Udayavni Special

ಪ್ರವಾಸಿಗರಿಂದ ಹೊಟೇಲ್ ಉದ್ಯಮ ದೂರ


Team Udayavani, Aug 27, 2019, 2:36 PM IST

vp-tdy-1

ವಿಜಯಪುರ: ವಿಶ್ವವಿಖ್ಯಾತ ಐತಿಹಾಸಿಕ ಸ್ಮಾರಕಗಳ ಸಿರಿಯನ್ನು ಮಡಿಲಲ್ಲಿ ಇರಿಸಿಕೊಂಡು ಮೆರೆಯುತ್ತಿರುವ ವಿಜಯಪುರ ಜಿಲ್ಲೆಯ ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳಿಲ್ಲದಂತಾಗಿದೆ. ಸರ್ಕಾರದಿಂದ ಕೋಟಿ ಕೋಟಿ ರೂ. ಸಬ್ಸಿಡಿ ಪಡೆಯುವ ಹೊಟೇಲ್ಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ, ಮನ ಬಂದಂತೆ ಬಾಡಿಗೆ ಪಡೆಯುವುದು ಸೇರಿದಂತೆ ಗುಮ್ಮಟ ನಗರಿಯಲ್ಲಿ ಪ್ರವಾಸಿಗ ನರಳುವಂತಾಗಿದೆ.

ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆ ಹೊಟೇಲ್ ಉದ್ಯಮಕ್ಕೆ ಭಾರಿ ಧನ ಸಹಾಯ ಹಾಗೂ ರಿಯಾಯ್ತಿ ನೀಡುತ್ತವೆ. ಹೊಟೇಲ್ ನಿರ್ಮಾಣಕ್ಕೆ ಮುಂದಾಗುವ ಉದ್ಯಮಿಗೆ ಗ್ರಾಮೀಣ ಭಾಗದಲ್ಲಿ ಶೇ. 35 ರಿಯಾಯ್ತಿ ನೀಡಿದರೆ, ನಗರ ಪ್ರದೇಶದಲ್ಲಿ ಶೇ. 40 ರಿಯಾಯ್ತಿ ದೊರೆಯುತ್ತದೆ. ಪ್ರವಾಸಿಗರಿಗೆ ಸೂಕ್ತ ವಸತಿ-ಉಪಾಹಾರ-ಊಟ ಸಹಿತ ಅತ್ಯುತ್ತಮ ಸೌಲಭ್ಯ ಕಲ್ಪಿಸುವ ಷರತ್ತಿಗೆ ಒಪ್ಪಿಕೊಂಡು ಸರ್ಕಾರದಿಂದ ಕೋಟಿ ಕೋಟಿ ರೂ. ರಿಯಾಯ್ತಿ ಪಡೆದಿರುವ ಸುಮಾರು 35ಕ್ಕೂ ಹೆಚ್ಚು ಹೊಟೇಲ್ಗಳು ನಗರದಲ್ಲಿವೆ. ಸರ್ಕಾರದ ರಿಯಾಯ್ತಿ ಪಡೆದಿರುವ ಬಹುತೇಕ ಹೊಟೇಲ್ಗಳ ಮಾಲೀಕರು ರೂಂ ಬಾಡಿಗೆ ಪಡೆಯುವ ಪ್ರವಾಸಿಗರಿಂದ ಮನ ಬಂದಂತೆ ಬಾಡಿಗೆ ಪಡೆಯುತ್ತಿದ್ದಾರೆ. ಅದರಲ್ಲೂ ಆನ್‌ ಲೈನ್‌ ಮೂಲಕ ರೂಂ ಬುಕ್‌ ಮಾಡುವ ದೇಶ-ವಿದೇಶಿ ಪ್ರವಾಸಿಗರಿಂದ ಸಾವಿರಾರು ರೂ. ಬಾಡಿಗೆ ಪಡೆದರೂ ಅಗತ್ಯ ಮೂಲಭೂತ ಸೌಲಭ್ಯ ಮಾತ್ರ ನೀಡುವುದಿಲ್ಲ. ಇದರಿಂದಾಗಿಯೇ ಹಂಪಿ, ಬಾದಾಮಿ ಪ್ರವಾಸಿ ತಾಣಗಳ ವೀಕ್ಷಣೆಗೆ ಬರುವ ಪ್ರವಾಸಿಗರು ಐತಿಹಾಸಿಕ ವಿಜಯಪುರ ಸ್ಮಾರಕಗಳ ವೀಕ್ಷಣೆಗೆ ಆಸಕ್ತಿ ತೋರುತ್ತಿಲ್ಲ ಎಂಬ ದೂರುಗಳಿವೆ.

ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿಗರ ಅನುಕೂಲಕ್ಕೆ ಹೊಟೇಲ್-ಲಾಡ್ಜಿಂಗ್‌ ಸೌಲಭ್ಯ ಕಲ್ಪಿಸುವುದಕ್ಕಾಗಿ ಕೋಟಿ ಕೋಟಿ ರೂ. ರಿಯಾಯ್ತಿ ಪಡೆಯುವ ಉದ್ಯಮಿಗಳು, ನಂತರ ಅದನ್ನು ಬೇರೆಯವರಿಗೆ ಪರಭಾರೆ ಮಾಡುವ, ಇಲ್ಲವೇ ನಿರ್ವಹಣೆ ಹೆಸರಿನಲ್ಲಿ ಅನಧಿಕೃತವಾಗಿ ಬೇರೆಯವರಿಗೆ ಹೊಣೆ ನೀಡುವ ಕೆಲಸವೂ ಜಿಲ್ಲೆಯಲ್ಲಿ ನಡೆಯುತ್ತಿದೆ. ಕೋಟಿ ಕೋಟಿ ರೂ. ವಹಿವಾಟಿನ ಈ ಉದ್ಯಮದಲ್ಲಿ ಸರ್ಕಾರದಿಂದ ಸಿಗುವ ಆರ್ಥಿಕ ಸಬ್ಸಿಡಿ ಹಾಗೂ ಸೌಲಭ್ಯಗಳಿಗಾಗಿಯೇ ರಾಜಕೀಯ ನಾಯಕರು ತಮ್ಮ ಬಂಧುಗಳ ಹೆಸರಿನಲ್ಲಿ ಆರ್ಥಿಕ ರಿಯಾಯ್ತಿ ಪಡೆದಿದ್ದಾರೆ. ಆದರೆ ಸರ್ಕಾರದ ಸೌಲಭ್ಯ ಪಡೆಯುವಾಗ ಒಂದು ಹೆಸರು ನೀಡಿ, ನಂತರ ಬೇರೊಬ್ಬರಿಗೆ ಮತ್ತೂಂದು ಹೆಸರಿನಲ್ಲಿ ಹೊಟೇಲ್ ಉದ್ಯಮ ನಡೆಸಲು ನೀಡಿರುವ ನಿದರ್ಶನಗಳು ಜಿಲ್ಲೆಯಲ್ಲಿ ಸಾಮಾನ್ಯ ಎನಿಸಿದೆ.

ಇನ್ನು ಜಿಲ್ಲೆಯಲ್ಲಿರುವ ಬಹುತೇಕ ಹೊಟೇಲ್ಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದ ಕಾರಣ ಹೊಟೇಲ್ ಸುತ್ತಮುತ್ತಲಿನ ಸಾರ್ವಜನಿಕ ರಸ್ತೆಗಳಲ್ಲೇ ಪ್ರವಾಸಿಗರು ಮನ ಬಂದಂತೆ ವಾಹನಗಳ ನಿಲುಗಡೆ ಮಾಡುತ್ತಾರೆ. ಹೆಸರಾಂತ ಹೊಟೇಲ್ಗಳ‌ಲ್ಲೇ ಪ್ರವಾಸಿಗರ-ಗ್ರಾಹಕರ ವಾಹನಗಳ ನಿಲುಗಡೆಗೆ ಮೀಸಲಿಟ್ಟ ಪಾರ್ಕಿಂಗ್‌ ಸ್ಥಳವೇ ಮಾಯವಾಗಿದೆ. ಉದ್ಯಮಿಗಳ ದುರಾಸೆಯಿಂದ ಪಾರ್ಕಿಂಗ್‌ ಸ್ಥಳಗಳು ಹೊಟೇಲ್ ವಿಸ್ತರಣೆಗೆ ಬಳಸಿಕೊಂಡಿವೆ. ಕಾರಣ ಹೊಟೇಲ್ಗಳಿಗೆ ಬರುವ ಪ್ರವಾಸಿಗರ-ಗ್ರಾಹಕರ ವಾಹನಗಳು ರಸ್ತೆಗಳನ್ನು ಹಾಗೂ ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿಕೊಂಡಿವೆ. ಸ್ಥಳೀಯರಿಗೆ ಇದರಿಂದ ಸಮಸ್ಯೆಯಾದರೂ ಯಾರೊಬ್ಬರೂ ಈ ಕುರಿತು ಚಕಾರ ಎತ್ತುತ್ತಿಲ್ಲ. ಪ್ರವಾಸೋದ್ಯಮ ಇಲಾಖೆಯ ರಿಯಾಯ್ತಿ ಸೌಲಭ್ಯ ಹೊಟೇಲ್ ನಿರ್ಮಾಣದ ಕುರಿತು ಅರ್ಜಿ ಸಲ್ಲಿಕೆಯಿಂದ ಅನುದಾನ ಬಿಡುಗಡೆ ಹಂತದವರೆಗೆ ಇಡಿ ಪ್ರಕ್ರಿಯೆ ಪ್ರವಾ ಸೋದ್ಯಮ ಇಲಾಖೆಯ ಬೆಂಗ ಳೂರು ಕಚೇರಿಯಲ್ಲೇ ನಡೆಯುತ್ತದೆ. ಕಾರಣ ಸ್ಥಳೀಯ ಪ್ರವಾಸೋದ್ಯಮ ಕಚೇರಿಯಲ್ಲಿ ಯಾವುದೇ ಮಾಹಿತಿ ಕೇಳಿದರೂ ಎಲ್ಲದಕ್ಕೂ ಮೇಲಧಿಕಾರಿ ಇಲ್ಲ ಎನ್ನುವ ಹಾಗೂ ಕೇಂದ್ರ ಕಚೇರಿಯತ್ತ ಬೆರಳು ತೋರಿಸುವ ಮೂಲಕ ನುಣುಚಿಕೊಳ್ಳುವ ಕೆಲಸ ಮಾಡುತ್ತಾರೆ.

ಅಧಿಕಾರದಲ್ಲಿರುವ ರಾಜಕೀಯ ಪ್ರಭಾವಿಗಳ ಕೃಪೆಯಿಂದಲೇ ನಡೆಯುತ್ತಿರುವ ಈ ರಿಯಾಯ್ತಿ ವಹಿವಾಟಿನ ಹೊಟೇಲ್ ಉದ್ಯಮ ಸಣ್ಣ-ಮಧ್ಯಮ ಬಂಡವಾಳ ಹೂಡಿಕೆದಾದರರಿಂದ ದೂರವಾಗಿದೆ. ದೊಡ್ಡವರ ನೆರಳಿನ ಇಂಥ ಯೋಜನೆಗಳ ವಿಷಯದಲ್ಲಿ ಅಸಕ್ತ ಮಧ್ಯಮ-ಸಾಧಾರಾಣ ಉದ್ಯಮಿಗಳು ಕೈ ಹಾಕಲು ಹಿಂದೇಟು ಹಾಕುತ್ತಾರೆ.

ಪ್ರವಾಸೋಸದ್ಯಮ ಇಲಾಖೆಯಿಂದ ಆರ್ಥಿಕ ಸಹಾಯಧನ ಪಡೆಯುವ ಹೊಟೇಲ್ ಉದ್ಯಮಿ ವಾಸ್ತವಿಕವಾಗಿ ಪ್ರವಾಸಿಗರಿಗೆ ರಿಯಾಯ್ತಿ ಅನುದಾನ ಪಡೆಯುವ ಹಂತದಲ್ಲಿ ನೀಡಿದ ಷರತ್ತಿನಂತೆ ಸೇವೆ ನೀಡುತ್ತಿದ್ದಾನೆಯೇ ಎಂದು ಯಾವುದೇ ಅಧಿಕಾರಿ ಪರಿಶೀಲನೆ ನಡೆಸಿದ ಮಾಹಿತಿ ಇಲ್ಲ.

ಪ್ರವಾಸಿಗರು ಹೊಟೇಲ್ ಉದ್ಯಮಿಗಳ ಕುರಿತು ಮಾಡುವ ದೂರುಗಳ ಕುರಿತು ಹೊಟೇಲ್ ಉದ್ಯಮಿಗಳನ್ನು ಪ್ರಶ್ನಿಸಿದರೆ ಅವರು ಹೇಳುವುದೇ ಬೇರೆ. ಕಳೆದ ಒಂದೂವರೆ ದಶಕದಿಂದ ಅದರಲ್ಲೂ ಮುಂಬೈ ತಾಜ್‌ ಹೊಟೇಲ್ ದಾಳಿ ಬಳಿಕ ವಿಜಯಪುರ ಜಿಲ್ಲೆಗೆ ಬರುವ ಪ್ರವಾಸಿಗರ ಅದರಲ್ಲೂ, ವಿದೇಶಿ ಪ್ರವಾಸಿಗರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹಿಂದೆಲ್ಲ ವಿದೇಶಿ ಪ್ರವಾಸಿಗರು ಆನ್‌ಲೈನ್‌ ಮೂಲಕವೇ ಹತ್ತಾರು ಜನರು ಏಕ ಕಾಲಕ್ಕೆ ನಾಲ್ಕಾರು ಕೋಣೆಗಳನ್ನು ಬುಕ್‌ ಮಾಡುತ್ತಿದ್ದರು. ಈಗ ನೇರವಾಗಿಯೇ ಹೊಟೇಲ್ಗಳತ್ತ ಪ್ರವಾಸಿಗರು ಬರುತ್ತಿಲ್ಲ. ಜಿಲ್ಲೆಯಲ್ಲಿ ನೀರವಾರಿ ಹಾಗೂ ಇತರೆ ಅಭಿವೃದ್ಧಿ ಯೋಜನೆಗಳು ಚಾಲನೆ ಪಡೆದಿರುವ ಕಾರಣ ಗುತ್ತಿಗೆದಾರರು, ಯೋಜನೆಗಳ ವೀಕ್ಷಣೆಗೆ ಬರುವ ಅಧಿಕಾರಿಗಳಿಂದಾಗಿ ಹೊಟೇಲ್ ಉದ್ಯಮ ನಡೆಯುತ್ತಿದೆಯೇ ಹೊರತು ವಿಜಯಪುರ ಪ್ರವಾಸಕ್ಕೆ ದೇಶ-ವಿದೇಶಿ ಪ್ರವಾಸಿಗರಿಂದಲ್ಲ ಎಂದು ಹೊಟೇಲ್ ಉದ್ಯಮ ಅನುಭವಿಸುತ್ತಿರುವ ಮತ್ತೂಂದು ನೋವಿನ ಕಥೆ ತೆರೆದಿಡುತ್ತಾರೆ.

 

•ಜಿ.ಎಸ್‌.ಕಮತರ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ರಜನಿಕಾಂತ್? ಏನಿದು ಪತ್ರದ ಊಹಾಪೋಹ

ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ರಜನಿಕಾಂತ್? ಏನಿದು ಸೋರಿಕೆಯಾದ ಪತ್ರದ ಗುಟ್ಟು

ಉಪಚುನಾವಣೆಯಲ್ಲಿ ಬಿಜೆಪಿಗೆ ಒಳ ಒಪ್ಪಂದದ ಅಗತ್ಯವಿಲ್ಲ: ನಳೀನ್ ಕುಮಾರ್ ಕಟೀಲ್

ಉಪಚುನಾವಣೆಯಲ್ಲಿ ಬಿಜೆಪಿಗೆ ಒಳ ಒಪ್ಪಂದದ ಅಗತ್ಯವಿಲ್ಲ: ನಳೀನ್ ಕುಮಾರ್ ಕಟೀಲ್

ಡಿಆರ್‌ಎಸ್‌ಗೆ ಮನವಿ ಬೇಡ: ಅಂಪೈರ್‌ರಿಂದಲೇ ಸಲಹೆ, ವಿವಾದ!

ಡಿಆರ್‌ಎಸ್‌ಗೆ ಮನವಿ ಬೇಡ: ಅಂಪೈರ್‌ರಿಂದಲೇ ಸಲಹೆ, ಅನಿಲ್‌ ಚೌಧರಿ ವಿವಾದ!

ಫ್ರಾನ್ಸ್ ಚರ್ಚ್ ನೊಳಗೆ ಟೆರರ್ ಅಟ್ಯಾಕ್?: ಮಹಿಳೆಯ ರುಂಡ ಕತ್ತರಿಸಿ ಹತ್ಯೆ, ಆರೋಪಿ ಸೆರೆ

ಫ್ರಾನ್ಸ್ ಚರ್ಚ್ ನೊಳಗೆ ಟೆರರ್ ಅಟ್ಯಾಕ್?: ಮಹಿಳೆಯ ರುಂಡ ಕತ್ತರಿಸಿ ಹತ್ಯೆ, ಆರೋಪಿ ಸೆರೆ

ಗ್ರಾ.ಪಂ. ಚುನಾವಣೆಗೆ194 ಮುಕ್ತ ಚಿಹ್ನೆಗಳ ಆಯ್ಕೆ: ಯಾವ ಯಾವ ಚಿಹ್ನೆಗಳು, ಇಲ್ಲಿದೆ ಮಾಹಿತಿ

ಗ್ರಾ.ಪಂ. ಚುನಾವಣೆಗೆ 194 ಮುಕ್ತ ಚಿಹ್ನೆಗಳ ಆಯ್ಕೆ: ಯಾವ ಯಾವ ಚಿಹ್ನೆಗಳು, ಇಲ್ಲಿದೆ ಮಾಹಿತಿ

ಪರಿಸರ ಸ್ನೇಹಿ ಪಟಾಕಿ ಬಳಸಿ, ಆದೇಶ ಉಲ್ಲಂಘಿಸಿದ್ರೆ ಒಂದು ಲಕ್ಷ ರೂ.ದಂಡ: ದೆಹಲಿ ಸರ್ಕಾರ

ಪರಿಸರ ಸ್ನೇಹಿ ಪಟಾಕಿ ಬಳಸಿ, ಆದೇಶ ಉಲ್ಲಂಘಿಸಿದ್ರೆ ಒಂದು ಲಕ್ಷ ರೂ.ದಂಡ: ದೆಹಲಿ ಸರ್ಕಾರ

vಉತ್ತರ ಕರ್ನಾಟಕದವರೇ ಮುಂದಿನ ಸಿಎಂ ಆಗಬೇಕು, ಉಮೇಶ್ ಕತ್ತಿಗೆ ಆ ಅರ್ಹತೆಯಿದೆ ರಮೇಶ ಕತ್ತಿ

ಉತ್ತರ ಕರ್ನಾಟಕದವರೇ ಮುಂದಿನ ಸಿಎಂ ಆಗಬೇಕು, ಉಮೇಶ್ ಕತ್ತಿಗೆ ಆ ಅರ್ಹತೆಯಿದೆ ರಮೇಶ ಕತ್ತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hula

ಜೇಡುಹುಳು – ಕಾಂಡ ಕೊರಕ ಹುಳುಗಳ ನಿರ್ವಹಣೆಗಾಗಿ ಇಲ್ಲಿದೆ ಮಾಹಿತಿ

ಸಂಚಾರ ನಿಯಂತ್ರಣಕ್ಕೆ ಪುರಸಭೆ ಗಾರ್ಡ್‌

ಸಂಚಾರ ನಿಯಂತ್ರಣಕ್ಕೆ ಪುರಸಭೆ ಗಾರ್ಡ್‌

vp-tdy-1

ಪುರಸಭೆ ಗದ್ದುಗೆ ಗುದ್ದಾಟಕ್ಕೆ ತಿರುವು

vp-tdy-2

ಶೀಘ್ರ ತೊಲಗಲಿದೆ ಕೋವಿಡ್

ಕೋಳೂರ ತಾಂಡಾದಲ್ಲಿ ನವರಾತ್ರಿ ಪೂಜೆ

ಕೋಳೂರ ತಾಂಡಾದಲ್ಲಿ ನವರಾತ್ರಿ ಪೂಜೆ

MUST WATCH

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

ಹೊಸ ಸೇರ್ಪಡೆ

ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ರಜನಿಕಾಂತ್? ಏನಿದು ಪತ್ರದ ಊಹಾಪೋಹ

ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ರಜನಿಕಾಂತ್? ಏನಿದು ಸೋರಿಕೆಯಾದ ಪತ್ರದ ಗುಟ್ಟು

ದಕ್ಷಿಣ ಕನ್ನಡ : ಐಪಿಎಲ್ ಬೆಟ್ಟಿಂಗ್‌ನಲ್ಲಿ ಭಾಗಿಯಾದ 16 ಮಂದಿ ಬಂಧನ, ಸೊತ್ತು ವಶಕ್ಕೆ

ದಕ್ಷಿಣ ಕನ್ನಡ : ಐಪಿಎಲ್ ಬೆಟ್ಟಿಂಗ್‌ನಲ್ಲಿ ಭಾಗಿಯಾದ 16 ಮಂದಿ ಬಂಧನ, ಸೊತ್ತು ವಶಕ್ಕೆ

hula

ಜೇಡುಹುಳು – ಕಾಂಡ ಕೊರಕ ಹುಳುಗಳ ನಿರ್ವಹಣೆಗಾಗಿ ಇಲ್ಲಿದೆ ಮಾಹಿತಿ

ಉಪಚುನಾವಣೆಯಲ್ಲಿ ಬಿಜೆಪಿಗೆ ಒಳ ಒಪ್ಪಂದದ ಅಗತ್ಯವಿಲ್ಲ: ನಳೀನ್ ಕುಮಾರ್ ಕಟೀಲ್

ಉಪಚುನಾವಣೆಯಲ್ಲಿ ಬಿಜೆಪಿಗೆ ಒಳ ಒಪ್ಪಂದದ ಅಗತ್ಯವಿಲ್ಲ: ನಳೀನ್ ಕುಮಾರ್ ಕಟೀಲ್

ಕಲಬುರಗಿ ಜಿಲ್ಲೆಗೆ ಬರಲಿದೆ ಮತ್ತೂಂದು ಸಿಮೆಂಟ್‌ ಕಂಪನಿ

ಕಲಬುರಗಿ ಜಿಲ್ಲೆಗೆ ಬರಲಿದೆ ಮತ್ತೂಂದು ಸಿಮೆಂಟ್‌ ಕಂಪನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.