
Gundlupete ; ಹುಲಿಯ ಅಟ್ಟಹಾಸಕ್ಕೆ ಮೂರು ಹಸು ಬಲಿ
ಹುಲಿ ಸೆರೆಗೆ ಎರಡು ಬೋನ್ ಇರಿಸಿರುವ ಅರಣ್ಯಾಧಿಕಾರಿಗಳು
Team Udayavani, Sep 22, 2023, 3:35 PM IST

Representative image only
ಗುಂಡ್ಲುಪೇಟೆ(ಚಾಮರಾಜನಗರ): ಹುಲಿ ದಾಳಿ ನಡೆಸಿ ಮೂರು ಹಸುಗಳು ಬಲಿಯಾಗಿರುವ ಘಟನೆ ತಾಲೂಕಿನ ಮಲ್ಲಮ್ಮನಹುಂಡಿ ಗ್ರಾಮದ ಹೊರ ವಲಯದ ಜಮೀನೊಂದರಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಮಲ್ಲಮ್ಮನಹುಂಡಿ ಗ್ರಾಮದ ಗುರುಸಿದ್ದಪ್ಪ ಎಂಬುವವರಿಗೆ ಸೇರಿದ ಮೂರು ಹಸುಗಳನ್ನು ಜಮೀನಿನಲ್ಲಿ ಮೆಯ್ಯಲು ಬಿಟ್ಟಿದ್ದ ವೇಳೆ ಹುಲಿ ಏಕಾಏಕಿ ದಾಳಿ ನಡೆಸಿ ಮೂರು ಹಸುವಿನ ಕುತ್ತಿಗೆ ಭಾಗಕ್ಕೆ ಬಲವಾಗಿ ಕಚ್ಚಿ ಸಾಯಿಸಿದೆ.
ಗುರುಸಿದ್ದಪ್ಪ ಅವರಿಗೆ ಸೇರಿದ ಮೂರು ಹಸುಗಳು ಸಾವನ್ನಪ್ಪಿರುವ ಹಿನ್ನಲೆ ರೈತನಿಗೆ ಲಕ್ಷ ರೂ.ಗೂ ಅಧಿಕ ನಷ್ಟ ಉಂಟಾಗಿದ್ದು, ಸಾಲದ ಸುಳಿಗೆ ಸಿಲುಕುವಂತಾಗಿದೆ. ಆದ್ದರಿಂದ ಸಂಬಂಧ ಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ರೈತರಾದ ಮಹದೇವಸ್ವಾಮಿ ಒತ್ತಾಯಿಸಿದ್ದಾರೆ.
ರೈತರ ಆಕ್ರೋಶ
ಮೂರು ಹಸುಗಳ ಮೇಲೆ ಹುಲಿ ಏಕಾಏಕಿ ದಾಳಿ ನಡೆಸಿ ಕೊಂದು ಹಾಕಿರುವ ಹಿನ್ನಲೆ ಸುತ್ತಮುತ್ತಲ ರೈತರ ಭಯಭೀತರಾಗಿದ್ದು, ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿ, ಕೂಡಲೇ ಹುಲಿ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.
ಅರಣ್ಯಾಧಿಕಾರಿಗಳ ಭೇಟಿ
ಹುಲಿ ದಾಳಿಗೆ ಮೂರು ಹಸು ಸಾವನ್ನಪ್ಪಿರುವ ಮಾಹಿತಿ ಅರಿತ ಗುಂಡ್ಲುಪೇಟೆ ಬಫರ್ ಜೋನ್ ಅರಣ್ಯಾಧಿಕಾರಿಗಳು ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವಿಶೇಷ ರಕ್ಷಣಾ ಪಡೆ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹುಲಿ ಸೆರೆಗೆ ಎರಡು ಬೋನ್ ಇರಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chamarajanagar; ವಯಸ್ಕ ಹಾಗೂ ಮರಿ ಹುಲಿ ಕೊಳೆತ ಶವ ಪತ್ತೆ: ಹಲವು ಅನುಮಾನಗಳು..

Chamarajanagar: ಜನವರಿಯಲ್ಲಿ 67 ಹೊಸ ಕಂದಾಯ ಗ್ರಾಮ ಅಸ್ತಿತ್ವಕ್ಕೆ

Bandipur; ಕೊಳೆತ ಸ್ಥಿತಿಯಲ್ಲಿ 45 ವರ್ಷದ ಗಂಡಾನೆ ಕಳೇಬರ ಪತ್ತೆ

Hanur: ಸಿ.ಪಿ. ಯೋಗೀಶ್ವರ್ ಬಾವ ಮಹದೇವಯ್ಯ ಮೃತದೇಹ ಪತ್ತೆ

Dialysis machine: ಚಾ.ನಗರ ಜಿಲ್ಲೆಗೆ ಬೇಕು ಮತ್ತಷ್ಟು ಡಯಾಲಿಸಿಸ್ ಯಂತ್ರಗಳು