ಬಾಯಲ್ಲಿ ನೀರೂರಿಸುತ್ತಿದೆ ನವಣೆಅವಲಕ್ಕಿ, ಹಾರಕ-ಕೊರ್ಲೆ ಕುಕ್ಕೀಸ್‌

Team Udayavani, Sep 24, 2018, 12:58 PM IST

vij-2.jpg

ಹುಬ್ಬಳ್ಳಿ: ಸಿರಿಧಾನ್ಯಗಳಲ್ಲಿನ ಪೋಷಕಾಂಶ, ದೇಹಾರೋಗ್ಯದ ಮೇಲೆ ಇದರಿಂದಾಗುವ ಪರಿಣಾಮಗಳ ಜತೆಗೆ, ಸಿರಿಧಾನ್ಯ ಬಳಸಿ ವಿವಿಧ ಪದಾರ್ಥಗಳ ಸವಿ ಉಣಬಡಿಸುತ್ತಿರುವ ಕೃಷಿ ವಿವಿಯ ಗೃಹ ಮತ್ತು ಆಹಾರ ವಿಜ್ಞಾನ ವಿಭಾಗ, ಸಿರಿಧಾನ್ಯ ಬಳಸಿ ಉತ್ಪನ್ನಗಳ ತಯಾರಿಕೆ ತಂತ್ರಜ್ಞಾನ ಹಾಗೂ ತರಬೇತಿಯ ಜಾಗೃತಿ ಮೂಡಿಸತೊಡಗಿದೆ.

ಧಾರವಾಡ ಕೃಷಿ ವಿಶ್ವವಿದ್ಯಾಲಯ ಹಮ್ಮಿಕೊಂಡಿರುವ ಕೃಷಿ ಮೇಳದಲ್ಲಿನ ಮಳಿಗೆಗಳಲ್ಲಿ ಸಿರಿಧಾನ್ಯಗಳಿಂದ ತಯಾರಿಸ್ಪಟ್ಟ ಬೇಕರಿ ಉತ್ಪನ್ನಗಳು, ಉಂಡೆ, ಚಕಲಿ, ಅವಲಕ್ಕಿ, ಕೋಡಬಳೆ ಹೀಗೆ ತರಾವಧಿ ಪದಾರ್ಥಗಳು ತಿಂಡಿಪ್ರಿಯರ ಬಾಯಲ್ಲಿ ನೀರೂರಿಸುತ್ತಿದ್ದು, ಅನೇಕರನ್ನು ತನ್ನತ್ತ ಆಕರ್ಷಿಸುತ್ತಿವೆ.
 
ಧಾರವಾಡ ಕೃವಿವಿಯ ಗೃಹ ಮತ್ತು ಆಹಾರ ವಿಜ್ಞಾನ ವಿಭಾಗ, ಫ‌ುಡ್‌ ಟೆಕ್‌ ವಿಭಾಗದದವರು ಜನರಲ್ಲಿ ಸಿರಿಧಾನ್ಯಗಳ ಬಳಕೆ ಹೆಚ್ಚಳ ನಿಟ್ಟಿನಲ್ಲಿ ಪ್ರದರ್ಶನ, ಮಾಹಿತಿ ಹಾಗೂ ಮಾರಾಟ ವ್ಯವಸ್ಥೆ ಕೈಗೊಂಡಿದ್ದಾರೆ.

ನವಣೆ ಅವಲಕ್ಕಿ, ಕೊರ್ಲೆ ಕುಕ್ಕೀಸ್‌: ಸಿರಿಧಾನ್ಯಗಳಾದ ನವಣೆ, ಸಜ್ಜೆ, ಹಾರಕ, ಕೊರ್ಲೆ, ಊದಲು, ಬರುಗು, ಜೋಳ,
ರಾಗಿಯಂತಹ ಸಿರಿಧಾನ್ಯಗಳನ್ನು ಬಳಸಿಕೊಂಡು ಏನೆಲ್ಲಾ ಆಹಾರ ಪದಾರ್ಥ, ತಿನಿಸುಗಳನ್ನು ತಯಾರಿಸಬಹುದು ಎಂಬುದರ ಅಧ್ಯಯನ, ಸಂಶೋಧನೆ ಕೈಗೊಳ್ಳುವ ಮೂಲಕ ಹೊಸ ಹೊಸ ಪದಾರ್ಥಗಳನ್ನು ತಯಾರಿಸಲಾಗುತ್ತದೆ.

ಸಿರಿಧಾನ್ಯಗಳನ್ನು ಬಳಸಿ ಉಂಡೆ, ಚಕಲಿ, ಕೋಡಬಳೆ, ಸೇವ್‌, ಶಂಕರಪೊಳೆ, ಬರ್ಫಿ, ಬ್ರೆಡ್‌, ಬನ್‌, ಬಿಸ್ಕಿಟ್‌ ಇನ್ನಿತರ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಈ ವರ್ಷ ಹೊಸ ಪದಾರ್ಥವಾಗಿ ನವಣೆ ಅವಲಕ್ಕಿ, ಹಾರಕ ಮತ್ತು ಕೊರ್ಲೆಗಳನ್ನು ಬಳಸಿಕೊಂಡು ಕುಕ್ಕೀಸ್‌ ತಯಾರಿಸಲಾಗಿದೆ. ನವಣೆಯಿಂದ ಅನೇಕ ಉತ್ಪನ್ನಗಳನ್ನು ತಯಾರಿಸಬಹುದಾಗಿದ್ದರೂ ಅವಲಕ್ಕಿ ತಯಾರಿಸುವುದರ ಕುರಿತಾಗಿ ನಡೆದ ಅಧ್ಯಯನ ಇದೀಗ ಉತ್ಪನ್ನ ರೂಪದಲ್ಲಿ
ಹೊರಬಂದಿದೆ.

ನವಣೆಯನ್ನು ಅಕ್ಕಿಯಾಗಿಸಿ ರೋಟರ್‌ ಫ್ಲೆಕರ್‌ ಯಂತ್ರದಲ್ಲಿ ಅದನ್ನು ಹಾಕುವ ಮೂಲಕ ನವಣೆ ಅಕ್ಕಿಯನ್ನು ಅವಲಕ್ಕಿ ರೂಪಕ್ಕೆ ತರಲಾಗುತ್ತದೆ. ಒಂದು ರೀತಿಯಲ್ಲಿ ರವಾದಂತೆ ಕಾಣುವ ನವಣೆ ಅವಲಕ್ಕಿಗೆ ಶೇಂಗಾ, ಪುಟಾಣಿ, ಒಣಕೊಬ್ಬರಿ, ಅರಿಶಿಣದೊಂದಿಗೆ ಒಗ್ಗರಣೆ ಕೊಡುವ ಮೂಲಕ ಅವಲಕ್ಕಿ ತಯಾರಿಸಲಾಗುತ್ತದೆ. ಒಂದು ಕೆಜಿ ಅವಲಕ್ಕಿ 300ರೂ.ಗೆ ದೊರೆಯಲಿದ್ದು, ಸುಮಾರು ಎರಡು ತಿಂಗಳವರೆಗೆ ಇದನ್ನು ಇರಿಸಿದರೂ ಏನು ಆಗುವುದಿಲ್ಲ ಎಂಬುದು ಗೃಹ ಮತ್ತು ಆಹಾರ ವಿಜ್ಞಾನ ವಿಭಾಗದ ಅಧಿಕಾರಿಗಳ ಅನಿಸಿಕೆ.
 
ಗೃಹ ಮತ್ತು ಆಹಾರ ವಿಜ್ಞಾನ ವಿಭಾಗದಿಂದ ಸಿರಿಧಾನ್ಯಗಳನ್ನೇ ಬಳಸಿಕೊಂಡು ಇದುವರೆಗೆ ಸುಮಾರು 75 ಆಹಾರ ಪದಾರ್ಥ ಹಾಗೂ ತಿನಿಸುಗಳನ್ನು ಹೊರತಲಾಗಿದೆ.

ಮಧುಮೇಹಿಗಳಿಗೆ ಉತ್ಪನ್ನ: ಸಿರಿಧಾನ್ಯ ಮಧುಮೇಹಿಗಳಿಗೆ ಅತ್ಯಂತ ಸ್ನೇಹಿಯಾಗಿವೆ. ಈ ಹಿನ್ನೆಲೆಯಲ್ಲಿ ಮಧುಮೇಹಿಗಳಿಗೆ ಪೂರಕವಾಗಿ ನವಣೆ ಸೇರಿದಂತೆ ವಿವಿಧ ಸಿರಿಧಾನ್ಯ ಬಳಸಿಕೊಂಡು ಅನ್ನ, ಉಪ್ಪಿಟ್ಟು ಇನ್ನಿತರ ಆಹಾರ ಪದಾರ್ಥ ತಯಾರಿಸಲಾಗಿದೆ. ಸಿರಿಧಾನ್ಯಗಳನ್ನೇ ಬಳಸಿಕೊಂಡು ಮಕ್ಕಳಿಗೆ ಪೂರಕ ಆಹಾರ ಪೌಡರ್‌ ತಯಾರಿಸಲಾಗಿದ್ದು, ನೈಸರ್ಗಿಕ ಪೋಷಕಾಂಶಗಳನ್ನು ಒಳಗೊಂಡಿದೆ.

ಅದೇ ರೀತಿ ಕ್ರೀಡಾಪಟುಗಳ ದೇಹಾರೋಗ್ಯಕ್ಕೆ ಶಕ್ತಿದಾಯಕ ಮಿಕ್ಸ್‌ ನ್ನು ಹೊರತರಲಾಗಿದೆ. ಬಾಸ್ಕೆಟ್‌ಬಾಲ್‌ ಕ್ರೀಡಾಪಟುಗಳ ಮೇಲೆ ಪ್ರಯೋಗ ಮಾಡಿ, ಅದರ ಪರಿಣಾಮದ ಆಧಾರದಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ.
ಮಾರುಕಟ್ಟೆಯಲ್ಲಿ ಕ್ರೀಡಾಪಟುಗಳಿಗೆ ಶಕ್ತಿದಾಯಕ ಮಿಕ್ಸ್‌ಗಳು ದುಬಾರಿಯಾಗಿದ್ದು, ಕೃವಿವಿಯಲ್ಲಿ ತಯಾರಿಸಿದ ಶಕ್ತಿವರ್ಧಕ ಮಿಕ್ಸ್‌ ಒಂದು ಕೆಜಿಗೆ ಕೇವಲ 120ರೂ.ನಲ್ಲಿ ದೊರೆಯುತ್ತದೆ. ಸಿರಿಧಾನ್ಯಗಳಿಂದ ತಯಾರಿಸಿದ ತಿನಿಸುಗಳಿಂದ ದೇಹಾರೋಗ್ಯಕ್ಕೆ ಪೂರಕ ಕಾರ್ಯ, ಅದರೊಳಗಿನ ಪೋಷಕಾಂಶ ಇನ್ನಿತರ ಮಾಹಿತಿ ನೀಡಲಾಗುತ್ತಿದ್ದು, ಪ್ರದರ್ಶನ ಮಳಿಗೆಗೆ ಹೊಂದಿಕೊಂಡ ಇನ್ನೊಂದು ಮಳಿಗೆಯಲ್ಲಿ ಉತ್ಪನ್ನಗಳ ಮಾರಾಟ ವ್ಯವಸ್ಥೆ ಕೈಗೊಳ್ಳಲಾಗಿದೆ.

 ಅಮರೇಗೌಡ ಗೋನವಾರ

ಟಾಪ್ ನ್ಯೂಸ್

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.