Muddebihal: ಅಕ್ರಮ ಮದ್ಯ ಮಾರಾಟ; ಅಬಕಾರಿ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿದ ಮಹಿಳೆಯರು


Team Udayavani, Apr 21, 2024, 3:16 PM IST

Muddebihal: ಅಕ್ರಮ ಮದ್ಯ ಮಾರಾಟ; ಅಬಕಾರಿ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿದ ಮಹಿಳೆಯರು

ವಿಜಯಪುರ: ಗ್ರಾಮದಲ್ಲಿ ನಡೆಯುವ ಅಕ್ರಮ ಮದ್ಯ ಮಾರಾಟವನ್ನು ಸಾಕ್ಷಿ ಸಮೇತ ನೀಡಿದರೂ ಆರೋಪಿಗಳನ್ನು ಬಂಧಿಸದ ಅಬಕಾರಿ ಅಧಿಕಾರಿಗಳನ್ನು ಮಹಿಳೆಯರು ಇಡೀ ರಾತ್ರಿ ಗ್ರಾಮದಿಂದ ತೆರಳದಂತೆ ದಿಗ್ಬಂಧನ ಹಾಕಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಂಗಾರಗುಂಡ ಗ್ರಾಮದಲ್ಲಿ ಶನಿರಾತ್ರಿ ರಾತ್ರಿ 10 ರಿಂದ ಭಾನುವಾರ ಬೆಳಿಗ್ಗೆ 5 ಗಂಟೆಯವರೆಗೆ ಅಬಕಾರಿ ಅಧಿಕಾರಿಗಳನ್ನು ಮಹಿಳೆಯರೇ ಕೂಡಿ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಸಾವಿರ ಜನಸಂಖ್ಯೆ ಇಲ್ಲದ ಬಂಗಾರಗುಂಡ ಗ್ರಾಮದಲ್ಲಿ ಅಕ್ರಮವಾಗಿ ಮಾರಾಟ ಮಾಡುವ 12 ಮದ್ಯದ ಅಂಗಡಿಗಳಿವೆ. ಇದರಿಂದಾಗಿ ಗ್ರಾಮದಲ್ಲಿ ಬಹುತೇಕ ಕುಟುಂಬಗಳು ಬೀದಿಗೆ ಬಿದ್ದಿದ್ದು, ಸಾಲ ಹಾಗೂ ಮದ್ಯ ವ್ಯಸನಿಗಳು ಸಾವಿಗೀಡಾಗುತ್ತಿದ್ದಾರೆ. ಕೇವಲ ಒಂದು ವರ್ಷದಲ್ಲಿ 8 ಯುವಕರು ಆತ್ಮಹತ್ಯೆ ಮಾಡಿಕೊಂಡು ಕುಟುಂಬಗಳು ಕಂಗಾಲಾಗಿವೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಕ್ರಮ ಮದ್ಯದಿಂದ ಇಡೀ ಗ್ರಾಮದಲ್ಲಿ ಶಾಂತಿ ಹಾಗೂ ಕೌಟುಂಬಿಕ ನೆಮ್ಮದಿ ಹಾಳಾಗಿದ್ದು, ಅಬಕಾರಿ ಅಧಿಕಾರಿಗಳು ಮಾತ್ರ ಅಕ್ರಮ ಮದ್ಯ ಮಾರಾಟ ತಡೆಗೆ ಮುಂದಾಗಿಲ್ಲ. ಶಾಲೆ, ದೇವಸ್ಥಾನಗಳಂಥ ಸಾರ್ವಜನಿಕ ಸ್ಥಳಗಳೂ ಮದ್ಯ ವ್ಯಸನಿಗಳ ತಾಣಗಳಾಗಿವೆ ಎಂದು ಕಿಡಿ ಕಾರಿದರು.

ಅಕ್ರಮ ಮದ್ಯ ಮಾರಾಟ ತಡೆಯುವ ಕುರಿತು ಹಲವು ಬಾರಿ ಮನವಿ ಮಾಡಿದರೂ ಸಾಕ್ಷಿ ಸಮೇತ ಆರೋಪ ಮಾಡಿ ಎಂದು ಅಬಕಾರಿ ಅಧಿಕಾರಿಗಳು ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಹೀಗಾಗಿಯೇ ಶನಿವಾರ ರಾತ್ರಿ ಅಕ್ರಮ ಮದ್ಯ ಮಾರಾಟಕ್ಕೆ ಸಂಗ್ರಹಿಸಿದ್ದ ದಾಸ್ತಾನು ಸಮೇತ ಹಿಡಿದು, ಅಬಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಶನಿವಾರ ರಾತ್ರಿ 10 ಗಂಟೆಗೆ ಸ್ಥಳಕ್ಕೆ ಬಂದ ಅಬಕಾರಿ ಅಧಿಕಾರಿಗಳು ಅಕ್ರಮ ಮದ್ಯವನ್ನು ಮಾತ್ರ ವಶಕ್ಕೆ ಪಡೆಯುತ್ತೇವೆ, ಆರೋಪಿಗಳನ್ನು ಬಂಧಿಸುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಕುಪಿತರಾದ ನೂರಾರು ಮಹಿಳೆಯರು, ಅಬಕಾರಿ ಅಧಿಕಾರಿಗಳು ಸ್ಥಳದಿಂದ ಕದಲದಂತೆ ಕೂಡಿ ಹಾಕಿದ್ದಾರೆ. ಅಂತಿಮವಾಗಿ ಆರೋಪಿಗಳ ವಿರುದ್ಧ ದೂರು ದಾಖಲಿಸಿ ಬಂಧಿಸುವುದಾಗಿ ಹೇಳಿ ಭಾನುವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಮಹಿಳೆಯರು ವಶಕ್ಕೆ ಪಡೆದಿದ್ದ ಅಕ್ರಮ ಮದ್ಯದ ಸಮೇತ ಗ್ರಾಮದಿಂದ ಅಬಕಾರಿ ಅಧಿಕಾರಿಗಳು ತೆರಳಲು ಮುಂದಾಗಿದ್ದಾರೆ.

ಈ ಹಂತದಲ್ಲೂ ವಾಹನ ಅಡ್ಡಗಟ್ಟಿರುವ ಮಹಿಳೆಯರು, ಆರೋಪಿಗಳನ್ನು ಬಂಧಿಸದಿದ್ದರೆ ಗ್ರಾಮದಲ್ಲಿ ಭವಿಷ್ಯದಲ್ಲಿ ಉಂಟಾಗುವ ಅಕ್ರಮ ಮದ್ಯ ಮಾರಾಟದ ಎಲ್ಲ ಅಚಾತುರ್ಯಗಳಿಗೆ ಅಬಕಾರಿ ಇಲಾಖೆ ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಸಿ ಬಿಟ್ಟು ಕಳಿಸಿದ್ದಾರೆ.

ಈ ಕುರಿತು ಉದಯವಾಣಿ ಜೊತೆ ಮಾತನಾಡಿದ ಗ್ರಾಮದ ಆಂಜನೇಯ ಪೂಜಾರಿ, ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಿತಿ ಮೀರಿದೆ. ಶಾಲೆಗಳು, ದೇವಸ್ಥಾನಗಳು ಮದ್ಯವ್ಯಸನಿಗಳ ತಾಣವಾಗುತ್ತಿವೆ. ಅಕ್ರಮ ಮದ್ಯದಿಂದ ಇಡೀ ಗ್ರಾಮದಲ್ಲಿ ಅಶಾಂತಿ ಸೃಷ್ಟಿಯಾಗಿದ್ದು, ಕೌಂಟುಂಬಿಕ ಆರ್ಥಿಕ ಸಂಕಷ್ಟದಿಂದ ವರ್ಷದಲ್ಲಿ 8 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಕಷ್ಟ ನಿವೇದಿಸಿದರು.

ಇಷ್ಟಾದರೂ ಅಬಕಾರಿ ಅಧಿಕಾರಿಗಳು ನಮ್ಮ ಮನಿಗೆ ಸ್ಪಂದಿಸಿಲ್ಲ, ಕ್ರಮ ಕೈಗೊಳ್ಳಲು ಅಕ್ರಮ ಮದ್ಯದ ಸಾಕ್ಷಿ ಕೇಳುತ್ತಾರೆ. ಅಕ್ರಮ ಮದ್ಯ ಸಮೇತ ಹಿಡಿದು ಕೊಟ್ಟರೂ ಆರೋಪಿಗಳನ್ನು ಬಂಧಿಸಿಲ್ಲ. ಹೀಗಾಗಿ ಮಹಿಳೆಯರು ಅಬಕಾರಿ ಅಧಿಕಾರಿಗಳಿಗೆ ಇಡೀ ರಾತ್ರಿ ದಿಗ್ಬಂಧನ ಹಾಕಿದ್ದರು ಎಂದು ವಿವರಿಸಿದರು.

Ad

ಟಾಪ್ ನ್ಯೂಸ್

Parameshawar

ಸಿಗಂದೂರು ಸೇತುವೆ ಉದ್ಘಾಟನೆಯಲ್ಲಿ ಸಂಹವನ ಕೊರತೆ: ಗೃಹ ಸಚಿವ

DCF-Chakrapani

ಐದು ಹುಲಿಗಳ ಸಾವು ಪ್ರಕರಣ: ಎಂಎಂ ಹಿಲ್ಸ್‌ ಡಿಸಿಎಫ್ ಚಕ್ರಪಾಣಿ ಅಮಾನತು

ಫಿಡೆ ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

FIDE ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

Tokyo ಜಪಾನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ

Tokyo ಜಪಾನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ

ಸನ್‌ರೈಸರ್ ಹೈದರಾಬಾದ್‌ಗೆ ವರುಣ್‌ ಆರೋನ್‌ ಬೌಲಿಂಗ್‌ ಕೋಚ್‌

IPL: ಸನ್‌ರೈಸರ್ ಹೈದರಾಬಾದ್‌ಗೆ ವರುಣ್‌ ಆರೋನ್‌ ಬೌಲಿಂಗ್‌ ಕೋಚ್‌

ವಿಂಬಲ್ಡನ್‌ ಗೆಲ್ಲಬೇಕಾದರೆ ಅಲ್ಕರಾಜ್‌ ಅವರನ್ನು ಮಣಿಸಲೇಬೇಕಿತ್ತು: ಸಿನ್ನರ್‌ವಿಂಬಲ್ಡನ್‌ ಗೆಲ್ಲಬೇಕಾದರೆ ಅಲ್ಕರಾಜ್‌ ಅವರನ್ನು ಮಣಿಸಲೇಬೇಕಿತ್ತು: ಸಿನ್ನರ್‌

ವಿಂಬಲ್ಡನ್‌ ಗೆಲ್ಲಬೇಕಾದರೆ ಅಲ್ಕರಾಜ್‌ ಅವರನ್ನು ಮಣಿಸಲೇಬೇಕಿತ್ತು: ಸಿನ್ನರ್‌

Australia Vs West Indies; ಕಿಂಗ್‌ಸ್ಟನ್‌ ಟೆಸ್ಟ್‌ : 181 ರನ್‌ ಮುನ್ನಡೆಯಲ್ಲಿ ಆಸ್ಟ್ರೇಲಿಯ

AUS Vs WI: ಕಿಂಗ್‌ಸ್ಟನ್‌ ಟೆಸ್ಟ್‌ : 181 ರನ್‌ ಮುನ್ನಡೆಯಲ್ಲಿ ಆಸ್ಟ್ರೇಲಿಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

23

Harapanahalli: ಅಡವಿ ಮಲ್ಲಾಪುರದಲ್ಲಿ ಸೌಲಭ್ಯಗಳ ಕೊರತೆ

Vijayapura: ಬಿಜೆಪಿಯ ಅಪಪ್ರಚಾರಕ್ಕೆ ಜನರ ಅಭಿವೃದ್ಧಿ ಮೂಲಕವೇ ಉತ್ತರ: ಸಿಎಂ ಸಿದ್ದರಾಮಯ್ಯ

Vijayapura: ಬಿಜೆಪಿಯ ಅಪಪ್ರಚಾರಕ್ಕೆ ಜನರ ಅಭಿವೃದ್ಧಿ ಮೂಲಕವೇ ಉತ್ತರ: ಸಿಎಂ ಸಿದ್ದರಾಮಯ್ಯ

19

Indi: ಅಭಿವೃದ್ಧಿ ಪಥದತ್ತ ಇಂಡಿ ದಾಪುಗಾಲು

9

Muddebihal: ‘ಗುಣಮಟದ ಕಾಮಗಾರಿ ನಡೆಸದಿದ್ದರೆ ಹೋರಾಟ’

Vijayapura: ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣ: ಬಂಧಿತರ 15ಕ್ಕೇರಿಕೆ, 39 ಕೆಜಿ ಚಿನ್ನ ಜಪ್ತಿ

Vijayapura: ಕೆನರಾಬ್ಯಾಂಕ್ ಕಳ್ಳತನ ಕೇಸ್: ಬಂಧಿತರ ಸಂಖ್ಯೆ15ಕ್ಕೇರಿಕೆ, 39KG ಚಿನ್ನ ಜಪ್ತಿ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

arrested

ಬೊಳುವಾರು ಬಳಿ ತಲವಾರು ಪ್ರದರ್ಶನ: ಆರೋಪಿ ವಶಕ್ಕೆ

Parameshawar

ಸಿಗಂದೂರು ಸೇತುವೆ ಉದ್ಘಾಟನೆಯಲ್ಲಿ ಸಂಹವನ ಕೊರತೆ: ಗೃಹ ಸಚಿವ

1-aa-aa-cong

‘ಶಕ್ತಿ-ಗ್ಯಾರಂಟಿ’ ಯಶಸ್ಸು: ವಿವಿಧೆಡೆ ಸಂಭ್ರಮ

DCF-Chakrapani

ಐದು ಹುಲಿಗಳ ಸಾವು ಪ್ರಕರಣ: ಎಂಎಂ ಹಿಲ್ಸ್‌ ಡಿಸಿಎಫ್ ಚಕ್ರಪಾಣಿ ಅಮಾನತು

ಫಿಡೆ ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

FIDE ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.