Udayavni Special

2 ತಾಲೂಕು, 2 ಪಂಚಾಯ್ತಿಗೆ ಹಂಚಿ ಹೋಗಿದೆ ಗಂಗವಾಡಿ

ಗ್ರಾಮದ ಒಂದು ಬಡಾವಣೆಗೆ ಮತಗಟ್ಟೆ,,ಮತ್ತೂಂದುಕಡೆ ಮತಗಟ್ಟೆಯೇ ಇಲ್ಲ ಸ್ವಗ್ರಾಮದಲ್ಲಿ ಮತಗಟ್ಟೆ ಸ್ಥಾಪನೆಗೆ ಆಗ್ರಹ

Team Udayavani, Dec 18, 2020, 7:39 PM IST

2 ತಾಲೂಕು, 2 ಪಂಚಾಯ್ತಿಗೆ ಹಂಚಿ ಹೋಗಿದೆ ಗಂಗವಾಡಿ

ಯಳಂದೂರು: ಗ್ರಾಮವೊಂದು ಎರಡು ತಾಲೂಕಿಗೆ ಹಂಚಿಕೆ, ಒಂದೇ ಗ್ರಾಮಕ್ಕೆ ಎರಡು ಗ್ರಾಮ ಪಂಚಾಯಿತಿಗಳು, ಒಂದು ಗ್ರಾಪಂ ವ್ಯಾಪ್ತಿಗೆ ಮತಗಟ್ಟೆ ಇದ್ದರೆ ಇನ್ನೊಂದಕ್ಕೆ ಮತಗಟ್ಟೆಯೇ ಇಲ್ಲ!ಚಾಮರಾಜನಗರ ಹಾಗೂ ಯಳಂದೂರು ಎರಡೂ ತಾಲೂಕುಗಳಿಗೂ ಹಂಚಿ ಹೋಗಿರುವ ಗಂಗವಾಡಿ ಗ್ರಾಮದಲ್ಲಿ ಈ ಸನ್ನಿವೇಶ ಕಂಡ ಬರುತ್ತಿದೆ.

ಗಂಗರ ಕಾಲದ ವೀರಭದ್ರೇಶ್ವರ ದೇಗುಲ ಹೊಂದಿರುವ ಐತಿಹಾಸಿಕ ಗ್ರಾಮ ಇದಾಗಿದೆ. ಆದರೆ,ಆಡಳಿತಾತ್ಮಕವಾಗಿಈ ಗ್ರಾಮವನ್ನುಇಬ್ಭಾಗಮಾಡಲಾಗಿದೆ. ಪರಿಶಿಷ್ಟ ಜಾತಿಯವರು ವಾಸ ಮಾಡುವ ಇಡೀ ಬಡಾವಣೆ ಯಳಂದೂರು ತಾಲೂಕಿಗೆ ಸೇರಿದೆ. ಇನ್ನುಳಿದ ಭಾಗವು ಚಾಮರಾಜನಗರಕ್ಕೆ ಸೇರಿದೆ.

ಮತಗಟ್ಟೆ ತಾರತಮ್ಯ: ಯಳಂದೂರು ವ್ಯಾಪ್ತಿಯಗಂಗವಾಡಿ ಗ್ರಾಮವು ಯರಗಂಬಳ್ಳಿ ಗ್ರಾಪಂ ವ್ಯಾಪ್ತಿಗೆ ಒಳಪಡುತ್ತದೆ. ಇಲ್ಲಿ ಒಟ್ಟು300ಕ್ಕೂ ಹೆಚ್ಚು ಮತದಾರರು ಇದ್ದಾರೆ. ಇಲ್ಲಿಗೆ ಇಬ್ಬರು ಗ್ರಾಪಂ ಸದಸ್ಯರ ಆಯ್ಕೆಗೆ ಅವಕಾಶವಿದೆ. ಆದರೆ, ಇಲ್ಲಿಗೆಯಾವ ಚುನಾವಣೆ ಬಂದರೂ ಮತಗಟ್ಟೆಯೇ ಇರುವುದಿಲ್ಲ. ಇವರು ಇಲ್ಲಿಂದ ಒಂದು ಕಿ.ಮೀ. ದೂರದ ದಾಸನಹುಂಡಿ ಗ್ರಾಮಕ್ಕೆ ನಡೆದು ಕೊಂಡೇ ಹೋಗಿ ಮತಚಲಾಯಿಸುವ ಅನಿವಾರ್ಯತೆ ಇದೆ.

ಮತ್ತೂಂದು ಭಾಗವು ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಪಂ ವ್ಯಾಪ್ತಿಗೆಒಳಪಡುತ್ತದೆ. ಇಲ್ಲಿ ಈ ಬಾರಿ ಒಟ್ಟು 4 ಗ್ರಾಪಂಅಭ್ಯರ್ಥಿಗಳು ಆಯ್ಕೆಗೆ ಅವಕಾಶವಿದೆ. ಇಲ್ಲಿನ ಶಾಲೆಯಲ್ಲೇ ಮತಗಟ್ಟೆ ಸ್ಥಾಪನೆ ಮಾಡುವುದರಿಂದ ಇಲ್ಲಿನ ಮತದಾರರು ತಮ್ಮ ಸ್ವಗ್ರಾಮದಲ್ಲೇ ಮತ ಚಲಾಯಿಸಲು ಅವಕಾಶವಿದೆ. ಈ ತಾರತಮ್ಯದ ವಿರುದ್ಧ ಹಲವು ಬಾರಿ ಜಿಲ್ಲಾಧಿಕಾರಿ, ತಹಶೀಲ್ದಾರ್‌ ಗಳಿಗೆ ಮನವಿ ಸಲ್ಲಿಸಿದ್ದರೂ ಕ್ರಮ ವಹಿಸಿಲ್ಲ ಎಂದುಸ್ಥಳೀಯರಾದ ಎಸ್‌. ನಾರಾಯಣ, ಎನ್‌.ಮಹದೇವಸ್ವಾಮಿ, ಎನ್‌. ರೇವಣ್ಣ ಮತ್ತಿತರರು ದೂರಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕೇವಲ 130 ಮತದಾರರಿರುವ ಕೆ. ದೇವರಹಳ್ಳಿ ಗ್ರಾಮಕ್ಕೆ ಮತಗಟ್ಟೆ ನೀಡಲಾಗಿದೆ. ಆದರೆ, ನಮ್ಮಲ್ಲಿ 300 ಮಂದಿ ಮತದಾರರು ಇದ್ದರೂ ನಮಗೆ ಮತಗಟ್ಟೆ ನೀಡದೆ ತಾರತಮ್ಯ ಮಾಡಲಾಗಿದೆ. ಕಳೆದ ಹಲವು ಚುನಾವಣೆಯಲ್ಲಿ ನಮ್ಮ ಬೇಡಿಕೆಗೆ ಪೂರಕ ಸ್ಪಂದನೆ ಸಿಗುತ್ತಿಲ್ಲ. ದೂರದ ದಾಸನಹುಂಡಿ ಗ್ರಾಮಕ್ಕೆ ಮತ ಚಲಾಯಿಸಲು ಹೋಗಬೇಕು. ಇಲ್ಲಿ ಸಾರಿಗೆ ವ್ಯವಸ್ಥೆ ಇಲ್ಲ. ವೃದ್ಧರು, ಗರ್ಭಿಣಿಯರು, ಬಾಣಂತಿಯರು ನಡೆದುಕೊಂಡು ಸಾಗಲು ಕಷ್ಟ. ನಡೆಯುವದಾರಿಯಲ್ಲಿ ನಮ್ಮನ್ನು ಚುನಾವಣೆಗೆ ಸ್ಪರ್ಧಿಸಿರುವ ವ್ಯಕ್ತಿಗಳು ಹಿಂಬಾಲಿಸಿ ಮತಯಾಚನೆ ಮಾಡುವ ಹಿಂಸೆಯನ್ನೂ ಸಹಿಸಿಕೊಳ್ಳುವ ಅನಿವಾರ್ಯತೆ ಇದೆ. ಹಾಗಾಗಿ ಈ ಭಾಗದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಮತಗಟ್ಟೆ ಸ್ಥಾಪಿಸಬೇಕು ಎಂದು ಗ್ರಾಮದ ಮುಖಂಡರಾದ ವೀರಣ್ಣ, ನಂಜುಂಡಯ್ಯ, ನಾಗಮಾದಯ್ಯ ಸೇರಿದಂತೆ ಮತ್ತಿತರರು ಆಗ್ರಹವಾಗಿದೆ.

ಹಬ್ಬದಲ್ಲಿ ಎಲ್ಲರೂ ಒಗ್ಗಟ್ಟು,  ಮತದಾನದಲ್ಲಿ ಭ್ರಮನಿರಸನ :  ಗಂಗವಾಡಿ ಗ್ರಾಮದಲ್ಲಿ ಪ್ರತಿ ವರ್ಷವೂ ವೀರಭದ್ರೇಶ್ವರ ದೇವರ ರಥೋತ್ಸವ, ಕೊಂಡೋತ್ಸವ ಸಂಭ್ರಮದಿಂದ ಜರುಗುತ್ತದೆ. ಆ ವೇಳೆ ಇಡೀ ಗ್ರಾಮದ ಎಲ್ಲಾ ಜನಾಂಗದವರೂ ಒಟ್ಟಾಗಿ ಸೇರಿ ಈ ಸಂಭ್ರಮದಲ್ಲಿ ಭಾಗವಹಿಸುತ್ತಾರೆ. ಆದರೆ, ಮತದಾನಬಂದರೆ ನಮ್ಮನ್ನು ಒಡೆಯಲಾಗುತ್ತದೆ. ಇದಕ್ಕೆ ಗ್ರಾಮ ಎರಡು ತಾಲೂಕುಗಳಿಗೂ ಹಂಚಿ ಹೋಗಿರುವುದೇಕಾರಣವಾಗಿದೆ.

ಗಂಗವಾಡಿ ಗ್ರಾಮದ ಚುನಾವಣಾಸಮಸ್ಯೆ ನಿವಾರಣೆ ಬಗ್ಗೆ ಗ್ರಾಮಸ್ಥರು ಲಿಖೀತ ಮನವಿ ಕೊಟ್ಟಲ್ಲಿ, ಸಂಬಂಧಪಟ್ಟ ಜಿಲ್ಲಾಧಿಕಾರಿ ಹಾಗೂ ಚುನಾವಣಾ ಆಯೋಗದ ಗಮನಕ್ಕೆ ಈ ವಿಷಯ ತಂದು ಸಮಸ್ಯೆ ನಿವಾರಣೆಗೆಕ್ರ ಮ ವಹಿಸಲಾಗುವುದು. ಬಸವರಾಜ ಚಿಗರಿ, ಪ್ರಭಾರ ತಹಶೀಲ್ದಾರ್‌

 

-ಫೈರೋಜ್‌ಖಾನ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸೇವೆಯ ಜೊತೆ ಪ್ರಾಮಾಣಿಕತೆ ಮೆರೆದ 108 ಆಂಬ್ಯುಲೆನ್ಸ್ ಸಿಬ್ಬಂದಿ

ಸೇವೆಯ ಜೊತೆ ಪ್ರಾಮಾಣಿಕತೆ ಮೆರೆದ 108 ಆಂಬ್ಯುಲೆನ್ಸ್ ಸಿಬ್ಬಂದಿ

FDA ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ : ಪೊಲೀಸ್ ಕಾನ್ಸ್ ಸ್ಟೇಬಲ್ ಸಿಸಿಬಿ ವಶಕ್ಕೆ

FDA ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ : ಪೊಲೀಸ್ ಕಾನ್ಸ್ ಸ್ಟೇಬಲ್ ಸಿಸಿಬಿ ವಶಕ್ಕೆ

ಅಧಿವೇಶನ ಹಿನ್ನೆಲೆ ವಿಧಾನಸಭೆ ಸುತ್ತಮುತ್ತಲ 2 ಕೀ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

ಅಧಿವೇಶನ ಹಿನ್ನೆಲೆ ವಿಧಾನಸಭೆ ಸುತ್ತಮುತ್ತಲ 2 ಕೀ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

5ಎ ಕಾಲುವೆ ಅನುಷ್ಠಾನ ಜಾರಿಗಾಗಿ ಆಣೆ ಪ್ರಮಾಣ ಪ್ರಹಸನ

5A ಕಾಲುವೆ ಅನುಷ್ಠಾನ ಜಾರಿಗಾಗಿ ಮಾಜಿ ಶಾಸಕರಿಂದ ಆಣೆ ಪ್ರಮಾಣ ಪ್ರಹಸನ

ಕೇಂದ್ರದಿಂದ 18 ರಾಜ್ಯಗಳಿಗೆ 12,351 ಕೋಟಿ ಅನುದಾನ ಬಿಡುಗಡೆ

ಕೇಂದ್ರದಿಂದ 18 ರಾಜ್ಯಗಳಿಗೆ 12,351 ಕೋಟಿ ಅನುದಾನ ಬಿಡುಗಡೆ : ಕರ್ನಾಟಕಕ್ಕೆ 2,412 ಕೋಟಿ

ಹಿಂಸಾಚಾರದ ಎಫೆಕ್ಟ್: ಹೋರಾಟ ಇಬ್ಭಾಗ-ಪ್ರತಿಭಟನೆಯಿಂದ ಹಿಂದೆ ಸರಿದ 2 ಸಂಘಟನೆ

ಹಿಂಸಾಚಾರದ ಎಫೆಕ್ಟ್: ಹೋರಾಟ ಇಬ್ಭಾಗ-ಪ್ರತಿಭಟನೆಯಿಂದ ಹಿಂದೆ ಸರಿದ 2 ಸಂಘಟನೆ

ರೈತರ ಹೋರಾಟಕ್ಕೆ ಕಾಂಗ್ರೇಸ್ ಕುಮ್ಮಕ್ಕು ನೀಡುತ್ತಿದೆ : ಶೆಟ್ಟರ್ ಆರೋಪ

ರೈತರ ಹೋರಾಟಕ್ಕೆ ಕಾಂಗ್ರೇಸ್ ಕುಮ್ಮಕ್ಕು ನೀಡುತ್ತಿದೆ : ಶೆಟ್ಟರ್ ಆರೋಪಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Farmers protest against agricultural act

ಕೃಷಿ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆ

Freedom Movement which gave a new message to the world

ವಿಶ್ವಕ್ಕೆ ಹೊಸ ಸಂದೇಶ ನೀಡಿದ ಸ್ವಾತಂತ್ರ್ಯ ಚಳವಳಿ

ಮದುವೆ ಆಹ್ವಾನ ಪತ್ರಿಕೆ ನೀಡಲು ತಂದಿದ್ದ ಕಾರನ್ನೇ ಕದ್ದೊಯ್ದ ಕಳ್ಳರು

ಮದುವೆ ಆಹ್ವಾನ ಪತ್ರಿಕೆ ನೀಡಲು ತಂದಿದ್ದ ಕಾರನ್ನೇ ಕದ್ದೊಯ್ದ ಕಳ್ಳರು

JDS ಜಿಲ್ಲಾಧ್ಯಕ್ಷರಿಂದ ಗ್ರಾ.ಪಂ. ನೂತನ ಸದಸ್ಯರಿಗೆ ಹಣ ಹಂಚಿಕೆ: ಫೋಟೋ ವೈರಲ್

JDS ಜಿಲ್ಲಾಧ್ಯಕ್ಷರಿಂದ ಗ್ರಾ.ಪಂ. ನೂತನ ಸದಸ್ಯರಿಗೆ ಹಣ ಹಂಚಿಕೆ: ಫೋಟೋ ವೈರಲ್

ರಾಷ್ಟ್ರಪತಿ ಪದಕಕ್ಕೆ ಚಾಮರಾಜನಗರ ಇನ್‌ಸ್ಪೆಕ್ಟರ್ ಬಿ.ಪುಟ್ಟಸ್ವಾಮಿ ಆಯ್ಕೆ

ರಾಷ್ಟ್ರಪತಿ ಪದಕಕ್ಕೆ ಚಾಮರಾಜನಗರ ಇನ್ಸ್‌ಪೆಕ್ಟರ್ ಬಿ.ಪುಟ್ಟಸ್ವಾಮಿ ಆಯ್ಕೆ

MUST WATCH

udayavani youtube

ಕೃಷಿಕ ಪ್ರತಿಭಟನೆ – ಗೊಂದಲ, ಘರ್ಷಣೆ , ವಿಶ್ಲೇಷಣೆ

udayavani youtube

ಮಂಗಳೂರು: ಜ. 30ರಿಂದ ಕಂಬಳ ನಡೆಸಲು ಅನುಮತಿ

udayavani youtube

ಕೃಷಿ ಕಾಯಿದೆ; ಕೃಷಿಕನ ಅಭಿಪ್ರಾಯ ಕ್ಕೆ ಕಿವಿಯಾಗೋಣ ಬನ್ನಿ

udayavani youtube

Udupiಯ ಜನತೆಗೆ ಕಲೆಯಿಂದ ಜನಜಾಗೃತಿ ಮೂಡಿಸಿದ ಕಲಾವಿದ KAMIL RAZA,

udayavani youtube

ದೇರಳಕಟ್ಟೆ ಅಯ್ಯಪ್ಪ ದೇವಸ್ಥಾನದಲ್ಲಿ ಕಳ್ಳತನ ನಡೆಸಿದ್ದ ಇಬ್ಬರ ಬಂಧನ!

ಹೊಸ ಸೇರ್ಪಡೆ

JDS protests in support of farmers

ರೈತರ ಬೆಂಬಲಿಸಿ ಜೆಡಿಎಸ್‌ ಪ್ರತಿಭಟನೆ

Deliver constitutional values ​​to the next generation

ಸಂವಿಧಾನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸಿ: ನ್ಯಾ| ನರೇಂದರ್‌

ಸೇವೆಯ ಜೊತೆ ಪ್ರಾಮಾಣಿಕತೆ ಮೆರೆದ 108 ಆಂಬ್ಯುಲೆನ್ಸ್ ಸಿಬ್ಬಂದಿ

ಸೇವೆಯ ಜೊತೆ ಪ್ರಾಮಾಣಿಕತೆ ಮೆರೆದ 108 ಆಂಬ್ಯುಲೆನ್ಸ್ ಸಿಬ್ಬಂದಿ

Protest in support of Delhi farmers’ protest

ದೆಹಲಿ ರೈತರ ಹೋರಾಟ ಬೆಂಬಲಿಸಿ ಪ್ರತಿಭಟನೆ

Republic  day Celebration

ಗಣರಾಜ್ಯೋತ್ಸವ ಆಚರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.