
ದರ್ಶನ್ ಅವಿರೋಧ ಆಯೆ: ಅಭಿಯಾನ ಆರಂಭ
Team Udayavani, Mar 27, 2023, 11:20 AM IST

ಚಾಮರಾಜನಗರ: ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿವಂಗತ ಆರ್. ಧ್ರುವನಾರಾಯಣ ಅವರ ಸ್ಮರಣಾರ್ಥ ಅವರ ಪುತ್ರ ದರ್ಶನ್ ಧ್ರುವನಾರಾಯಣ ಅವರನ್ನು ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆ ಮಾಡುವಂತೆ ಅವರ ಅಭಿಮಾನಿಗಳ ವತಿಯಿಂದ ಅಭಿಯಾನ ಆರಂಭಿಸಲಾಗಿದೆ ಎಂದು ವಕೀಲ ಅರುಣ್ ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2004 ರಲ್ಲಿ ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಒಂದು ಮತದಿಂದ ಶಾಸಕರಾಗಿ ಆಯ್ಕೆಯಾದ ಧ್ರುವನಾರಾಯಣ ಅವರು ಅಲ್ಲಿಂದ ಎರಡು ಬಾರಿ ಶಾಸಕರಾಗಿ, ಎರಡು ಬಾರಿ ಸಂಸದರಾಗಿ ಜಿಲ್ಲೆಯಲ್ಲಿ ಕೇಂದ್ರೀಯ ವಿದ್ಯಾಲಯ, ಸರ್ಕಾರಿ ಮೆಡಿಕಲ್ ಕಾಲೇಜು, ಕೃಷಿ ಕಾಲೇಜು, ಕಾನೂನು ಕಾಲೇಜು, ಏಕಲವ್ಯ ವಸತಿ ಶಾಲೆ, ಮೊರಾರ್ಜಿ ಶಾಲೆಗಳು, ಪಾಸ್ ಪೋರ್ಟ್ ಸೇವಾ ಕೇಂದ್ರ ಸೇರಿದಂತೆ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು. ಅಭಿವೃದ್ಧಿಯಲ್ಲಿ ರಾಜ್ಯದ ನಂಬರ್ ಒನ್ ಸಂಸದರಾಗಿದ್ದರು ಎಂದರು.
ಅಭಿವೃದ್ಧಿ ಹರಿಕಾರರಾಗಿ ಕೆಲಸ ಮಾಡಿದರು. ಅವರು ಈ ಬಾರಿ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದಿಂದ ಸ್ಪರ್ದೆ ಮಾಡಲು ಬಯಸಿದ್ದರು ಅವರ ಅಕಾಲಿಕ ನಿಧನದಿಂದ ಅವರ ಪುತ್ರ ದರ್ಶನ್ ಧ್ರುವನಾರಾಯಣ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿ ಕಣಕ್ಕಿಳಿಸಿದೆ. ಧ್ರುವನಾರಾಯಣ ಅವರ ಲೋಕಸಭಾ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿಯನ್ನು ಮನಗಂಡು ಈ ಬಾರಿ ಚುನಾವಣೆಯಲ್ಲಿ ದರ್ಶನ್ ಧ್ರುವನಾರಾಯಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕು ಎಂದು ಎಲ್ಲ ರಾಜಕೀಯ ಪಕ್ಷಗಳ ಅಧ್ಯಕ್ಷರು, ಮುಖಂಡರಿಗೆ ಮನವಿ ಮಾಡಿದರು.
ಮೈಸೂರು, ನಂಜನಗೂಡು, ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಎಲ್ಲ ಪಕ್ಷದ ನಾಯಕರಿಗೆ ಮನವಿ ಮಾಡಲಾಗುವುದು. ಅಲ್ಲದೆ ಎಲ್ಲ ಪಕ್ಷದ ರಾಜ್ಯಾಧ್ಯಕ್ಷರಿಗೆ ಲಿಖೀತ ಮನವಿ ಸಲ್ಲಿಸಿ ದರ್ಶನ್ ಧ್ರುವನಾರಾಯಣ ಅವರನ್ನು ಅವಿರೋಧವಾಗಿ ಗೆಲ್ಲಿಸಿಕೊಡುವಂತೆ ಮನವಿ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ವಕೀಲರಾದ ಡಾ.ರಂಗಸ್ವಾಮಿ, ಉದಯರಂಗ, ನಾಗಾರ್ಜುನ್ ಫೃಥ್ವಿ, ಜಿ. ಮಹದೇವಸ್ವಾಮಿ, ನಾಗಮ್ಮ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಮನೆಯಲ್ಲಿಯೇ ಮಾಡಿ ರುಚಿಕರವಾದ ಎಗ್ ಘೀ ರೋಸ್ಟ್

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
ಹೊಸ ಸೇರ್ಪಡೆ

Modi ಸರಕಾರದಲ್ಲಿ ಭಾರತದ ಸಾಲ 155 ಲಕ್ಷ ಕೋಟಿ ರೂ.ಗೆ ಏರಿದೆ: ಕಾಂಗ್ರೆಸ್

ಬೊರಿವಲಿಯ ರೋಹಿತ್ ಪೂಜಾರಿ ಡಾನ್ಸ್ ಅಕಾಡೆಮಿ: ಮಂಥನ್-2023 ಸಂಭ್ರಮ

Opposition ಮೈತ್ರಿ ಕೂಟದಿಂದ ದೂರ ಉಳಿಯುವ ಸೂಚನೆ ನೀಡಿದ ಒಮರ್ ಅಬ್ದುಲ್ಲಾ

ಸಾಗರ ದಿನಾಚರಣೆ; ಕೊಳೆಯದ ವಸ್ತುಗಳ ಬಳಕೆ ಬೇಡ; ಜಿಲ್ಲಾಧಿಕಾರಿ

ಬೆಂಗಳೂರು ಕಾರ್ಯಕ್ರಮ ರದ್ದುಮಾಡಿ ಕುತ್ತಾರು ಕೊರಗಜ್ಜಕ್ಷೇತ್ರದಲ್ಲಿ ಮುಹೂರ್ತಮಾಡಿದ ಚಿತ್ರತಂಡ