10 ಪದಕದೊಂದಿಗೆ ಕರ್ನಾಟಕ ಅಗ್ರಶ್ರೇಣಿ


Team Udayavani, Oct 30, 2017, 1:26 PM IST

VIJ-2.jpg

ಜಮಖಂಡಿ: ನಗರದಲ್ಲಿ 22ನೇ ರಾಷ್ಟ್ರಮಟ್ಟದ ರಸ್ತೆ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌, ಸ್ಥಳೀಯ ಕನ್ನಡ ಸಂಘ ಸುವರ್ಣ ಮಹೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ಆಶ್ರಯದಲ್ಲಿ ನಡೆದ 2ನೇ ದಿನದ ಸೈಕ್ಲಿಂಗ್‌ ಸ್ಪರ್ಧೆಯಲ್ಲಿ ಕರ್ನಾಟಕ ತಂಡ 6 ಚಿನ್ನ, 2 ಬೆಳ್ಳಿ, 2 ಕಂಚು ಸೇರಿ 10 ಪದಕ ಪಡೆಯುವುದರೊಂದಿಗೆ ಪ್ರಥಮ ಸ್ಥಾನ
ಕಾಯ್ದುಕೊಂಡಿದೆ.

ಪುರುಷರ ಜ್ಯೂನಿಯರ್‌ 40 ಕಿಮೀ ಟೀಮ್‌ ಟ್ರಯಲ್‌: ಕರ್ನಾಟಕ ತಂಡ ವೆಂಕಪ್ಪ ಕೆಂಗಲಗುಂಟಿ, ಸಂಜು ನಾಯಿಕ, ರಾಜು ಭಾಟಿ, ಜಿ.ಟಿ. ಗಂಗಾಧರರೆಡ್ಡಿ 50:52:091 ನಿಮಿಷದಲ್ಲಿ ಗುರಿ ತಲುಪಿ ಪ್ರಥಮ ಸ್ಥಾನ ಪಡೆದರು. ರಾಜಸ್ಥಾನದ ತಂಡದ ರಾಮೇಶ್ವರ ಲಾಲ್‌, ಪ್ರೇಮ ಮೊಂದ, ಭಾಗೀರಥ, ಬಲವೀರ 51:42:131 ದ್ವಿತೀಯ ಸ್ಥಾನ, ಪಂಜಾಬ್‌ ತಂಡದ ವಿಶ್ವಜಿತ್‌ ಸಿಂಗ್‌, ನಮನ ಕಪಿಲ್‌, ದಿಜೋತ್‌ ಸಿಂಗ್‌, ಪ್ರವಣಪ್ರೀತ್‌ ಸಿಂಗ್‌ 52:38:577 ನಿಮಿಷದಲ್ಲಿ ಗುರಿ ತಲುಪಿ ತೃತೀಯ ಸ್ಥಾನ ಪಡೆದರು. ವಿವಿಧ ರಾಜ್ಯದ 13 ತಂಡದ ಸೈಕ್ಲಿಂಗ್‌ ಪಟುಗಳು ಭಾಗವಹಿಸಿದ್ದರು.

ಮಹಿಳೆಯರ ಜ್ಯೂನಿಯರ್‌ 30 ಕಿಮೀ ಟೀಮ್‌ ಟೈಮ್‌ ಟ್ರಯಲ್‌: ಕರ್ನಾಟಕ ತಂಡದ ಮೇಘಾ ಗೂಗಾಡ, ರಾಜೇಶ್ವರಿ ಡೊಳ್ಳಿ, ಸಾವಿತ್ರಿ ಹೆಬ್ಟಾಳಟ್ಟಿ, ದಾನಮ್ಮ ಗುರವ 44:32:802 ನಿಮಿಷಗಳಲ್ಲಿ ಗುರಿ ತಲುಪಿ ಪ್ರಥಮ ಸ್ಥಾನ ಪಡೆದರು. ಮಹಾರಾಷ್ಟ್ರ ತಂಡದ ಮಧುರಾ ವಾಯಕರ್‌, ಪ್ರನೀತಾ ಸೋಮನ್‌, ಪ್ರಿಯಾಂಕ ಜಾಧವ, ಸ್ವಪ್ನಾಲಿ ಸುತಾರ 46:33:581 ದ್ವಿತೀಯ ಹಾಗೂ ಆಸ್ಸಾಂ ರಾಜ್ಯದ ಗಂಗೋತ್ರಿ ಬೋರಡೋಲಿ, ಚಾಣಿಕ್ಯಾ ಗೋಗೈಯಿ, ಬ್ರಿಸ್ಟಿಕೊಂಕ್‌ಕೋನಾ ಗೋಗೈಯಿ, ಜಯಶ್ರೀ ಗೋಗೈಯಿ 46:58:440 ತೃತೀಯ ಸ್ಥಾನ ಪಡೆದರು. ಸ್ಪರ್ಧೆಯಲ್ಲಿ 8 ತಂಡದ ಸೈಕ್ಲಿಂಗ್‌ ಪಟುಗಳು ಭಾಗವಹಿಸಿದ್ದರು.

ಜ್ಯೂನಿಯರ್‌ ಬಾಲಕರ 10 ಕಿಮೀ ವೈಯಕ್ತಿಕ ಟೈಮ್‌ ಟ್ರಯಲ್‌: ಕರ್ನಾಟಕದ ವಿಶ್ವನಾಥ ಗಾಡದ 12:10:771 ನಿಮಿಷದಲ್ಲಿ ಗುರಿ ತಲುಪಿ ಪ್ರಥಮ ಸ್ಥಾನ, ರಾಜಸ್ಥಾನದ ಮುಲಾರಾಮ್‌ 12:25:207 ದ್ವಿತೀಯ, ಪಂಜಾಬದ ವಿಶ್ವಜಿತ್‌ ಸಿಂಗ್‌ 12:26:695 ತೃತೀಯ ಸ್ಥಾನ ಪಡೆದರು. ಸ್ಪರ್ಧೆಯಲ್ಲಿ 49 ಸೈಕ್ಲಿಂಗ್‌ ಪಟುಗಳು ಭಾಗವಹಿಸಿದ್ದರು.

ಜ್ಯೂನಿಯರ್‌ ಬಾಲಕಿಯರ 10 ಕಿಮೀ ವೈಯಕ್ತಿಕ ಟೈಮ್‌ ಟ್ರಯಲ್‌: ಕರ್ನಾಟಕದ ದಾನಮ್ಮ ಚಿಚಖಂಡಿ 15:42:18 ನಿಮಿಷದಲ್ಲಿ ಗುರಿ ತಲುಪಿ ಪ್ರಥಮ ಸ್ಥಾನ, ಮಧ್ಯಪ್ರದೇಶದ ಎನ್‌. ಅನಿತಾ 16:02:46 ದ್ವಿತೀಯ, ಕರ್ನಾಟಕದ ಸಹನಾ ಕೂಡಿಗನೂರ 16:10:36 ತೃತೀಯ ಸ್ಥಾನ ಪಡೆಯುವ ಮೂಲಕ ಸ್ಪರ್ಧೆಯಲ್ಲಿ 31 ಸೈಕ್ಲಿಂಗ್‌ ಪಟುಗಳು ಭಾಗವಹಿಸಿದ್ದರು.

ಪುರುಷರ 60 ಕಿಮೀ ಟೀಮ್‌ ಟೈಮ್‌ ಟ್ರಯಲ್‌: ರೈಲ್ವೆ ತಂಡದ ಅರವಿಂದ ಪಾನವಾರ, ಪಂಕಜಕುಮಾರ, ಶ್ರೀಧರ
ಸವಣೂರ, ರಾಹುಲ್‌ 01:13:041 ನಿಮಿಷದಲ್ಲಿ ಗುರಿಯೊಂದಿಗೆ ಪ್ರಥಮ ಸ್ಥಾನ ಪಡೆದರೆ, ಸರ್ವಿಸಿಸ್‌ ತಂಡದ ಮನಜೀತ್‌ ಸಿಂಗ್‌, ಸತಬೀರ ಸಿಂಗ್‌, ಅತುಲಕುಮಾರ, ಓಂಪ್ರಕಾಶ 01:14:562 ದ್ವಿತೀಯ, ಪಂಜಾಬ್‌ ದ ರಾಜಬೀರ ಸಿಂಗ್‌, ಸಾಹಿಲ್‌, ಸತವೀರ ಸಿಂಗ್‌, ಅಭಿಲಾಷ್‌ 01:15:140 ತೃತೀಯ ಸ್ಥಾನ ಪಡೆದರು. ಸ್ಪರ್ಧೆಯಲ್ಲಿ 14 ತಂಡದ ಸೈಕ್ಲಿಂಗ್‌ ಪಟುಗಳು ಭಾಗವಹಿಸಿದ್ದರು.

ಮಹಿಳೆಯರ 30 ಕಿಮೀ ಟೀಮ್‌ ಟೈಮ್‌ ಟ್ರಯಲ್‌: ರೈಲ್ವೆ ತಂಡದ ಟಿ.ವಿದ್ಯಾಲಕ್ಷ್ಮೀದೇವಿ, ಪಾನಾ ಚೌಧರಿ,
ಟಿ.ಮನೋರಮದೇವಿ, ಪ್ರಿಯಾಂಕ ದೇಸಾಯಿ 01:00:221 ನಿಮಿಷದಲ್ಲಿ ಗುರಿ ತಲುಪುವ ಮೂಲಕ ಪ್ರಥಮ ಸ್ಥಾನ ಪಡೆದರೆ, ಕರ್ನಾಟಕದ ಅಮೃತಾ ರಘುನಾಥ, ಕೆ.ಟಿ. ಕೃಷಿ, ಲಿದಿಯಾಮೂಲ್‌ ಸುನ್ನಿ, ಪಿ.ಓ. ಸಾಯೋನಾ 01:01:584 ದ್ವಿತೀಯ, ಮಹಾರಾಷ್ಟ್ರದ ಮಧುರಾ ವಾಯಕರ, ಪ್ರನೀತಾ ಸೋಮಾನ್‌, ರುತುಜಾ ಸಾತಪೂತೆ, ಯಶೋಧರಾ ಶ್ರೀಕಾರ 01:02:092 ತೃತೀಯ ಸ್ಥಾನ ಪಡೆದರು. ಸ್ಪರ್ಧೆಯಲ್ಲಿ 7 ತಂಡದ ಸೈಕ್ಲಿಂಗ್‌ ಪಟುಗಳು ಭಾಗವಹಿಸಿದ್ದರು.

ಚಿನ್ನದ ಪದಕ ವೀರರು
ಜಮಖಂಡಿ: ನಗರದಲ್ಲಿ ನಡೆದ ರಾಷ್ಟ್ರಮಟ್ಟದ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ದಲ್ಲಿ ಚಿನ್ನದ ಬೇಟೆ ಶುರುವಾಗಿದೆ. 2ನೇ ದಿನದಲ್ಲಿ ಕರ್ನಾಟಕ ತಂಡ 4 ಹಾಗೂ ರೈಲ್ವೆ ತಂಡ 2 ಚಿನ್ನದ ಪದಕ ಪಡೆದುಕೊಂಡಿವೆ. ಕರ್ನಾಟಕ ತಂಡದ ವೆಂಕಪ್ಪ ಕೆಂಗಲಗುಂಟಿ, ಸಂಜು ನಾಯಿಕ, ರಾಜು ಭಾಟಿ, ಜಿ.ಟಿ.ಗಂಗಾಧರರೆಡ್ಡಿ ಪುರುಷರ ಜ್ಯೂನಿಯರ್‌ 40 ಕಿಮೀ ಟೀಮ್‌ ಟ್ರಯಲ್‌ದಲ್ಲಿ, ಕರ್ನಾಟಕ ತಂಡದ ಮೇಘಾ ಗೂಗಾಡ, ರಾಜೇಶ್ವರಿ ಡೊಳ್ಳಿ, ಸಾವಿತ್ರಿ ಹೆಬ್ಟಾಳಟ್ಟಿ,  ನಮ್ಮ ಗುರವ ಮಹಿಳೆಯರ ಜ್ಯೂನಿಯರ್‌ 30 ಕಿಮೀ ಟೀಮ್‌ ಟೈಮ್‌ ಟ್ರಯಲ್‌ ಸ್ಪರ್ಧೆಯಲ್ಲಿ, ಕರ್ನಾಟಕದ ವಿಶ್ವನಾಥ ಗಾಡದ ಜ್ಯೂನಿಯರ್‌ ಬಾಲಕರ 10 ಕಿಮೀ ವೈಯಕ್ತಿಕ ಟೈಮ್‌ ಟ್ರಯಲ್‌ದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. 

ಕರ್ನಾಟಕದ ದಾನಮ್ಮ ಚಿಚಖಂಡಿ ಜೂನಿಯರ್‌ ಬಾಲಕಿಯರ 10 ಕಿಮೀ ವೈಯಕ್ತಿಕ ಟೈಮ್‌ ಟ್ರಯಲ್‌ದಲ್ಲಿ, ರೈಲ್ವೆ ತಂಡ ಅರವಿಂದ ಪಾನವಾರ, ಪಂಕಜಕುಮಾರ, ಶ್ರೀಧರ  ವಣೂರ, ರಾಹುಲ್‌ ಪುರುಷರ 60 ಕಿಮೀ ಟೀಮ್‌ ಟೈಮ್‌ ಟ್ರಯಲ್‌ದಲ್ಲಿ, ರೈಲ್ವೆ ತಂಡ ಟಿ.ವಿದ್ಯಾಲಕ್ಷ್ಮೀದೇವಿ, ಪಾನಾ ಚೌಧರಿ, ಪ್ರಿಯಾಂಕ ದೇಸಾಯಿ, ಟಿ. ಮನೋರಮದೇವಿ, ಮಹಿಳೆಯರ 30 ಕಿಮೀ ಟೀಮ್‌ ಟೈಮ್‌ ಟ್ರಯಲ್‌ ಸೈಕ್ಲಿಂಗ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. 

ಟಾಪ್ ನ್ಯೂಸ್

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ganihara

Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ

Bengaluru ಗ್ರಾಮಾಂತರದಲ್ಲಿ ಕಾಂಗ್ರೆಸ್‌ 500 ಕೋಟಿ ರೂ. ಖರ್ಚು’

Bengaluru ಗ್ರಾಮಾಂತರದಲ್ಲಿ ಕಾಂಗ್ರೆಸ್‌ 500 ಕೋಟಿ ರೂ. ಖರ್ಚು’

Congress ಗೆ ದೇಶದಲ್ಲಿ 40 ಸ್ಥಾನ ಸಿಗೋದು ಕಷ್ಟ, ರಾಜ್ಯದಲ್ಲಿ ಬಿಜೆಪಿಗೆ 28 ಸ್ಥಾನ ಸ್ಪಷ್ಟ

Congress ಗೆ ದೇಶದಲ್ಲಿ 40 ಸ್ಥಾನ ಸಿಗೋದು ಕಷ್ಟ, ರಾಜ್ಯದಲ್ಲಿ ಬಿಜೆಪಿಗೆ 28 ಸ್ಥಾನ ಸ್ಪಷ್ಟ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.