ಭಾಲ್ಕಿ ಕೋಟೆ ಜೀರ್ಣೋದ್ಧಾರ ಯಾವಾಗ?

Team Udayavani, May 26, 2018, 3:31 PM IST

bid-1.jpg

ಭಾಲ್ಕಿ: ಭಾರತೀಯ ಸರ್ವೇಕ್ಷಣಾ ಇಲಾಖೆಯಡಿ ಬರುವ ತಾಲೂಕಿನ ಪುರಾತನ ಕೋಟೆಗಳ ಜೀರ್ಣೋದ್ಧಾರ ಕಾರ್ಯ ಕನಸಾಗಿಯೇ ಉಳಿದಿದೆ. ಹಳೆ ಪಟ್ಟಣ, ಭಾತಂಬ್ರಾ ಕೋಟೆಗಳು ಐತಿಹಾಸಿಕ ಕೋಟೆಗಳಾಗಿದ್ದು, ಸಿಥಿಲಾವಸ್ಥೆಯಲ್ಲಿರುವ ಇವುಗಳ ಜೀರ್ಣೋದ್ಧಾರ ಕಾರ್ಯ ನಡೆಯಬೇಕಾಗಿದೆ.

ಬೀದರನ ಬಹುಮನಿ ಸುಲ್ತಾನರ ಕಾಲದ ಕೋಟೆಗಳ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಂಡ (ಎಎಸ್‌ಐ) ಭಾರತೀಯ ಸರ್ವೇಕ್ಷಣಾ ಇಲಾಖೆ, ಭಾಲ್ಕಿ ಕೋಟೆಗಳ ಜೀರ್ಣೋದ್ಧಾರ ಕಾರ್ಯ ಮಾಡದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎನ್ನುತ್ತಾರೆ ತಾಲೂಕಿನ ಇತಿಹಾಸ ತಜ್ಞ ಸುಬ್ಬಣ್ಣ ಅಂಬೆಸಿಂಗೆ.

ಪಟ್ಟಣದ ಐತಿಹಾಸಿಕ ಕೋಟೆಯು ನಿಜಾಮನ ಆಡಳಿತಕ್ಕಿಂತ ಮುನ್ನದ ಅರಸರ ಕಾಲದ ಪಾಳೆಯಗಾರ ರಾಮಚಂದ್ರ ಜಾಧವ ಕಟ್ಟಿಸಿರುವುದಾಗಿ ಇತಿಹಾಸ ತಜ್ಞರು ಹೇಳುತ್ತಾರೆ. ಇತಿಹಾಸ ಪ್ರಸಿದ್ಧವಾದ ಈ ಕೋಟೆಯು ಇಂದು ಅಳಿವಿನ ಅಂಚಿನಲ್ಲಿದೆ. ಕೋಟೆಯ ಒಳಗೆ ಒಂದು ಮಜ್ಜಿದ್‌ ನಿರ್ಮಿಸಲಾಗಿದೆ. ಕೋಟೆಯ ಪಶ್ಚಿಮ ಮುಖ್ಯದ್ವಾರದಲ್ಲಿ ಗಣೇಶ ಮೂರ್ತಿ ಸ್ಥಾಪಿಸಲಾಗಿದೆ.

ಇದರಿಂದ ಹಿಂದೂ ಮುಸ್ಲಿಂ ಸಾಮರಸ್ಯ ಹದಗೆಡುವ ಸಂಭವ ಹೆಚ್ಚಾಗಿದೆ. ಮುಸ್ಲಿಮರ ರಂಜಾನ್‌, ಬಕ್ರಿದ್‌ ಹಾಗೂ ಹಿಂದೂಗಳ ಗಣೇಶ ಉತ್ಸವ, ಹೋಳಿ ಹಬ್ಬ ಸೇರಿದಂತೆ ಹಲವಾರು ಸಾರ್ವಜನಿಕ ಹಬ್ಬಗಳಲ್ಲಿ ಇಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡುವ ಅನಿರ್ವಾಯತೆ ಇದೆ. ಇದಕ್ಕೆಲ್ಲ ಕಡಿವಾಣ ಹಾಕಿ, ಕೋಟೆ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಳ್ಳಬೇಕಾದ ಭಾರತೀಯ ಸರ್ವೇಕ್ಷಣಾ ಇಲಾಖೆ ನಿದ್ರಾವಸ್ತೆಯಲ್ಲಿದೆ ಎನ್ನುತ್ತಾರೆ ಭಾಲ್ಕಿಯ ಚಿಂತಕ ಓಂಪ್ರಕಾಶ ರೊಟ್ಟೆ.

ಕೋಟೆಯ ಮೂರು ಬದಿಗಳಲ್ಲಿ ರಸ್ತೆಗಳಿದ್ದು, ಪೂರ್ವ ಭಾಗಕ್ಕೆ ವೀರಭದ್ರೇಶ್ವರ ದೇವರ ರಥೋತ್ಸವ ನಡೆಸುವ  ಮೈದಾನವಿದೆ. ಕೆಲವು ದಿನಗಳ ಹಿಂದೆ ಈ ಸ್ಥಳದಲ್ಲಿ ವಾರಕ್ಕೊಮ್ಮೆ ಅಂಗಡಿಗಳು ತುಂಬುತ್ತಿದ್ದವು. ಪಟ್ಟಣದ ನಾಗರಿಕರು ತಮಗೆ ಬೇಕಾದ ವಸ್ತುಗಳನ್ನು ಈ ಸ್ಥಳದಲ್ಲಿಯೇ ಖರೀದಿಸುತ್ತಿದ್ದರು. ಈಗ ಅದು ಸ್ಥಗಿತವಾಗಿದೆ.  ಕೋಟೆಯ ಒಳಗಡೆ ಸತ್ಯನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆ ನಡೆಸಲಾಗುತ್ತಿದ್ದು, ಈಗ ಪ್ರೌಢಶಾಲೆ ತನ್ನ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾಗಿದೆ.

ಪ್ರಾಥಮಿಕ ಶಾಲೆ ಇನ್ನೂ ಅಲ್ಲಿಯೇ ನಡೆಯುತ್ತಿದೆ. ಕೋಟೆಯ ಒಳಗೆ ರಾಣಿ ಮಹಲ್‌, ಕುದುರೆ ಶಾಲೆ ಎಲ್ಲವೂ ಇದೆ. ಸುಮಾರು ವರ್ಷಗಳ ಹಿಂದೆ ಪೂರ್ವ ಭಾಗದ ಮುಖ್ಯದ್ವಾರದ ಮೇಲಿದ್ದ ಒಂದು ಕಟ್ಟಡ ಸ್ಫೋಟವಾಗಿ ಬಿದ್ದುಬಿಟ್ಟಿತ್ತು. ಕಾರಣ ಅದರಲ್ಲಿ ಮದ್ದು ಗುಂಡು ತುಂಬಿತ್ತು ಎನ್ನುತ್ತಾರೆ ಭಾಲ್ಕಿಯ ಹಿರಿಯರು. ಒಟ್ಟಿನಲ್ಲಿ ಪುರಾತನ ಕೋಟೆ ಜೀರ್ಣಾವಸ್ಥೆಯಲ್ಲಿದ್ದು, ಪುರಾತತ್ವ ಇಲಾಖೆಯಾಗಲಿ, ಭಾರತೀಯ ಸರ್ವೇಕ್ಷಣಾ ಇಲಾಖೆಯಾಗಲಿ, ಇತ್ತ ಗಮನ ಹರಿಸಿ ಕೋಟೆಯ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಳ್ಳಬೇಕು ಎನ್ನುವುದು ಪಟ್ಟಣದ ಹಿರಿಯ ನಾಗರಿಕರ
ಒತ್ತಾಸೆಯಾಗಿದೆ.

„ಜಯರಾಜ ದಾಬಶೆಟ್ಟಿ

ಟಾಪ್ ನ್ಯೂಸ್

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar ಬಿಜೆಪಿಯ ಹಿರಿಯ ಮುಖಂಡ, ಮಾಜಿ ಶಾಸಕ ರಮೇಶ ಕುಮಾರ್ ಪಾಂಡೆ ನಿಧನ

Bidar ಬಿಜೆಪಿಯ ಹಿರಿಯ ಮುಖಂಡ, ಮಾಜಿ ಶಾಸಕ ರಮೇಶ ಕುಮಾರ್ ಪಾಂಡೆ ನಿಧನ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

1-eqwewqeqwe

Bidar; ಬಿಜೆಪಿಗೆ ನಾಗಮಾರಪಳ್ಳಿ ಕುಟುಂಬದ ಬೆಂಬಲ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.