
Chamarajanagar: ಹಸೆಮಣೆಯಿಂದ ಮತಗಟ್ಟೆಗೆ ಬಂದ ನವ ವಧೂವರರು!
Team Udayavani, May 10, 2023, 9:30 PM IST

ಚಾಮರಾಜನಗರ: ಹಸೆಮಣೆಯೇರಿದ ನವ ವಧೂವರರು ಮದುವೆಯ ಉಡುಗೆಯಲ್ಲೇ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ ಪ್ರಸಂಗ ತಾಲೂಕಿನ ಮೇಲಾಜಿಪುರದಲ್ಲಿ ನಡೆಯಿತು.
ತಾಲೂಕಿನ ಮೇಲಾಜಿಪುರದ ಮಾದಲಾಂಬಿಕಾ (ಪುಟ್ಟಿ) ಹಾಗೂ ನಂಜನಗೂಡು ತಾಲೂಕಿನ ಕಾರೇಪುರದ ಕೆ.ಎಸ್. ಮಂಜುನಾಥ್ ಅವರ ವಿವಾಹ ಬುಧವಾರ ತಾಲೂಕಿನ ಪಣ್ಯದಹುಂಡಿಯ ಕಲ್ಯಾಣಮಂಟಪದಲ್ಲಿ ನಡೆಯಿತು. ಹಸೆಮಣೆಯೇರಿದರೂ ಮತದಾನದ ಕರ್ತವ್ಯ ಮರೆಯದ ನವ ವಧೂವರರು ಮದುವೆಯಾದ ಬಳಿಕ ಮೇಲಾಜಿಪುರದ ಮತಗಟ್ಟೆಗೆ ಆಗಮಿಸಿದರು. ವಧು ಮಾದಲಾಂಬಿಕೆಯ ಮತ ಈ ಮತಗಟ್ಟೆಯಲ್ಲಿತ್ತು. ವಧು ಇಲ್ಲಿ ಮತ ಚಲಾಯಿಸಿದರು. ವರ ಮಂಜುನಾಥ್ ಅವರ ಮತ ನಂಜನಗೂಡು ತಾಲೂಕು ಕಾರೇಪುರದಲ್ಲಿತ್ತು. ನವವಧೂವರರು ಮತ್ತೆ ಕಾರನ್ನೇರಿ ಕಾರೇಪುರಕ್ಕೆ ತೆರಳಿದರು. ಅಲ್ಲಿ ಮಂಜುನಾಥ್ ಮತ ಚಲಾಯಿಸಿದರು! ಮದುವೆಯ ಸಂಭ್ರಮದಲ್ಲೂ ಮತದಾನ ಮರೆಯದ ಈ ನವದಂಪತಿ ಮತದ ಮೌಲ್ಯವನ್ನು ಸಾರಿ ಮಾದರಿಯಾಗಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Nutrition Food ಫಲಾನುಭವಿಗಳ ಕೈಸೇರದ ಪೌಷ್ಟಿಕ ಆಹಾರ; ಕೊರಗ,ಮಲೆಕುಡಿಯ ಸಮುದಾಯದವರ ಸಂಕಷ್ಟ

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಮೆಚ್ಚುಗೆ

Inspire Award: ವಿಜ್ಞಾನದತ್ತ ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆಸಕ್ತಿ

District In-charge Minister ಮಂಗಳೂರು, ಉಡುಪಿಯಲ್ಲಿ ಇಂದು ಜನತಾ ದರ್ಶನ

World cup Cricket ಜಗತ್ತನ್ನು ಬೆರಗುಗೊಳಿಸಿದ ಭಾರತ !