ಬಿಳಿಗಿರಿರಂಗನ ಚಿಕ್ಕ ಜಾತ್ರೆ ಈ ವರ್ಷವೂ ರದ್ದು
ದೇಗುಲ ಕಾಮಗಾರಿ ಅಪೂರ್ಣ ಕಾರಣ ರಥೋತ್ಸವ ಇಲ್ಲ , ಜಿಲ್ಲಾಡಳಿತ ಅವಕಾಶ ನೀಡಿದರೆ ದೇವರ ದರ್ಶನಕ್ಕೆ ಅವಕಾಶ
Team Udayavani, Jan 6, 2021, 12:50 PM IST
ಯಳಂದೂರು: ಜಿಲ್ಲೆಯ ಪ್ರಸಿದ್ಧ ಗಿರಿಧಾಮ ಹಾಗೂ ಪೌರಾಣಿಕ ಪುಣ್ಯ ಕ್ಷೇತ್ರವಾಗಿರುವ ಬಿಳಿಗಿರಿಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇಗುಲದ ಜೀರ್ಣೋದ್ಧಾರ ಕಾಮಗಾರಿ ಇನ್ನೂಪೂರ್ಣಗೊಳ್ಳದ ಕಾರಣ ಸಂಕ್ರಾಂತಿ ಹಬ್ಬದ ಮರುದಿನ ನಡೆಯುವ ಚಿಕ್ಕಜಾತ್ರೆ ಈ ಬಾರಿ ಕೂಡ ರದ್ದಾಗಿದೆ. ಇದರಿಂದ ಈ ಭಾಗದ ಭಕ್ತರಲ್ಲಿ ನಿರಾಸೆ ಮೂಡಿಸಿದೆ.
ಪ್ರತಿ ವರ್ಷವೂ ಸಂಕ್ರಾಂತಿಯ ಮಾರನೇ ದಿನ ಚಿಕ್ಕ ರಥೋತ್ಸವ ನಡೆಯುವ ವಾಡಿಕೆ ಇದೆ.ಸಾವಿರಾರು ವರ್ಷಗಳ ಇತಿಹಾಸವಿರುವ ಬಿಳಿಗಿರಿರಂಗನಾಥಸ್ವಾಮಿ ದೇಗುಲ ಶಿಥಿಲವಾಗಿತ್ತು. ಪ್ರಾಕೃತಿಕ ಸಂಪತ್ತು ಹಾಗೂ ಬಿಳಿಗಿರಿರಂಗ ನಾಥಸ್ವಾಮಿ ಹಾಗೂ ಗಂಗಾಧರೇಶ್ವರ ಸ್ವಾಮಿಯವರ ವೈಷ್ಣವ ಹಾಗೂ ಶೈವ ದೇಗುಲವನ್ನು ಒಂದೇ ಕಡೆ ಹೊಂದಿರುವ ಪುರಾಣ ಪ್ರಸಿದ್ಧಿ ಪಡೆದಿರುವ ಈ ಕ್ಷೇತ್ರ ಚಂಪಕಾರಣ್ಯವೆಂದೇ ಖ್ಯಾತವಾಗಿದೆ.
ಅಪೂರ್ಣ: ದೇಗುಲ ಶಿಥಿಲಗೊಂಡ ಹಿನ್ನೆಲೆಯಲ್ಲಿ 2.40 ಕೋಟಿ ರೂ.ವೆಚ್ಚದಲ್ಲಿ ಇದನ್ನುಜೀರ್ಣೋದ್ಧಾರ ಮಾಡಲು ಪುರಾತತ್ವ ಇಲಾಖೆ ಕ್ರಮ ವಹಿಸಿದೆ. ಆದರೆ, ಕಾಮಗಾರಿ ಆರಂಭಗೊಂಡು 4 ವರ್ಷ ಕಳೆದರೂ ಇನ್ನೂಪೂರ್ಣಗೊಂಡಿಲ್ಲ.
ಭಕ್ತರಿಗೆ ನಿರಾಸೆ: ಬೆಟ್ಟದ ಕಮರಿಯ ಮೇಲೆ ಪ್ರತಿಷ್ಠಾಪನೆಯಾಗಿರುವ ಬಿಳಿಗಿರಿರಂಗನಾಥಸ್ವಾಮಿ ಹಾಗೂ ಅಲಮೇಲು ರಂಗನಾಯಕಿ ಅಮ್ಮನವರ ಮೂಲ ಮೂರ್ತಿಗಳನ್ನು ಅಲ್ಲೇ ಇಟ್ಟಿಗೆಗಳನ್ನು ಕಟ್ಟಿಸುತ್ತಲ ದೇಗುಲವನ್ನು ಕೆಡವಿಹಾಕಿ ಹೊಸದಾಗಿಜೀರ್ಣೋದ್ಧಾರ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ನಿಗದಿತ ಅವಧಿಯಲ್ಲಿ ಕಾಮಗಾರಿಪೂರ್ಣಗೊಂಡಿಲ್ಲ. ಇದು ಪೂರ್ಣಗೊಳ್ಳದ ಕಾರಣಪೂಜೆ ನಡೆಯುವುದಿಲ್ಲ. ಜೊತೆಗೆ ದೇಗುಲದ ಹೊರಾಂಗಣದಲ್ಲಿ ಇನ್ನೂ ನೆಲಹಾಸು ಹಾಕದಕಾರಣ ಈ ಬಾರಿಯೂ ಚಿಕ್ಕ ರಥ ನಡೆಯುತ್ತಿಲ್ಲ. ಚಿಕ್ಕ ರಥೋತ್ಸವವು ಈ ಭಾಗದಲ್ಲಿ ಬಹಳ ಪ್ರಸಿದ್ಧಿಪಡೆದಿದೆ. ದಾಸ ಪರಂಪರೆಯನ್ನು ಹೊಂದಿರುವಅನೇಕ ಭಕ್ತರು ಈ ದೇವರಿಗೆ ಹರಕೆ ಹೊತ್ತು ತಾವು ಬೆಳೆದ ಭತ್ತ, ದವಸಧಾನ್ಯ, ಕಬ್ಬು, ಬಾಳೆಗಳನ್ನುತೇರಿಗೆ ಕಟ್ಟಿ ಎರಚುವ ಮೂಲಕ ಪೂಜೆ ಸಲ್ಲಿಸುವ ಪದ್ಧತಿ ರೂಢಿಯಲ್ಲಿದೆ.
ಪೂಜೆಗೆ ಅವಕಾಶ: ದೇಗುಲದ ಹೊರ ಆವರಣದಲ್ಲಿ ಬಾಲಾಲಯದಲ್ಲಿ ಮರದಿಂದ ಕೆತ್ತನೆಮಾಡಿದ ಬಿಳಿಗಿರಿರಂಗನಾಥಸ್ವಾಮಿ ಹಾಗೂ ಅಲಮೇಲು ರಂಗನಾಯಕಿ ಅಮ್ಮನವರವಿಗ್ರಹಗಳನ್ನು ತಾತ್ಕಾಲಿಕವಾಗಿ ಮೂಲ ವಿಗ್ರಹದಂತೆಕೆತ್ತಿ ಪೂಜೆ ಸಲ್ಲಿಸಲಾಗುತ್ತಿದೆ. ಈ ಬಾರಿ ಜ.15ರಂದು ಜಾತ್ರೆ ನಡೆಯಬೇಕಿತ್ತು. ಜಾತ್ರೆ ಇಲ್ಲದಿದ್ದರೂಭಕ್ತರ ದಂಡು ಪೂಜೆಗೆ ಬರುವ ಸಂಪ್ರದಾಯವಿದೆ.
ಸ್ಥಳೀಯ ವ್ಯಾಪಾರಿಗಳಿಗೆ ನಷ್ಟ: ಬಿಳಿಗಿರಿರಂಗನ ಬೆಟ್ಟದಲ್ಲಿ ನಡೆಯುವ ಚಿಕ್ಕಜಾತ್ರೆ ಈ ಬಾರಿ ನಡೆಯುತ್ತಿಲ್ಲ. ಇಲ್ಲಿನ ಬಹುತೇಕ ಸ್ಥಳೀಯರು ಸಣ್ಣಪುಟ್ಟ ಅಂಗಡಿಗಳನ್ನು ಹಾಕಿಕೊಂಡು ವ್ಯಾಪಾರವನ್ನೇ ಅವಲಂಬಿಸಿದ್ದಾರೆ. ತೇರಿನಸಂದರ್ಭದಲ್ಲಿ ಅರವಟ್ಟಿಗೆಯನ್ನು ಮಾಡಿ ಅಲ್ಲಲ್ಲಿದಾಸೋಹ ನಡೆಸಲಾಗುತ್ತದೆ. ಭಕ್ತರು ಇಲ್ಲೇಎರಡುಮೂರು ದಿನ ಇರುವುದರಿಂದ ಚೆನ್ನಾಗಿವ್ಯಾಪಾರ ವಹಿವಾಟು ನಡೆಯುತ್ತಿತ್ತು. ಆದರೆ, ಈ ಬಾರಿಯೂ ಜಾತ್ರೆ ಇಲ್ಲ. ದೊಡ್ಡ ತೇರು ಕೂಡಶಿಥಿಲವಾಗಿದ್ದು ಅದೂ ನಡೆಯದ ಕಾರಣ ನಮ್ಮಆದಾಯಕ್ಕೆ ಕತ್ತರಿ ಬಿದ್ದಿದೆ ಎಂದು ಸ್ಥಳೀಯ ವ್ಯಾಪಾರಿಗಳಾದ ನಾಗೇಂದ್ರ, ಮಹದೇವಸ್ವಾಮಿ ಮತ್ತಿತರರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ನಡೆಯುತ್ತಿರುವುದರಿಂದ ಜ.15 ರಂದು ನಡೆಯಬೇಕಿದ್ದ ಬಿಳಿಗಿರಿರಂಗನಾಥಸ್ವಾಮಿ ಚಿಕ್ಕ ಜಾತ್ರೆ ರದ್ದಾಗಿದೆ. ಇಲ್ಲಿಗೆ ಆಗಮಿಸುವ ರಂಗಪ್ಪನ ಭಕ್ತರಿಗೆ ಜಿಲ್ಲಾಡಳಿತ ಅನುಮತಿ ನೀಡಿದರೆ ಬಾಲಾಲಯದಲ್ಲಿರುವ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. –ಮೋಹನ್‌ಕುಮಾರ್, ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ
–ಫೈರೋಜ್ ಖಾನ್
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮದುವೆ ಆಹ್ವಾನ ಪತ್ರಿಕೆ ನೀಡಲು ತಂದಿದ್ದ ಕಾರನ್ನೇ ಕದ್ದೊಯ್ದ ಕಳ್ಳರು
JDS ಜಿಲ್ಲಾಧ್ಯಕ್ಷರಿಂದ ಗ್ರಾ.ಪಂ. ನೂತನ ಸದಸ್ಯರಿಗೆ ಹಣ ಹಂಚಿಕೆ: ಫೋಟೋ ವೈರಲ್
ರಾಷ್ಟ್ರಪತಿ ಪದಕಕ್ಕೆ ಚಾಮರಾಜನಗರ ಇನ್ಸ್ಪೆಕ್ಟರ್ ಬಿ.ಪುಟ್ಟಸ್ವಾಮಿ ಆಯ್ಕೆ
60 ಅಡಿ ಆಳದ ಬಾವಿಗೆ ಬಿದ್ದ ಹಸು : ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ
ಭಾರೀ ಚರ್ಚೆಗೆ ಗ್ರಾಸವಾದ ಬಿಜೆಪಿ-ಜೆಡಿಎಸ್ ಬೆಂಬಲಿತ ಸದಸ್ಯರ ಮೈತ್ರಿ ಧರ್ಮಪಾಲನೆ ಆಣೆ ಪ್ರಮಾಣ