
ಯತ್ನಾಳ ಮಂತ್ರಿ ಆಗ್ತಾರೆ, ನಾವಿಬ್ರು ಜೊತೆಯಾಗಿ ಕೆಲಸ ಮಾಡ್ತೇವೆ: ಸಚಿವ ಉಮೇಶ್ ಕತ್ತಿ
Team Udayavani, Jan 26, 2022, 2:25 PM IST

ಮುದ್ದೇಬಿಹಾಳ: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಂತ್ರಿ ಆಗೇ ಆಗ್ತಾರೆ. ಅವರನ್ನು ನನ್ನ ಜೊತೆ ಕರ್ಕೊಂಡು ಹೋಗ್ತೇನೆ. ನಾವಿಬ್ರು ಜೊತೆಯಾಗಿ ಕೆಲಸ ಮಾಡ್ತೇವೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿ ಆತ್ಮವಿಶ್ವಾಸದಿಂದ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದಲ್ಲಿ ಬುಧವಾರ ಗ್ರಾಮ ಒನ್ ಸೇವಾ ಕೇಂದ್ರದ ವರ್ಚುವಲ್ ಉದ್ಘಾಟನೆ ವೀಕ್ಷಿಸಿ, ಮುಖ್ಯಮಂತ್ರಿ ಜೊತೆ ಮಾತನಾಡಿದ ಮೇಲೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕ್ಯಾಬಿನೆಟ್ ಪುನಾರಚನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ಕರ್ನಾಟಕ ರಾಜ್ಯದಲ್ಲಿ ಕ್ಯಾಬಿನೆಟ್ ಪುನಾರಚನೆ ಇಲ್ಲ. ಅದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ. ಕ್ಯಾಬಿನೆಟ್ ಪುನಾರಚನೆ ಜನರ ಕ್ಯೂರಿಯಾಸಿಟಿ ಅಲ್ಲ ಅದು ಮಾಧ್ಯಮದವರ ಕ್ಯೂರಿಯಾಸಿಟಿ ಎಂದರು. ತಾವು ಮಂತ್ರಿಯಾಗುವ ಮಾತು ಸಚಿವ ಕತ್ತಿ ಅವರ ಬಾಯಿಂದ ಬಂದದ್ದು ಕೇಳಿ ಖುಷಿಯಾದ ಯತ್ನಾಳರ ಮುಖದಲ್ಲಿ ಮುಗುಳ್ನಗೆ ಮಾಸ್ಕ್ ನಡುವೆಯೂ ಇಣುಕಿದ್ದು ಕಂಡುಬಂತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ
