
ಬಿಜೆಪಿ ಬಂಡಾಯ ಶಾಸಕ ಯತ್ನಾಳ ಜೊತೆ ರಹಸ್ಯ ಮಾತುಕತೆ ನಡೆಸಿದ ಸಚಿವ ಯೋಗೇಶ್ವರ್
Team Udayavani, Jun 29, 2021, 4:39 PM IST

ವಿಜಯಪುರ: ಮುಖ್ಯಮಂತ್ರಿ ಹಾಗೂ ಕುಟುಂಬ ಸದಸ್ಯರ ವಿರುದ್ದ ಯುದ್ಧ ಸಾರಿರುವ ಜಿಲ್ಲೆಯ ಪ್ರವಾಸದಲ್ಲಿರುವ ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೀಶ್ವರ, ಬಿಜೆಪಿರ ರೆಬೆಲ್ ಶಾಸಕ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ರಹಸ್ಯ ಮಾತುಕತೆ ನಡೆಸಿದ್ದಾರೆ.
ಮಂಗಳವಾರ ಕಲಬುರಗಿ ಜಿಲ್ಲೆಯಿಂದ ವಿಜಯಪುರ ನಗರಕ್ಕೆ ಆಗಮಿಸಿದ ಯೋಗೇಶ್ವರ್, ನಗರದ ಹೊರ ವಲಯದಲ್ಲಿ ಅಥಣಿ ರಸ್ತೆಯಲ್ಲಿ ಇರುವ ಖಾಸಗಿ ಹೋಟೆಲ್ ನಲ್ಲಿ ಶಾಸಕ ಯತ್ನಾಳ ಅವರನ್ನು ಭೇಟಿ ಮಾಡಿ ಸುಮಾರು ಅರ್ಧ ಗಂಟೆ ಮಾತುಕತೆ ನಡೆಸಿದ್ದು, ಕುತೂಹಲ ಮೂಡಿಸಿದೆ.
ಇದನ್ನೂ ಓದಿ:ಶಾಸಕ ಮುನಿರತ್ನಗೆ ಸಚಿವ ಸ್ಥಾನ ನೀಡಲು ಸಿಎಂ ಒಪ್ಪಿದ್ದಾರೆ: ಭೈರತಿ ಬಸವರಾಜ್
ಖಾಸಗಿ ಹೊಟೇಲ್ ನಲ್ಲಿ ಸಚಿವ ಯೋಗೇಶ್ವರ್ ಅವರಿಗೆ ಹೂಗುಚ್ಚ ನೀಡಿ ಸ್ವಾಗತಿಸಿದ ಶಾಸಕ ಯತ್ನಾಳ್ ಹೊಟೇಲ್ ಕೋಣೆಯಲ್ಲಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧ ಸಮರ ಸಾರಿರುವ ಈ ಉಭಯ ನಾಯಕರ ರಹಸ್ಯ ಭೇಟಿಯ ಮಾತುಕತೆ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಸಚಿವರಾದ ಬಳಿಕ ಒಮ್ಮೆಯೂ ಉತ್ತರ ಕರ್ನಾಟಕ ಭಾಗದ ಕಡೆ ತಲೆ ಹಾಕದ ಯೋಗೇಶ್ವರ, ಇದೀಗ ದಿಢೀರನೆ ಕಲಬುರಗಿ, ವಿಜಯಪುರ, ಕೊಪ್ಪಳ, ಹೊಸಪೇಟೆ ಸೇರಿದಂತೆ ಈ ಭಾಗದ ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ವಿರುದ್ಧ ಅಸಮಾಧಾನಿತ ಬಿಜೆಪಿ ಶಾಸಕರನ್ನು ಒಗ್ಗೂಡಿಸಲು ತೆರೆಮರೆಯಲ್ಲಿ ಯೋಜನೆ ರೂಪಿಸುತ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

INDvsSA; ಭಾರತ ವಿರುದ್ಧ ಸರಣಿಗೆ ಮೊದಲು ಹರಿಣಗಳಿಗೆ ಚಿಂತೆ; ಪ್ರಮುಖ ಬೌಲರ್ ಔಟ್

ಪಟ್ಲ ಫೌಂಡೇಶನ್ ಬಹ್ರೈನ್ – ಸೌದಿ ಘಟಕ ; ನೂತನ ಅಧ್ಯಕ್ಷರಾಗಿ ನರೇಂದ್ರ ಶೆಟ್ಟಿ ಆಯ್ಕೆ

ಆರೋಪ ಸಾಬೀತಾಗದಿದ್ದರೆ ಯತ್ನಾಳ ಏನು ಮಾಡುತ್ತಾರೆಂದು ಸ್ಪಷ್ಟಪಡಿಸಲಿ: ಎಂ.ಬಿ.ಪಾಟೀಲ್

Mysore; ರಾತ್ರೋರಾತ್ರಿ ಪ್ರತಿಮೆ ಪ್ರತಿಷ್ಠಾಪನೆಗೆ ಪ್ರಮೋದಾದೇವಿ ವಿರೋಧ

New year celebration: ಬೆಂಗಳೂರಿನಲ್ಲಿ ಈ ಬಾರಿ ನಿರ್ಬಂಧ ಹಾಕುವ ಆಲೋಚನೆ ಇಲ್ಲ; ಆಯುಕ್ತ