ಹೊನವಾಡ ಗ್ರಾಪಂ: ಎರಡು ಜೋಡಿ ದಂಪತಿ ಸ್ಪರ್ಧೆ


Team Udayavani, Dec 21, 2020, 5:34 PM IST

ಹೊನವಾಡ ಗ್ರಾಪಂ: ಎರಡು ಜೋಡಿ ದಂಪತಿ ಸ್ಪರ್ಧೆ

ವಿಜಯಪುರ: ಹೊನವಾಡ ಗ್ರಾಪಂಗೆ ರುಕ್ಮಿಣಿ ದಡಕೆ ಅವಿರೋಧ ಆಯ್ಕೆಯಾಗಿದ್ದಕ್ಕೆ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸುವ ಬ್ಯಾನರ್‌ ಅಳವಡಿಸಿರುವುದು

ವಿಜಯಪುರ: ಸ್ಥಳೀಯ ಸರ್ಕಾರ ಎಂದೇ ಕರೆಸಿಕೊಳ್ಳುವ ಗ್ರಾಮ ಪಂಚಾಯತ್‌ ಚುನಾವಣೆ ಎಂದರೇ ಅದು ರೋಚಕ ಹಾಗೂ ಕುತೂಹಲಗಳ ಆಗರವಾಗಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ಎರಡು ಪ್ರತ್ಯೇಕ ಕುಟುಂಬಗಳ ದಂಪತಿ ಚುನಾವಣಾ ಸ್ಪರ್ಧೆಗೆ ಇಳಿದು ಗಮನ ಸೆಳೆದಿವೆ.

ಪತ್ನಿ ಅವಿರೋಧ, ಪತಿ ಸ್ಪರ್ಧೆ: ಈಗಾಗಲೇ ಸತತ ಮೂರು ಬಾರಿ ಗೆದ್ದು ಹೊನವಾಡ ಗ್ರಾಪಂ ಅಧ್ಯಕ್ಷಹಾಗೂ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ರುಕ್ಷ್ಮಿಣಿ  ತುಕಾರಾಮ ದಡಕೆ ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಈ ಬಾರಿ ವಾರ್ಡ್ -2ರಿಂದ ಸ್ಪರ್ಧಿಸಿ ಅವಿರೋಧ ಆಯ್ಕೆಯಾಗುವ ಮೂಲಕ ಗ್ರಾಮದಲ್ಲಿ ನಾಲ್ಕು ಬಾರಿ ಆಯ್ಕೆಯಾದ ಮಹಿಳೆ ಎಂಬ ಹಿರಿಮೆ ಪಾತ್ರವಾಗಿದ್ದಾರೆ.

ಅಚ್ಚರಿ ಸಂಗತಿ ಎಂದರೆ ಈವರೆಗೆ ಪತ್ನಿ ರುಕ್ಮಿಣಿ ಅವರ ಅಧಿಕಾರದಲ್ಲೇ ಸಂತೃಪ್ತಿ ಪಡುತ್ತಿದ್ದ ತುಕಾರಾಮ ಈ ಬಾರಿ 8ನೇ ವಾರ್ಡ್‌ನಿಂದ ತಾವೂ ಸ್ಪರ್ಧಿಸಿದ್ದಾರೆ. ಪತ್ನಿ ಹಾಗೂ ನಾನು ಇಬ್ಬರೂ ಹೈಸ್ಕೂಲ್‌ ಮೆಟ್ಟಿಲೇರಿಲ್ಲ, ಆದರೂ ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇವೆ. ಹೀಗಾಗಿ ಪತ್ನಿ ಅವಿರೋಧ ಆಯ್ಕೆಯಾಗಿದ್ದು ನನ್ನ ವಿರುದ್ಧ ಸ್ಪರ್ಧೆ ಏರ್ಪಟ್ಟಿದ್ದುಗೆಲುವು ನನ್ನದೇ ಎನ್ನುತ್ತಾರೆ ತುಕಾರಾಮ.

ಪತ್ನಿ ಗ್ರಾಮಾಭಿವೃದ್ಧಿಯಲ್ಲಿ ಉತ್ತಮ ಸೇವೆಗೆ ಬೆನ್ನೆಲುಬಾಗಿ ನಿಂತಿದ್ದ ನನ್ನ ಪರಿಶ್ರಮ ಗಮನಿಸಿ ಜನರೇ ನನ್ನನ್ನೂ ಸ್ಪರ್ಧೆಗೆ ಇಳಿಸಿದ್ದಾರೆ. ಮಹಾತ್ಮ ಗಾಂಧಿಧೀಜಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಳಸಿಕೊಂಡು ಗ್ರಾಮದ ಅಭಿವೃದ್ಧಿಗೆ ಆದ್ಯತೆನೀಡಿದ್ದೇ ತಮ್ಮ ಪತ್ನಿಯ ಅವಿರೋಧ ಆಯ್ಕೆಗೆಕಾರಣವಾಗಿದೆ. ಇದಕ್ಕೆ ಒತ್ತಾಸೆಯಾಗಿದ್ದ ಕಾರಣಕ್ಕೆಸ್ಪರ್ಧೆ ಏರ್ಪಟ್ಟಿದ್ದರೂ ನನ್ನ ಗೆಲುವು ಸುಲಭವಾಗಲಿದೆ ಎಂದು ತುಕಾರಾಮ ಹೇಳುತ್ತಾರೆ.

ಮರು ಆಯ್ಕೆಗೆ ಪತಿ, ಪತ್ನಿಗೆ ಮೊದಲ ಸ್ಪರ್ಧೆ: ಹೊನವಾಡ ಗ್ರಾಮದಲ್ಲೇ ಇನ್ನೊಂದು ದಂಪತಿ ಜೋಡಿ ಗ್ರಾಪಂ ಚುನಾವಣೆ ಸ್ಪರ್ಧೆಗೆ ಇಳಿದಿದೆ. ಫಕ್ರುದ್ದೀನ್‌ ಮುಲ್ಲಾ ಹಾಗೂ ರೇಷ್ಮಾ ಮುಲ್ಲಾ ದಂಪತಿಯೇ ಪ್ರತ್ಯೇಕ ವಾರ್ಡ್‌ನಿಂದ ಸ್ಪರ್ಧೆಗೆ ಇಳಿದಿರುವ ಜೋಡಿ. ಫಕ್ರುದ್ದೀನ್‌ ಕಳೆದ ಅವಧಿಯಲ್ಲಿ ಸದಸ್ಯರಾಗಿದ್ದು ಇದೀಗ ಮತ್ತೂಮ್ಮೆ ಸದಸ್ಯರಾಗಲು ಚುನಾವಣಾ ಸ್ಪರ್ಧೆಗೆ ಇಳಿದಿದ್ದಾರೆ. ಫಕ್ರುದ್ದೀನ್‌ 6ನೇ ವಾರ್ಡ್ ನಿಂದ ಪುನಾರಾಯ್ಕೆ ಬಯಸಿರುವ ತಮ್ಮ ವಿರುದ್ಧ ನೇರ ಸ್ಪರ್ಧೆ ಇದೆ. ಇವರ ಪತ್ನಿ ರೇಷ್ಮಾ 9ನೇ ವಾರ್ಡ್ ನಿಂದ ಕಣಕ್ಕೆ ಇಳಿದಿದ್ದು ಇಬ್ಬರೂ ಎದುರಾಳಿಗಳನ್ನು ಎದುರಿಸಬೇಕಿದೆ.

ಈ ಹಿಂದಿನ ಅವಧಿಯಲ್ಲಿ ಗ್ರಾಪಂ ಸದಸ್ಯರಾಗಿದ್ದಾಗ 14ನೇ ಹಣಕಾಸು ಯೋಜನೆ, ಕೆರೆಯ ಹೂಳೆತ್ತುವಲ್ಲಿ ತೋರಿದ ಕಾಳಜಿ ಹಾಗೂ ಪ್ರಾಮಾಣಿಕತೆಯೇ ತಮ್ಮ ಹಾಗೂ ತಮ್ಮ ಪತ್ನಿಯನ್ನು ಜನರೇ ಸ್ಪರ್ಧೆಗೆ ಇಳಿಸಿದ್ದಾರೆ. ನಾನು ಮಾಡಿದ ಗ್ರಾಮದ ಅಭಿವೃದ್ಧಿ ಕಾರ್ಯಗಳೇ ನಮ್ಮ ಜಯವನ್ನು ಸುಲಭವಾಗಿಸಲಿದೆ ಎಂಬುದು ಫಕ್ರುದ್ದೀನ್‌ ಅವರ ನಿರೀಕ್ಷೆ. ಹೊನವಾಡ ಗ್ರಾಪಂ ಹಾಗೂ ಗ್ರಾಪಂ ಕೇಂದ್ರ ಸ್ಥಾನದ ನಾಲ್ಕು ವಾರ್ಡ್‌ಗಳಲ್ಲಿ ಸ್ಪ ರ್ಧಿಸಿರುವ ದಂಪತಿ ಜೋಡಿಯಲ್ಲಿ ಒಬ್ಬರು ಅವಿರೋಧ ಆಯ್ಕೆಯಾಗಿದ್ದಾರೆ. ಡಿ. 22ರಂದು ಮತದಾನ ನಡೆಯಲಿದ್ದು ಫಲಿತಾಂಶದ ಬಳಿಕ ಈ ಎರಡೂ ಕುಟುಂಬಗಳ ದಂಪತಿ ಜೋಡಿಯ ಮೂವರರಾಜಕೀಯ ಹಣೆಬರಹ ಹೊರ ಬೀಳಲಿದೆ.

ಟಾಪ್ ನ್ಯೂಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwewweq

K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ 

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

1-BVR-1

Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.