ವಿದ್ಯುತ್‌ ಸಮಸ್ಯೆ ನೀಗಿಸಲು ಕ್ರಮ


Team Udayavani, Dec 1, 2020, 3:40 PM IST

ವಿದ್ಯುತ್‌ ಸಮಸ್ಯೆ ನೀಗಿಸಲು ಕ್ರಮ

ಮುದ್ದೇಬಿಹಾಳ: ತಾಲೂಕಿನ ವಿದ್ಯುತ್‌ ಸಮಸ್ಯೆನೀಗಿಸಲು ಸರ್ಕಾರದಿಂದ 180 ಕೋಟಿ ಅನುದಾನ ತಂದಿದ್ದೇನೆ. ಇದರಲ್ಲಿ ಐದು 110 ಕೆವಿ, ಒಂದು 220 ಕೆವಿ ವಿದ್ಯುತ್‌ ವಿತರಣಾ ಕೇಂದ್ರ ಹಾಗೂ ಪ್ರತಿ ಊರಿಗೆ ಪ್ರತ್ಯೇಕ ವಿದ್ಯುತ್‌ ಫೀಡರ್‌ ಸ್ಥಾಪಿಸುವ ಕಾರ್ಯ ಭರದಿಂದ ಸಾಗಿದೆ ಎಂದು ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್‌ .ಪಾಟೀಲ ನಡಹಳ್ಳಿ ಹೇಳಿದ್ದಾರೆ.

ತಾಲೂಕಿನ ತಂಗಡಗಿ ಗ್ರಾಪಂ ಅಡಿ ಬರುವ ತಂಗಡಗಿ, ಕಮಲದಿನ್ನಿ, ಕುಂಚಗನೂರ, ಗಂಗೂರ, ಅಮರಗೋಳ ಗ್ರಾಮಗಳಲ್ಲಿ ಕೆಬಿಜೆಎನ್ನೆಲ್‌,ಪಂಚಾಯತ್‌ ರಾಜ್‌, ಶಾಸಕರ ನಿಧಿ , ಕೆಇಬಿ, ಪಿಡಬ್ಲೂಡಿ ಇಲಾಖೆಗಳ ಅಡಿ ಮಂಜುರಾದ ಅಂದಾಜು 15 ಕೋಟಿ ರೂ.ಗಳ ಮೂಲಸೌಕರ್ಯ ಅಭಿವೃದ್ಧಿ, ವಿದ್ಯುತ್‌ ಸುಧಾರಣಾ ಕಾಮಗಾರಿಗಳಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಸಾರ್ವಜನಿಕ ಸಭೆಗಳಲ್ಲಿ ಅವರು ಮಾತನಾಡಿದರು. ವಿದ್ಯುತ್‌ ಸಮಸ್ಯೆ ಪರಿಹಾರಕ್ಕೆ ಸಂಬಂಧಿ ಸಿದ ಎಲ್ಲ ಕೆಲಸಗಳು ಭರದಿಂದ ಸಾಗಿವೆ. ಈಗಾಗಲೇ 48 ಹಳ್ಳಿಗಳಲ್ಲಿ ವಿದ್ಯುತ್‌ ಸುಧಾರಣಾ ಕಾಮಗಾರಿ ಮುಗಿದಿವೆ. ಇನ್ನುಳಿದ ಗ್ರಾಮಗಳಲ್ಲಿ ಮುಂದಿನ ಎರಡೂವರೆ ವರ್ಷಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಕೆಲ ಗ್ರಾಮಗಳಲ್ಲಿ ಅತ್ಯಂತ ಹಳೇಯದಾದ ವಿದ್ಯುತ್‌ ಕಂಬ, ತಂತಿಗಳನ್ನು ಸಂಪೂರ್ಣ ಬದಲಾಯಿಸುವ ಕಾರ್ಯ ನಡೆದಿದೆ ಎಂದರು.

ನದಿ ದಂಡಿ ಹಳ್ಳಿಗಳನ್ನು ಸಂಪರ್ಕಿಸಲು ಹಳೆ ರಸ್ತೆಗಳನ್ನು ಹೊಸದಾಗಿ ನಿರ್ಮಿಸಲಾಗುತ್ತಿದೆ. ಮೊದಲೆಲ್ಲ ರೈತರು ಹೊಲಗಳಿಗೆ ಹೋಗಲು ಚಕ್ಕಡಿ ಬಳಸುತ್ತಿದ್ದರು. ಆದರೀಗ ರೈತ ಆಧುನಿಕತೆಯನ್ನು ಬಳಸಿಕೊಳ್ಳುತ್ತಿದ್ದಾನೆ. ಇದಕ್ಕಾಗಿ ಟ್ರ್ಯಾಕ್ಟರ್‌ನಂತಹ ವಾಹನಗಳ ಬಳಕ ಹೆಚ್ಚಿದೆ. ಹೀಗಾಗಿ ನಮ್ಮ ಹೊಲಕ್ಕೆ ರಸ್ತೆ ಮಾಡಿಸಿ ಎಂದು ದುಂಬಾಲು ಬೀಳುತ್ತಿದ್ದಾರೆ. ಇವರ ಬೇಡಿಕೆ ಈಡೇರಿಸಲೆಂದೇ ಕೆಬಿಜೆಎನ್ನೆಲ್‌ನಿಂದ 65 ಕೋಟಿ ಅನುದಾನದಲ್ಲಿ ಹೊಲಗಳ ರಸ್ತೆ ದುರಸ್ತಿಗೆ ಮಂಜೂರಾತಿ ಪಡೆದುಕೊಳ್ಳಲಾಗಿದೆ. 2-3 ತಿಂಗಳಲ್ಲಿ ಟೆಂಡರ್‌ ಕರೆದು ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಪ್ರವಾಹ ಪೀಡಿತ ನದಿ ದಂಡೆ ಹಳ್ಳಿಗಳಲ್ಲಿರುವ ಎಸ್ಸಿ, ಎಸ್ಟಿ ಜನಾಂಗದ ಏಳ್ಗೆಗೆ ಸೂಕ್ತ ಕ್ರಮ ಕೈಗೊಂಡಿದೆ. ಕೃಷ್ಣಾ ನದಿ ತೀರದ ಈ ಭಾಗದ 10 ಪಂಚಾಯತ್‌ ವ್ಯಾಪ್ತಿಯ 68 ಹಳ್ಳಿಗಳ ಎಸ್ಸಿ, ಎಸ್ಟಿ ಸಮುದಾಯ ಮೇಲೆತ್ತಲು ಯೋಜನೆ ರೂಪಿಸಿದೆ. ಇದಕ್ಕೆ ವಿಶೇಷ ಅನುದಾನ ನೀಡಿ ಶೀಘ್ರ ಚಾಲನೆ ನೀಡಲಾಗುತ್ತದೆ ಎಂದರು.

ನಮ್ಮ ಮುಂದಿನ ಜನಾಂಗ ಉತ್ತಮ ರೀತಿಯಲ್ಲಿ ಬದುಕಬೇಕಾದರೆ ನಾವೆಲ್ಲ ಆರ್ಥಿಕವಾಗಿ ಮೇಲೆ ಬರಬೇಕು. ಇದಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಚುನಾವಣೆ ಬಂದಾಗ ರಾಜಕೀಯ ಮಾಡೋಣ. ಅಭಿವೃದ್ಧಿ ವಿಷಯ ಬಂದಾಗ ಪಕ್ಷ ಮರೆತು ಎಲ್ಲರೂ ಒಂದಾಗೋಣ ಎಂದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಬಿಜೆಪಿ ಧುರೀಣರಾದ ಶಿವಶಂಕರಗೌಡ ಹಿರೇಗೌಡರ, ಮಲಕೇಂದ್ರಗೌಡ ಪಾಟೀಲ, ಭೂನ್ಯಾಯ ಮಂಡಳಿ ಸದಸ್ಯ ಎಸ್‌.ಬಿ. ಚಲವಾದಿ ಮಾತನಾಡಿದರು. ಚಟ್ಟರಕಿ ಸದ್ಗುರು ಸಾನ್ನಿಧ್ಯವಹಿಸಿದ್ದರು. ಗುತ್ತಿಗೆದಾರ ವೀರಭದ್ರಗೌಡ ಹೊಸಮನಿ, ಪಿಡಿಒ ಉಮೇಶ ರಾಠೊಡ, ಪಿಡಬ್ಲೂಡಿ ಎಇಇ ಆರ್‌.ಎನ್‌. ಹುಂಡೇಕಾರ, ಹೆಸ್ಕಾಂ ಶಾಖಾ ಧಿಕಾರಿ ಬಿ.ಎಸ್‌. ಯಲಗೋಡ, ಸ್ಥಳೀಯ ಧುರೀಣರಾದ ಸಂಗಮೇಶ ಹುಂಡೇಕಾರ, ಸಂಗಣ್ಣ ಅಳ್ಳಗಿ, ಶಿವಾನಂದ ಮಂಕಣಿ, ಮುದಕಪ್ಪಗೌಡ ಪಾಟೀಲ, ಬಸವರಾಜ ಡೊಂಗರಗಾವಿ, ಸಿದ್ರಾಮಪ್ಪ ಡೊಂಗರಗಾವಿ, ಯಮನಪ್ಪ ಶಾಸ್ತ್ರೀ, ಜಗದೀಪ ದೇಸಣಗಿ, ರಾಜು ಚಲವಾದಿ ಇದ್ದರು.

ಅಂದಾಜು 15 ಕೋಟಿ ರೂ.ಗಳ ಕಾಮಗಾರಿ :  ತಂಗಡಗಿಯಲ್ಲಿ ಮೂಲಸೌಕರ್ಯ ಕಾಮಗಾರಿಗಳಿಗೆ 2.78 ಕೋಟಿ, ಅಮರಗೋಳ-ಹಡಗಲಿ ರಸ್ತೆಗೆ 2 ಕೋಟಿ, ಅಮರಗೋಳ ಕ್ರಾಸ್‌ನಿಂದ ಏಳಾದೇಶ್ವರ ಹನುಮಪ್ಪನ ಗುಡಿವರೆಗೆ ರಸ್ತೆ ಡಾಂಬರೀಕರಣಕ್ಕೆ 1 ಕೋಟಿ, ತಂಗಡಗಿ-ಗಂಗೂರ ರಸ್ತೆಗೆ 50 ಲಕ್ಷ, ತಂಗಡಗಿಯಲ್ಲಿ ಅಂಬೇಡ್ಕರ್‌ ಭವನಕ್ಕೆ 50 ಲಕ್ಷ, ಶಾಸಕರ ಅನುದಾನದಲ್ಲಿ 5 ಲಕ್ಷ, ಸರ್ಕಾರಿ ಹೈಸ್ಕೂಲ್‌ ಕಟ್ಟಡಕ್ಕೆ 31.5 ಲಕ್ಷ, ಗಂಗೂರಲ್ಲಿ ವಿವಿಧ ಕಾಮಗಾರಿಗಳಿಗಾಗಿ 1.50 ಕೋಟಿ ಹೀಗೆ ಒಟ್ಟಾರೆ ತಂಗಡಗಿ ಗ್ರಾಪಂ ವ್ಯಾಪ್ತಿಯಲ್ಲಿ ಅಂದಾಜು 15 ಕೋಟಿ ರೂ. ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಈ ವೇಳೆ ಗ್ರಾಮಸ್ಥರಿಗೆ ತಿಳಿಸಲಾಯಿತು.

ಕಾರ್ಯಕ್ರಮ ಮೊಟಕು :  ಶಾಸಕರು ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸುತ್ತಿದ್ದಾಗಲೇ ರಾಜ್ಯ ಚುನಾವಣಾ ಆಯೋಗವು ಗ್ರಾಪಂ ಚುನಾವಣೆ ಘೊಷಣೆ ಮಾಡಿತು. ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೆ ಬರುವುದನ್ನು ತಿಳಿದ ಶಾಸಕರು ತಂಗಡಗಿ ಹೊರತುಪಡಿಸಿ ಉಳಿದ ಗ್ರಾಮಗಳಲ್ಲಿ ನಡೆಸಲುದ್ದೇಶಿಸಿದ್ದ ಕಾರ್ಯಕ್ರಮಗಳ ಬ್ಯಾನರ್‌ ತೆರವುಗೊಳಿಸಿ ಕಾರ್ಯಕ್ರಮ ಮೊಟಕುಗೊಳಿಸಿದರು.

ಶಾಸಕರು ಸರ್ಕಾರದೊಂದಿಗೆ ಬಡಿದಾಡಿ ಹೆಚ್ಚಿನ ಅನುದಾನ ತಂದಿದ್ದಾರೆ. ಅವರು ಎಷ್ಟು ಕಾಳಜಿಯಿಂದ ಅನುದಾನ ತಂದಿದ್ದಾರೋ ಅಷ್ಟೇ ಕಾಳಜಿಯಿಂದ ಕೆಲಸ ಮಾಡಿಸಿಕೊಳ್ಳಬೇಕು. 25 ವರ್ಷದಲ್ಲಿ ಆಗದ ಅಭಿವೃದ್ಧಿ ಕೆಲಸವನ್ನು 25 ತಿಂಗಳಲ್ಲಿ ಮಾಡಿದ್ದಾರೆ. – ಮಲಕೇಂದ್ರಗೌಡ ಪಾಟೀಲ, ಕರ್ನಾಟಕ ಪ್ರದೇಶ ಕುರುಬರ ಸಂಘದ ಉಪಾಧ್ಯಕ್ಷ

ಶಾಸಕ ನಡಹಳ್ಳಿಯವರು ಚುನಾವಣೆಯಲ್ಲಿ ನೀಡಿದ ಎಲ್ಲ ಭರವಸೆ ಈಡೇರಿಕೆಗೆ ಬದ್ಧರಾಗಿದ್ದಾರೆ. ಈಗಾಗಲೇ ಶೇ. 65ರಷ್ಟು ಕೆಲಸ ಮಾಡಿದ್ದಾರೆ. ಗ್ರಾಪಂ ಚುನಾವಣೆಯಲ್ಲಿ ಶಾಸಕರ ಕೈ ಬಲಪಡಿಸಬೇಕು. – ಶಿವಶಂಕರಗೌಡ ಹಿರೇಗೌಡರ, ಬಿಜೆಪಿ ಹಿರಿಯ ಧುರೀಣರು

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.