

Team Udayavani, Jul 7, 2018, 12:21 PM IST
ವಿಜಯಪುರ: ಶತಮಾನೋತ್ಸವ ಸಂಭ್ರಮದಲ್ಲಿ ದುಸ್ಥಿತಿ ಅನುಭವಿಸುತ್ತಿದ್ದ ಕಗ್ಗೋಡ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಇದೀಗ ಸೌಲಭ್ಯದ ಗಾಳಿ ಬೀಸುವ ಲಕ್ಷಣಗಳು ಕಾಣುತ್ತಿವೆ. ವಿವಿಧ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡಿದ್ದು, ಅಲ್ಲೀಗ ಹಲವು ಅಭಿವೃದ್ಧಿ ಪೂರಕ ಬೆಳವಣಿಗೆಗಳು ಆರಂಭಗೊಂಡಿವೆ.
ಉದಯವಾಣಿ ಪತ್ರಿಕೆ “ನಮ್ಮೂರ ಶಾಲೆ ಹೀಗಿದೆ ನೋಡಿ’ ಸರಣಿ ಲೇಖನ ಮಾಲಿಕೆಯಲ್ಲಿ ಜೂನ್ 5ರಂದು “ಶತಮಾನದ ಶಾಲೆಯ ದುಸ್ಥಿತಿ ನೋಡಿ’ ಶೀರ್ಷಿಕೆಯಲ್ಲಿ ಕಗ್ಗೊàಡ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಅವ್ಯವಸ್ಥೆ ಕುರಿತು ಸಚಿತ್ರ ವಿಶೇಷ ವರದಿ ಪ್ರಕಟಿಸಿತ್ತು.
ಈ ವರದಿ ಪ್ರಕಟಣೆ ಬಳಿಕ ಎಚ್ಚೆತ್ತುಕೊಂಡಿರುವ ಗ್ರಾಮಸ್ಥರು, ಅಧಿಕಾರಿಗಳು ಶಾಲೆಯ ಅಭಿವೃದ್ಧಿಗೆ ಹಾಗೂ ಶತಮಾನೋತ್ಸವ ಸಂಭ್ರಮ ಆಚರಿಸಲು ನಿರ್ಧರಿಸಿದ್ದಾರೆ. ಮೊದಲ ಹಂತದಲ್ಲಿ ಗ್ರಾಮಸ್ಥರು ಕಳೆದ ಹಲವು ವರ್ಷಗಳಿಂದ ರಚನೆ ಆಗದೇ ಇದ್ದ ಎಸ್‌ಡಿಎಂಸಿ ಸಮಿತಿ ರಚಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಜೂನ್ 27ರಂದು ಪಾಲಕರ ಸಭೆ ಕರೆದು ಸದಸ್ಯರ ಆಯ್ಕೆಯಾಗಿದ್ದು, ಅಧ್ಯಕ್ಷರ ಆಯ್ಕೆಗೆ ಶೀಘ್ರವೇ ಸಭೆ ನಡೆಸಲು ನಿರ್ಧರಿಸಲಾಗಿದೆ. ಮತ್ತೂಂದೆಡೆ ಗ್ರಾಪಂ ಪಿಡಿಒ ಡಿ.ಎಚ್.ಮುಜಾವರ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಕುಡಿಯುವ ನೀರಿನ ಸಮಸ್ಯೆ ನೀಸಲು ಕ್ರಮ ಕೈಗೊಂಡಿದ್ದಾರೆ. ಕುಸಿದು ಬಿದ್ದಿರುವ ಹಾಗೂ ಬೀಳುವ ಹಂತದಲ್ಲಿರುವ ಶಾಲೆಯ ಕಟ್ಟಡಗಳ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ.
ಒಡೆದು ಹಾಕಲಾಗಿರುವ ಶಾಲೆಯ ರಕ್ಷಣಾ ಗೋಡೆ ನಿರ್ಮಿಸಿ ಕೊಡುವ ಭರವಸೆ ನೀಡಿದ್ದಾರೆ. ಈ ಮಧ್ಯೆ ಸಿಆರ್‌ಸಿ ಅಧಿಕಾರಿ ಬಸವರಾಜ ಹೊಸಮನಿ ಅವರು ಶಾಲೆಗೆ ಭೇಟಿ ನೀಡಿ ಶಾಲೆಯ ದುಸ್ಥಿತಿ ಹಾಗೂ ಶಿಕ್ಷಕರ ಕೊರತೆ ನೀಗಲು ಮೇಲಧಿಕಾರಿಗಳಿಗೆ ವರದಿ ಮಾಡಿದ್ದಾರೆ. ಇದರಿಂದಾಗಿ ಸದರಿ ಶಾಲೆಗೆ ಶಿಕ್ಷಕರ ಕೊರತೆ ನೀಗಲು ತ್ವರಿತವಾಗಿ ಇಬ್ಬರು ಅತಿಥಿ ಶಿಕ್ಷಕರ ನೇಮಕಕ್ಕೆ ಸೂಚನೆ ನೀಡಲಾಗಿದೆ. ಉದಯವಾಣಿ ವರದಿ ಪ್ರಕಟಿಸಿದ ಬಳಿಕ ಶಾಲೆಯ ಅಭಿವೃದ್ಧಿಗೆ ಗ್ರಾಮಸ್ಥರು ಕಂಕಣ ತೊಟ್ಟಿದ್ದಾರೆ. ಈಗಾಗಲೇ ಎಸ್‌ಡಿಎಂಸಿ ಸಮಿತಿ ರಚನೆಗೆ ಸದಸ್ಯರ ಆಯ್ಕೆಯಾಗಿದೆ. ಶಾಲೆಗೆ ಭೇಟಿ ನೀಡಿದ್ದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಶಾಲೆಯ ಕೋಣೆಗಳ ದುರಸ್ತಿಗೆ ಕ್ರಮ ಕೈಗೊಳ್ಳುವ ಜೊತೆಗೆ ರಕ್ಷಣಾ ಗೋಡೆ ನಿರ್ಮಿಸಿ ಕೊಡುವ ಭರವಸೆ ನೀಡಿದ್ದಾರೆ ಎಂದು ಪ್ರಭಾರಿ ಮುಖ್ಯೋಪಾಧ್ಯಾಯ ಈರಣ್ಣ ಕೆಂಭಾವಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
Ad
ENG vs IND: 3ನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಪ್ರಕಟ; ತಂಡಕ್ಕೆ ಮರಳಿದ ಘಾತಕ ವೇಗಿ
Dharawad: ಕಾಂಗ್ರೆಸ್-ಬಿಜೆಪಿಯಿಂದ ಹಿಂದಿ ಹೇರಿಕೆ ತಡೆ ಅಸಾಧ್ಯ: ಪ್ರೊ.ಬಿಳಿಮಲೆ
ಆ ನಟಿ ʼಬಿಗ್ ಬಾಸ್ʼ ಮನೆಯಲ್ಲೇ ಆತ್ಮಹ*ತ್ಯೆಗೆ ಯತ್ನಿಸಿದ್ದರು- ಶಾಕಿಂಗ್ ಸಂಗತಿ ರಿವೀಲ್
Kejriwal: ಉತ್ತಮ ಆಡಳಿತಕ್ಕಾಗಿ ನನಗೆ ನೊಬೆಲ್ ಪ್ರಶಸ್ತಿ ಸಿಗಬೇಕು!: ಕೇಜ್ರಿವಾಲ್
Kalaburagi: ರಸ್ತೆ ಕಾಮಗಾರಿ ಬಿಲ್ ಮಾಡಲು ಕಮಿಷನ್ ಕೇಳಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್
You seem to have an Ad Blocker on.
To continue reading, please turn it off or whitelist Udayavani.