ಬಾಲಾಜಿ ಸಕ್ಕರೆ ಕಾರ್ಖಾನೆ ವಿರುದ್ಧ ಪ್ರತಿಭಟನೆ


Team Udayavani, Jan 18, 2022, 5:18 PM IST

25apeal

ಮುದ್ದೇಬಿಹಾಳ: ಕಬ್ಬು ಕಟಾವು ಗ್ಯಾಂಗ್‌ಗಳು ಮನಸೋ ಇಚ್ಛೆ ಒಬ್ಬ ರೈತನಿಂದ ಮತ್ತೊಬ್ಬ ರೈತನ ಹೊಲಕ್ಕೆ ಬದಲಾಗುತ್ತಿದ್ದಾರೆ. ಗ್ಯಾಂಗ್‌ ಗಳಿಗೆ ಲಗಾಣಿ ದುಬಾರಿ ಮಾಡುವಂತೆ ಪ್ರಚೋದಿಸುತ್ತಿದ್ದಾರೆ. ಇದಕ್ಕೆ ಬಾಲಾಜಿ ಸಕ್ಕರೆ ಕಾರ್ಖಾನೆ ಸಿಬ್ಬಂದಿ ಕಾರಣರಾಗಿದ್ದಾರೆ. ಕೂಡಲೇ ಕಾರ್ಖಾನೆ ಸಿಬ್ಬಂದಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಪದಾಧಿಕಾರಿಗಳು ಮತ್ತು ನಾಲತವಾಡ ಭಾಗದ ಕಬ್ಬು ಬೆಳೆಗಾರರು ಮಿನಿ ವಿಧಾನಸೌಧ ಎದುರು ಸೋಮವಾರ ದಿಢೀರ್‌ ಪ್ರತಿಭಟನೆ ನಡೆಸಿದರು.

ನಾಲತವಾಡ ಸುತ್ತಮುತ್ತಲಿನ ರೈತರ ಕಬ್ಬು ಕಟಾವಿಗೆ ಬಂದಿದ್ದು ಕಬ್ಬು ಕತ್ತರಿಸುವ ಗ್ಯಾಂಗ್‌ಗಳ ಅವ್ಯವಸ್ಥೆ ಮತ್ತು ದುಬಾರಿ ಲಗಾಣಿ ಕಬ್ಬು ಬೆಳೆಗಾರರಿಗೆ ತೀವ್ರ ಸಮಸ್ಯೆ ತಂದೊಡ್ಡಿದೆ. ಒಂದು ಹೊಲದಲ್ಲಿ ಅರ್ಧ ಕಬ್ಬು ಕತ್ತರಿಸಿ ಉಳಿದರ್ಧ ಹಾಗೆಯೇ ಬಿಟ್ಟು ಬೇರೆ ರೈತರ ಹೊಲಕ್ಕೆ ಗ್ಯಾಂಗ್‌ ಬದಲಾಯಿಸುತ್ತಾರೆ. ಇದರಿಂದ ಅರ್ಧ ಕಬ್ಬು ಕಟಾವು ಮಾಡಿದ ಹೊಲಗಳಲ್ಲಿ ಉಳಿದ ಕಬ್ಬು ಒಣಗಿ, ಇಳುವರಿ ಕಡಿಮೆ ಆಗುವ ಆತಂಕ ಉಂಟಾಗತೊಡಗಿದೆ. ಈಗಾಗಲೇ ಹಲವು ಬಾರಿ ಈ ಅವ್ಯವಸ್ಥೆ ಸರಿಪಡಿಸುವಂತೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ತಹಶೀಲ್ದಾರ್‌ ಅವರು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸದಿದ್ದರೆ ತಹಶೀಲ್ದಾರ್‌ ಕಚೇರಿ ಮತ್ತು ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ರೈತ ಮುಖಂಡರು ಎಚ್ಚರಿಸಿದರು.

ಈ ವೇಳೆ ಮನವಿ ಸ್ವೀಕರಿಸಿದ ತಹಶೀಲ್ದಾರ್‌ ಬಿ.ಎಸ್‌. ಕಡಕಭಾವಿ ಅವರು ಕೂಡಲೇ ಕಾರ್ಖಾನೆಯವರೊಂದಿಗೆ ಮಾತನಾಡಿ ಸಮಸ್ಯೆಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.

ಸಿಪಿಐ ಆನಂದ ವಾಘ್ಮೋಡೆ, ರೈತ ಮುಖಂಡರಾದ ಹನುಮಂತಪ್ಪ ಹೊಳೆಯಾಚೆ, ಗಗನ ಕುರೇರ, ಶರಣಪ್ಪ ಮರಳಿ, ಶಿವಾನಂದ ಗೌಂಡಿ, ಗುರು ಗಾಣಿಗೇರ, ಮೋಶಿನ್‌ ನದಾಫ್‌, ಬೀರಪ್ಪ ಪೂಜಾರಿ, ರಮೇಶ ಮುದ್ನೂರ, ಸಂಗಪ್ಪ ಬಾರಡ್ಡಿ, ಮಾರುತಿ ಗುರಿಕಾರ, ಬಸವರಾಜ ಪಾಟೀಲ, ಬಸವರೆಡ್ಡಿ ಕಾಣಿಕೇರಿ, ಮುತ್ತು ಕ್ಷತ್ರಿ, ವೀರೇಶ ಚಿಕ್ಕೊಳ್ಳಿ, ಮಲ್ಲಿಕಾರ್ಜುನ ಬಿರಾದಾರ, ಪರಮಣ್ಣ ಬಿರಾದಾರ, ಸಿದ್ದಪ್ಪ ಪೂಜಾರಿ, ಮಹಾಂತೇಶ ಕುಂಬಾರ ಅವರು ಮನವಿ ಪತ್ರಕ್ಕೆ ಸಹಿ ಮಾಡಿದ್ದಾರೆ.

ಟಾಪ್ ನ್ಯೂಸ್

baby

Sirsi ; ಆಕಸ್ಮಿಕವಾಗಿ ಬಾವಿಗೆ ಬಿದ್ದು 2 ವರ್ಷದ ಮಗು ಮೃತ್ಯು

1-sdsaas

Delhi; ಹುಡುಕಾಟದ ನಂತರ ಆಪ್ ಸಂಸದ ಸಂಜಯ್ ಸಿಂಗ್ ಅವರನ್ನು ಬಂಧಿಸಿದ ಇಡಿ

Mumbaiಮೂರು ಪಕ್ಷಗಳ ಸರಕಾರವಿದ್ದರೂ ಬಿಜೆಪಿಯ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ: ಫಡ್ನವೀಸ್‌

Mumbaiಮೂರು ಪಕ್ಷಗಳ ಸರಕಾರವಿದ್ದರೂ ಬಿಜೆಪಿಯ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ: ಫಡ್ನವೀಸ್‌

1-sadsad

Asian Games :ನೀರಜ್ ಚೋಪ್ರಾಗೆ ನಿರೀಕ್ಷಿತ ಚಿನ್ನ; ಪದಕಪಟ್ಟಿಯಲ್ಲಿ ಇತಿಹಾಸ

arrested

BMTC ಯಲ್ಲಿ ಭಾರಿ ವಂಚನೆ : ಮುಖ್ಯ ಟ್ರಾಫಿಕ್ ಮ್ಯಾನೇಜರ್ ಬಂಧನ

1-asddas

Pollution; ಭಾರತದ ಅತ್ಯಂತ ಕಲುಷಿತ ಗಾಳಿಯಿರುವ ನಗರ ಯಾವುದು? : ವಿಶ್ಲೇಷಣೆ

Gaming App Case:ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಗೆ ಜಾರಿ ನಿರ್ದೇಶನಾಲಯದ ಸಮನ್ಸ್‌ ಜಾರಿ

Gaming App Case:ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಗೆ ಜಾರಿ ನಿರ್ದೇಶನಾಲಯದ ಸಮನ್ಸ್‌ ಜಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

santhosh

Vijayapura; ಪ್ರತಿ ಚುನಾವಣೆಯಲ್ಲಿ ಬಿಜೆಪಿ ರಾಜಕೀಯ ಗಿಮಿಕ್: ಸಚಿವ ಸಂತೋಷ ಲಾಡ್

E- commerce, ಆನ್ ಲೈನ್ ಉದ್ಯಮದ ಕಾರ್ಮಿಕರ ಹಿತ ರಕ್ಷಣೆಗೆ ಕಾನೂನು: ಸಚಿವ ಸಂತೋಷ ಲಾಡ್

E- commerce, ಆನ್ ಲೈನ್ ಉದ್ಯಮದ ಕಾರ್ಮಿಕರ ಹಿತ ರಕ್ಷಣೆಗೆ ಕಾನೂನು: ಸಚಿವ ಸಂತೋಷ ಲಾಡ್

Vijayapura; ಮದುವೆಗೆ ನಿರಾಕರಣೆ, ಯುವತಿ ಹಂತಕನಿಗೆ ಜೀವಾವಧಿ ಶಿಕ್ಷೆ

Vijayapura; ಮದುವೆಗೆ ನಿರಾಕರಣೆ, ಯುವತಿ ಹಂತಕನಿಗೆ ಜೀವಾವಧಿ ಶಿಕ್ಷೆ

Top leaders are silent means that something big is about to happen: Yatnal

BJP ವರಿಷ್ಠರು ಮೌನವಾಗಿದ್ದಾರೆಂದರೆ ಏನೋ ದೊಡ್ಡದೇ ನಡೆಯಲಿದೆ: ಯತ್ನಾಳ

ಯತ್ನಾಳ

Vijayapura; ಡಿಸಿಎಂ ಸ್ಥಾನಕ್ಕೆ ಶಾಮನೂರು ಬೇಡಿಕೆ ಸೂಕ್ತ: ಶಾಸಕ ಯತ್ನಾಳ

MUST WATCH

udayavani youtube

ಮತ್ತೆ ಸುದ್ದಿಯಲ್ಲಿದ್ದಾರೆ ರಶ್ಮಿ ಸಾಮಂತ್ ಏನಿದು

udayavani youtube

ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲೊಂದು ಹೋಟೆಲ್ ಬಿಸಿ ಬಿಸಿ ಇಡ್ಲಿ ಚಟ್ನಿಗೆ ಬಾರಿ ಫೇಮಸ್

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

ಹೊಸ ಸೇರ್ಪಡೆ

Lokayukta

Sirsi ; ಪಂಚಾಯತ್ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ

1-sadas

Uttara Kannada: ಜಿ.ಟಿ.ನಾಯ್ಕರಿಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಅಭಿಮಾನಿಗಳ ಆಗ್ರಹ

1-ssadsa

Bantwal; ಕಾರು ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ

baby

Sirsi ; ಆಕಸ್ಮಿಕವಾಗಿ ಬಾವಿಗೆ ಬಿದ್ದು 2 ವರ್ಷದ ಮಗು ಮೃತ್ಯು

1-sdsaas

Delhi; ಹುಡುಕಾಟದ ನಂತರ ಆಪ್ ಸಂಸದ ಸಂಜಯ್ ಸಿಂಗ್ ಅವರನ್ನು ಬಂಧಿಸಿದ ಇಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.