ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಮೊಸಳೆ ಸೆರೆ

Team Udayavani, Jul 12, 2021, 8:29 PM IST

gದಸಗದಗ್ಗಹಗಹಗಹ

ಮುದ್ದೇಬಿಹಾಳ: ಹಡಲಗೇರಿ ಗ್ರಾಮದ ಕೆರೆಯಲ್ಲಿ ಅಡಗಿಕೊಂಡು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಮೊಸಳೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಾರ್ಗದರ್ಶನದಲ್ಲಿ ಮೊಸಳೆ ಪರಿಣಿತರು ರವಿವಾರ ಸೆರೆ ಹಿಡಿದಿದ್ದಾರೆ. ಕೆಲ ದಿನಗಳ ಹಿಂದೆ ಗ್ರಾಮಸ್ಥರು ಕೆರೆಯಲ್ಲಿ ಮೊಸಳೆ ಸೇರಿದ್ದನ್ನು ಕಂಡಿದ್ದರು.

ಇದನ್ನು ಹಿಡಿಯಲು ಅಂದಿನಿಂದಲೇ ಬಲೆ ಬೀಸಲಾಗಿತ್ತು. ಮೊಸಳೆ ಇದೆ ಎನ್ನುವ ಎಚ್ಚರಿಕೆ ಫಲಕ ಗ್ರಾಪಂನವರು ಕೆರೆ ಬಳಿ ಅಳವಡಿಸಿದ್ದರು. ಕೆರೆಯಲ್ಲಿ ನೀರು ಕಡಿಮೆ ಆಗಿರುವುದನ್ನು ಅರಿತು ತಜ್ಞರನ್ನು ಕರೆಸಲಾಗಿತ್ತು. ಮೊದಲೇ ಹಾಕಿದ್ದ ಬಲೆಗೆ ಮೊಸಳೆ ಸಿಕ್ಕಿದ್ದನ್ನು ಅರಿತು ತೆಪ್ಪದ ನೆರವಿನಲ್ಲಿ ಅದರ ಬಳಿ ತೆರಳಿ ಹರಸಾಹಸದಿಂದ ಮೊಸಳೆ ಕಟ್ಟಿ ಹಾಕಿ ದಂಡೆಗೆ ತರಲಾಯಿತು.

ಮೊಸಳೆ ಹಿಡಿಯುವ ಪರಿಣಿತರಾದ ನಾಗೇಶ ಮೋಪಗಾರ, ಸುರೇಶ ಮೋಪಗಾರ, ಶಿವು ಮೋಪಗಾರ, ಮಂಜು, ಸುಭಾಸ, ಯಮನೂರಿ, ಮೂರ್ತಿ, ಮುದುಕು ಕಿರಶ್ಯಾಳ, ಎಂ. ಮಂಜು, ಶ್ರೀಶೈಲ ಮನಗೂರ, ಲೋಹಿತ ಮುದ್ದೇಬಿಹಾಳ, ಹೃತಿಕ ಮುದ್ದೇಬಿಹಾಳ ಇತರರು ತಂಡದ ಮುಖಂಡ ಮೌನೇಶ ಮೋಪಗಾರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದರು. ಮುದ್ದೇಬಿಹಾಳ ಬಿಜೆಪಿ ಧುರೀಣ ಪರಶುರಾಮ ನಾಲತವಾಡ ಸುದ್ದಿಗಾರರೊಂದಿಗೆ ಮಾತನಾಡಿ, ಮೊಸಳೆ ಕಂಡು ಬಂದ ದಿನದಿಂದ ಬಲೆ ಹಾಕಿ ಸೆರೆ ಹಿಡಿಯಲು ಹಗಲು-ರಾತ್ರಿ ಕಾವಲು ಕಾಯಲಾಗುತ್ತಿತ್ತು.

ಮೊಸಳೆ ಬಲೆಗೆ ಬಿದ್ದಿದ್ದನ್ನು ತಿಳಿದು ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಗಿದೆ ಎಂದರು. ಎಆರ್‌ಎಫ್‌ಒ ಮಲ್ಲಪ್ಪ ತೇಲಿ ಮಾತನಾಡಿ, ಆಲಮಟ್ಟಿ ಜಲಾಶಯದ ಕೃಷ್ಣಾ ನದಿ ಹಿನ್ನೀರಿನಲ್ಲಿ ಮೊಸಳೆಯನ್ನು ಸುರಕ್ಷಿತವಾಗಿ ಬಿಡಲಾಗುತ್ತದೆ. ಮೊಸಳೆ ಹಿಡಿಯಲು ಧೈರ್ಯದಿಂದ ಮುಂದೆ ಬಂದ ಪರಿಣಿತರ ತಂಡವನ್ನು ಅರಣ್ಯ ಇಲಾಖೆ ವತಿಯಿಂದ ಶ್ಲಾಘಿಸುವುದಾಗಿ ತಿಳಿಸಿದರು. ಪಿಡಿಒ ಶೋಭಾ ಮುದಗಲ್ಲ ಮಾತನಾಡಿ, ಪರಶುರಾಮ ನಾಲತವಾಡ ಪ್ರಯತ್ನದಿಂದ ಬಂಧುಗಳು ಮೊಸಳೆ ಹಿಡಿಯುವಲ್ಲಿ ಪಳಗಿದ್ದರಿಂದ ಈ ಕೆಲಸ ಯಶಸ್ವಿಯಾಗಿದೆ.

ಇದಕ್ಕಾಗಿ ಪಂಚಾಯಿತಿ ವತಿಯಿಂದ ಅವರನ್ನು ಅಭಿನಂದಿಸುತ್ತೇವೆ ಎಂದರು. ಕಾರ್ಯಾಚರಣೆ ನಂತರ ಮೊಸಳೆ ಹಿಡಿದ ತಂಡವನ್ನು ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅರಣ್ಯ ರಕ್ಷಕ ಈಶ್ವರ ಹಿರೇಮಠ, ಗ್ರಾಮಸ್ಥರಾದ ವಿಠuಲ ಹರಿಂದ್ರಾಳ, ಭೀಮಣ್ಣ ಹರಿಂದ್ರಾಳ, ಮಾಳಪ್ಪ ಹರಿಂದ್ರಾಳ, ಚಿನ್ನಪ್ಪಗೌಡ ನಾಡಗೌಡ ಸೇರಿದಂತೆ ಗ್ರಾಪಂ ಸದಸ್ಯರು ಇದ್ದರು.

ಟಾಪ್ ನ್ಯೂಸ್

PAYTM

Paytm; ಶೀಘ್ರವೇ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನ ಪರವಾನಿಗೆ ರದ್ದು?

Kannada cinema; “ಪುರುಷೋತ್ತಮನ ಪ್ರಸಂಗ’ ರಾಜ್ಯಾದ್ಯಂತ ಬಿಡುಗಡೆ

Kannada cinema; “ಪುರುಷೋತ್ತಮನ ಪ್ರಸಂಗ’ ರಾಜ್ಯಾದ್ಯಂತ ಬಿಡುಗಡೆ

ಟಿ. ರಂಗ ಪೈ ಅವರಿಗೆ ಸಂಗತ್ಕಾರ್‌ ಪುರಸ್ಕಾರ

Manipal; ಟಿ. ರಂಗ ಪೈ ಅವರಿಗೆ ಸಂಗತ್ಕಾರ್‌ ಪುರಸ್ಕಾರ

ಜಾಲತಾಣದಲ್ಲಿ ಹರಿಯುವ ಜಾತಿ ಲೆಕ್ಕಾಚಾರ ನಮ್ಮ ವರದಿಯದ್ದಲ್ಲ: ಜಯಪ್ರಕಾಶ್‌ ಹೆಗ್ಡೆ

ಜಾಲತಾಣದಲ್ಲಿ ಹರಿಯುವ ಜಾತಿ ಲೆಕ್ಕಾಚಾರ ನಮ್ಮ ವರದಿಯದ್ದಲ್ಲ: ಜಯಪ್ರಕಾಶ್‌ ಹೆಗ್ಡೆ

1-wqeeqw-ewqe

Finance management; ಶೆಹಬಾಜ್‌ ಈಗ ಪಾಕ್‌ ಪಿಎಂ: ವಿತ್ತ ನಿರ್ವಹಣೆಯೇ ಸವಾಲು

Kaniyoor: ನೇಣು ಬಿಗಿದು ಯುವತಿ ಆತ್ಮಹತ್ಯೆ

Kaniyoor: ನೇಣು ಬಿಗಿದು ಯುವತಿ ಆತ್ಮಹತ್ಯೆ

Subramanya ಮನೆಗೆ ನುಗ್ಗಿ ಮಹಿಳೆಯ ಸರ ಸೆ‌ಳೆದು ಪರಾರಿ

Subramanya ಮನೆಗೆ ನುಗ್ಗಿ ಮಹಿಳೆಯ ಸರ ಸೆ‌ಳೆದು ಪರಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdsadas

Vijayapura;ಶಿವಾಜಿ ಜಯಂತಿ ಮೆರವಣಿಗೆ: ಗಲಾಟೆಗೆ ಮುಂದಾದವರಿಗೆ ಪೊಲೀಸರ ಲಾಠಿ ರುಚಿ

Vijayapura; ನಾನೂ ಟಿಕೆಟ್ ಆಕಾಂಕ್ಷಿ, ಯಾರಿಗೆ ಕೊಟ್ಟರು ಗೆಲುವಿಗೆ ಶ್ರಮಿಸುವೆ : ಆಲಗೂರ

Vijayapura; ನಾನೂ ಟಿಕೆಟ್ ಆಕಾಂಕ್ಷಿ, ಯಾರಿಗೆ ಕೊಟ್ಟರು ಗೆಲುವಿಗೆ ಶ್ರಮಿಸುವೆ : ಆಲಗೂರ

BJP national president Nadda called me, will meet tomorrow: Yatnal

BJP ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಕರೆ ಮಾಡಿದ್ದರು, ನಾಳೆ ಭೇಟಿ ಮಾಡುತ್ತೇನೆ: ಯತ್ನಾಳ

Rameshwaram Cafe Case:ದೇಶದ ಹಿತರಕ್ಷಣೆ ಬಂದಾಗ ಪಕ್ಷ ಮುಖ್ಯ ಅಲ್ಲ: ಎಂ.ಬಿ.ಪಾಟೀಲ್‌

Rameshwaram Cafe Case:ದೇಶದ ಹಿತರಕ್ಷಣೆ ಬಂದಾಗ ಪಕ್ಷ ಮುಖ್ಯ ಅಲ್ಲ: ಎಂ.ಬಿ.ಪಾಟೀಲ್‌

MP Ramesh Jigajinagi: ಜಿಗಜಿಣಗಿ ಆರೋಗ್ಯ ಸ್ಥಿರವಾಗಿದೆ, ಆತಂಕ ಬೇಡ; ಪುತ್ರ ವಿನೋದ್

MP Ramesh Jigajinagi: ಜಿಗಜಿಣಗಿ ಆರೋಗ್ಯ ಸ್ಥಿರವಾಗಿದೆ, ಆತಂಕ ಬೇಡ; ಪುತ್ರ ವಿನೋದ್

MUST WATCH

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

udayavani youtube

ಒಳ್ಳೆ ಬಟ್ಟೆ ಹಾಕಿಲ್ಲಾ ಅಂತ ರೈತನಿಗೆ ಅವಮಾನ ಮಾಡಿದ ಮೆಟ್ರೋ ಸಿಬ್ಬಂದಿ

udayavani youtube

ಏನಿದು ವಿರಳ ರೋಗ ಇದನ್ನು ತಡೆಹಿಡಿಯಲು ಸಾಧ್ಯವೇ ?

ಹೊಸ ಸೇರ್ಪಡೆ

PAYTM

Paytm; ಶೀಘ್ರವೇ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನ ಪರವಾನಿಗೆ ರದ್ದು?

NIA (2)

Nizamabad ಪಿಎಫ್ಐ ಕೇಸಿನ ಆರೋಪಿಯನ್ನು ಬಂಧಿಸಿದ ಎನ್‌ಐಎ

1-dsadaadadasdas

TMCಗೆ ಹೊಡೆತ:ಪಕ್ಷ ತೊರೆದ ಹಿರಿಯ ನಾಯಕ ತಪಸ್‌ ರಾಯ್‌

Kannada cinema; “ಪುರುಷೋತ್ತಮನ ಪ್ರಸಂಗ’ ರಾಜ್ಯಾದ್ಯಂತ ಬಿಡುಗಡೆ

Kannada cinema; “ಪುರುಷೋತ್ತಮನ ಪ್ರಸಂಗ’ ರಾಜ್ಯಾದ್ಯಂತ ಬಿಡುಗಡೆ

ಟಿ. ರಂಗ ಪೈ ಅವರಿಗೆ ಸಂಗತ್ಕಾರ್‌ ಪುರಸ್ಕಾರ

Manipal; ಟಿ. ರಂಗ ಪೈ ಅವರಿಗೆ ಸಂಗತ್ಕಾರ್‌ ಪುರಸ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.