
45 Years Together; ಸಾವಿನಲ್ಲೂ ಒಂದಾದ ವೃದ್ಧ ದಂಪತಿ
Team Udayavani, May 28, 2023, 7:25 PM IST

ವಿಜಯಪುರ : 45 ವರ್ಷಗಳ ಕಾಲ ಜೋಡೆತ್ತಿನಂತೆ ಬದುಕಿನ ಬಂಡಿ ಎಳೆದಿದ್ದ ಜೋಡಿ, ವಯೋವೃದ್ಧ ದಂಪತಿ ಇದೀಗ ಸಾವಿನಲ್ಲೂ ಜತೆಯಾಗಿದ್ದಾರೆ.
ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಡೋಣೂರ ಗ್ರಾಮದಲ್ಲಿ ಈ ಅಪರೂಪದ ದಂಪತಿಯ ಸಾವು ಸಂಭವಿಸಿದೆ. ರಾಮಪ್ಪ ಟಕ್ಕಳಕಿ ಹಾಗೂ ಶಾಂತವ್ವ ಟಕ್ಕಳಕಿ ಸಾವಲ್ಲಿ ಒಂದಾದ ವೃದ್ಧ ದಂಪತಿ.
ಅನಾರೋಗ್ಯದ ಕಾರಣ ಪತ್ನಿ ಶಾಂತವ್ವ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದರು. ಪತ್ನಿ ಶಾಂತವ್ವಳ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾದ ರಾಮಪ್ಪ ಅವರಿಗೆ ಹೃದಯಾಘಾತ ಸಂಭವಿಸಿದ್ದು, ಅವರೂ ಮೃತಪಟ್ಟಿದ್ದಾರೆ.
ಕುಟುಂಬದ ಹಿರಿಯ ಜೋಡಿಯ ಅಗಲಿಕೆಯಿಂದ ಕಂಗಾಲಾರುವ ಕುಟುಂಬ ಸದಸ್ಯರು, ಬಂಧುಗಳ ಆಕ್ರಂದನ ಮುಗಿಲು ಮುಟ್ಟಿದೆ. ವೃದ್ಧ ದಂಪತಿ ಅಂತ್ಯಸಂಸ್ಕಾರವನ್ನು ಒಂದೇ ಕಡೆ ನೆರವೇರಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura; ಮದುವೆಗೆ ನಿರಾಕರಣೆ, ಯುವತಿ ಹಂತಕನಿಗೆ ಜೀವಾವಧಿ ಶಿಕ್ಷೆ

BJP ವರಿಷ್ಠರು ಮೌನವಾಗಿದ್ದಾರೆಂದರೆ ಏನೋ ದೊಡ್ಡದೇ ನಡೆಯಲಿದೆ: ಯತ್ನಾಳ

Vijayapura; ಡಿಸಿಎಂ ಸ್ಥಾನಕ್ಕೆ ಶಾಮನೂರು ಬೇಡಿಕೆ ಸೂಕ್ತ: ಶಾಸಕ ಯತ್ನಾಳ

Vijayapura; ಜೆಡಿಎಸ್ ಹೊಂದಾಣಿಕೆಯಿಂದ ಬಲ ಬಂದಿದೆ: ಸಂಸದ ಜಿಗಜಿಣಗಿ

Vijayapura: ನಾಳೆ ಶಾಲಾ-ಕಾಲೇಜಿಗೆ ರಜೆ ಇಲ್ಲ; ಬಂದ್ ಗೆ ಬೆಂಬಲ ಘೋಷಣೆಯಾಗಿಲ್ಲ
MUST WATCH
ಹೊಸ ಸೇರ್ಪಡೆ

Sagara ಒಂದು ಹೆಬ್ಬಾವಿನ ಕಥೆ; ಬಾಯಿಗೆ ಸಿಕ್ಕಿದ್ದು ಹೊಟ್ಟೆಗಿಲ್ಲ!

Panaji ಮತ್ತೆ ಗೋವಾದಲ್ಲಿ ಮಳೆಯ ಆರ್ಭಟ; ಹಲವೆಡೆ ರಸ್ತೆಗಳು ಜಲಾವೃತ

Asian Games: ಸ್ಟೀಪಲ್ ಚೇಸ್ ನಲ್ಲಿ ದಾಖಲೆಯೊಂದಿಗೆ ಬಂಗಾರ ಗೆದ್ದ ಅವಿನಾಶ್ ಸಬ್ಲೆ

Burhanpur; ನೇಣಿಗೆ ಶರಣಾದ ಬಿಜೆಪಿ ಬೆಂಬಲಿತ ಪಂಚಾಯತ್ ಅಧ್ಯಕ್ಷೆ

CWC2023 ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಹೆಸರಿಸಿದ ಸೆಹವಾಗ್; ಸ್ಟಾರ್ ಬ್ಯಾಟರ್ ಗಿಲ್ಲ ಚಾನ್ಸ್