ದಂಡದಲ್ಲಿ ಶೇ.50 ರಿಯಾಯಿತಿ


Team Udayavani, Feb 4, 2023, 3:48 PM IST

ದಂಡದಲ್ಲಿ ಶೇ.50 ರಿಯಾಯಿತಿ

ಚಾಮರಾಜನಗರ: ಸಂಚಾರ ಸಂಬಂಧ ಪೊಲೀಸ್‌ ಇಲಾಖೆಯ ಸಂಚಾರ ಇ-ಚಲನ್‌ ನಲ್ಲಿ ದಾಖಲಾಗಿರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ ಕಲ್ಪಿಸ ಲಾಗಿದ್ದು ಈ ಅವಕಾಶವನ್ನು ಸಾರ್ವಜನಿ ಕರು ಸದುಪಯೋಗಪಡಿಸಿ ಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯ ಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಬಿ.ಎಸ್‌.ಭಾರತಿ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಹೈಕೋರ್ಟ್‌ ನ್ಯಾಯಮೂರ್ತಿ ವೀರಪ್ಪ ಅವರ ಅಧ್ಯಕ್ಷತೆಯಲ್ಲಿ ಜ.27ರಂದು ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿತ್ತು. ಸರ್ಕಾರವು ದಂಡದ ಮೊತ್ತದಲ್ಲಿ ರಿಯಾಯಿತಿ ನೀಡಿದೆ. ಪೊಲೀಸ್‌ ಇಲಾಖೆಯ ಇ-ಚಲನ್‌ನಲ್ಲಿ ದಾಖಲಾಗಿರುವ ಬಾಕಿ ಪ್ರಕರ ಣಗಳ ದಂಡದ ಮೊತ್ತದಲ್ಲಿ ಶೇ.50 ರಷ್ಟು ರಿ ಯಾಯಿತಿ ನೀಡಿ ಆದೇಶಿಸಲಾಗಿದೆ ಎಂದರು.

ರಾಜಿ ಮಾಡಿಕೊಳ್ಳಬಹುದು: ಲೋಕ್‌ ಅದಾಲತ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣ ಗಳನ್ನು ಹೊರತುಪಡಿಸಿ, ಇತರೆ ಯಾವುದೇ ರೀತಿಯ ಸಿವಿಲ್‌ ಪ್ರಕರಣಗಳು, ದಾಂಪತ್ಯ ಹಕ್ಕುಗಳ ಪುನರ್‌ ಸ್ಥಾಪನೆ, ಜೀವನಾಂಶ, ಮಕ್ಕಳ ಸಂರಕ್ಷಣೆ, ವಾಹನ ಅಪಘಾತ, ಕೈಗಾರಿಕಾ ವಿವಾದ ಕಾಯ್ದೆ ಹಾಗೂ ಇತರೆ ಎಲ್ಲಾ ಸ್ವರೂ ಪದ ಪ್ರಕರಣಗಳು ಮತ್ತು ರಾಜಿ ಯೋಗ್ಯ ಕ್ರಿಮಿನಲ್‌ ಪ್ರಕರಣಗಳು, ವಿಶೇಷ ಕಾನೂನಿ ನಿಂದ ಶಿಕ್ಷಿಸಲ್ಪಡುವ ಅಪರಾಧಗಳಾದ ಚೆಕ್‌ ಅಮಾನ್ಯ, ಕಾರ್ಮಿಕ ಕಾಯ್ದೆಯಡಿ ಪ್ರಕರಣ ಗಳು, ವಿದ್ಯುತ್‌ ಕಳವಿಗೆ ಸಂಬಂಧಿಸಿದ ಪ್ರಕರಣಗಳು, ಅಕ್ರಮ ಕಲ್ಲು, ಮರಳು ಸಾಗಾ ಣಿಕೆಗೆ ಸಂಬಂಧಪಟ್ಟ ಅಪರಾಧಗಳು, ಇತರೆ ಯಾವುದೇ ರಾಜೀ ಯೋಗ್ಯ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.

ವ್ಯಾಜ್ಯ ಇತ್ಯರ್ಥಕ್ಕೆ ಪ್ರಯತ್ನ: ಯಾವುದೇ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ರಾಜಿ ಯೋಗ್ಯ ಪ್ರಕರಣಗಳಲ್ಲಿ ಪಕ್ಷಗಾರರು ಸಂಬಂಧಪಟ್ಟ ನ್ಯಾಯಾಲಯಕ್ಕೆ ಲೋಕ್‌ ಅದಾ ಲತ್‌ ದಿನದಂದು ಪ್ರಕರಣವನ್ನು ವರ್ಗಾಯಿಸಲು ಮನವಿ ಸಲ್ಲಿಸಿದ್ದಲ್ಲಿ ಪ್ರಕರಣವನ್ನು ಲೋಕ್‌ ಅದಾಲತ್‌ ಮುಂದೆ ಕಳುಹಿಸಲಾ ಗುತ್ತದೆ. ನಿಗದಿಯಾಗಿರುವ ಪ್ರಕರಣಗಳನ್ನು ಮುಂಗಡ ಅರ್ಜಿ ಸಲ್ಲಿಸುವ ಮುಖಾಂತರ ಲೋಕ್‌ ಅದಾಲತ್‌ ನಲ್ಲಿ ತರಿಸಿಕೊಂಡು ವ್ಯಾಜ್ಯ ಇತ್ಯರ್ಥಕ್ಕೆ ಪ್ರಯತ್ನಿಸುವ ಅವಕಾಶ ಕಲ್ಪಿಸಲಾಗಿದೆ ಎಂದರು.

ಲೋಕ್‌ ಅದಾಲತ್‌ ನಲ್ಲಿ ರಾಜೀ ಸಂಧಾನದ ಮೂಲಕ ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಸಲುವಾಗಿ ವಕೀಲರು, ವಿಮಾ ಕಂಪನಿಗಳು, ವಿವಿಧ ಇಲಾಖೆಯ ಅಧಿಕಾರಿ ಗಳು, ಬ್ಯಾಂಕುಗಳ ಅಧಿಕಾರಿ ಗಳೊಂದಿಗೆ ಪೂರ್ವಭಾವಿ ಸಭೆ ನಡೆಸಲಾಗಿದೆ. ಪಕ್ಷಗಾರರು ಲೋಕ್‌ ಅದಾಲತ್‌ ಸೌಲಭ್ಯವನ್ನು ಸದುಪ ಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶ ಎಂ.ಶ್ರೀಧರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್‌, ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷ ಇದ್ದರು.

11ಕ್ಕೆ ಮೆಗಾ ಲೋಕ್‌ ಅದಾಲತ್‌ : ಚಾಮರಾಜನಗರ ಜಿಲ್ಲೆಯಲ್ಲಿ ಫೆ.11ರಂದು ಮೆಗಾ ಲೋಕ್‌ ಅದಾಲತ್‌ ಹಮ್ಮಿಕೊಳ್ಳಲಾಗಿದೆ. ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು ಮತ್ತು ಕೊಳ್ಳೇಗಾಲ ನ್ಯಾಯಾಲಯಗಳಲ್ಲಿ ಬೈಠಕ್‌ ಏರ್ಪಡಿಸಿ ಸಂಧಾನಕಾರರನ್ನು ನೇಮಿಸಿ ಈ ಮೂಲಕ ಮೆಗಾ ಲೋಕ್‌ ಅದಾಲತ್‌ ನಡೆಸಲಾಗುತ್ತದೆ. ಅಂದಾಜು 11 ಸಾವಿರ ಮೇಲ್ಪಟ್ಟ ಪ್ರಕರಣಗಳು ಲೋಕ್‌ ಅದಾಲತ್‌ನಲ್ಲಿ ಇತ್ಯರ್ಥವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಲೋಕ್‌ ಅದಾಲತ್‌ಗೆ ಸಂಬಂಧಪಟ್ಟ ವಕೀಲರು, ಕಕ್ಷಿದಾರರು ತಮ್ಮ ಸಹಕಾರ ನೀಡಿದಲ್ಲಿ ಸಂಧಾನಕಾರರು ನೀಡುವ ಸಲಹೆಗಳನ್ನು ಆಲಿಸಿ, ಪರಸ್ಪರ ಒಪ್ಪಿಗೆಯಾದಲ್ಲಿ ಪ್ರಕರಣವನ್ನು ಲೋಕ್‌ ಅದಾಲತ್‌ನಲ್ಲಿ ಬಗೆಹರಿಸಿಕೊಳ್ಳಬಹುದು. ಇದರಿಂದ ಕಕ್ಷಿದಾರರ ಸಮಯ ಮತ್ತು ಹಣ ಉಳಿತಾಯವಾಗುತ್ತದೆ. ಅಲ್ಲದೇ ಪಕ್ಷಕಾರರ ನಡುವೆ ಬಾಂಧವ್ಯ ಚೆನ್ನಾಗಿರುತ್ತದೆ ಎಂದು ನ್ಯಾಯಾಧೀಶರಾದ ಬಿ.ಎಸ್‌. ಭಾರತಿ ತಿಳಿಸಿದರು.

ಟಾಪ್ ನ್ಯೂಸ್

lok adalat

ಚೆಕ್‌ ಅಮಾನ್ಯ ಪ್ರಕರಣ: 5.69 ಲಕ್ಷ ರೂ. ದಂಡ

police karnataka

ಕುರ್ಕಾಲು:ಯುವತಿ ನಾಪತ್ತೆ

ನೂತನ ನೇಕಾರ ನಿಗಮ ಸ್ಥಾಪನೆ: ಸಿಎಂಗೆ ಅಭಿನಂದನೆ

ನೂತನ ನೇಕಾರ ನಿಗಮ ಸ್ಥಾಪನೆ: ಸಿಎಂಗೆ ಅಭಿನಂದನೆ

cON-AA

15ಕ್ಕೂ ಹೆಚ್ಚು ದಲಿತ ನಾಯಕರು ಕಾಂಗ್ರೆಸ್‌ ಸೇರ್ಪಡೆ

police siren

ಬೆಳಾಲು ಎರ್ಮಲದಲ್ಲಿ ಅಕ್ರಮವಾಗಿ ಶೇಖರಿಸಿಟ್ಟ ಮದ್ಯ ವಶ

ಮಕ್ಕಳ ಪರೀಕ್ಷೆ ಜತೆಗೆ ಆಟವಾಡುವುದು ಬೇಡ

ಮಕ್ಕಳ ಪರೀಕ್ಷೆ ಜತೆಗೆ ಆಟವಾಡುವುದು ಬೇಡ

ಸಾರ್ವಜನಿಕ ಶಿಕ್ಷಣ ಇಲಾಖೆ ಪದನಾಮ ಬದಲಾವಣೆ

ಸಾರ್ವಜನಿಕ ಶಿಕ್ಷಣ ಇಲಾಖೆ ಪದನಾಮ ಬದಲಾವಣೆ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ

ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ

ಸೋಮಣ್ಣಗೆ ಚಾ.ನಗರ ಚುನಾವಣಾ ಉಸ್ತುವಾರಿ ಕೊಟ್ಟರೆ ಗೋಬ್ಯಾಕ್ ಚಳುವಳಿ: ಸ್ವಪಕ್ಷದಲ್ಲೇ ಒತ್ತಾಯ

ಸೋಮಣ್ಣಗೆ ಚಾ.ನಗರ ಚುನಾವಣಾ ಉಸ್ತುವಾರಿ ಕೊಟ್ಟರೆ ಗೋಬ್ಯಾಕ್ ಚಳುವಳಿ: ಸ್ವಪಕ್ಷದಲ್ಲೇ ಒತ್ತಾಯ

tdy-11

ಬಸ್‌ ನಿಲ್ದಾಣ ಉದ್ದಾಟನೆಗೆ ತೀವ್ರ ವಿರೋಧ  

ಅಲ್ಪಸಂಖ್ಯಾತರಿಗೆ ಕೇವಲ 19 ನಿವೇಶನ

ಅಲ್ಪಸಂಖ್ಯಾತರಿಗೆ ಕೇವಲ 19 ನಿವೇಶನ

tdy-14

ಬಿ.ಪಿ.ನಟರಾಜಮೂರ್ತಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಲು ಆಗ್ರಹ

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

lok adalat

ಚೆಕ್‌ ಅಮಾನ್ಯ ಪ್ರಕರಣ: 5.69 ಲಕ್ಷ ರೂ. ದಂಡ

police karnataka

ಕುರ್ಕಾಲು:ಯುವತಿ ನಾಪತ್ತೆ

ನೂತನ ನೇಕಾರ ನಿಗಮ ಸ್ಥಾಪನೆ: ಸಿಎಂಗೆ ಅಭಿನಂದನೆ

ನೂತನ ನೇಕಾರ ನಿಗಮ ಸ್ಥಾಪನೆ: ಸಿಎಂಗೆ ಅಭಿನಂದನೆ

cON-AA

15ಕ್ಕೂ ಹೆಚ್ಚು ದಲಿತ ನಾಯಕರು ಕಾಂಗ್ರೆಸ್‌ ಸೇರ್ಪಡೆ

police siren

ಬೆಳಾಲು ಎರ್ಮಲದಲ್ಲಿ ಅಕ್ರಮವಾಗಿ ಶೇಖರಿಸಿಟ್ಟ ಮದ್ಯ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.