
Hanur ಹೆದ್ದಾರಿಯಲ್ಲಿ ಕಾಡಾನೆ ದಾಳಿ: ಕೂದಲೆಳೆ ಅಂತರದಲ್ಲಿ ಬೈಕ್ ಸವಾರರು ಪಾರು
ಸೊಂಡಿಲಿನಿಂದ ಬೈಕನ್ನು ತಳ್ಳಿ-ತಳ್ಳಿ ಜಖಂಗೊಳಿಸಿದ ಆನೆ
Team Udayavani, Jun 9, 2023, 4:01 PM IST

ಹನೂರು: ಕಾಡಾನೆ ದಾಳಿ ನಡೆಸಿದ್ದು ಬೈಕ್ ಸವಾರರು ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ಕನಾಟಕ –ತಮಿಳುನಾಡು ಗಡಿಭಾಗದ ಗರಿಕೆಕಂಡಿ ಚೆಕ್‌ಪೋಸ್ಟ್ ಬಳಿ ಶುಕ್ರವಾರ ಬೆಳಗ್ಗೆ 9 ಗಂಟೆ ಸಮಯದಲ್ಲಿ ಜರುಗಿದೆ.
ಹೆದ್ದಾರಿಯ ಗರಿಕೆಕಂಡಿ ಚೆಕ್‌ಪೋಸ್ಟ್ ಬಳಿ ಇಬ್ಬರು ಸವಾರರು ಆಗಮಿಸುತ್ತಿದ್ದಂತೆ ರಸ್ತೆಬದಿಯಲಿದ್ದ ಆನೆಯು ದಾಳಿಗೆ ಮುಂದಾಗಿದೆ. ಕೂಡಲೇ ಎಚ್ಚೆತ್ತ ಸವಾರರು ಬೈಕನ್ನು ಬಿಟ್ಟು ಓಡಿ ಹೋಗಿದ್ದಾರೆ. ಇದರಿಂದ ಮತ್ತಷ್ಟು ಕುಪಿತವಾದ ಆನೆಯು ತನ್ನ ಸೊಂಡಿಲಿನಿಂದ ಬೈಕನ್ನು ತಳ್ಳಿ-ತಳ್ಳಿ ಜಖಂಗೊಳಿಸಿದೆ. ಅದೃಷ್ಟವಶಾತ್ ಸವಾರರಿಬ್ಬರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ.
ಈ ವೇಳೆ ಸಮೀಪದಲ್ಲಿದ್ದ ಕೆಲ ವಾಹನ ಸವಾರರು, ಸ್ಥಳೀಯ ಅರಣ್ಯ ಇಲಾಖೆ ಸಿಬಂದಿ ಜೋರಾಗಿ ಕೂಗಾಡಿ ಆನೆಯನ್ನು ಅರಣ್ಯದೊಳಕ್ಕೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಆನೆಯು ಸೊಂಡಿಲಿನಿಂದ ಬೈಕನ್ನು ಜಖಂಗೊಳಿಸುತ್ತಿರುವುದನ್ನು ಕೆಲ ಪ್ರತ್ಯಕ್ಷದರ್ಶಿಗಳು ಮೊಬೈಲ್‌ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದು ವೈರಲ್ ಆಗುತ್ತಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CM Siddaramaiah: ವ್ಯವಸಾಯಕ್ಕೆಂದು ಸಾಲ ಮಾಡಿ ಅದ್ದೂರಿ ಮದುವೆ ಮಾಡುವುದು ನಿಲ್ಲಿಸಿ: ಸಿಎಂ

Cauvery Issue: ಕಾವೇರಿ ನೀರಿನ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ: ಸಿಎಂ ಸಿದ್ದರಾಮಯ್ಯ

Hanur ಪಟ್ಟಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅದ್ದೂರಿ ಸ್ವಾಗತ

Yalandur: ಕುಡಿವ ನೀರಿನಲ್ಲಿ ಹುಳುಗಳು!

Bengaluru Bandh: ಗಡಿಯಲ್ಲಿ ಕರ್ನಾಟಕ ಪ್ರವೇಶಿಸುವ ತಮಿಳುನಾಡು ನೋಂದಣಿ ವಾಹನ ನಿರ್ಬಂಧ
MUST WATCH
ಹೊಸ ಸೇರ್ಪಡೆ

Ujjain ; ಅತ್ಯಾಚಾರಕ್ಕೊಳಗಾಗಿ ಬೀದಿಯಲ್ಲಿ ಅರೆನಗ್ನ ಸ್ಥಿತಿಯಲ್ಲಿ ನಡೆದ 12ರ ಬಾಲೆ !!

BYJU’s Lay Off: ಆತಂಕದಲ್ಲಿ ಬೈಜೂಸ್ ಉದ್ಯೋಗಿಗಳು…3,500 ನೌಕರರ ಕಡಿತಕ್ಕೆ ಸಿದ್ಧತೆ

India-Canada ಸಂಬಂಧ ಹದಗೆಡಿಸಲು ನಿಜ್ಜರ್ ಪ್ರಕರಣದಲ್ಲಿ ಪಾಕಿಸ್ಥಾನದ ISI ಸಂಚು

Thirthahalli ಮೀನು ಹಿಡಿಯಲು ಹೋದ ಯುವಕ ತುಂಗಾ ನದಿಗೆ ಬಿದ್ದು ಸಾವು !

Manipur ; ಇಡೀ ರಾಜ್ಯವನ್ನು ‘ಪ್ರಕ್ಷುಬ್ಧ ಪ್ರದೇಶ’ ಎಂದು ಘೋಷಿಸಿದ ಸರಕಾರ