ವೀರಪ್ಪನ್‌ ಕಾರ್ಯಾಚರಣೆ ಕಥೆ ಹೇಳುವ ಶ್ರೀನಿವಾಸ್‌ ಜೀಪ್‌

ಕೊಳ್ಳೇಗಾಲ ಅರಣ್ಯ ಇಲಾಖೆ ವಸ್ತು ಸಂಗ್ರಹಾಲಯದಲ್ಲಿ ಡಿಸಿಎಫ್ ನೆನಪು

Team Udayavani, May 7, 2022, 3:00 PM IST

Untitled-1

ಚಾಮರಾಜನಗರ: ಡಿಸಿಎಫ್ ಪಿ. ಶ್ರೀನಿವಾಸ್‌ ಚಾಮರಾಜನಗರದ ಜನತೆಗೆ ಚಿರಪರಿಚಿತ ಹೆಸರು. ನರಹಂತಕ ವೀರಪ್ಪನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಏಕೈಕ ಅಧಿಕಾರಿ ಅವರು.

ಮೊದಲಿಗೆ ಚಾಮರಾಜನಗರದಲ್ಲಿ ಉಪಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಆಗಿದ್ದ ಪಿ. ಶ್ರೀನಿವಾಸ್‌ ನಂತರ ವೀರಪ್ಪನ್‌ ವಿರುದ್ಧದ (ಎಸ್‌ಟಿಎಫ್) ಕಾರ್ಯಪಡೆಯಲ್ಲಿ ಕರ್ತವ್ಯ ನಿರ್ವಹಿಸಿ, ಅದೇ ವೀರಪ್ಪನ್‌ ನಿಂದ ಭೀಕರವಾಗಿ ಹತ್ಯೆಗೀಡಾದರು. ಅವರು ಬಳಸಿದ್ದ ಜೀಪ್‌ ಅನ್ನು ಜಿಲ್ಲೆಯ ಕೊಳ್ಳೇಗಾಲದ ಡಿಸಿಎಫ್ ಕಚೇರಿಯ ನೂತನ ಅತಿಥಿ ಗೃಹದ ಆವರಣದಲ್ಲಿ ನವೀಕರಿಸಿ ಸಂರಕ್ಷಿಸಲಾಗಿದ್ದು ಸಾರ್ವಜನಿಕರ ವೀಕ್ಷಣೆಗೆ ಇಡಲಾಗಿದೆ.

ಕೊಳ್ಳೇಗಾಲದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಆವರಣದಲ್ಲಿದ್ದ ಅರಣ್ಯ ಇಲಾಖೆ ಅತಿಥಿ ಗೃಹವನ್ನು ಇತ್ತೀಚೆಗೆ ನವೀಕರಿಸಿ ಉದ್ಘಾಟನೆ ಮಾಡಲಾಗಿದೆ. ಆ ಅತಿಥಿ ಗೃಹಕ್ಕೆ ಡಿಸಿಎಫ್ ದಿ.ಪಿ. ಶ್ರೀನಿವಾಸ್‌ ಅವರ ಹೆಸರಿಡಲಾಗಿದೆ. ಅಲ್ಲಿ ಅವರ ಪುತ್ಥಳಿಯನ್ನೂ ನಿರ್ಮಿಸಲಾಗಿದೆ. ಇದನ್ನು ಪುಟ್ಟದೊಂದು ವಸ್ತು ಸಂಗ್ರಹಾಲಯವಾಗಿಸುವ ಉದ್ದೇಶವನ್ನೂ ಹೊಂದಲಾಗಿದೆ. ಅದರ ಮೊದಲ ಹಂತವಾಗಿ ಶ್ರೀನಿವಾಸ್‌ ಅವರು ಬಳಸುತ್ತಿದ್ದ ವಸ್ತುಗಳು, ಅವರ ವಿವಿಧ ಫೋಟೋಗಳನ್ನು ಪ್ರದರ್ಶಿಸಲಾಗಿದೆ. ಅಲ್ಲದೇ ಅವರ ಹೆಸರಿನಲ್ಲಿ ಗ್ರಂಥಾಲಯವನ್ನೂ ಸಹ ಸ್ಥಾಪಿಸಲಾಗಿದೆ.

ಶ್ರೀನಿವಾಸ್‌ ಬಳಸುತ್ತಿದ್ದ ಜೀಪಿನ ನವೀಕರಣ: ಈ ವಸ್ತುಗಳಲ್ಲಿ ನೋಡುಗರ ಗಮನ ಸೆಳೆಯುವುದು ಪಿ. ಶ್ರೀನಿವಾಸ್‌ ಅವರು ಬಳಸುತ್ತಿದ್ದ ಮಹೀಂದ್ರಾ ಜೀಪ್‌. ವೀರಪ್ಪನ್‌ ಸೆರೆ ಕಾರ್ಯಾಚರಣೆಯಲ್ಲಿದ್ದಾಗ ಪಿ. ಶ್ರೀನಿವಾಸ್‌ ಅವರು ಬಳಸುತ್ತಿದ್ದ ಕೆ.ಎ. 10 ಜಿ 1 ಸಂಖ್ಯೆಯ ಜೀಪು ಕೆಟ್ಟು ಹಾಳಾಗಿತ್ತು. ಆ ಜೀಪು ಮಲೆ ಮಹದೇಶ್ವರ ಬೆಟ್ಟದ ಆಚೆ ಇರುವ ಪಾಲಾರ್‌ ವಲಯ ಅರಣ್ಯಾಧಿಕಾರಿ ಕಚೇರಿಯ ಆವರಣದಲ್ಲಿದ್ದು ಜೀರ್ಣಾವಸ್ಥೆ ತಲುಪಿತ್ತು. ಇದನ್ನು ಅರಣ್ಯ ಇಲಾಖೆ ಅಧಿಕಾರಿಗಳು 1.10 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಮಾಡಿಸಿ, ನವೀಕರಿಸಿದ್ದಾರೆ.

ಈ ನವೀಕೃತ ಜೀಪನ್ನು ಅತಿಥಿ ಗೃಹದ ಆವರಣದಲ್ಲಿ ಇಡಲಾಗಿದ್ದು, ನೋಡುಗರ ಗಮನ ಸೆಳೆಯುತ್ತಿದೆ. ಉಪಯೋಗಕ್ಕೆ ಬಾರ ದಂತಿದ್ದ ಜೀಪನ್ನು ಸಂಪೂರ್ಣ ದುರಸ್ತಿಪಡಿಸಲಾಗಿದ್ದು, ಚಾಲನಾ ಸ್ಥಿತಿಗೆ ತರಲಾಗಿದೆ. ನೋಡಲು ಹೊಚ್ಚ ಹೊಸದಾಗಿ ಕಾಣುತ್ತಿದೆ. ಅತಿಥಿ ಗೃಹದ ಆವರಣದಲ್ಲಿ ಆಧುನಿಕ ಮಾದರಿ ಯಲ್ಲಿ ಶೆಡ್‌ ನಿರ್ಮಿಸಲಾಗಿದ್ದು, ಅದರಲ್ಲಿ ಜೀಪ್‌ ನಿಲ್ಲಿಸಲಾಗಿದೆ. ಅದರ ಮುಂದಿನ ಫ‌ಲಕದಲ್ಲಿ ಈ ಜೀಪಿನ ವಿವರ ಹಾಕಲಾಗಿದೆ. ಸಾರ್ವಜನಿಕರು ಈ ಜೀಪನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಯಾರು ಈ ಪಿ. ಶ್ರೀನಿವಾಸ್‌? : ಆಂಧ್ರಪ್ರದೇಶ ಮೂಲದ ಐಎಫ್ಎಸ್‌ ಅಧಿಕಾರಿ ಪಿ. ಶ್ರೀನಿವಾಸ್‌ 1985-86ರಲ್ಲಿ ಚಾಮರಾಜನಗರ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 1986ರ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಸಾರ್ಕ್‌ ಸಮ್ಮೇಳನ ನಡೆದಾಗ, ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಕಾಡುಗಳ್ಳ ವೀರಪ್ಪನ್‌ನನ್ನು ಪೊಲೀಸರು ಬಂಧಿಸಿದ್ದರು. ಆಗ ವೀರಪ್ಪನ್‌ ನನ್ನು ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದ ಪಿ. ಶ್ರೀನಿವಾಸ್‌ ಅವರು ಬೂದಿಪಡಗ ಅತಿಥಿಗೃಹದಲ್ಲಿ ಬಂಧಿಸಿದ್ದರು. ಆತನಿಂದ ನಡೆದಿದ್ದ ಆನೆಗಳ ದಂತ ಅಪಹರಣ, ಕಳ್ಳಸಾಗಾಣಿಕೆಗಳ ಬಗ್ಗೆ ವಿಚಾರಣೆ ನಡೆಸಿದ್ದರು. ಪಿ. ಶೀನಿವಾಸ್‌ ಇರದಿದ್ದ ಸಂದರ್ಭದಲ್ಲಿ ವೀರಪ್ಪನ್‌ ಪೊಲೀಸರ ಕಣ್ತಪ್ಪಿಸಿ ಅಲ್ಲಿಂದ ಪರಾರಿಯಾಗಿದ್ದ. 1990ರ ಸಮಯದಲ್ಲಿ ಮಲೆ ಮಹದೇಶ್ವರ ಬೆಟ್ಟ ಅರಣ್ಯ ಪ್ರದೇಶದಲ್ಲಿ ಕಾಡುಗಳ್ಳ, ನರಹಂತಕ ವೀರಪ್ಪನ್‌ ಉಪಟಳ ಹೆಚ್ಚಾದಾಗ, ಆತನನ್ನು ತಾನು ಸೆರೆ ಹಿಡಿಯುವುದಾಗಿ ಪಿ. ಶ್ರೀನಿವಾಸ್‌ ಅವರು ಸ್ವಯಂಪ್ರೇರಣೆಯಿಂದ ಎಸ್‌ಟಿಎಫ್ ಸೇರಿದರು.

ವೀರಪ್ಪನ್‌ ಹುಟ್ಟೂರಾದ ಗೋಪಿನಾಥಂನಲ್ಲಿ ಕ್ಯಾಂಪ್‌ ಮಾಡಿ, ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ವೀರಪ್ಪನ್‌ನ ಮನವೊಲಿಸಿ ಶರಣಾಗತಿ ಮಾಡಿಸುವುದಾಗಿ ಬಲವಾಗಿ ನಂಬಿದ್ದರು. ಗೋಪಿನಾಥಂನಲ್ಲಿ ಆರೋಗ್ಯ ಕೇಂದ್ರ ತೆರೆದು, ಅಲ್ಲಿನ ಜನರಿಗೆ ಉಚಿತ ಔಷಧೋಪಚಾರ ನಡೆಸುತ್ತಿದ್ದರು. ಅಲ್ಲದೇ ಗ್ರಾಮದಲ್ಲಿ ಮಾರಿಯಮ್ಮ ದೇಗುಲವನ್ನು ಕೂಡ ನಿರ್ಮಾಣ ಮಾಡಿದ್ದರು. 1991ರ ನವೆಂಬರ್‌ 10ರಂದು ಎರಕೆಹಳ್ಳ ಪ್ರದೇಶದಲ್ಲಿ ಶರಣಾಗತನಾಗುವುದಾಗಿ ವೀರಪ್ಪನ್‌, ಶ್ರೀನಿವಾಸರನ್ನು ಕರೆಸಿಕೊಂಡಿದ್ದ. ಅವನ ಮಾತು ನಂಬಿ ನಿರಾಯುಧರಾಗಿ ಏಕಾಂಗಿಯಾಗಿ ಸ್ಥಳಕ್ಕೆ ಹೋದ ಶ್ರೀನಿವಾಸ್‌ ಅವರನ್ನು ವೀರಪ್ಪನ್‌ ಕೊಂದು ರುಂಡ ಮುಂಡ ಬೇರೆ ಮಾಡಿದ್ದ, ಪೊಲೀಸರಿಗೆ ಅವರ ಶಿರ ಪತ್ತೆಯಾಗಲೇ ಇಲ್ಲ.

-ಕೆ.ಎಸ್‌.ಬನಶಂಕರ ಆರಾಧ್ಯ

ಟಾಪ್ ನ್ಯೂಸ್

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.