ಸಿಂದಗಿ ಕ್ಷೇತ್ರದ ಮತ ಎಣಿಕೆ ಆರಂಭ: ಆರಂಭಿಕ ಮುನ್ನಡೆ ಪಡೆದ ಬಿಜೆಪಿ
Team Udayavani, Nov 2, 2021, 9:07 AM IST
ವಿಜಯಪುರ: ಜಿಲ್ಲೆಯ ಸಿಂದಗಿ ವಿಧಾನಸಭೆ ಉಪ ಚುನಾವಣೆಯ ಮತ ಎಣಿಕೆ ಆರಂಭಗೊಂಡಿದೆ. ಅಂಚೆ ಮತ ಎಣಿಕೆ ಹಂತದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
ಉಪ ಚುನಾವಣೆಗಾಗಿ ಅಕ್ಟೋಬರ್ 30 ರಂದು ನಡೆದಿದ್ದು, ಮಂಗಳವಾರ ಬೆಳಿಗ್ಗೆ 8 ರಿಂದ ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ಮತ ಎಣಿಕೆ ಆರಂಭಗೊಂಡಿದೆ.
ಮತ ಎಣಿಕೆ ಆರಂಭಗೊಂಡ ಕೆಲವೇ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿ ನಾಜಿಯಾ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದರೆ, ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಎಣಿಕೆ ಆರಂಭದ ಹಂತದಲ್ಲಿ ಕೇಂದ್ರಕ್ಕೆ ಆಗಮಿಸಲು ಆಸಕ್ತಿ ತೋರಲಿಲ್ಲ.
ಮೊದಲು ಎಣಿಕೆಯಾದ ಚಲಾವಣೆಯಾದ 1296 ಅಂಚೆ ಮತಗಳ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಮುನ್ನಡೆ ಸಾಧಿಸಿದ್ದಾರೆ.
ಮೊದಲ ಸುತ್ತಿನ ಮತ ಎಣಿಕೆಯ ಬಳಿಕ ರಮೇಶ ಭೂಸನೂರ -5255, ಅಶೋಕ ಮನಗೂಳಿ- 2054, ನಾಜಿಯಾ ಅಂಗಡಿ-73 ಮತಗಳು ಪಡೆದಿದ್ದು, ಬಿಜೆಪಿ ಅಭ್ಯರ್ಥಿ 3,201 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಇದನ್ನೂ ಓದಿ:ಇಂದು ಉಪಚುನಾವಣೆ ಫಲಿತಾಂಶ: ಹಾನಗಲ್ ನಲ್ಲಿ ಮತ ಎಣಿಕೆ ಆರಂಭ
ಈ ಮಧ್ಯೆ ಮತ ಎಣಿಕೆ ಆರಂಭಗೊಂಡರೂ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಮನೆಯಲ್ಲಿ ದೇವರಿಗೆ ಪೂಜೆ ಸಲ್ಲಿಸುವಲ್ಲಿ ನಿರತರಾಗಿದ್ದರು. ನಂದಿಗೆ ವಿಶೇಷ ಪೂಜೆ ಸಲ್ಲಿಸಿ, ಫಲಹಾರ ನೀಡಿದ ರಮೇಶ ತಮ್ಮ ಗೆಲುವಿಗಾಗಿ ಪ್ರಾರ್ಥನೆ ಮಾಡಿದರು.
ಮನೆಯಲ್ಲಿದ್ದಾಗಲೇ ಅಂಚೆ ಮತ ಎಣಿಕೆಯಲ್ಲಿ ಮುನ್ನಡೆ ಸಾಧಿಸಿದ ವಿಷಯ ತಿಳಿದ ಬಳಿಕ ಭೂಸನೂರ ಮತ ಎಣಿಕೆ ಕೇಂದ್ರದತ್ತ ಹೆಜ್ಜೆ ಹಾಕಿದರು.
ಇತ್ತ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಮತ ಎಣಿಕೆಗೆ ಕೇಂದ್ರಕ್ಕೆ ಆಗಮಿಸುವ ಮುನ್ನ ಮಹಾರಾಷ್ಟ್ರ ತುಳಜಾಪುರ ಅಂಬಾಭವಾನಿ ದರ್ಶನ- ಆಶೀರ್ವಾದಕ್ಕೆ ತೆರಳಿದ್ದಾರೆ.