

Team Udayavani, Oct 5, 2020, 6:22 PM IST
ವಿಜಯಪುರ: ಶತಮಾನಗಳಿಂದ ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡದ ಮೀಸಲು ಮಾನ್ಯತೆ ಹಾಗೂ ಸೌಲಭ್ಯ ಸಿಗುವವರೆಗೆ ಕುರುಬ ಸಮುದಾಯದ ಜನರು ನಿರಂತರ ಹೋರಾಟ ನಡೆಸಲಿದ್ದಾರೆ. ಈ ಕುರಿತು ಈಗಾಗಲೇ ನಿರಂತರ ಹೋರಾಟ ಮಾಡುತ್ತ ಬರುತ್ತಿದ್ದು ಭವಿಷ್ಯದಲ್ಲೂ ನಮ್ಮ ಹೋರಾಟ ಮುಂದುವರಿಸಲು ಕುರುಬಸಮುದಾಯ ನಿರ್ಧರಿಸಿದೆ.
ಹುಲಜಂತಿ ಮಾಳಿಂಗರಾಯ ಮಹಾರಾಜರು, ಮಖಣಾಪುರದ ಸೋಮೇಶ್ವರ ಶ್ರೀ ನೇತೃತ್ವದಲ್ಲಿ ನಗರದ ಸರಕಾರಿ ನೌಕರರ ಸಭಾ ಭವನದಲ್ಲಿ ಜರುಗಿದ ಕುರುಬರಿಗೆ ಪರಿಶಿಷ್ಟ ಪಂಗಡ ಸೌಲಭ್ಯದ ಹೋರಾಟ ಸಮಿತಿ ಪೂರ್ವ ಸಿದ್ಧತಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಮ್ಮ ಸಮುದಾಯಕ್ಕೆ ಸರ್ಕಾರದಿಂದ ಸಿಗಬೇಕಿರುವ ಮೀಸಲು ಸೌಲಭ್ಯ ಮಾತ್ರವಲ್ಲ ಎಲ್ಲರೀತಿಯ ಸೌಲಭ್ಯ ಪಡೆಯುವಹಂತದಲ್ಲೂ ನಾವು ನಿಮ್ಮೊಂದಿಗೆ ಇರಲಿದ್ದು, ಸಮಾಜದ ಜನರು ಐಕ್ಯತೆ ಪ್ರದರ್ಶಿಸಬೇಕು ಎಂದು ಉಭಯ ಶ್ರೀಗಳು ಸಲಹೆ ನೀಡಿದರು.
ನಾಗಠಾಣದ ಮಾಳಿಂಗರಾಯ ಸ್ವಾಮೀಜಿ, ಮಾಳ ಹಳ್ಳಿಯ ಕೆಂಚರಾಜ ಪೂಜಾರಿ, ಜಿಪಂ ಸದಸ್ಯರಾದ ಸಾಬು ಮಾಶ್ಯಾಳ, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಸಹ ಕಾರ್ಯದರ್ಶಿ ರವಿ ಕಿತ್ತೂರ, ರಾಜು ಬಿರಾದಾರ, ಮೋಹನ ಮೇಟಿ, ಸಂಗಮೇಶ ಓಲೇಕಾರ, ಮೋಹನ ದಳವಾಯಿ, ಪ್ರಕಾಶ ಜಾಲಗೇರಿ, ಸಮಾಜದ ಜಿಲ್ಲಾಧ್ಯಕ್ಷ ರಾಜುಕಂಬಾಗಿ, ಡಿ.ಬಿ. ಹಿರೇಕುರುಬರ, ಅರವಿಂದಡೋಣೂರ, ಮಲ್ಲು ಬಿದರಿ, ಕಾಂತು ಇಂಚಗೇರಿ, ಹಿರಿಯರಾದ ಧರ್ಮಣ್ಣ ತೊಂಟಾಪುರ, ಜೆಡಿಎಸ್ ಮುಖಂಡರಾದ ಬಸವರಾಜ ಹೊನವಾಡ, ಬಂಗಾರೇಶ ಪೂಜಾರಿ, ಚಂದ್ರಶೇಖರ ಬಗಲಿ ಮಾತನಾಡಿದರು.
ಸಿದ್ದು ಭಾವಿಕಟ್ಟಿ, ಶಂಕರ ಸಾಹುಕಾರ, ಮಹೇಶ ಬೆಂಕಿ, ದೇವಕಾಂತ ಬಿಜ್ಜರಗಿ, ರಾಜು ಕಗ್ಗೊàಡ, ಮಲ್ಲು ಪರಸಣ್ಣವರ, ರಾಜು ಬಾಬಾನಗರ, ಶ್ರೀಕಾಂತ ಸಂಗೋಗಿ, ಸುರೇಶ ಡಂಬಳ, ಬಾಬು ಹಂಚನಾಳ, ಸದಾಶಿವ ಪೂಜಾರಿ, ಯಲ್ಲು ಬೊಮ್ಮನಳ್ಳಿ, ಮಾಳು ಬಾಗೇವಾಡಿ, ಯಲ್ಲು ಹೂಗಾರ, ರಾಜು ರೂಗಿ,ಲಕ್ಷ್ಮಣ ಕಣಿಮನಿ, ಸತೀಶ ವಾಲೀಕಾರ, ಮಲ್ಲು ವಾಲೀಕಾರ ಸೇರಿದಂತೆ ಸಮಾಜದ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.
Ad
Mangaluru: ಶಾಂತಿ ನೆಲೆಸಲಿ, ಮೂಲ ಸಮಸ್ಯೆಗಳಿಗೆ ಪರಿಹಾರ ಸಿಗಲಿ
ಪ್ರತೀ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ: ಡಾ.ಜಿ. ಪರಮೇಶ್ವರ್
ಮೈಸೂರು-ಕುಶಾಲನಗರ ಎಕ್ಸ್‌ಪ್ರೆಸ್‌ವೇ ಕಾರ್ಯ ಶೀಘ್ರ ಆರಂಭ
ಕೊಡಗಿನಲ್ಲಿ ಅಕ್ರಮ ರೆಸಾರ್ಟ್‌ಗಳ ಅಬ್ಬರ: ಕೂಡಲೇ ನೆಲಸಮಗೊಳಿಸಲು ಆಗ್ರಹ
Rain; ಕರಾವಳಿಯಲ್ಲಿ ಜು.10 ರಿಂದ 15ರವರೆಗೆ ಎಲ್ಲೋ ಅಲರ್ಟ್ ಘೋಷಣೆ
You seem to have an Ad Blocker on.
To continue reading, please turn it off or whitelist Udayavani.