ಪ್ರತಿ ಎಕರೆಗೆ 4 ಸಾವಿರ ರೂ.ನಂತೆ 150 ಎಕರೆ ಜಮೀನು ಖರಿದಿಸಿದ್ದೆ: ಜಿಗಜಿಣಗಿ
Team Udayavani, Feb 6, 2023, 3:55 PM IST
ವಿಜಯಪುರ: ದೇಶದಲ್ಲಿ ಸತತ ಮೂರು ಬಾರಿ ಆಯ್ಕೆಯಾಗಿರುವ 71 ಸಂಸದರ ಆಸ್ತಿಯಲ್ಲಿ ನನ್ನ ಆಸ್ತಿ ಹೆಚ್ಚಿದೆ. ಅದಕ್ಕೆ ಕಾರಣ ಹಲವು ವರ್ಷಗಳ ಹಿಂದೆ ಪ್ರತಿ ಎಕರೆಗೆ ಕೇವಲ 4 ಸಾವಿರ ರೂ. ನಂತೆ 150 ಎಕರೆ ಜಮೀನು ಖರೀದಿಸಿದ್ದೇನೆ. ಈಗಲೂ ಅದೇ ಮೌಲ್ಯ ಇರಲು ಸಾಧ್ಯವೇ. ಹೀಗಾಗಿ ಇಂದಿನ ಮೌಲ್ಯದಲ್ಲಿ ನನ್ನ ಆಸ್ತಿ ಹೆಚ್ಚಿದೆಯೇ ಹೊರತು ಯಾರ ಜೇಬಿಗೂ ಕೈಹಾಕಿಲ್ಲ ಎಂದು ವಿಜಯಪುರ ಬಿಜೆಪಿ ಹಿರಿಯ ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಆಸ್ತಿ ಹೆಚ್ಚಿಸಿಕೊಳ್ಳಲು ನಾನೇನು ರೋಡ್ ಕೆತ್ತಿ ರೊಕ್ಕ ಮಾಡಿಲ್ಲ. ದಶಕದ ಹಿಂದೆ ಖರೀದಿಸಿದ್ದ 150 ಎಕರೆ ಜಮೀನು ಆಸ್ತಿಯ ಮೌಲ್ಯ ಇದೀಗ ಸಹಜವಾಗಿ ಹೆಚ್ಚಿದೆ ಎಂದು ಸಮಜಾಯಿಷಿ ನೀಡಿದರು.
ದಲಿತ ಸಿ.ಎಂ ವಿಷಯದಲ್ಲಿ ನಾನು ಸಾಯುವವರೆಗೂ ಬಯಸುತ್ತಲೇ ಇರುತ್ತೇನೆ. ಆದರೆ ನನಗೇ ಬೇಕೆಂಬ ಆಸೆ ಇಟ್ಟಿಲ್ಲ, ಯಾವುದೇ ಅಧಿಕಾರದ ಹಿಂದೆ ಬಿದ್ದಿಲ್ಲ. ದೇವರೂ ನನ್ನ ಕೈಬಿಟ್ಟಿಲ್ಲ. ಬರುವುದಿದ್ದರೆ ತಾನೇ ಬರುತ್ತದೆ. ಬಂದ್ರೆ ಚಾರಾಣೆ, ಹೋದ್ರೆ ಬಾರಾಣೆ ಎಂದು ಹೇಳಿದರು.
ದೇವರು ನನಗೆ ಆನೆಯಂಥಹ ಶಕ್ತಿಕೊಟ್ಟಿದ್ದರೂ ಇರುವೆಯಂತೆ ದುಡಿಯುತ್ತಿದ್ದೇನೆ. ಬಸವನಾಡಿನ ನಾನು ಬಸವೇಶ್ವರ ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ವಚನ ಸಾರದಂತೆ ಜೀವನ ನಡೆಸಿದ್ದೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ
ಉರಿಗೌಡ-ನಂಜೇಗೌಡ ವಿಷಯ ರಾಜಕೀಯ ಲಾಭಕ್ಕೆ ಸಲ್ಲದು: ಸಿಎಂ ಬೊಮ್ಮಾಯಿ
ಯುಗಾದಿ ಬಳಿಕ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಎಂ.ಬಿ.ಪಾಟೀಲ
ಮೇಲ್ಮನೆ ವಿಪಕ್ಷದ ಸಚೇತಕ ರಾಠೋಡಗೆ ಮಾತೃವಿಯೋಗ
ಅಕಾಲಿಕ ಮಳೆಗೆ ಕೊಳೆಯುತ್ತಿದೆ ದ್ರಾಕ್ಷಿ ಬೆಳೆ; ವಿಜಯಪುರ ಜಿಲ್ಲೆ ಅನ್ನದಾತರು ಕಂಗಾಲು