
ಮೂಢನಂಬಿಕೆ ಮೀರಿ ಚಾಮರಾಜನಗರಕ್ಕೆ ಬಂದ ಬೊಮ್ಮಾಯಿ
Team Udayavani, Oct 7, 2021, 8:37 PM IST

ಚಾಮರಾಜನಗರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಸಿಮ್ಸ್ ಬೋಧನಾ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಚಾಮರಾಜನಗರ ಪಟ್ಟಣಕ್ಕೆ ಭೇಟಿ ನೀಡುವ ಮೂಲಕ ಮೂಢನಂಬಿಕೆಯನ್ನು ಮೆಟ್ಟಿನಿಂತರು.
ಮೈಸೂರಿನಿಂದ ನಂಜನಗೂಡು ಮಾರ್ಗವಾಗಿ ರಸ್ತೆ ಮೂಲಕ ಆಗಮಿಸಿದ ಮುಖ್ಯಮಂತ್ರಿಯವರನ್ನು ನಗರದ ಬೈಪಾಸ್ ರಸ್ತೆಯ ಬಳಿ ಬಿಜೆಪಿ ಮುಖಂಡರು ಶಾಲು, ಹಾರ ಹಾಕಿ ಸ್ವಾಗತಿಸಿದರು. ಬಳಿಕ ಬೊಮ್ಮಾಯಿ ಅವರು ಬೈಪಾಸ್ ರಸ್ತೆ ಮೂಲಕ ಎಡಬೆಟ್ಟದ ಸಮೀಪ ಇರುವ ಹೆಲಿಪ್ಯಾಡ್‌ಗೆ ತೆರಳಿ, ಬಿರಂ ಬೆಟ್ಟದಿಂದ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ರಾಷ್ಟ್ರಪತಿಯವರನ್ನು ಬರಮಾಡಿಕೊಂಡರು.
ನಂತರ ನಗರದ ಸಿಮ್ಸ್ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವೀರೇಂದ್ರ ಪಾಟೀಲರ ನಂತರ 17 ವರ್ಷಗಳ ಕಾಲ ಯಾವ ಮುಖ್ಯಮಂತ್ರಿಯೂ ಚಾಮರಾಜನಗರಕ್ಕೆ ಭೇಟಿ ನೀಡಲಿಲ್ಲ. ಎಚ್. ಡಿ. ಕುಮಾರಸ್ವಾಮಿ 17 ವರ್ಷಗಳ ಬಳಿಕ ನಗರಕ್ಕೆ ಆಮಿಸಿದ್ದರು. ಆ ಬಳಿಕ ಜಗದೀಶ್ ಶೆಟ್ಟರ್ 2 ಬಾರಿ, ಸಿದ್ದರಾಮಯ್ಯ 12 ಬಾರಿ ಚಾ.ನಗರಕ್ಕೆ ಭೇಟಿ ನೀಡಿ, ಮೂಢನಂಬಿಕೆ ಮೀರಿದ್ದರು. ಈಗ ಬಸವರಾಜ ಬೊಮ್ಮಾಯಿ ಅವರು ಸಹ ನಗರಕ್ಕೆ ಆಗಮಿಸುವ ಮೂಲಕ ಆ ಸಾಲಿಗೆ ಸೇರಿದ ಮುಖ್ಯಮಂತ್ರಿಯಾದರು. ವಿಶೇಷವಾಗಿ ಬಿ.ಎಸ್. ಯಡಿಯೂರಪ್ಪನವರಿಗೆ ಜಿಲ್ಲೆಯಲ್ಲಿ ಅಪಾರ ಬೆಂಬಲಿಗರು ಇದ್ದು, ಮುಖ್ಯಮಂತ್ರಿಯಾಗಿದ್ದಾಗ ಚಾಮರಾಜನಗರಕ್ಕೆ ಅವರು ಭೇಟಿ ನೀಡಿರಲೇ ಇಲ್ಲ. ಈಗ ಬೊಮ್ಮಾಯಿ ತಾವು ಅವರಿಗಿಂತ ಭಿನ್ನ ಎಂದು ತೋರಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
