Udayavni Special

ಹನೂರು ತಾ.ಪಂ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿದ ಯೂರಿಯಾ ರಸಗೊಬ್ಬರ ಅಭಾವ ಸಮಸ್ಯೆ 


Team Udayavani, Oct 9, 2020, 4:55 PM IST

ಹನೂರು ತಾ.ಪಂ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿದ ಯೂರಿಯಾ ರಸಗೊಬ್ಬರ ಅಭಾವ ಸಮಸ್ಯೆ 

ಹನೂರು(ಚಾಮರಾಜನಗರ): ನೂತನ ತಾಲೂಕು ಪಂಚಾಯಿತಿಗೆ ಕೇಂದ್ರ ಸರ್ಕಾರದಿಂದ 15ನೇ ಹಣಕಾಸು ಯೋಜನೆಯಡಿ 60 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಅನಿರ್ಬಂಧಿತ ಅನುದಾನದಡಿ ಹನೂರು ಸೇರಿದಂತೆ 50 ಹೊಸ ತಾಲೂಕುಗಳ ಪೈಕಿ ಯಾವ ತಾಲೂಕಿಗೂ ಅನುದಾನ ಬಿಡುಗಡೆಯಾಗಿಲ್ಲ ಎಂದು ತಾ.ಪಂ ಕಾರ್ಯನಿರ್ವಹಣಾಧಿಕಾರಿ ರಾಜು ಮಾಹಿತಿ ನೀಡಿದರು.

ಪಟ್ಟಣದ ಜಿ.ವಿ.ಗೌಡ ಪ್ರೌಢ ಶಾಲೆಯಲ್ಲಿ ತಾ.ಪಂ ಅಧ್ಯಕ್ಷೆ ಸವಿತಾ ಅಧ್ಯಕ್ಷತೆಯಲ್ಲಿ ಚೊಚ್ಚಲ ಸಾಮಾನ್ಯ ಸಭೆಯನ್ನು ಏರ್ಪಡಿಸಲಾಗಿತ್ತು.

ಸಭೆಯಲ್ಲಿ ಮಾತನಾಡಿದ ರಾಜು ಹನೂರು ನೂತನ ತಾಲೂಕಾಗಿ ರಚನೆಯಾಗಿದ್ದು ನೂತನ ತಾಲೂಕು ಪಂಚಾಯಿತಿಗೆ ಕಚೇರಿ ತೆರೆಯಲು ಈ ಹಿಂದೆ ಖಾಸಗಿ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣವನ್ನು ಆಯ್ಕೆ ಮಾಡಲಾಗಿತ್ತು. ಆದರೆ ಸದರಿ ಸಂಕೀರ್ಣದಲ್ಲಿ ವಾಹನ ನಿಲುಗಡೆ ಸಮಸ್ಯೆ ಮತ್ತು ಹೆಚ್ಚಿನ ಬಾಡಿಗೆ ನಿಗದಿಗೊಳಿಸಿದ ಹಿನ್ನೆಲೆ ಕಚೇರಿ ತೆರೆಯಲು ಸಾಧ್ಯವಾಗಲಿಲ್ಲ. ಇದೀಗ ಖಾಸಗಿಯವರ ಒಂದು ಸಂಕೀರ್ಣವನ್ನು ಬಾಡಿಗೆಗೆ ಪಡೆಯಲು ಕ್ರಮವಹಿಸಲಾಗಿದ್ದು ಹಿರಿಯ ಅಧಿಕಾರಿಗಳೂ ಅನುಮೋದನೆ ನೀಡಿದ್ದಾರೆ. ಆದರೆ ಸಂಕೀರ್ಣದ ಇ-ಸ್ವತ್ತು ವಿತರಣೆಯಲ್ಲಿ ತಡವಾಗಿದ್ದರಿಂದ ಕಚೇರಿ ತೆರೆಯಲೂ ಸಹ ಅಡಚಣೆಯಾಗಿದ್ದು ಮುಂದಿನ ಒಂದು ವಾರದೊಳಗಾಗಿ ಕಚೇರಿ ತೆರೆಯಲಾಗುವುದು ಎಂದು ತಿಳಿಸಿದರು.

ಅನುದಾನಗಳ ಮಾಹಿತಿ: ಬಳಿಕ ಮಾತನಾಡಿ ನೂತನ ತಾಲೂಕಿಗೆ ಕೇಂದ್ರ ಸರ್ಕಾರದಿಂದ 60ಲಕ್ಷ ರೂಗಳ ಅನುದಾನ 15ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾಗಿದೆ. ಈ ಅನುದಾನದ ಬಳಕೆಗಾಗಿ ಎಲ್ಲಾ ಸದಸ್ಯರ ಒಪಿಗೆಯ ಮೇರೆಗೆ ಕ್ರಿಯಾಯೋಜನೆಯನ್ನೂ ಸಹ ಪೂರ್ಣಗೊಳಿಸಲಾಗಿದೆ. ಇದನ್ನು ಹೊರತುಪಡಿಸಿ ಅನಿರ್ಬಂಧಿತ ಅನುದಾನದಡಿ 50 ಹೊಸ ತಾಲೂಕುಗಳ ಪೈಕಿ ಯಾವ ತಾಲೂಕಿಗೂ ಅನುದಾನ ಬಿಡುಗಡೆಯಾಗಿಲ್ಲ. ಆದುದರಿಂದ ಅವಿಭಜಿತ ಕೊಳ್ಳೇಗಾಲ ತಾಲೂಕಿಗೆ ಬಿಡುಗಡೆಯಾಗಿದ್ದ 1.50ಕೋಟಿ ಅನುದಾನವನ್ನೇ ಹನೂರು ತಾಲೂಕಿಗೂ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು ಎಲ್ಲಾ ಇಲಾಖಾ ಅಧಿಕಾರಿಗಳು ಫಲಾನುಭವಿಗಳ ಆಯ್ಕೆ ಮತ್ತು ಸವಲತ್ತು ದೊರಕಿಸಿಕೊಡುವ ವೇಳೆ ಹನೂರು ತಾಲೂಕಿನ ಫಲಾನುಭವಿಗಳನ್ನೂ ಆಯ್ಕೆ ಮಾಡಬೇಕು ಎಂದು ಸೂಚನೆ ನೀಡಿದರು.

ಇದನ್ನೂ ಓದಿ:ಯಾರೋ ಮಾಡಿದ ಯೋಜನೆಗಳಿಗೆ ಕಾಯಿ ಒಡೆದು ಪೂಜೆ ಸಲ್ಲಿಸಿದ್ದೇ ಎಂ.ಬಿ.ಪಾಟೀಲ ಸಾಧನೆ: ಕಟೀಲ್

ಪ್ರತಿಧ್ವನಿಸಿದ ಯೂರಿಯಾ ರಸಗೊಬ್ಬರ ಅಭಾವ:  ಸಭೆಯಲ್ಲಿ ಕೃಷಿ ಇಲಾಖಾ ಸಹಾಯಕ ಕೃಷಿ ನಿರ್ದೇಶಕಿ ಸುಂದ್ರಮ್ಮ ಮಾತನಾಡಿ ತಾಲೂಕಿನ 32665 ಹೆಕ್ಟೇರ್ ಕೃಷಿ ಭೂಮಿ ಪೈಕಿ 31889 ಹೆಕ್ಟೇರ್ ನಲ್ಲಿ ಬಿತ್ತನೆ ಕಾರ್ಯ ಮುಗಿದಿದ್ದು ಶೇ.94ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಇಲಾಖೆಯಲ್ಲಿ 2.54ಲಕ್ಷ ಅನುದಾನದ ಲಭ್ಯತೆಯಿದ್ದು ಈ ಅನುದಾನದಡಿ ಕೊಳ್ಳೇಗಾಲ – ಹನೂರು ತಾಲೂಕಿಗೆ ಅನುದಾನ ವಿಭಜನೆಯಾದ ಕೂಡಲೇ ಸವಲತ್ತು ವಿತರಿಸಲು ಕ್ರಮವಹಿಸಲಾಗುವುದು ಎಂದು ಮಾಹಿತಿ ನೀಡಿದರು. ಈ ವೇಳೆ ತಾ.ಪಂ ಸದಸ್ಯ ನಟರಾಜು ಮಾತನಾಡಿ ತಾಲೂಕಿನಾದ್ಯಂತ ಯೂರಿಯಾ ಅಭಾವ ತಲೆದೋರಿದೆ. ಕೆಲ ಅಂಗಡಿಯವರು ಯೂರಿಯಾ ಕ್ಕೆ ಕೃತಕ ಅಭಾವ ಸೃಷ್ಠಿಸಿ ಪ್ರತಿ ಮೂಟೆಗೂ 400 ರೂ ದರದಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ತಮ್ಮ ಗಮನಕ್ಕೆ ಬಂದಿದೆಯೇ? ಬಂದಿದಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ ಸುಂದ್ರಮ್ಮ ಯೂರಿಯಾ ಅಭಾವ ಕೇವಲ ಹನೂರು ತಾಲೂಕಿನ ಸಮಸ್ಯೆಯಲ್ಲ, ಈ ಸಮಸ್ಯೆ ಇಡೀ ರಾಜ್ಯದಲ್ಲಿಯೇ ಇದೆ. ಆದರೂ ಸಹ ಇಲಾಖೆಯಿಂದ ಯುರಿಯಾ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು ಮಂಡ್ಯ ಜಿಲ್ಲೆಯಿಂದ ಖರೀದಿಸಿ ವಿತರಣೆ ಮಾಡಲಾಗುತ್ತಿದೆ. ಅದಾಗ್ಯೂ ಕೃತಕ ಅಭಾವ ಸೃಷ್ಠಿಸಿದಲ್ಲಿ ಸಂಬಂಧಪಟ್ಟ ಅಂಗಡಿಯವರಿಗೆ ನೋಟಿಸ್ ವಿತರಣೆ ಮಾಡಲು ಮತ್ತು ಅವರ ಲೈಸನ್ಸ್ ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.

ಸುಳ್ವಾಡಿ, ಮಾರ್ಟಳ್ಳಿಯಲ್ಲಿ ನೀರಿನ ಅಭಾವ:  ಸಭೆಯಲ್ಲಿ ಗ್ರಾಮೀಣ ನೈರ್ಮಲ್ಯ ಮತ್ತು ಕುಡಿಯುವ ನೀರು ವಿಭಾಗದ ಎಯಯ ಮಹದೇವಮೂರ್ತಿ ಮಾತನಾಡಿ ಬಹುಗ್ರಾಮ ಕುಡಿಯುವ ನೀರು ಯಓಜನೆಯ ಮೊದಲ ಹಂತದ ಕಾಮಗಾರಿ ಪ್ರಗತಿಯಲ್ಲಿದ್ದು ಡಿಸೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ತಾಲೂಕಿನ ಮಾರ್ಟಳ್ಳಿ, ಸಂದನಪಾಳ್ಯ ಭಾಗದಲ್ಲಿ ಕುಡಿಯುವ ನೀರಿನ ಅಭಾವವಿದ್ದು ಗ್ರಾಮ ಪಂಚಾಯಿತಿ ಮೂಲಕ ಟ್ಯಾಂಕರ್ ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಅಲ್ಲದೆ ಸುಳ್ವಾಡಿಯ ಕಿಚ್ಚುಗುತ್ತು ಮಾರಮ್ಮ ದೇವಾಲಯ ಇದೇ ತಿಂಗಳ 20ರಿಂದ ತೆರೆಯಲಿದ್ದು ಇಲ್ಲಿಯೂ ನೀರಿನ ಅಭಾವವಿದೆ. ಈ ಭಾಗದಲ್ಲಿ ನೀರಿನ ಲಭ್ಯತೆಯಿಲ್ಲವಾದ ಪರಿಣಾಮ ಬೋರ್ ಕೊರೆದರೂ ನೀರು ದೊರೆಯುತಿಲ್ಲ. ಈ ಭಾಗದ ಸಮಸ್ಯೆಯನ್ನು ಬಗೆಹರಿಸಲು ಕನಿಷ್ಠ 10ಲಕ್ಷ ಅನುದಾನದ ಅವಶ್ಯಕತೆಯಿದ್ದು ಮುಂದಿನ ದಿನದಲ್ಲಿ ಕ್ರಿಯಾಯೋಜನೆ ತಯಾರಿಸುವಾಗ ಈ ಭಾಗಕ್ಕೆ ಹೆಚ್ಚಿನ ಅನುದಾನ ನೀಡುವಲ್ಲಿ ಸದಸ್ಯರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಈ ವೇಳೆ ತಾ.ಪಂ ಸದಸ್ಯ ರಾಜೇಂದ್ರ ಮಾತನಾಡಿ ಹೆಚ್ಚಿನ ಅನುದಾನ ಅವಶ್ಯಕತೆಯಿದ್ದಲ್ಲಿ ಜಿಲ್ಲಾ ಪಂಚಾಯಿತಿ ಮೂಲಕ ಕಾಮಗಾರಿ ಕೈಗೆತ್ತಿಕೊಳ್ಳಲು ಕ್ರಮವಹಿಸುವಂತೆ ಸೂಚನೆ ನೀಡಿದರು.

ಪಶು ಸಂಗೋಪನಾ ಅಧಿಕಾರಿ ಗೈರಿಗೆ ಸದಸ್ಯರ ಗರಂ:  ಪಶು ಸಂಗೋಪನಾ ಇಲಾಖೆಯಿಂದ ಲಭ್ಯವಿರುವ ಅನುದಾನ ಮತ್ತು ಕೈಗೆತ್ತಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಸಹಾಯಕ ನಿರ್ದೇಶಕ ಸಿದ್ಧರಾಜು ಮಾಹಿತಿ ನೀಡುತ್ತಿದ್ದರು. ಈ ವೇಳೆ ಕೆಲ ಸದಸ್ಯರು ಸಭೆಗೆ ಹಿರಿಯ ಅಧಿಕಾರಿಯಾದ ವೆಂಕಟರಾಮು ಅವರು ಆಗಮಿಸಬೇಕಿತ್ತು. ಈ ಹಿಂದಿನ ಸಭೆಯ ಚರ್ಚಾ ವಿಷಯ ಕೈಗೊಂಡ ಕ್ರಮಗಳ ಬಗ್ಗೆ ಅವರಿಂದ ಮಾಹಿತಿ ಬೇಕಿತ್ತು. ಆದರೆ ಅವರು ಸಭೆಗೆ ಗೈರಾಗಿರುವುದು ಸರಿಯಾದ ಕ್ರಮವಲ್ಲ ಎಂದು ಗರಂ ಆದರು.

ಇದೇ ವೇಳೆ ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಪ್ರಗತಿಯಲ್ಲಿರುವ  ಕಾರ್ಯಕ್ರಮಗಳ ಬಗ್ಗೆ ಮತ್ತು ಕ್ರಿಯಾಯೋಜನೆ ತಯಾರಿಕೆಯ ಬಗ್ಗೆ ಮಾಹಿತಿ ನೀಡಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸಂತೋಷ್ ಆತ್ಮಹತ್ಯೆ ಪ್ರಯತ್ನದ ಹಿಂದೆ ವಿಜಯೇಂದ್ರ ಒತ್ತಡ ಇರಬಹುದು: ಕಾಂಗ್ರೆಸ್

ಸಂತೋಷ್ ಆತ್ಮಹತ್ಯೆ ಪ್ರಯತ್ನದ ಹಿಂದೆ ವಿಜಯೇಂದ್ರ ಒತ್ತಡ ಇರಬಹುದು: ಕಾಂಗ್ರೆಸ್

ಸಂತೋಷ್ ನೀಡಿದ್ದ ವಿಡಿಯೋದಿಂದ ಸಚಿವರೊಬ್ಬರು BSY ರನ್ನು ಬ್ಲ್ಯಾಕ್ ಮೇಲ್ ಮಾಡಿದ್ದರು: ಡಿಕೆಶಿ

ಸಂತೋಷ್ ನೀಡಿದ್ದ ವಿಡಿಯೋದಿಂದ ಸಚಿವರೊಬ್ಬರು BSY ರನ್ನು ಬ್ಲ್ಯಾಕ್ ಮೇಲ್ ಮಾಡಿದ್ದರು: ಡಿಕೆಶಿ

ಕೋವಿಡ್ ಲಸಿಕೆ ಕೇಂದ್ರಕ್ಕೆ ಭೇಟಿ: ವಿಜ್ಞಾನಿಗಳನ್ನು ಅಭಿನಂದಿಸಿದ ಪ್ರಧಾನಿ ಮೋದಿ

ಕೋವಿಡ್ ಲಸಿಕೆ ಕೇಂದ್ರಕ್ಕೆ ಭೇಟಿ: ವಿಜ್ಞಾನಿಗಳನ್ನು ಅಭಿನಂದಿಸಿದ ಪ್ರಧಾನಿ ಮೋದಿ

ಕಮೆಂಟರಿ ವೇಳೆ ಎಡವಟ್ಟು ಮಾಡಿದ ಆಸೀಸ್ ಲೆಜೆಂಡ್: ಕ್ಷಮೆ ಕೇಳಿದ ಗಿಲ್‌ಕ್ರಿಸ್ಟ್‌

ಕಮೆಂಟರಿ ವೇಳೆ ಎಡವಟ್ಟು ಮಾಡಿದ ಆಸೀಸ್ ಲೆಜೆಂಡ್: ಕ್ಷಮೆ ಕೇಳಿದ ಗಿಲ್‌ಕ್ರಿಸ್ಟ್‌

ಉಮಾಶ್ರೀ ಕಾರು ಅಪಘಾತ ಪ್ರಕರಣ: ಗಾಯಗೊಂಡಿದ್ದ ವೈದ್ಯೆ ಸಾವು, ಮೂರಕ್ಕೇರಿದ ಸಾವಿನ ಸಂಖ್ಯೆ

ಉಮಾಶ್ರೀ ಕಾರು ಅಪಘಾತ ಪ್ರಕರಣ: ಗಾಯಗೊಂಡಿದ್ದ ವೈದ್ಯೆ ಸಾವು, ಮೂರಕ್ಕೇರಿದ ಸಾವಿನ ಸಂಖ್ಯೆ

ಜಮ್ಮು-ಕಾಶ್ಮೀರ: ಮೊದಲ ಹಂತದ ಡಿಡಿಸಿ, ಪಂಚಾಯತ್ ಉಪಚುನಾವಣೆ ಮತದಾನ ಅಂತ್ಯ

ಜಮ್ಮು-ಕಾಶ್ಮೀರ: ಮೊದಲ ಹಂತದ ಡಿಡಿಸಿ, ಪಂಚಾಯತ್ ಉಪಚುನಾವಣೆ ಮತದಾನ ಅಂತ್ಯ

ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಪ್ರಕರಣದ ಸಮಗ್ರ ತನಿಖೆ: ಬೊಮ್ಮಾಯಿ

ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣದ ಸಮಗ್ರ ತನಿಖೆ: ಬೊಮ್ಮಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cn-tdy-2

ಶಿಕಕ್ಷರ ಕಾರ್ಯಕಾರಿ ಸಮಿತಿಗೆ ಡಿ.6ರಂದು ಚುನಾವಣೆ

ಚಾ.ನಗರ: 30ರಿಂದ ಸಕಾಲ ಸಪ್ತಾಹ

ಚಾ.ನಗರ: 30ರಿಂದ ಸಕಾಲ ಸಪ್ತಾಹ

ಅಂಗನವಾಡಿಯಲ್ಲೇ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಿ

ಅಂಗನವಾಡಿಯಲ್ಲೇ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಿ

ಬಂಡೀಪುರ ಹೆಬ್ಬಾಗಿಲಿನಲ್ಲಿ ನಿಂತ ಐರಾವತ: ಎರಡು ಗಂಟೆಗೆ ಹೆಚ್ಚು ಟ್ರಾಫಿಕ್ ಜಾಮ್

ಬಂಡೀಪುರ ಹೆಬ್ಬಾಗಿಲಿನಲ್ಲಿ ನಿಂತ ಐರಾವತ: ಎರಡು ಗಂಟೆಗೆ ಹೆಚ್ಚು ಟ್ರಾಫಿಕ್ ಜಾಮ್

ಹಣದ ವಿಚಾರಕ್ಕೆ ಮಹಿಳೆಯನ್ನು ಕೊಲೆಗೈದಿದ್ದಾತನಿಗೆ ಜೀವಾವಧಿ ಶಿಕ್ಷೆ

ಹಣದ ವಿಚಾರಕ್ಕೆ ಮಹಿಳೆಯನ್ನು ಕೊಲೆಗೈದಿದ್ದಾತನಿಗೆ ಜೀವಾವಧಿ ಶಿಕ್ಷೆ

MUST WATCH

udayavani youtube

ಸಚಿವ ಸಂಪುಟ ವಿಸ್ತರಣೆ ಬಗ್ಗೆ CM & ಹೈಕಮಾಂಡ್ ನಿರ್ಧಾರ ತಗೆದುಕೊಳ್ಳುತ್ತದೆ: ಅಶ್ವಥ್ ನಾರಾಯಣ

udayavani youtube

ತಾರಸಿಯಲ್ಲಿ ಹೂ, ಹಣ್ಣು, ತರಕಾರಿ ತರಾವರಿ

udayavani youtube

25 ವರ್ಷಗಳಿಂದ ಮಸಾಲೆ ಉದ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದ ಉಡುಪಿಯ ಮಹಿಳೆ

udayavani youtube

ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ

udayavani youtube

ಮಂಗಳೂರು ವಿಮಾನನಿಲ್ದಾಣಕ್ಕೆ ಮಧ್ವಶಂಕರ ಹೆಸರು: ಪುತ್ತಿಗೆ ಶ್ರೀ ಒಲವು

ಹೊಸ ಸೇರ್ಪಡೆ

30ರಿಂದ ಸಕಾಲ ಸಪ್ತಾಹ: ಡಿಸಿ ಶಿವಕುಮಾರ್‌

30ರಿಂದ ಸಕಾಲ ಸಪ್ತಾಹ: ಡಿಸಿ ಶಿವಕುಮಾರ್‌

ಕೋವಿಡ್‌ ಲಸಿಕೆ ವಿತರಣೆಗೆ ಸಿದ್ಧತೆ ಕೈಗೊಳ್ಳಿ

ಕೋವಿಡ್‌ ಲಸಿಕೆ ವಿತರಣೆಗೆ ಸಿದ್ಧತೆ ಕೈಗೊಳ್ಳಿ

ಸಂತೋಷ್ ಆತ್ಮಹತ್ಯೆ ಪ್ರಯತ್ನದ ಹಿಂದೆ ವಿಜಯೇಂದ್ರ ಒತ್ತಡ ಇರಬಹುದು: ಕಾಂಗ್ರೆಸ್

ಸಂತೋಷ್ ಆತ್ಮಹತ್ಯೆ ಪ್ರಯತ್ನದ ಹಿಂದೆ ವಿಜಯೇಂದ್ರ ಒತ್ತಡ ಇರಬಹುದು: ಕಾಂಗ್ರೆಸ್

ಜಗತ್ತಿನ ಸ್ವರ್ಗ  ಥೈಲ್ಯಾಂಡ್‌

ಜಗತ್ತಿನ ಸ್ವರ್ಗ  ಥೈಲ್ಯಾಂಡ್‌

ಶಿಕ್ಷಕರ ಸಂಘಕ್ಕೆ ಚುನಾವಣೆ; 28 ನಾಮಪತ್ರ

ಶಿಕ್ಷಕರ ಸಂಘಕ್ಕೆ ಚುನಾವಣೆ; 28 ನಾಮಪತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.