ಜ.20ಕ್ಕೆ ವೀರಶೈವ ಲಿಂಗಾಯತ ಬಿಸಿನೆಸ್‌ ಕಾನ್‌ಕ್ಲೇವ್

Team Udayavani, Nov 28, 2022, 2:39 PM IST

tdy-9

ಚಾಮರಾಜನಗರ: ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಮತ್ತು ಲಾಭೋದ್ದೇಶವಿಲ್ಲದ ಸಾರ್ವಜನಿಕ, ಸಾಮಾಜಿಕ ಟ್ರಸ್ಟ್‌ ಆಗಿರುವ ಅಂತಾರಾಷ್ಟ್ರೀಯ ಲಿಂಗಾಯತ ಯೂತ್‌ ವೇದಿಕೆ (ಐಎಲ್‌ವೈಎಫ್) ವತಿಯಿಂದ 2023ರ ಜ. 20ರಿಂದ 22ರವರೆಗೆ ಮೂರು ದಿನಗಳ ವೀರಶೈವ ಲಿಂಗಾಯತ ಗ್ಲೋಬಲ್‌ ಬಿಸಿನೆಸ್‌ ಕಾನ್‌ಕ್ಲೇವ್‌-2023 ಅನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಸಂಸ್ಥಾಪಕ ಅಧ್ಯಕ್ಷ ಅವಿನಾಶ್‌ ಪಾಳೇಗಾರ್‌, ಎಲ್ಲ ವೀರಶೈವ ಲಿಂಗಾಯತ ಸಮುದಾಯದ ಉದ್ಯಮಿಗಳನ್ನು, ಉದ್ಯಮಶೀಲರನ್ನು, ವೃತ್ತಿಪರರನ್ನುಒಂದೇ ವೇದಿಕೆಯಡಿ ತರುವುದು. ಕೇಂದ್ರ ಹಾಗೂ ಕರ್ನಾಟಕ ಸರ್ಕಾರವು ಬಿಡುಗಡೆ ಮಾಡಿ ಪ್ರಾಯೋಗಿಕ ಮತ್ತು ದಿಟ್ಟ ಉಪಕ್ರಮಗಳನ್ನು ಅಭಿವೃದ್ಧಿಪಡಿಸುವ ಆರ್ಥಿಕ, ಕೈಗಾರಿಕಾ, ವ್ಯಾಪಾರದ ಚಟುವಟಿಕೆಗಳನ್ನು ಮುಂದು ವರಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸುವುದು ಈ ಸಮಾವೇಶದ ಉದ್ದೇಶವಾಗಿದೆ ಎಂದು ಹೇಳಿದರು.

ಜಗತ್ತಿನಾದ್ಯಂತ ಇರುವ ವೀರಶೈವ ಲಿಂಗಾಯತ ಸಮುದಾಯದ ಉದ್ಯಮ ದಿಗ್ಗಜರನ್ನು ಒಂದೇ ಸೂರಿನಡಿ ತರುವುದು ಮತ್ತು ಕರ್ನಾಟಕದಲ್ಲಿನ ಹೂಡಿಕೆ ಅವಕಾಶಗಳ ಬಗ್ಗೆ ಚರ್ಚಿಸುವುದು. ಕರ್ನಾಟಕ ಸರ್ಕಾರವು ಕಲ್ಪಿಸಿರುವ ಕ್ಲಸ್ಟರ್‌ ಆಧಾರಿತ ವಿಧಾನವನ್ನು ಕೈಗಾರಿಕೋದ್ಯಮಿಗಳು, ವ್ಯಾಪಾರ/ರೈತ ಸಮುದಾಯವನ್ನು ಉತ್ತೇಜಿಸುವುದು. ಜಿಲ್ಲಾ ಮಟ್ಟದಲ್ಲಿ ಸ್ಟಾರ್ಟ್‌-ಅಪ್‌ ಘಟಕವನ್ನು ಬಲಪಡಿಸುವುದು ಮತ್ತು ನಿರೀಕ್ಷಿತ ಉದ್ಯಮಿಗಳಿಗೆ ಮಾರ್ಗದರ್ಶನ ನೀಡುವುದು. ಕರ್ನಾಟಕದಾದ್ಯಂತ ರೈತ ಸಮುದಾಯವನ್ನು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ತಂತ್ರಜ್ಞಾನ ಆಧಾರಿತ ಕೃಷಿ ಪರಿಹಾರಗಳನ್ನು ಅನ್ವೇಷಿಸುವುದು. 250 ಕ್ಕೂ ಅಧಿಕ ಮಳಿಗೆಗಳಲ್ಲಿ ಉತ್ಪನ್ನಗಳು, ಸೇವೆಗಳನ್ನು ಪ್ರದರ್ಶಿಸುವ ಮೂಲಕ ಕರ್ನಾಟಕದ ಸಾಮರ್ಥ್ಯವನ್ನು ಪ್ರದರ್ಶಿಸುವುದು ಎಂದರು.

ಐಎಲ್‌ವೈಎಫ್ ಅನ್ನು ರಾಜಕೀಯ ರಹಿತವಾಗಿ ರೂಪಿಸಲಾಗಿದೆ ಮತ್ತು ಇದು ಧಾರ್ಮಿಕ ಚಟುವಟಿಕೆಗಳಿಗೆ ಇರುವ ಸಂಘಟನೆ ಅಲ್ಲ. ವಾಣಿಜ್ಯೋದಮದ ನೀತಿಯನ್ನು ಪೋಷಿಸುವುದು, ಲಿಂಗಾಯತ ಸಮುದಾಯದವರ ಸಾಮಾಜಿಕ- ಆರ್ಥಿಕ ಸಬಲೀಕರಣವನ್ನು ಪೋಷಿಸುವುದು ಮತ್ತು ರಾಷ್ಟ್ರ ನಿರ್ಮಾಣದ ಉದ್ದೇಶದೊಂದಿಗೆ ಸಾಮಾಜಿಕ ಚಟುವಟಿಕೆಗಳನ್ನು ಮುಂದುವರಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಕಾಕತಾಳೀಯವಾಗಿ 2013ರಲ್ಲಿ ಪ್ರಾರಂಭವಾದ ಐಎಲ್‌ವೈಎಫ್ 2023ರಲ್ಲಿ ತನ್ನ 10ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ ಎಂದರು.

ಸಂಸ್ಥಾಪಕರಾದ ಸಿದ್ದರಾಮ ಜತ್ತಿ, ಟ್ರಸ್ಟಿ ಬಿ.ಎಸ್‌.ಪ್ರಶಾಂತ್‌, ಐ ಲೈಫ್ನ ಮೈಸೂರು ವಿಭಾಗದ ಸಂಸ್ಥಾಪಕ ಅಧ್ಯಕ್ಷ ಲೋಕೇಶ್‌ ಟಿ.ಎಸ್‌. ಮೈಸೂರುವಿಭಾಗದ ಅಧ್ಯಕ್ಷ ವೀರೇಶ್‌, ಉಪಾಧ್ಯಕ್ಷ ಮಹೇಶ್‌, ಕಾರ್ಯಕಾರಿಣಿ ಸಮಿತಿ ಸದಸ್ಯರಾದ ದಯಾನಿಧಿ, ದೊಡ್ಡರಾಯಪೇಟೆ ಗಿರೀಶ್‌ ಇದ್ದರು.

ಟಾಪ್ ನ್ಯೂಸ್

Tax officer-turned-actor under probe in Rs 263 crore money laundering case

263 ಕೋಟಿ ರೂ ಅಕ್ರಮ; ಮಾಜಿ ತೆರಿಗೆ ಅಧಿಕಾರಿ, ನಟಿ ಕೃತಿ ವರ್ಮಾ ವಿಚಾರಣೆ

ರೈತರ ಸಮಗ್ರ ಅಭಿವೃದ್ಧಿಗೆ ತೋಟಗಾರಿಕೆ ಇಲಾಖೆ ಅಣಿ

ರೈತರ ಸಮಗ್ರ ಅಭಿವೃದ್ಧಿಗೆ ತೋಟಗಾರಿಕೆ ಇಲಾಖೆ ಅಣಿ

Australia net bowler mahesh pithiya met ashwin

ಆರ್‌.ಅಶ್ವಿ‌ನ್‌ ಕಾಲು ಮುಟ್ಟಿ ನಮಸ್ಕರಿಸಿದ ಆಸೀಸ್ ನೆಟ್ ಬೌಲರ್ ಮಹೇಶ್‌ ಪಿಥಿಯ

ಮಜೇಥಿಯಾ ಫೌಂಡೇಶನ್‌ನಿಂದ ಸಮಾಜಸೇವಾ ಕಾರ್ಯ

ಮಜೇಥಿಯಾ ಫೌಂಡೇಶನ್‌ನಿಂದ ಸಮಾಜಸೇವಾ ಕಾರ್ಯ

ಸ್ಪಿನ್‌ ತಂತ್ರವೇ ಗೆಲುವಿನ ಮಂತ್ರ: ಇಂದಿನಿಂದ ಭಾರತ-ಆಸ್ಟ್ರೇಲಿಯ ಟೆಸ್ಟ್‌ ಸರಣಿ

ಸ್ಪಿನ್‌ ತಂತ್ರವೇ ಗೆಲುವಿನ ಮಂತ್ರ: ಇಂದಿನಿಂದ ಭಾರತ-ಆಸ್ಟ್ರೇಲಿಯ ಟೆಸ್ಟ್‌ ಸರಣಿ

ಭಾರತಕ್ಕೆ ಬರುತ್ತಿದ್ದ ಹಿಂದೂಗಳ ತಡೆದ ಪಾಕಿಸ್ತಾನ !

ಭಾರತಕ್ಕೆ ಬರುತ್ತಿದ್ದ ಹಿಂದೂಗಳ ತಡೆದ ಪಾಕಿಸ್ತಾನ !

ಚಂದ್ರಯಾನ-3 ಇಳಿದಾಣಗಳ ಗುರುತು ಪೂರ್ಣ; ವರ್ಷಾಂತ್ಯಕ್ಕೆ ಉಡಾವಣೆ ಸಾಧ್ಯತೆ

ಚಂದ್ರಯಾನ-3 ಇಳಿದಾಣಗಳ ಗುರುತು ಪೂರ್ಣ; ವರ್ಷಾಂತ್ಯಕ್ಕೆ ಉಡಾವಣೆ ಸಾಧ್ಯತೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗುಂಡ್ಲುಪೇಟೆ: ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಹುಲಿ ಮೃತದೇಹ ಪತ್ತೆ

ಗುಂಡ್ಲುಪೇಟೆ: ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಹುಲಿ ಮೃತದೇಹ ಪತ್ತೆ

ಮಾದಾಪಟ್ಟಣ ವಿರಕ್ತ ಮಠದ ಸದಾಶಿವ ಸ್ವಾಮೀಜಿ ಲಿಂಗೈಕ್ಯ

ಮಾದಾಪಟ್ಟಣ ವಿರಕ್ತ ಮಠದ ಸದಾಶಿವ ಸ್ವಾಮೀಜಿ ಲಿಂಗೈಕ್ಯ

tdy-13

ನಗರದ ರಸ್ತೆ ವೃತ್ತಕ್ಕೆ ಪ್ರೊ. ಎಂಡಿಎನ್‌ ಹೆಸರು ನಾಮಕರಣ

tdy-15

ಬೆಂಬಲ ಬೆಲೆಯಲ್ಲಿ ಅರಿಶಿಣ ಖರೀದಿಗೆ ಆಗ್ರಹ

ದಂಡದಲ್ಲಿ ಶೇ.50 ರಿಯಾಯಿತಿ

ದಂಡದಲ್ಲಿ ಶೇ.50 ರಿಯಾಯಿತಿ

MUST WATCH

udayavani youtube

ಪಾಂಗಳ: ಕೋಲದಲ್ಲಿ ಭಾಗಿಯಾಗಿದ್ದ ಯುವಕನನ್ನು ಕರೆಸಿ ಹತ್ಯೆಗೈದರೇ ಪರಿಚಿತರು?

udayavani youtube

ಮೀನುಗಾರಿಕಾ ಬೋಟ್ ನ ಒಳಗೆ ಹೇಗಿರುತ್ತೆ ನೋಡಿ|

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

ಹೊಸ ಸೇರ್ಪಡೆ

Tax officer-turned-actor under probe in Rs 263 crore money laundering case

263 ಕೋಟಿ ರೂ ಅಕ್ರಮ; ಮಾಜಿ ತೆರಿಗೆ ಅಧಿಕಾರಿ, ನಟಿ ಕೃತಿ ವರ್ಮಾ ವಿಚಾರಣೆ

ರೈತರ ಸಮಗ್ರ ಅಭಿವೃದ್ಧಿಗೆ ತೋಟಗಾರಿಕೆ ಇಲಾಖೆ ಅಣಿ

ರೈತರ ಸಮಗ್ರ ಅಭಿವೃದ್ಧಿಗೆ ತೋಟಗಾರಿಕೆ ಇಲಾಖೆ ಅಣಿ

Australia net bowler mahesh pithiya met ashwin

ಆರ್‌.ಅಶ್ವಿ‌ನ್‌ ಕಾಲು ಮುಟ್ಟಿ ನಮಸ್ಕರಿಸಿದ ಆಸೀಸ್ ನೆಟ್ ಬೌಲರ್ ಮಹೇಶ್‌ ಪಿಥಿಯ

ಮಜೇಥಿಯಾ ಫೌಂಡೇಶನ್‌ನಿಂದ ಸಮಾಜಸೇವಾ ಕಾರ್ಯ

ಮಜೇಥಿಯಾ ಫೌಂಡೇಶನ್‌ನಿಂದ ಸಮಾಜಸೇವಾ ಕಾರ್ಯ

ಸ್ಪಿನ್‌ ತಂತ್ರವೇ ಗೆಲುವಿನ ಮಂತ್ರ: ಇಂದಿನಿಂದ ಭಾರತ-ಆಸ್ಟ್ರೇಲಿಯ ಟೆಸ್ಟ್‌ ಸರಣಿ

ಸ್ಪಿನ್‌ ತಂತ್ರವೇ ಗೆಲುವಿನ ಮಂತ್ರ: ಇಂದಿನಿಂದ ಭಾರತ-ಆಸ್ಟ್ರೇಲಿಯ ಟೆಸ್ಟ್‌ ಸರಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.