ಕೃಷಿ ಅಭಿಯಾನ ಸಮರ್ಪಕವಾಗಿ ತಲುಪಿಸಿ: ಡೀಸಿ


Team Udayavani, May 18, 2019, 3:00 AM IST

krushi

ಚಾಮರಾಜನಗರ: ಸಮಗ್ರ ಕೃಷಿ ಅಭಿಯಾನದ ಮಾಹಿತಿಯನ್ನು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಪ್ರತಿ ಹಳ್ಳಿಯ ಎಲ್ಲಾ ರೈತರಿಗೂ ಸಮರ್ಪಕವಾಗಿ ತಲುಪಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಮಗ್ರ ಕೃಷಿ ಅಭಿಯಾನ, ಇಲಾಖೆಗಳ ನಡಿಗೆ, ರೈತರ ಮನೆ ಬಾಗಿಲಿಗೆ ಕಾರ್ಯಕ್ರಮದ ಜಿಲ್ಲಾ ಅನುಷ್ಠಾನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯೋಜನೆ ಸದ್ಬಳಕೆ ಆಗಲಿ: ಕೃಷಿ ಇಲಾಖೆ ಅಧಿಕಾರಿಗಳು ಸಮಗ್ರ ಕೃಷಿ ಅಭಿಯಾನದ ಮಾಹಿತಿಯನ್ನು ರೈತರಿಗೆ ನೀಡುವುದರ ಜೊತೆಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ರೈತರಿಗೆ ಸರ್ಕಾರದಿಂದ ದೊರಕುವ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು. ನರೇಗಾ ಯೋಜನೆ ಕರಪತ್ರ ಮುದ್ರಿಸಿ ರೈತರಿಗೆ ಮಾಹಿತಿ ನೀಡುವುದರ ಜೊತೆಗೆ ಯೋಜನೆ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಬೇಕು ಎಂದರು.

ನೆರವಿನ ಬಗ್ಗೆ ತಿಳಿಸಿಕೊಡಿ: ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನದ‌ಲ್ಲಿ ಹೆಚ್ಚಿನ ರೈತರನ್ನು ಸೇರಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯೊಂದಿಗೆ ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಪಶುಪಾಲನೆ, ಸಹಕಾರ, ಕಂದಾಯ ಇಲಾಖೆ ಅಧಿಕಾರಿಗಳೂ ಹೆಚ್ಚಿನ ಹೊಣೆ ಹೊತ್ತು ಶ್ರಮಿಸಬೇಕು. ಆಯಾ ಇಲಾಖೆಗಳಲ್ಲಿ ರೈತರಿಗೆ ದೊರಕಬಹುದಾದ ನೆರವುಗಳ ಬಗ್ಗೆ ತಿಳಿಸಿಕೊಡಬೇಕು ಎಂದು ಹೇಳಿದರು.

ರೈತರು ಬೆಳೆದ ಬೆಳೆಗಳಿಗೆ ವಿಮೆ ಮಾಡಿಸುವುದು, ಬಡ ಹಾಗೂ ಸಣ್ಣ ಪುಟ್ಟ ರೈತರಿಗೆ ಸಮಗ್ರ ಕೃಷಿ ಅಭಿಯಾನದ ಅಗತ್ಯತೆ ಮತ್ತು ಅನುಕೂಲ ತಿಳಿಸಬೇಕೆಂದು ಅನುಷ್ಠಾನ ಸಮಿತಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಸ್ವಾವಲಂಬಿ ಜೀವನ ನಡೆಸಿ: ಜಿಪಂ ಸಿಇಒ ಹಾಗೂ ಸಮಗ್ರ ಕೃಷಿ ಅಭಿಯಾನದ ಸಹ ಅಧ್ಯಕ್ಷೆ ಕೆ.ಎಸ್‌.ಲತಾ ಕುಮಾರಿ, ಸಮಗ್ರ ಕೃಷಿ ಅಭಿಯಾನವನ್ನು ರೈತರಿಗೆ ಸಮರ್ಪಕವಾಗಿ ತಲುಪಿಸಿದರೆ ರೈತರು ಸ್ವಾವಲಂಬನೆ ಜೀವನ ಮಾಡಲು ಸಹಕಾರಿಯಾಗುತ್ತದೆ ಎಂದರು.

ವಲಸೆ ತಡೆಗಟ್ಟಿ: ಅಭಿಯಾನಕ್ಕೆ ಸಂಬಂಧಪಟ್ಟ ವಿವಿಧ ಇಲಾಖೆಗಳಿಂದ ರೈತರಿಗೆ ಇರುವ ಅನುಕೂಲಗಳನ್ನು ಭಿತ್ತಿ ಪತ್ರಗಳಲ್ಲಿ ಮುದ್ರಿಸಿ ಹಂಚುವುದರಿಂದ ಮಾಹಿತಿ ತಲುಪಲಿದೆ. ನರೇಗಾ ಯೋಜನೆ ಬಗ್ಗೆ ಹೆಚ್ಚಾಗಿ ಬಳಸಿದರೆ ರೈತರು ಉದ್ಯೋಗಕ್ಕಾಗಿ ಬೇರೆ ಕಡೆ ವಲಸೆ ಹೋಗುವುದನ್ನು ತಡೆಗಟ್ಟಬಹುದು ಎಂದು ತಿಳಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ತಿರುಮಲೇಶ್‌, ಪವರ್‌ಪಾಯಿಂಟ್‌ ಮೂಲಕ ಸಮಗ್ರ ಕೃಷಿ ಅಭಿಯಾನದ ಮಾಹಿತಿಯನ್ನು ಅನುಷ್ಠಾನ ಸಮಿತಿ ಅಧಿಕಾರಿಗಳಿಗೆ ವಿವರಿಸಿದರು.

Ad

ಟಾಪ್ ನ್ಯೂಸ್

ಚಿಕ್ಕಮ್ಮನ ಜತೆ ಸಂಬಂಧ: 24ರ ಯುವಕನನ್ನು ಅಪಹರಣ ಮಾಡಿ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕರು

ಚಿಕ್ಕಮ್ಮನ ಜತೆ ಸಂಬಂಧ: 24ರ ಯುವಕನನ್ನು ಅಪಹರಣ ಮಾಡಿ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕರು

11-belagavi

Belagavi: ಒಂದೇ ಕುಟುಂಬದ ಮೂವರು ಆತ್ಮಹ*ತ್ಯೆ: ಓರ್ವ ಮಹಿಳೆಯ ಸ್ಥಿತಿ ಚಿಂತಾಜನಕ

Gujarat Bridge Collapse: ಸೇತುವೆ ಕುಸಿದು ನದಿಗೆ ಉರುಳಿದ ವಾಹನಗಳು– ಕನಿಷ್ಠ 9 ಮಂದಿ ಸಾವು

Gujarat Bridge Collapse: ಸೇತುವೆ ಕುಸಿದು ನದಿಗೆ ಉರುಳಿದ ವಾಹನಗಳು– ಕನಿಷ್ಠ 9 ಮಂದಿ ಸಾವು

ʼManjummel Boysʼ ಹಣಕಾಸು ವಿವಾದ: ಖ್ಯಾತ ನಟ ಸೌಬಿನ್ ಶಾಹಿರ್ ಸೇರಿ ಮೂವರ ಬಂಧನ – ಬಿಡುಗಡೆ

ʼManjummel Boysʼ ಹಣಕಾಸು ವಿವಾದ: ಖ್ಯಾತ ನಟ ಸೌಬಿನ್ ಶಾಹಿರ್ ಸೇರಿ ಮೂವರ ಬಂಧನ – ಬಿಡುಗಡೆ

8-ckm

ವಿದ್ಯಾರ್ಥಿನಿಯರ ಆತ್ಮಹ*ತ್ಯೆ ಪ್ರಕರಣ; ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸಲು ಆದೇಶ

2

ನಟಿ ಆಲಿಯಾ ಭಟ್​ಗೆ 77 ಲಕ್ಷ ರೂಪಾಯಿ ವಂಚನೆ; ಬೆಂಗಳೂರಿನಲ್ಲಿ ಮಾಜಿ ಆಪ್ತ ಕಾರ್ಯದರ್ಶಿ ಬಂಧನ

Heart attack: ಹೃದಯಾಘಾತಕ್ಕೆ ದಾವಣಗೆರೆ – ಧಾರವಾಡದಲ್ಲಿ ಇಬ್ಬರು ವಿದ್ಯಾರ್ಥಿಗಳು ಬಲಿ

Heart attack: ಹೃದಯಾಘಾತಕ್ಕೆ ದಾವಣಗೆರೆ – ಧಾರವಾಡದಲ್ಲಿ ಇಬ್ಬರು ವಿದ್ಯಾರ್ಥಿಗಳು ಬಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yelandur: ಬಿಳಿಗಿರಿರಂಗನ ಬೆಟ್ಟದಲ್ಲಿ ಮಿನಿ ಬಸ್ ಅಪಘಾತ… 13ಕ್ಕೂ ಹೆಚ್ಚು ಮಂದಿಗೆ ಗಾಯ

Yelandur: ಬಿಳಿಗಿರಿರಂಗನ ಬೆಟ್ಟದಲ್ಲಿ ಮಿನಿ ಬಸ್ ಅಪಘಾತ… 13ಕ್ಕೂ ಹೆಚ್ಚು ಮಂದಿಗೆ ಗಾಯ

3-gundlupete

Gundlupete: ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾ*ವು‌

11-gundlupete

Gundlupete: ಹೋರಾಟಕ್ಕೆ ಭಾಗವಹಿಸಲು ಬೆಂಗಳೂರಿಗೆ ತೆರಳಿದ್ದ ರೈತನಿಗೆ ಹೃದಯಾಘಾತ, ಸಾ*ವು

18

Yelandur: ಅಪರಿಚಿತ ವಾಹನ ಡಿಕ್ಕಿ; ಛಿದ್ರವಾದ ವ್ಯಕ್ತಿಯ ದೇಹ

15

ಮಹದೇಶ್ವರ ವನ್ಯಧಾಮ: ಅಧಿಕಾರಿಗಳ 1 ವರ್ಷದ ಡೈರಿ ಮಾಹಿತಿಗೆ ಖಂಡ್ರೆ ಸೂಚನೆ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

ಚಿಕ್ಕಮ್ಮನ ಜತೆ ಸಂಬಂಧ: 24ರ ಯುವಕನನ್ನು ಅಪಹರಣ ಮಾಡಿ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕರು

ಚಿಕ್ಕಮ್ಮನ ಜತೆ ಸಂಬಂಧ: 24ರ ಯುವಕನನ್ನು ಅಪಹರಣ ಮಾಡಿ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕರು

13

Kota: ಟಿಲ್ಲರ್‌ನಿಂದ ಟ್ಯಾಕ್ಟರ್‌ ಕಡೆಗೆ ಮುಖ ಮಾಡಿದ ರೈತರು

12

Udupi: ಮಹಿಳಾ ಸ್ವ-ಸಹಾಯ ಗುಂಪುಗಳಿಂದ ಕೃಷಿ ಡ್ರೋನ್‌ ಪಡೆಯಲು ಅರ್ಜಿ ಆಹ್ವಾನ

11

Katpadi: ಅಚ್ಚಡ ಸರಕಾರಿ ಶಾಲೆಗೆ ಬೇಕು ಸುರಕ್ಷೆ

11-belagavi

Belagavi: ಒಂದೇ ಕುಟುಂಬದ ಮೂವರು ಆತ್ಮಹ*ತ್ಯೆ: ಓರ್ವ ಮಹಿಳೆಯ ಸ್ಥಿತಿ ಚಿಂತಾಜನಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.