ಕೋವಿಡ್‌ ಮಹಾಸ್ಫೋಟಕ್ಕೆ ಬೆಚ್ಚಿ ಬಿದ್ದ ಜನ

ನಿರ್ದಿಷ್ಟ ದಾಖಲೆ ನಿರ್ವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದೆ.

Team Udayavani, Apr 20, 2021, 6:57 PM IST

Jana-Ku

ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್‌ ಎರಡನೇ ಅಲೆಯ ಅಬ್ಬರ ಜೋರಾಗಿದ್ದು ಸೋಮವಾರ ಒಂದೇ ಜಿಲ್ಲೆಯಲ್ಲಿ 308 ಜನರಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ
153 ಸೋಂಕಿತರು ವಿಜಯಪುರ ನಗರದಲ್ಲೇ ಪತ್ತೆಯಾಗಿದ್ದು, ಸೋಂಕಿತರಲ್ಲಿ ಓರ್ವ ವೃದ್ಧ ಮƒತಪಟ್ಟಿದ್ದಾನೆ.

ಜಿಲ್ಲೆಯಲ್ಲಿ ಈವರೆಗೆ 17,034 ಜನರಿಗೆ ಸೋಂಕು ದೃಢಪಟ್ಟಿದ್ದು ಚಿಕಿತ್ಸೆ ಬಳಿಕ ಗುಣಮುಖರಾದ 15,399 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಕೋವಿಡ್‌ ಸೋಂಕು ಪತ್ತೆಯಾದ ಬಳಿಕ ಕಳೆದ ಒಂದು ವರ್ಷದಿಂದ ಈವರೆಗೆ 4,18,002 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿದ್ದು, 4,15,080 ವರದಿ ಬಂದಿದ್ದು, ಇದರಲ್ಲಿ 3,98,212 ನೆಗೆಟಿವ್‌ ವರದಿ ಇವೆ. ಇದರಲ್ಲಿ 2,756 ವರದಿ ನಿರೀಕ್ಷೆಯಲ್ಲಿವೆ. ಸೋಂಕಿತರಲ್ಲಿ ಓರ್ವ ವೃದ್ಧ ಮೃತಪಟ್ಟಿದ್ದು ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ಮೃತರ ಸಂಖ್ಯೆ 216ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಕೋವಿಡ್‌ ನಿಗ್ರಹಕ್ಕಾಗಿ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿ ಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಜಿಲ್ಲೆಯಲ್ಲಿ ಈ ವರೆಗೆ ಕೋವಿಡ್‌ ವಿರುದ್ಧ ಮುಂಜಾಗ್ರತೆಯಾಗಿ ಸಾರ್ವಜನಿಕರು, ಸಿಬ್ಬಂದಿಗೆ ನೀಡಲು 2,21,700 ಲಸಿಕೆ ಬಂದಿವೆ. ಇರದಲ್ಲಿ 1,85,220 ಕೋವಿಶೀಲ್ಡ್‌ ಹಾಗೂ 36,480 ಕೋವ್ಯಾಕ್ಸಿನ್‌ ಲಸಿಕೆ ಸೇರಿವೆ.

ಜಿಲ್ಲೆಗೆ ಬಂದಿರುವ ಲಸಿಕೆಯಲ್ಲಿ ರವಿವಾರದವರೆಗೆ ಆರೋಗ್ಯ ಸೇವೆಯಲ್ಲಿರುವ 14,376 ಸಿಬ್ಬಂದಿಗೆ, ಕೋವಿಡ್‌ ಮುಂಚೂಣಿ ಕಾರ್ಯಕರ್ತರಿಗೆ 9,856 ಸಿಬ್ಬಂದಿಗೆ, 45-60 ವರ್ಷ ವಯೋಮಿತಿಯಲ್ಲಿರುವ 77,960 ನಾಗರಿಕರಿಗೆ ಹಾಗೂ 60 ವರ್ಷ ಮೇಲ್ಪಟ್ಟ 84,227 ನಾಗರಿಕರಿಗೆ ಲಸಿಕೆ ಹಾಕಲಾಗಿದೆ. ಸೋಮವಾರ ನೀಡಿದ 6,037 ಲಸಿಕೆ ಸೇರಿದಂತೆ ಈವರೆಗೆ ಜಿಲ್ಲೆಯಲ್ಲಿ 1,92,456 ಜನರಿಗೆ ಲಸಿಕೆ ನೀಡಲಾಗಿದೆ. ಇನ್ನು ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆ ಹಾಕಲು ಸರ್ಕಾರಿ ಎಲ್ಲ ಹಂತದ ಆಸ್ಪತ್ರೆಗಳಲ್ಲಿ 334 ಕೇಂದ್ರಗಳನ್ನು ತೆರೆದು ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ.

ಸರ್ಕಾರ ನಿಗದಿ ಮಾಡಿರುವ ಶುಲ್ಕದಂತೆ ಖಾಸಗಿ 9 ಆಸ್ಪತ್ರೆಗಳಲ್ಲಿ ಲಸಿಕೆ ನೀಡುವ ಅರ್ಹತೆ ಪಡೆದಿದ್ದವು. ಆದರೆ ಕೆಲ ಆಸ್ಪತ್ರೆಗಳಲ್ಲಿ ಲಸಿಕೆ ಸಮರ್ಪಕವಾಗಿ ನೀಡದೇ ವ್ಯರ್ಥ ಮಾಡಿದ್ದು ಪತ್ತೆಯಾಗಿದೆ. ಇದನ್ನು ಮನಗಂಡಿರುವ ಆರೋಗ್ಯ ಇಲಾಖೆ ಸಂಬಂಧಿಸಿದ ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಿದೆ. ಅಲ್ಲದೇ ನೀಡಿದ ತಾನು ನೀಡಿದ ಪ್ರಮಾಣಕ್ಕೆ ತಕ್ಕಂತೆ ಲಸಿಕೆ ಹಾಕಿದ ಗುರಿ, ನಿರ್ದಿಷ್ಟ ದಾಖಲೆ ನಿರ್ವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಈ ಮಧ್ಯೆ ಕೋವಿಡ್‌ ನಿಗ್ರಹಕ್ಕಾಗಿ ರಾಜ್ಯ ಸರ್ಕಾರ ಮಾರ್ಗ ಸೂಚಿಯಂತೆ ಜಿಲ್ಲಾಡಳಿತ ಜಿಲ್ಲೆಯಲ್ಲಿ ಜಾತ್ರೆ ಹಾಗೂ ಸಾರ್ವಜನಿಕ ಸಮಾರಂಭ ಸೇರಿದಂತೆ
ಹಲವು ವಿಷಯಗಳಿಗೆ ನಿರ್ಬಂಧ ಹೇರಿದೆ. ಇದಕ್ಕಾಗಿ ಅಧಿಕೃತವಾಗಿ ನಿಷೇಧವನ್ನೂ ಹೇರಿದ ಕುರಿತು ಆದೇಶ ಹೊರಡಿಸಿ, ಸಾರ್ವಜನಿಕ ಮಾಹಿತಿಗೆ ಮಾಹಿತಿ ನೀಡಿದೆ.

ಆದರೆ ಈ ಆದೇಶ ಮೀರಿ ಸಿಂದಗಿ ತಾಲೂಕ ಕಕ್ಕಳಮೇಲಿ ಶಂಕರಲಿಂಗ ಮಹಾರಾಜರು ಹಾಗೂ ಮಲಘಾಣದ ಜಡೆ ಶಾಂತಲಿಂಗೇಶ್ವರ ಜಾತ್ರೆಯನ್ನು
ನಡೆಸಲಾಗಿದೆ. ಹೀಗಾಗಿ ಸಿಂದಗಿ ತಹಶೀಲ್ದಾರ್‌ ಸಂಜೀವಕುಮಾರ ದಾಸರ ಅವರು ಕಕ್ಕಳಮೇಲಿ ಹಾಗೂ ಮಲಘಾಣ ಗ್ರಾಮಸ್ಥರ ವಿರುದ್ಧ ಸಿಂದಗಿ ಠಾಣೆ
ಪೊಲೀಸರಿಗೆ ದೂರು ನೀಡಿದ್ದಾರೆ. ಎರಡೂ ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಾಗಿವೆ ಎಂದು ಜಿಲ್ಲಾಧಿಕಾರಿ ಸುನೀಲಕುಮಾರ ತಿಳಿಸಿದ್ದಾರೆ.

ಮೇ 15ರವರೆಗೆ ಪ್ರವಾಸಿ ತಾಣ ಪ್ರವೇಶ ನಿರ್ಬಂಧ
ಕೋವಿಡ್‌ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಡಿಯಲ್ಲಿ ಬರುವ ಜಿಲ್ಲೆಯ ಪಾರಂಪರಿಕ ಎಲ್ಲ ಸ್ಮಾರಕಗಳ ಪ್ರವೇಶಕ್ಕೆ ಮೇ 15ರವರೆಗೆ ಅಥವಾ ಮುಂದಿನ ಆದೇಶದವರೆಗೆ ನಿರ್ಬಂಧ ವಿಧಿಸಲಾಗಿದೆ. ಜಿಲ್ಲೆಯಲ್ಲಿರುವ ಎಲ್ಲ ಸ್ಮಾರಕಗಳಿಗೆ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿ
ಸಿದ್ದು, ಸದರಿ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಸುನೀಲ ಕುಮಾರ ಆದೇಶಿಸಿದ್ದಾರೆ.

ಸೋಂಕಿತ ವೃದ್ಧ ಸಾವು
ಜಿಲ್ಲೆಯ ಕೋವಿಡ್‌ ಸೋಂಕಿಗೆ 68 ವರ್ಷದ ಪಿ-1012328 ವೃದ್ಧರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ತೀವ್ರ ಉಸಿರಾಟ ಹಾಗೂ ಐಎಲ್‌ಐ ಆರೋಗ್ಯ ಸಂಬಂಧಿ  ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಗೆ ದಾಖಸಿದ್ದರೂ ಚಿಕಿತ್ಸೆ ಫಲಿದೇ ಮೃತಪಟ್ಟಿದ್ದಾರೆ. ಅಂತ್ಯ ಸಂಸ್ಕಾರವನ್ನು ಸರ್ಕಾರ ರೂಪಿಸಿರುವ ಶಿಷ್ಟಾಚಾರದಂತೆ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸುನೀಲಕುಮಾರ ತಿಳಿಸಿದ್ದಾರೆ.

ಟಾಪ್ ನ್ಯೂಸ್

ಮಲ್ಪೆ: ಕಡಲ ತೀರದಲ್ಲಿ ಚಿನ್ನಕ್ಕಾಗಿ ಜನರು ದಿನವಿಡೀ ಹುಡುಕಾಟ!

ಮಲ್ಪೆ: ಕಡಲ ತೀರದಲ್ಲಿ ಚಿನ್ನಕ್ಕಾಗಿ ಜನರು ದಿನವಿಡೀ ಹುಡುಕಾಟ!

ಪಿಎಸ್‌ಐ ಅಕ್ರಮ ನೇಮಕಾತಿ ಹಗರಣ: ಪೌಲ್‌ ಮೊಬೈಲ್‌ ಸಿಐಡಿ ವಶಕ್ಕೆ 

ಪಿಎಸ್‌ಐ ಅಕ್ರಮ ನೇಮಕಾತಿ ಹಗರಣ: ಪೌಲ್‌ ಮೊಬೈಲ್‌ ಸಿಐಡಿ ವಶಕ್ಕೆ 

ಮಂಗಳೂರಿನಿಂದ ರಾಮೇಶ್ವರ, ಭಾವ್‌ನಗರಕ್ಕೆ ಹೊಸ ರೈಲು

ಮಂಗಳೂರಿನಿಂದ ರಾಮೇಶ್ವರ, ಭಾವ್‌ನಗರಕ್ಕೆ ಹೊಸ ರೈಲು

ಕೈದಿಗಳಿಗೆ ಬಿಡುಗಡೆ ಭಾಗ್ಯ: ಕೇಂದ್ರ ಸರಕಾರದ ನಿರ್ಧಾರ

ಕೈದಿಗಳಿಗೆ ಬಿಡುಗಡೆ ಭಾಗ್ಯ: ಕೇಂದ್ರ ಸರಕಾರದ ನಿರ್ಧಾರ

ಆಧಾರ್‌ ಮಾಹಿತಿ ಸೋರಿಕೆ ವಿರುದ್ಧ ಕಠಿನ ಕ್ರಮ: ಅಧಿಕಾರಿಗಳಿಗೆ ಚುನಾವಣ ಆಯೋಗದ ಎಚ್ಚರಿಕೆ

ಆಧಾರ್‌ ಮಾಹಿತಿ ಸೋರಿಕೆ ವಿರುದ್ಧ ಕಠಿನ ಕ್ರಮ: ಅಧಿಕಾರಿಗಳಿಗೆ ಚುನಾವಣ ಆಯೋಗದ ಎಚ್ಚರಿಕೆ

ಭಾರತೀಯ ವಾಯುಪಡೆಯಲ್ಲಿ ಮೊದಲನೇ ಬಾರಿಗೆ ಅಪ್ಪ-ಮಗಳ ಸಾಧನೆ

ಭಾರತೀಯ ವಾಯುಪಡೆಯಲ್ಲಿ ಮೊದಲನೇ ಬಾರಿಗೆ ಅಪ್ಪ-ಮಗಳ ಸಾಧನೆ

ನಾಯಿಗಳ ಮೂಲ ಯಾವುದು ಎಂಬುದು ಗೊತ್ತಾ?

ನಾಯಿಗಳ ಮೂಲ ಯಾವುದು ಎಂಬುದು ಗೊತ್ತಾ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18roadblock

ಜನರಿಂದ ಮರಾಠಿ ವಿದ್ಯಾಲಯ ಬಳಿ ದಿಢೀರ್‌ ರಸ್ತೆ ತಡೆ

17protest

ಮಳಖೇಡ ಮೂಲ ವೃಂದಾವನದ ಅಪಪ್ರಚಾರಕ್ಕೆ ಖಂಡನೆ

22water

ಸಾತಪುರ: ಕಲುಷಿತ ನೀರು ಕುಡಿದು 35 ಜನರು ಅಸ್ವಸ್ಥ

21central-government

ಕೇಂದ್ರ ಸರ್ಕಾರದ ಸಾಧನೆ ಮನೆ ಮನೆಗಳಿಗೆ ತಲುಪಿಸಿ

19bus-pass

ಬಸ್‌ಪಾಸ್‌ ಶೈಕ್ಷಣಿಕ ಅವಧಿ ವಿಸ್ತರಿಸಲು ಆಗ್ರಹ

MUST WATCH

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

udayavani youtube

ಚಂದ್ರಶೇಕರ್‌ ಗುರೂಜಿ ಹತ್ಯೆ: ಹಂತಕರ ಬಂಧನ

udayavani youtube

ಮಡಿಕೇರಿ : ಧಾರಾಕಾರ ಮಳೆಗೆ ರಸ್ತೆಗೆ ಉರುಳಿ ಬಿದ್ದ ಬಂಡೆ ಕಲ್ಲು, ತಪ್ಪಿದ ಭಾರಿ ದುರಂತ

udayavani youtube

ವಿಟ್ಲ ಸಾರಡ್ಕ ಬಳಿ ಕುಸಿದ ಗುಡ್ಡ : ಕರ್ನಾಟಕ – ಕೇರಳ ಸಂಚಾರ ಬಂದ್

ಹೊಸ ಸೇರ್ಪಡೆ

ಮಲ್ಪೆ: ಕಡಲ ತೀರದಲ್ಲಿ ಚಿನ್ನಕ್ಕಾಗಿ ಜನರು ದಿನವಿಡೀ ಹುಡುಕಾಟ!

ಮಲ್ಪೆ: ಕಡಲ ತೀರದಲ್ಲಿ ಚಿನ್ನಕ್ಕಾಗಿ ಜನರು ದಿನವಿಡೀ ಹುಡುಕಾಟ!

ಪಿಎಸ್‌ಐ ಅಕ್ರಮ ನೇಮಕಾತಿ ಹಗರಣ: ಪೌಲ್‌ ಮೊಬೈಲ್‌ ಸಿಐಡಿ ವಶಕ್ಕೆ 

ಪಿಎಸ್‌ಐ ಅಕ್ರಮ ನೇಮಕಾತಿ ಹಗರಣ: ಪೌಲ್‌ ಮೊಬೈಲ್‌ ಸಿಐಡಿ ವಶಕ್ಕೆ 

ಮಂಗಳೂರಿನಿಂದ ರಾಮೇಶ್ವರ, ಭಾವ್‌ನಗರಕ್ಕೆ ಹೊಸ ರೈಲು

ಮಂಗಳೂರಿನಿಂದ ರಾಮೇಶ್ವರ, ಭಾವ್‌ನಗರಕ್ಕೆ ಹೊಸ ರೈಲು

ಕೈದಿಗಳಿಗೆ ಬಿಡುಗಡೆ ಭಾಗ್ಯ: ಕೇಂದ್ರ ಸರಕಾರದ ನಿರ್ಧಾರ

ಕೈದಿಗಳಿಗೆ ಬಿಡುಗಡೆ ಭಾಗ್ಯ: ಕೇಂದ್ರ ಸರಕಾರದ ನಿರ್ಧಾರ

ಆಧಾರ್‌ ಮಾಹಿತಿ ಸೋರಿಕೆ ವಿರುದ್ಧ ಕಠಿನ ಕ್ರಮ: ಅಧಿಕಾರಿಗಳಿಗೆ ಚುನಾವಣ ಆಯೋಗದ ಎಚ್ಚರಿಕೆ

ಆಧಾರ್‌ ಮಾಹಿತಿ ಸೋರಿಕೆ ವಿರುದ್ಧ ಕಠಿನ ಕ್ರಮ: ಅಧಿಕಾರಿಗಳಿಗೆ ಚುನಾವಣ ಆಯೋಗದ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.