ಭೂಮಿ ಫ‌ಲವತ್ತತೆಗೆ ಸಾವಯವ ಕೃಷಿ ಅನುಸರಿಸಿ

Team Udayavani, Oct 27, 2019, 3:00 AM IST

ಚಾಮರಾಜನಗರ: ಸಾವಯವ ಕೃಷಿ ಅನುಸರಿಸುವುದರಿಂದ ಆರೋಗ್ಯಕರ ಹಾಗೂ ಉತ್ತಮವಾದ ಆಹಾರವನ್ನು ಬೆಳೆಯಬಹುದು ಎಂದು ನವ ಭಾರತ್‌ ಕಂಪೆನಿಯ ಮ್ಯಾನೇಜರ್‌ ಎಂ.ಇ. ಮಂಜುನಾಥ್‌ ತಿಳಿಸಿದರು.

ತಾಲೂಕಿನ ಕಿಲಗೆರೆ ಗ್ರಾಮದಲ್ಲಿ ಪ್ರಗತಿಪರ ರೈತ ಷಡಕ್ಷರಪ್ಪ ಅವರ ತೋಟದಲ್ಲಿ ನವಭರತ್‌ ಕಂಪನಿಯಿಂದ ನಡೆದ ಅರಿಶಿನ, ಕೋಸು ಹಾಗೂ ಟೊಮೆಟೋ, ಬಾಳೆ ಬೆಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ರಾಸಾಯಿನಿಕ ಗೊಬ್ಬರ ಹಾಗೂ ಕ್ರಿಮಿ ನಾಶಕಗಳನ್ನು ಹೆಚ್ಚಾಗಿ ಬಳಕೆ ಮಾಡಿ, ವಿಷಯುಕ್ತ ಆಹಾರ ಉತ್ಪಾದನೆ ಮಾಡುವ ಜೊತೆಗೆ ಭೂಮಿಯ ಫ‌ಲವತ್ತತೆಯನ್ನು ಕಳೆದು ಕೊಂಡಿದ್ದೇವೆ. ಹೀಗಾಗಿ ಪರಿಸರಕ್ಕೆ ಪೂರಕವಾದ ಸಾವಯವ ಗೊಬ್ಬರವನ್ನು ಬಳಸಿ, ಆರೋಗ್ಯಕರ ಬೆಳೆ ಬೆಳೆಯಬೇಕೆಂದು ಸಲಹೆ ನೀಡಿದರು.

ರೈತರು ಸಾವಯವ ಕೃಷಿ ಮಾಡಿ: ಕೃಷಿ ಅಧಿಕಾರಿ ಶ್ರೀಧರ್‌ ಮಾತನಾಡಿ, ಈ ಹಿಂದೆ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಸಲುವಾಗಿ ವಿಜ್ಞಾನಿಗಳು ಹಾಗೂ ಕೃಷಿ ತಜ್ಞರು ರಾಸಾಯನಿಕಯುಕ್ತ ಕೃಷಿ ಪದ್ಧತಿಯನ್ನು ಪರಿಚಯ ಮಾಡಿದರು. ಇದು ಕ್ರಮೇಣ ವಿಷಯುಕ್ತವಾಗುತ್ತ ಮನುಷ್ಯ ಹಾಗೂ ಸಾಕು ಪ್ರಾಣಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರ ಕೊಡುಗೆಯಾಗಿ ಇಲ್ಲದ ಖಾಯಿಲೆಗಳನ್ನು ಎಲ್ಲಾ ಜನರಲ್ಲೂ ಕಾಣಿಸಿಕೊಳ್ಳುತ್ತಿದೆ. ಆದ್ದರಿಂದ ರೈತರು ಸಾವಯವ ಕೃಷಿ ಪದ್ದತಿ ಅನುಸರಿಸಬೇಕೆಂದು ತಿಳಿಸಿದರು.

ಸಾವಯವ ಬೇಸಾಯದಿಂದ ನೆಮ್ಮದಿ: ಪ್ರಗತಿ ಪರ ರೈತ ಷಡಕ್ಷರಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ಸಾವಯವ ಕೃಷಿ ಬೇಸಾಯವನ್ನು ಅಳವಡಿಸಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದೇನೆ. ನಮ್ಮ ಸುತ್ತ ಮುತ್ತಲಿನ ರೈತರು ಸಹ ಇದೇ ಪದ್ಧತಿಯನ್ನು ಅನುಸರಿಸುವಂತೆ ತಿಳಿಸಿದರು. ಕ್ಷೇತ್ರೋತ್ಸವದಲ್ಲಿ ಕಂಪನಿಯ ಅಧಿಕಾರಿಗಳಾದ ದರ್ಶನ್‌, ಹರೀಶ್‌, ಮಹೇಶ್‌ ಎಚ್‌.ಎಸ್‌, ನಾಗರಾಜ್‌, ಬಿ. ಲೋಕೇಶ್‌, ಹಾಗೂ ಕಿಲಗೆರೆ ಗ್ರಾಮಸ್ಥರು ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಯಳಂದೂರು: ಕೋವಿಡ್ 19 ಹಿನ್ನೆಲೆಯಲ್ಲಿ ಇಡೀ ರಾಷ್ಟ್ರವೇ ಲಾಕ್‌ ಔಟ್‌ ಆಗಿದೆ. ಹೀಗಾಗಿ ಕೆಲ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಅನ್ಯರಿಗೆ ಪ್ರವೇಶವನ್ನು ನಿರ್ಬಂಧಿಸಿ,...

  • ಕೊಳ್ಳೇಗಾಲ: ಕೋವಿಡ್ 19 ವೈರಸ್‌ ಬಗ್ಗೆ ಅರಿವು ಮೂಡಿಸಲು ತಾಲೂಕು ಆಡಳಿತದ ವತಿಯಿಂದ ವಾಕ್‌ಥಾನ್‌ಗೆ ಮಂಗಳವಾರ ತಹಶೀಲ್ದಾರ್‌ ಕೆ.ಕುನಾಲ್‌ ಚಾಲನೆ ನೀಡಿದರು. ಈ...

  • ಹನೂರು: ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ 72 ಸಾವಿರ ಲಾಡು ದಾಸ್ತಾನು ಉಳಿದಿದೆ. ಆ ಲಾಡುಗಳನ್ನು ಭಕ್ತಾದಿಗಳಿಗೆ ಉಚಿತವಾಗಿ ವಿತರಿಸಲು ಮತ್ತು ಪ್ರಾಧಿಕಾರದ...

  • ಚಾಮರಾಜನಗರ: ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಬಹುದಿನಗಳ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ 2019-20ನೇ ಸಾಲಿನ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ...

  • ಚಾಮರಾಜನಗರ: ಕೋವಿಡ್ 19 ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಈಗಾಗಲೇ ಜಾರಿಗೊಳಿಸಿದೆ. ಏಕಕಾಲದಲ್ಲಿ ಸಾರ್ವಜನಿಕರು ಒಟ್ಟಿಗೆ ಸೇರುವ ಸಂದರ್ಭ ತಪ್ಪಿಸಲು ಹಲವು...

ಹೊಸ ಸೇರ್ಪಡೆ