ಆಸ್ತಿಗಾಗಿ ನಡುಬೀದಿಯಲ್ಲಿ ಮಹಿಳೆಯನ್ನು ಎಳೆದಾಡಿ ಹಲ್ಲೆ; ವಿಡಿಯೋ ವೈರಲ್
Team Udayavani, Sep 20, 2022, 11:48 AM IST
ವಿಜಯಪುರ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರನ್ನು ನಡು ಬೀದಿಯಲ್ಲಿ ಎಳೆದಾಡಿ, ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ತಾಳಿಕೋಟೆ ತಾಲೂಕಿನಿಂದ ವರದಿಯಾಗಿದೆ.
ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಜಲಪುರ ಗ್ರಾಮದಲ್ಲಿ ಘಟನೆ ಜರುಗಿದೆ. ಸಂಬಂಧಿಗಳೇ ತಮ್ಮ ಕುಟುಂಬದ ಮಹಿಳೆಯನ್ನು ಸಾರ್ವಜನಿಕವಾಗಿ ರಸ್ತೆಯಲ್ಲಿ ಎಳೆದಾಡಿ ಥಳಿಸಿದ್ದಾರೆ.
ಮಹಾದೇವಿ ಫಿರಾಪೂರ ಎಂಬಾಕೆಯ ಮೇಲೆ ಬೀದಿಯಲ್ಲಿ ಹಲ್ಲೆ ನಡೆಸಲಾಗಿದೆ. ಆನಂದ ಬಿರಾದಾರ, ಶ್ರೀಶೈಲ ಬಿರಾದಾರ, ನಾನಾಗೌಡ ಬಿರಾದಾರ ಎಂಬವರು ಆಸ್ತಿ ವಿಷಯವಾಗಿ ಮಹಾದೇವಿ ಮೇಲೆ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ:ಉತ್ತರಪ್ರದೇಶ: ನೋಯ್ಡಾದಲ್ಲಿ ಗೋಡೆ ಕುಸಿದು ಬಿದ್ದು ನಾಲ್ವರು ಕಾರ್ಮಿಕರ ಸಾವು
ಜಲಪುರ ಗ್ರಾಮದಲ್ಲಿ ಒಂದು ಎಕರೆ ಜಮೀನಿದ್ದು, ಆ ಜಮೀನಿನ ವಿಷಯವಾಗಿ ಮಹಾದೇವಿ ಮೇಲೆ ಹಲ್ಲೆ ನಡೆದಿದೆ. ಕಲಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.