ಗುಣಮಟ್ಟದ ಹಾಲು ಪೂರೈಕೆಯಿಂದ ಒಕ್ಕೂಟದ ಪ್ರಗತಿ


Team Udayavani, Mar 25, 2023, 3:01 PM IST

tdy-16

ಚಾಮರಾಜನಗರ: ಗುಣಮಟ್ಟದ ಹಾಲು ಪೂರೈಕೆ ಮಾಡಿ, ಡೇರಿ ಹಾಗೂ ಒಕ್ಕೂಟದ ಪ್ರಗತಿಗೆ ಹಾಲು ಉತ್ಪಾದಕರ ರೈತರು ಸಹಕರಿಸಿ, ಹೆಚ್ಚಿನ ಲಾಭ ವನ್ನು ಪಡೆದುಕೊಳ್ಳಬೇಕು ಎಂದು ಚಾಮುಲ್‌ ಅಧ್ಯಕ್ಷ ವೈ.ಸಿ. ನಾಗೇಂದ್ರ ಹೇಳಿದರು.

ತಾಲೂಕಿನ ಬಂದಿಗೌಡನಹಳ್ಳಿ ಕಾಲೋನಿಯಲ್ಲಿ ನೂತನವಾಗಿ ನಿರ್ಮಿಸಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಹೈನುಗಾರಿಕೆ ಪ್ರಮುಖ ಉದ್ಯಮವಾಗಿದೆ. ಬೇಸಾಯದ ಜೊತೆಗೆ ಹೈನುಗಾರಿಕೆ ಹೆಚ್ಚಿನ ಪ್ರಾಮುಖ್ಯತೆ ಹಾಗು ವೈಜ್ಞಾನಿಕವಾಗಿ ಹಸು ಸಾಕಾಣಿಕೆ ಮಾಡುವುದನ್ನು ಹೈನುಗಾರರು ಅಳವಡಿಸಿಕೊಳ್ಳಬೇಕು. ಹಸು ಎರಡು ಹೊತ್ತು ಹಾಲು ಕೊಡುವ ಜೊತೆಗೆ ನಮ್ಮ ಜೀವನಾಡಿಯಾಗಿದೆ ಎಂದರು.

ಇನ್ನೂ ಹೆಚ್ಚಿನ ಹಾಲು ಪೂರೈಸಿ: ಹಸುವನ್ನು ಸೂಕ್ತವಾಗಿ ನಿರ್ವಹಣೆ ಮಾಡುವ ತರಬೇತಿ ಯನ್ನು ರೈತರು ಪಡೆದುಕೊಳ್ಳಬೇಕು. ಒಕ್ಕೂಟ ಹಾಗೂ ಡೇರಿಯಿಂದ ಇಂಥ ತರಬೇತಿಗಳನ್ನು ಆಯೋಜನೆ ಮಾಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ರೈತರು ಒಕ್ಕೂಟದ ಯೋಜನೆಗಳನ್ನು ಸದ್ಬಳಕೆ ಮಾಡಿ ಕೊಂಡು ಇನ್ನೂ ಹೆಚ್ಚಿನ ಹಾಲು ಪೂರೈಕೆ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು.

ರೈತರಿಗೆ 10 ದಿನಕ್ಕೊಮ್ಮೆ ಹಣ: ಚಾಮುಲ್‌ ನಿರ್ದೇಶಕ ಎಚ್‌.ಎಸ್‌. ಬಸವರಾಜು ಮಾತನಾಡಿ, ರೈತರು ಹೈನುಗಾರಿಕೆಯಿಂದ ಹೆಚ್ಚಿನ ಲಾಭ ಕಾಣಲು ಸಾಧ್ಯವಿದೆ. ಇದನ್ನರಿತು ಅಂದು ಸಹಕಾರ ಸಚಿವರಾಗಿದ್ದ ದಿ. ಮಹದೇವಪ್ರಸಾದ್‌ ಅವರು ಮೈಸೂರಿನಿಂದ ಒಕ್ಕೂಟವನ್ನು ಪ್ರತ್ಯೇಕಗೊಳಿಸಿ ಚಾ.ನಗರ ಹಾಲು ಒಕ್ಕೂಟ ರಚನೆ ಮಾಡಿ, ಹೆಚ್ಚಿನ ಹಾಲು ಸಂಗ್ರಹವಾಗುತ್ತಿದ್ದ ಒಕ್ಕೂಟವನ್ನು ಉಳಿಸಲು ಟೆಟ್ರಾ ಪ್ಯಾಕೆಟ್‌ ಯೂನಿಟ್‌ ಆರಂಭಿಸಿದರು. ಆದರ ಫ‌ಲವಾಗಿ ಇಂದು ಡೇರಿ ಪ್ರಗತಿಯತ್ತ ಸಾಗುತ್ತಿದೆ. ರೈತರಿಗೆ 10 ದಿನಕ್ಕೊಮ್ಮೆ ಹಣ ನೀಡಲು ಸಾಧ್ಯವಾಗುತ್ತಿದೆ. ಕುದೇರಿನಲ್ಲಿ ಸುಸಜ್ಜಿತ ಒಕ್ಕೂಟ ನಿರ್ಮಾಣವಾಗಿದೆ. ನೀವು ನೀಡುವ ಹಾಲು ಯಾವ ರೂಪದಲ್ಲಿ ಎಲ್ಲಿಗೆ ಹೋಗುತ್ತದೆ ಎಂಬುದನ್ನು ತಿಳಿಯಲು ಒಮ್ಮೆ ಒಕ್ಕೂಟಕ್ಕೆ ಭೇಟಿ ನೀಡಿ, ಅಲ್ಲಿನ ಘಟಕವನ್ನು ವೀಕ್ಷಣೆ ಮಾಡಿ, ನಿಮಗೂ ಪ್ರೇರಣೆಯಾಗುತ್ತದೆ ಎಂದರು.

ಮಾದರಿ ಸಂಘವನ್ನಾಗಿ ಮಾಡಲು ಶ್ರಮಿಸಿ: ಬಂದಿಗೌಡನಹಳ್ಳಿ ಕಾಲೋನಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಕೆ. ರವಿಕುಮಾರ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರ ಸಂಘ ಸ್ಥಾಪನೆಗೆ ಅನೇಕರ ಶ್ರಮ ಕಾರಣವಾಗಿದೆ. ಈ ಹಿಂದೆ ಬಿಸಲವಾಡಿಯಲ್ಲಿದ್ದ ಡೇರಿಗೆ ಈ ಭಾಗದ ರೈತರು ಹಾಲು ಸರಬರಾಜು ಮಾಡುತ್ತಿದ್ದರು. ನಂತರ ಬಂದಿಗೌಡನಹಳ್ಳಿಯಲ್ಲಿ ಡೇರಿಯನ್ನು ಆರಂಭಿಸಲಾಯಿತು. ಇದಾದ ಬಳಿಕ ಕಾಲೋನಿ ಯಲ್ಲಿರುವ ರೈತರು ಐದಾರು ಕಿ.ಮೀ. ದೂರದಲ್ಲಿ ರುವ ಬಂದಿಗೌಡನಹಳ್ಳಿ, ಬೊಮ್ಮನಹಳ್ಳಿ, ಬಿಸಲ ವಾಡಿಗಳಿಗೆ ಹೋಗಬೇಕಾಗಿತ್ತು. ಬಂದಿಗೌಡ ನಹಳ್ಳಿ ಕಾಲೋನಿಯಲ್ಲಿಯು ಸಹ 2006ರಲ್ಲಿ ಡೇರಿಯನ್ನು ಸ್ಥಾಪನೆ ಮಾಡಿ, ಈಗ ಸ್ವಂತ ಕಟ್ಟಡವನ್ನು ಹೊಂದಿದೆ. 100ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು, ಇನ್ನೂ ಹೆಚ್ಚಿನ ಹಾಲು ಸರಬರಾಜು ಮಾಡುವ ಮೂಲಕ ಮಾದರಿ ಸಂಘವನ್ನಾಗಿ ಮಾಡಲು ಎಲ್ಲರೂ ಶ್ರಮಿಸಬೇಕು ಎಂದರು. ಡೇರಿ ಕಟ್ಟಡ ನಿರ್ಮಾಣಕ್ಕೆ ಸಂಘದಲ್ಲಿ ಕೇವಲ 1.50 ಲಕ್ಷ ರೂ. ಹಣ ಇತ್ತು. ಕ್ಷೇತ್ರದ ಶಾಸಕರು 5 ಲಕ್ಷ ರೂ. ವಿಧಾನ ಪರಿಷತ್‌ ಸದಸ್ಯರು 5 ಲಕ್ಷ ರೂ. ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ 75 ಸಾವಿರ ರೂ.ಗಳನ್ನು ನೀಡಿದೆ. ಹಿಂದಿನ ಚಾಮುಲ್‌ ನಿರ್ದೇಶಕರು ಅನುದಾನ ನೀಡಿದ್ದಾರೆ ಎಂದರು.

ಚಾಮುಲ್‌ ನಿರ್ದೇಶಕರಾದ ಸದಾಶಿವ ಮೂರ್ತಿ, ಶೀಲಾ, ವ್ಯವಸ್ಥಾಪಕ ನಿರ್ದೇಶಕ ರಾಜಶೇಖರಮೂರ್ತಿ, ಪ್ರಧಾನ ವ್ಯವಸ್ಥಾಪಕ ಕೆ. ರಾಜಕುಮಾರ್‌, ಸಹಾಯಕ ವ್ಯವಸ್ಥಾಪಕ ಡಾ. ಎಸ್‌. ಅಮರ್‌, ಸಮಾಲೋಚಕ ನಂಜುಂಡಸ್ವಾಮಿ, ಬಿಸಲವಾಡಿ ಗ್ರಾ.ಪಂ. ಅಧ್ಯಕ್ಷೆ ಬೇಬಿ ಈಶ್ವರ್‌, ಉಪಾಧ್ಯಕ್ಷ ಗುರುಸ್ವಾಮಿ, ಸದಸ್ಯರಾದ ಮಲ್ಲೇಶ್‌, ಮಣಿ ಬಿಜಿ ಕಾಲೋನಿ, ಜ್ಯೋತಿ, ಡೇರಿ ಉಪಾಧ್ಯಕ್ಷೆ ಮಹಾಲಕ್ಷ್ಮಿ, ನಿರ್ದೇಶಕರಾದ ಮಹದೇವಸ್ವಾಮಿ, ಬಸವರಾಜು, ಎಂ. ಬಸವಣ್ಣ, ಶಿವಮಲ್ಲಪ್ಪ, ಚನ್ನಬಸಪ್ಪ, ಚಿನ್ನಮ್ಮ, ಕೆಂದೇವಪ್ಪ, ಸಿಇಓ ಸಿ. ಬಸವಣ್ಣ, ಮುಖಂಡರಾದ ಶಾಂತಮಲ್ಲಪ್ಪ, ಮಹದೇವಪ್ಪ, ನಂಜಪ್ಪ, ಬಿಸಲವಾಡಿ ಡೇರಿ ಮಹೇಶ್‌, ಪುನೀತ್‌ ಇದ್ದರು.

ಟಾಪ್ ನ್ಯೂಸ್

Terror 2

26/11 ದಾಳಿಕೋರರಿಗೆ ತರಬೇತಿ ನೀಡಿದ್ದ ಅಬ್ದುಲ್ ಸಾಲಾಮ್ ಭುಟ್ಟಾವಿ ಮೃತ್ಯು

1-wewqe

WFI chief ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯ ವರದಿಗಳು ಸುಳ್ಳು

rahul gandhi

US ನಲ್ಲಿ ರಾಹುಲ್ ಗಾಂಧಿ ವಿರುದ್ಧ ಖಾಲಿಸ್ತಾನ್ ಬೆಂಬಲಿಗರ ಆಕ್ರೋಶ; ಭಾಷಣಕ್ಕೆ ಅಡ್ಡಿ

ರಾಹುಲ್‌ ಬೋಸ್‌ ಮತ್ತೆ ಕನ್ನಡದತ್ತ..

Actor Rahul Bose:ರಾಹುಲ್‌ ಬೋಸ್‌ ಮತ್ತೆ ಕನ್ನಡದತ್ತ..

TDY-10

83ರ ದಿಗ್ಗಜ ನಟನ 29ರ ಪ್ರೇಯಸಿ ಗರ್ಭಿಣಿ: 4ನೇ ಬಾರಿ ತಂದೆಯಾಗಲಿದ್ದಾರೆ Al Pacino

1-sdsad

Guarantee; ಮಂತ್ರಿ ಪರಿಷತ್ ಸಭೆ: ಸಿದ್ದರಾಮಯ್ಯ ಅವರಿಗೆ ಪರಮಾಧಿಕಾರ

ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ನಟಿ ರಚಿತಾ ರಾಮ್ ಭೇಟಿ: ಚಿತ್ರಗಳ ಯಶಸ್ಸಿಗೆ ಪ್ರಾರ್ಥನೆ

ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ನಟಿ ರಚಿತಾ ರಾಮ್ ಭೇಟಿ: ಚಿತ್ರಗಳ ಯಶಸ್ಸಿಗೆ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lokayukta: ಆದಾಯಕ್ಕೂ ಮೀರಿ ಆಸ್ತಿ; ಶಿವಮೊಗ್ಗ, ಹನೂರು ಸೇರಿ ವಿವಿಧೆಡೆ ಲೋಕಾಯುಕ್ತ ದಾಳಿ

Lokayukta: ಆದಾಯಕ್ಕೂ ಮೀರಿ ಆಸ್ತಿ; ಶಿವಮೊಗ್ಗ, ಹನೂರು ಸೇರಿ ವಿವಿಧೆಡೆ ಲೋಕಾಯುಕ್ತ ದಾಳಿ

chChamarajanagar; ಜೋಡಿ ರಸ್ತೆ ದುರವಸ್ಥೆ; ದ್ವಿಚಕ್ರ ವಾಹನ ಸವಾರರ ಪರದಾಟ

Chamarajanagar; ಜೋಡಿ ರಸ್ತೆ ದುರವಸ್ಥೆ; ದ್ವಿಚಕ್ರ ವಾಹನ ಸವಾರರ ಪರದಾಟ

ಮಳೆ ಬಂದ್ರೆ ಕೆರೆಯಂತಾಗುವ ಬಿ.ರಾಚಯ್ಯ ಜೋಡಿ ರಸ್ತೆ

ಮಳೆ ಬಂದ್ರೆ ಕೆರೆಯಂತಾಗುವ ಬಿ.ರಾಚಯ್ಯ ಜೋಡಿ ರಸ್ತೆ

ಸೌಲಭ್ಯ ವಂಚಿತ ಬಿಳಿಗಿರಿರಂಗನಬೆಟ್ಟದ ಕಮರಿ!

ಸೌಲಭ್ಯ ವಂಚಿತ ಬಿಳಿಗಿರಿರಂಗನಬೆಟ್ಟದ ಕಮರಿ!

1-sa-dsad

Deputy Speaker ಹುದ್ದೆ ಒಪ್ಪಿಕೊಳ್ಳಲ್ಲ: ಸಿ. ಪುಟ್ಟರಂಗಶೆಟ್ಟಿ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

ಯಲ್ಲಾಪುರ:ಉನ್ನತ ಶಿಕ್ಷಣ ಪಡೆದು ವಿದೇಶದಲ್ಲಿ ನೆಲೆಸಬೇಡಿ- ಡಾ| ವಿಜಯ ಸಂಕೇಶ್ವರ

ಯಲ್ಲಾಪುರ:ಉನ್ನತ ಶಿಕ್ಷಣ ಪಡೆದು ವಿದೇಶದಲ್ಲಿ ನೆಲೆಸಬೇಡಿ- ಡಾ| ವಿಜಯ ಸಂಕೇಶ್ವರ

Terror 2

26/11 ದಾಳಿಕೋರರಿಗೆ ತರಬೇತಿ ನೀಡಿದ್ದ ಅಬ್ದುಲ್ ಸಾಲಾಮ್ ಭುಟ್ಟಾವಿ ಮೃತ್ಯು

1-wewqe

WFI chief ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯ ವರದಿಗಳು ಸುಳ್ಳು

ಅಧಿಕಾರಿಗಳಿಂದ ಮತ ಎಣಿಕೆಯಲ್ಲಿ ಪಕ್ಷಪಾತ ಆರೋಪ

ಅಧಿಕಾರಿಗಳಿಂದ ಮತ ಎಣಿಕೆಯಲ್ಲಿ ಪಕ್ಷಪಾತ ಆರೋಪ

rahul gandhi

US ನಲ್ಲಿ ರಾಹುಲ್ ಗಾಂಧಿ ವಿರುದ್ಧ ಖಾಲಿಸ್ತಾನ್ ಬೆಂಬಲಿಗರ ಆಕ್ರೋಶ; ಭಾಷಣಕ್ಕೆ ಅಡ್ಡಿ