
ಕಲಬುರ್ಗಿಯಲ್ಲಿ ಭಾರಿ ಗಾಳಿಮಳೆ: ಕಾಪ್ಟರ್ ಬಿಟ್ಟು ರಸ್ತೆ ಮಾರ್ಗವಾಗಿ ಸಾಗಿದ ಬಿಎಸ್ ವೈ
Team Udayavani, Apr 27, 2023, 7:55 PM IST

ಮುದ್ದೇಬಿಹಾಳ: ಮಾಜಿ ಸಿಎಂ, ಬಿಜೆಪಿ ಸ್ಟಾರ್ ಪ್ರಚಾರಕ ಬಿ.ಎಸ್.ಯಡಿಯೂರಪ್ಪ ಅವರು ವರುಣನ ಅವಕೃಪೆಯಿಂದಾಗಿ ಹೆಲಿಕಾಪ್ಟರ್ ಬಿಟ್ಟು ರಸ್ತೆ ಮಾರ್ಗವಾಗಿ ಕಲಬುರ್ಗಿಯತ್ತ ಪ್ರಯಾಣಿಸಿದ ಘಟನೆ ಗುರುವಾರ ಸಂಜೆ ತಾಳಿಕೋಟೆಯಲ್ಲಿ ನಡೆದಿದೆ.
ಬಿಜೆಪಿ ಅಭ್ಯರ್ಥಿ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಪರವಾಗಿ ತಾಳಿಕೋಟೆಯಲ್ಲಿ ಆಯೋಜಿಸಿದ್ದ ರೋಡ್ ಶೋ ಮತ್ತು ಬಹಿರಂಗ ಸಭೆಯಲ್ಲಿ ಅವರು ಪಾಲ್ಗೊಳ್ಳಲಿದ್ದರು. 3-45 ಕ್ಕೆ ತಾಳಿಕೋಟೆ ಹೆಲಿಪ್ಯಾಡ್ ಗೆ ಬರಬೇಕಿದ್ದ ಅವರು ಸಂಜೆ 5-15 ಕ್ಕೆ ಬಂದರು. ಹೆಲಿಕಾಪ್ಡರ್ ಇಳಿದವರೇ ನೇರವಾಗಿ ರಾಜವಾಡೆಗೆ ತೆರಳಿ ಅಲ್ಲಿ ಬೃಹತ್ ರ್ಯಾಲಿಗೆ ಚಾಲನೆ ನೀಡಿದರು. 4-5 ನಿಮಿಷ ಬಹಿರಂಗ ಭಾಷಣ ಮಾಡಿ ನಡಹಳ್ಳಿಯವರು 50 ಸಾವಿರ ಅಂತರದಿಂದ ಗೆಲ್ಲುತ್ತಾರೆ. ಅವರ ಗೆಲುವಲ್ಲಿ ಯಾವುದೇ ಸಂಶಯ ಇಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮತ್ತೇ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿ ರ್ಯಾಲಿಯಿಂದ ತರಾತುರಿಯಲ್ಲಿ ಹೆಲಿಪ್ಯಾಡ್ ನತ್ತ ನಿರ್ಗಮಿಸಿದರು.
ಸರಿಯಾಗಿ 6 ಗಂಟೆಗೆ ಆಕಾಶಕ್ಕೆರಿದ ಹೆಲಿಕಾಪ್ಟರ್ ಕಲಬುರ್ಗಿಯತ್ತ ಹೋಗಿತ್ತು. ಆದರೆ ಅಲ್ಲಿ ಭಾರೀ ಗಾಳಿ, ಮಳೆ ಇದ್ದ ಕಾರಣ ಹೆಲಿಕಾಪ್ಟರ್ ಇಳಿಸಲು ಅವಕಾಶ ಸಿಗಲಿಲ್ಲ. ಅಂದಾಜು 6-45 ಕ್ಕೆ ಮರಳಿ ತಾಳಿಕೋಟೆ ಹೆಲಿಪ್ಯಾಡ್ ಗೆ ಆಗಮಿಸಿ ಶಾಸಕ ನಡಹಳ್ಳಿ ಯವರ ಕಾರಿನಲ್ಲಿ ತಡಮಾಡದೆ ಕಲಬುರ್ಗಿಯತ್ತ ರಸ್ತೆ ಮಾರ್ಗವಾಗಿ ಪ್ರಯಾಣ ಬೆಳೆಸಿದರು. ಇತ್ತ ನಡಹಳ್ಳಿ ಮತ್ತು ಮುಖಂಡರ ನೇತೃತ್ವದಲ್ಲಿ ಸಾವಿರಾರು ಜನ ಸೇರಿದ್ದ ರೋಡ್ ಶೋ ಮುಂದುವರೆಯಿತು
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi;ಮೋಡ ಬಿತ್ತನೆಗೆ ಸಚಿವ ಸತೀಶ್ ಜಾರಕಿಹೊಳಿ ಚಾಲನೆ: ಪೂರಕ ವಾತಾವರಣ

Cauvery issue; ಕೆಆರ್ ಎಸ್ ಮುತ್ತಿಗೆಗೆ ವಾಟಾಳ್ ನಾಗರಾಜ್ ಕರೆ

Rain;ಉಡುಪಿ, ಉ.ಕ ಜಿಲ್ಲೆಗೆ ಆರೆಂಜ್, ದ.ಕ ಜಿಲ್ಲೆಗೆ ಯೆಲ್ಲೊ ಅಲರ್ಟ್; ಭಾರಿ ಮಳೆ ಸಾಧ್ಯತೆ

Election: ಅನಂತಕುಮಾರ ಹೆಗಡೆ ಅವರೇ ಉತ್ತರ ಕನ್ನಡದ ಬಿಜೆಪಿ ಅಭ್ಯರ್ಥಿ: ಕಾಗೇರಿ

Sirsi: ಇಂಡಿಯಾದ ಮೈತ್ರಿಗಾಗಿ ರಾಜ್ಯದ ಹಿತ ಬಲಿ ಕೊಡಲಾಗುತ್ತಿದೆ…: ಮಾಜಿ ಸ್ಪೀಕರ್
MUST WATCH
ಹೊಸ ಸೇರ್ಪಡೆ

Karwar; ಓವರ್ ಟೇಕ್ ವೇಳೆ ಬಸ್ ಚಕ್ರದಡಿ ಸಿಲುಕಿ ಬೈಕ್ ಸವಾರ ಮೃತ್ಯು

Women’s Reservation Bill ; ಒಪ್ಪಿಗೆ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

Delhi: ಏಷ್ಯಾದಲ್ಲೇ ಅತಿದೊಡ್ಡ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ಭಾರೀ ಬೆಂಕಿ

Uttar Pradesh: ತಪ್ಪಾದ ಇಂಜೆಕ್ಷನ್ ನಿಂದ ಬಾಲಕಿ ಸಾವು; ಶವ ಎಸೆದು ವೈದ್ಯ, ಸಿಬಂದಿ ಪರಾರಿ!

Illicit ಸಂಬಂಧ; ವಿವಾಹಿತೆಗೆ ಬ್ಲಾಕ್ ಮೇಲ್: ಸುಬ್ರಹ್ಮಣ್ಯ ಗ್ರಾ.ಪಂ.ಮಾಜಿ ಸದಸ್ಯ ಅರೆಸ್ಟ್