
ವಿದ್ಯುತ್ ತಂತಿ ತಗುಲಿ ಕಾಡಾನೆ ಮೃತ್ಯು; ಪ್ರಕರಣ ದಾಖಲು
Team Udayavani, Jan 13, 2023, 6:41 PM IST

ಗುಂಡ್ಲುಪೇಟೆ(ಚಾಮರಾಜನಗರ): ವಿದ್ಯುತ್ ತಂತಿ ತಗುಲಿ ಸುಮಾರು 25 ರಿಂದ 30 ವರ್ಷದ ಹೆಣ್ಣು ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಹೆಡಿಯಾಲ ಉಪ ವಿಭಾಗದ ಚಿಕ್ಕಬರಗಿ ಶಾಖೆಯ ಹೆಬ್ಬಳ್ಳ ಗಸ್ತಿನ ದೊಡ್ಡಬರಗಿ ಗ್ರಾಮದ ರೈತನ ಜಮೀನೊಂದರಲ್ಲಿ ನಡೆದಿದೆ.
ದೊಡ್ಡಬರಗಿ ಗ್ರಾಮದ ಗೋಪಾಲ ಎಂಬುವವರ ಜಮೀನಿನಲ್ಲಿ ಅಳವಡಿಕೆ ಮಾಡಿದ್ದ ವಿದ್ಯುತ್ ತಂತಿ ಸ್ಪರ್ಶದಿಂದ ಆನೆ ಸಾವನ್ನಪ್ಪಿದೆ. ಮಾಹಿತಿ ಅರಿತ ಅರಣ್ಯಾಧಿಕಾರಿಗಳು ಹಾಗೂ ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ವಿಷಯವನ್ನು ಇಲಾಖಾ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಸ್ಥಳಕ್ಕೆ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್ ಕುಮಾರ್, ಎಸಿಎಫ್ ಕೆ.ಪರಮೇಶ್ ಭೇಟಿ ಪರಿಶೀಲನೆ ನಡೆಸಿದ ನಂತರ ಪಶು ವೈದ್ಯಾಧಿಕಾರಿ ವಾಸಿಂ ಮಿರ್ಜಾ ಮೃತ ಹೆಣ್ಣು ಕಾಡಾನೆಯ ಶವಪರೀಕ್ಷೆಯನ್ನು ನಡೆಸಿದರು. ತದ ನಂತರ ದೇಹದ ತುಂಡುಗಳನ್ನು ಮೈಸೂರಿನ ವಿಧಿ ವಿಜ್ಞಾನ ಪ್ರಯೋಗಾಲಯ ಸ್ಯಾಂಪಲ್ ಕಳುಹಿಸಲಾಯಿತು. ನಂತರ ಗುಂಡಿ ತೆಗೆದು ಆನೆ ಮೃತ ದೇಹವನ್ನು ಹೊಳಲಾಯಿತು. ಈ ಸಂಬಂಧ ಅರಣ್ಯ ಕಾಯೆಯಡಿ ಜಮೀನು ಮಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ
ಹೊಸ ಸೇರ್ಪಡೆ

ChatGPT: ಪ್ರಧಾನಿ ಮೋದಿ ಭೇಟಿಯಾದ ಚಾಟ್ ಜಿಪಿಟಿ ಸೃಷ್ಟಿಕರ್ತ ಸ್ಯಾಮ್ ಆಲ್ಟ್ಮನ್

Singer arrested : ಅಪ್ರಾಪ್ತೆ ಮೇಲೆ ಅತ್ಯಾಚಾರಗೈದು,ಆಕ್ಷೇಪಾರ್ಹ ಫೋಟೋ ಪೋಸ್ಟ್; ಗಾಯಕ ಬಂಧನ

HUNSUR: ಜಿಂಕೆಯನ್ನು ಬೇಟೆಯಾಡಿ ಮಾಂಸ ತಿನ್ನುತ್ತಿರುವ ಚಿರತೆ; ವಿಡಿಯೋ

ಟಿಕೆಟ್ ಖಚಿತ, ಕಾಮಿಡಿ ಉಚಿತ, ಖುಷಿ ನಿಶ್ಚಿತ!: ‘ದರ್ಬಾರ್’ ಸಿನಿಮಾ ಇಂದು ಬಿಡುಗಡೆ

ಹೊಸಬರ ಗದಾಯುದ್ಧ ಬಿಡುಗಡೆ