಲಿ ಶಿಸ್ತು ಮತ್ತು ಕಾರ್ಯತತ್ಪರತೆ ಇರಬೇಕು. ಆಡಳಿತ ಮಂಡಳಿಯು ಸೂಕ್ತ ನಿರ್ವಹಣೆ ಮಾಡಬೇಕು, ಉತ್ತಮ ಆಡಳಿತ ನಿರ್ವಹಣೆ ರೂಢಿಸಿಕೊಂಡ ಸದಸ್ಯರು ಸಂಘದ ಬೆಳವಣಿಗೆಗೆ ಕಾರಣರಾಗುತ್ತಾರೆ. ನೂತನ ವ್ಯವಹಾರಿಕ ನಿರ್ವಹಣೆ ಸೂತ್ರಗಳನ್ನು ಕಲಿಯಲು ತರಬೇತಿಗಳಲ್ಲಿ ಭಾಗವಹಿಸುವುದು ಅವಶ್ಯಕವಾಗಿದೆ ಎಂದರು.

ಸಹಕಾರಿ ಸಂಘಗಳಲ್ಲಿ ಸಾಲ ತೆಗೆದುಕೊಂಡು ಕಟ್ಟದೇ ಇದ್ದಲ್ಲಿ ಅವ್ಯವಹಾರ ನಡೆಸಿದಲ್ಲಿ ಆಡಳಿತ ಮಂಡಳಿಯೇ ಜವಾಬ್ದಾರಿ ಯಾಗುತ್ತದೆ. ಆದ್ದರಿಂದ ಸಾಲ ಮಂಜೂರಾಗುವ ಸದಸ್ಯರಿಗೆ ಸಾಲ ಮರುಪಾವತಿ ಪ್ರಶಿಕ್ಷಣ ನೀಡಿದ ಬಳಿಕ ಸಾಲ ನೀಡುವ ವ್ಯವಸ್ಥೆ ತರಬೇಕಾಗಿದೆ ಎಂದು ಹೇಳಿದರು. ಡಿಸಿಸಿ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ವಿಠಲ ರೆಡ್ಡಿ ಮಾತನಾಡಿ, ಸಹಕಾರಿ ಸಂಘಗಳು ವ್ಯವಹಾರ ಅಭಿವೃದ್ಧಿ ಮೂಲಕ ಸ್ವಾವಲಂಬಿಗಳಾಗಬೇಕು. ಊರಿನ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಸದಸ್ಯರು ದೂರದೃಷ್ಠಿ ಯೋಜನೆ ಹೊಂದಿರಬೇಕು. ಸಾಲ ಮರುಪಾವತಿಯಾಗದೇ ಇದ್ದಲ್ಲಿ ಸಹಕಾರಿ ಸಂಘಗಳ ಕಾಯ್ದೆ ಕಲಂ 70ರ ಪ್ರಕಾರ ನಿಬಂಧಕರಲ್ಲಿ ಕೇಸ್‌ ದಾಖಲಿಸುವ ಮೂಲಕ ವಸೂಲಿ ಮಾಡಬಹುದಾಗಿದೆ.  ಸರಕಾರ ನೀಡಿರುವ ಕಾನೂನು ಸೌಲಭ್ಯವನ್ನು ಸಂಘಗಳು ಬಳಸಿಕೊಳ್ಳಬೇಕು. ಉತ್ತಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ರೈತರಿಗೆ ನೆರವಾಗಬೇಕು. ಸಮಾಜದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದರು.

ಬಸವರಾಜ ಕಲ್ಯಾಣ ಮಾತನಾಡಿದರು. ಕಲಬುರ್ಗಿ ಗಾರೆಂಪಳ್ಳಿ ಸಂಘದ ಅಧ್ಯಕ್ಷ ತುಕ್ಕಪ್ಪಾ, ಚಿಂಚೋಳಿಯ ಜಗದೇವಪ್ಪಾ ಇದ್ದರು. ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಅನಿಲ ಪರೇಶ್ಯಾನೆ, ಮಹಾಲಿಂಗ ಕಟಗಿ, ಅಪ್ಪಣ್ಣಾ ಕಾರ್ಯಕ್ರಮ ನಿರ್ವಹಿಸಿದರು. ಎಸ್‌.ಜಿ. ಪಾಟೀಲ ವಂದಿಸಿದರು

ಟಾಪ್ ನ್ಯೂಸ್

32 ವರ್ಷದ ವ್ಯಕ್ತಿಯ ಹೊಟ್ಟೆಯಲ್ಲಿತ್ತು 63 ಚಮಚ : ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರಿಗೆ ಶಾಕ್

32 ವರ್ಷದ ವ್ಯಕ್ತಿಯ ಹೊಟ್ಟೆಯಲ್ಲಿತ್ತು 63 ಚಮಚ : ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರಿಗೆ ಶಾಕ್

owaisi

ಪಿಎಫ್ ಐ ಕಾರ್ಯ ವಿಧಾನವನ್ನು ಯಾವಾಗಲೂ ವಿರೋಧಿಸುತ್ತಿದ್ದೆ: ಓವೈಸಿ

“ತೋತಾಪುರಿ” ಮೇಲೆ ಸುಮನ ಗಮನ!

“ತೋತಾಪುರಿ” ಮೇಲೆ ಸುಮನ ಗಮನ!

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಶೇ.4ರಷ್ಟು ಏರಿಕೆ; ಕೇಂದ್ರ

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಶೇ.4ರಷ್ಟು ಏರಿಕೆ; ಕೇಂದ್ರ

ಸಂಚಾರ ಪೊಲೀಸರಿಗೆ ಪ್ರತಿದಿನ 40 ಪ್ರಕರಣ ದಾಖಲು ಟಾರ್ಗೆಟ್‌?

ಸಂಚಾರ ಪೊಲೀಸರಿಗೆ ಪ್ರತಿದಿನ 40 ಪ್ರಕರಣ ದಾಖಲು ಟಾರ್ಗೆಟ್‌?

firee

ಚೀನದ ರೆಸ್ಟೋರೆಂಟ್‌ನಲ್ಲಿ ಬೆಂಕಿ ಅವಘಡ: ಕನಿಷ್ಠ 17 ಜನ ಸಾವು

ಮಾಲ್‌ ನಲ್ಲಿ ಸಿನಿಮಾ ಪ್ರಚಾರ: ಜನಸಂದಣಿಯಲ್ಲಿ ಖ್ಯಾತ ನಟಿಯರಿಗೆ ದೈಹಿಕ ಕಿರುಕುಳ

ಮಾಲ್‌ ನಲ್ಲಿ ಸಿನಿಮಾ ಪ್ರಚಾರ: ಜನಸಂದಣಿಯಲ್ಲಿ ಖ್ಯಾತ ನಟಿಯರಿಗೆ ದೈಹಿಕ ಕಿರುಕುಳಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹುಮನಾಬಾದ್ ನಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರ ದಾಳಿ : PFI, SDPI ಮುಖಂಡರ ಬಂಧನ

ಹುಮನಾಬಾದ್ ನಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರ ದಾಳಿ : PFI, SDPI ಮುಖಂಡರ ಬಂಧನ

1-sdsdsad

ಲೋಕಾಯುಕ್ತ ತನಿಖೆಗೆ ನೀಡಬಹುದಲ್ಲವೇ: ಹೆಚ್ ಡಿಕೆ ಗೆ ಸಚಿವ ನಾಗೇಶ್ ಪ್ರಶ್ನೆ

ಬೀದರ್: ಬಟ್ಟೆ ಒಗೆಯಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ನೀರುಪಾಲು

ಬೀದರ್: ಬಟ್ಟೆ ಒಗೆಯಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ನೀರುಪಾಲು

ಹುಮನಾಬಾದ್: ವಿವಿಧ ಧಾರ್ಮಿಕ ಸ್ಥಳಕ್ಕೆ ಸಿಎಂ ಫೈಜ್ ಮೊಹಮ್ಮದ್ ಭೇಟಿ

ಹುಮನಾಬಾದ್: ವಿವಿಧ ಧಾರ್ಮಿಕ ಸ್ಥಳಕ್ಕೆ ಸಿಎಂ ಫೈಜ್ ಮೊಹಮ್ಮದ್ ಭೇಟಿ

ಸಿಎಂ ಇಬ್ರಾಹಿಂ ಅವರ ಮಗ ಹುಮನಾಬಾದ ಕ್ಷೇತ್ರದಿಂದ ಸ್ಪರ್ಧೆ?

ಸಿಎಂ ಇಬ್ರಾಹಿಂ ಅವರ ಮಗ ಹುಮನಾಬಾದ ಕ್ಷೇತ್ರದಿಂದ ಸ್ಪರ್ಧೆ?

MUST WATCH

udayavani youtube

ಬಿಜೆಪಿ ಸರಕಾರ ಇರೋವರೆಗೆ ದೇಶ ದ್ರೋಹಿಗಳಿಗೆ ವಿಜೃಂಭಿಸಲು ಅವಕಾಶವಿಲ್ಲ

udayavani youtube

ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿಯ ಚಾಲನೆ

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

ಹೊಸ ಸೇರ್ಪಡೆ

32 ವರ್ಷದ ವ್ಯಕ್ತಿಯ ಹೊಟ್ಟೆಯಲ್ಲಿತ್ತು 63 ಚಮಚ : ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರಿಗೆ ಶಾಕ್

32 ವರ್ಷದ ವ್ಯಕ್ತಿಯ ಹೊಟ್ಟೆಯಲ್ಲಿತ್ತು 63 ಚಮಚ : ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರಿಗೆ ಶಾಕ್

20 ವರ್ಷದಿಂದ ನೀರಿನ ಸಂಪರ್ಕ ಕಾಣದ ಓವರ್‌ ಹೆಡ್‌ ಟ್ಯಾಂಕ್‌

20 ವರ್ಷದಿಂದ ನೀರಿನ ಸಂಪರ್ಕ ಕಾಣದ ಓವರ್‌ ಹೆಡ್‌ ಟ್ಯಾಂಕ್‌

13

ಕುರುಗೋಡು: ಪ್ರತಿಯೊಬ್ಬರೂ ಸಂವಿಧಾನತ್ಮಕ ಹಕ್ಕು ಪಡೆಯಲು ಮುಂದಾಗಿ: ನಾಗಪ್ಪ

“ದಿ ಚೆಕ್‌ ಮೇಟ್‌” ಇದು ಮೊದಲನೇ ಸುತ್ತಿನ ಆಟ

“ದಿ ಚೆಕ್‌ ಮೇಟ್‌” ಇದು ಮೊದಲನೇ ಸುತ್ತಿನ ಆಟ

vidhana-soudha

ವಿಳಂಬ ನೀತಿ ಖಂಡಿಸಿ ಸಚಿವಾಲಯದ ನೌಕರರ ಸಂಘದಿಂದ ಮತ್ತೆ ಧರಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.