
ನಡತೆಯ ಬಗ್ಗೆ ಸಂಶಯದಿಂದ ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ!
Team Udayavani, Aug 31, 2021, 12:04 PM IST

ವಿಜಯಪುರ: ಪತ್ನಿಯ ನಡತೆ ಬಗ್ಗೆ ಮೇಲೆ ವಿಪರೀತ ಅನುಮಾನ ಹೊಂದಿದ್ದ ವ್ಯಕ್ತಿಯೊಬ್ಬ, ಆಕೆಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ನಗರದ ಹೊರ ವಲಯದಲ್ಲಿ ಇರುವ ತೊರವಿ ಗ್ರಾಮದ ಸಂತೋಷ ಈಟಿ ಎಂಬಾತನೇ ಪತ್ನಿ ಶ್ರೀದೇವಿ ಈಟಿ ಎಂಬಾಕೆಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಆರೋಪಿ.
ಕೂಲಿ ಕೆಲಸ ಮಾಡಿಕೊಂಡಿದ್ದ ಸಂತೋಷ, ಖಾಸಗಿ ಆಸ್ಪತ್ರೆಯಲ್ಲಿ ಸ್ವೀಪರ್ ಆಗಿದ್ದ ಹೆಂಡತಿ ನಡತೆ ಬಗ್ಗೆ ಸಂಶಯ ಹೊಂದಿದ್ದ. ಮೂರು ಮಕ್ಕಳಿದ್ದರೂ ಪತಿ ತನ್ನ ಮೇಲೆ ಸಂಶಯಿಸುತ್ತಿದ್ದ ಕಾರಣಕ್ಕೆ ಪತಿ-ಪತ್ನಿ ಮಧ್ಯೆ ಕಲಹ ನಡೆಯುತ್ತಲೇ ಇತ್ತು. ಈ ಬಗ್ಗೆ ಹಲವು ಬಾರಿ ಹಿರಿಯರು ರಾಜಿ ಪಂಚಾಯ್ತಿ ನಡೆಸಿದ್ದರು.
ಇದನ್ನೂ ಓದಿ:ಕಿಡಿಗೇಡಿಗಳಿಂದ ಟೀ ಅಂಗಡಿಗೆ ಬೆಂಕಿ : ಲಕ್ಷಾಂತರ ರೂ ಮೌಲ್ಯದ ಸಾಮಗ್ರಿಗಳು ಸುಟ್ಟು ಭಸ್ಮ
ಅಂತಿಮವಾಗಿ ಮೂರು ಮಕ್ಕಳನ್ನು ತೊರವಿ ಗ್ರಾಮದಲ್ಲೇ ಇರುವ ಪತ್ನಿಯ ತವರು ಮನೆಗೆ ಕಳಿಸಿದ್ದ ಸಂತೋಷ, ಶ್ರೀದೇವಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶ್ರೀದೇವಿ ಸಹೋದರಿ ರೋಹಿಣಿ ಮೊಬೈಲ್ ಕರೆ ಮಾಡಿದರೂ ಸ್ವೀಕರಿಸಿದಿದ್ದಾಗ ಆತಂಕದಿಂದ ಅಕ್ಕನ ಮನೆಗೆ ಹೋಗಿ ನೋಡಿದಾಗ ದುರಂತ ಬಯಲಾಗಿದೆ.
ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ಭೀರಪ್ಪ ವಗ್ಗಿಗೆ ಬಿಲಿಯನೇರ ರೈತ ಪ್ರಶಸ್ತಿ

Vijayapura; ಮಾನಸಿಕ ಹಿಂಸೆಯಿಂದ ವ್ಯಕ್ತಿ ಆತ್ಮಹತ್ಯೆ; ಮೂವರು ಆರೋಪಿಗಳಿಗೆ ಮೂರು ವರ್ಷ ಜೈಲು

Vijayapura; ಜ.9 ರಿಂದ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಸ್ಪರ್ಧೆ

Vijayapura ನಗರದ ಸುತ್ತ ಬೆಳ್ಳಂಬೆಳಿಗ್ಗೆ ಲಘು ಭೂಕಂಪನ

Vijayapura; ವಾರದಲ್ಲಿ ಐಸಿಸ್ ನಂಟು ಸಾಬೀತಿಗೆ ಯತ್ನಾಳ್ ಗೆ ತನ್ವೀರ ಹಾಶ್ಮಿ ಸವಾಲು