Udayavni Special

ಮಕ್ಕಳನ್ನು ಖುದ್ದಾಗಿ ಶಾಲೆಗೆ ಕರೆ ತಂದ ಪೋಷಕರು


Team Udayavani, Jan 2, 2021, 5:18 PM IST

ಮಕ್ಕಳನ್ನು ಖುದ್ದಾಗಿ ಶಾಲೆಗೆ ಕರೆ ತಂದ ಪೋಷಕರು

ಗುಂಡ್ಲುಪೇಟೆ: ಕಳೆದ ಒಂಬತ್ತು ತಿಂಗಳಿಂದ ಬಾಗಿಲು ಮುಚ್ಚಿದ್ದ ಶಾಲಾ ತರಗತಿಗಳು ತೆರೆದಿದ್ದು ಮೊದಲನೇ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಶಾಲೆಗೆಆಗಮಿಸಿದ ಮಕ್ಕಳಿಗೆ ಶಿಕ್ಷಕರು ಹೂ ನೀಡುವ ಮೂಲಕ ಸ್ವಾಗತಿಸಿದರು.

ಶಾಲೆಯನ್ನು ಆರಂಭಿಸುವ ಸಲುವಾಗಿ ಸಕಲ ಸಿದ್ಧತೆ ಕೈಗೊಂಡಿದ್ದು, ಕೊಠಡಿಗಳನ್ನು ಸ್ಯಾನಿಟೈಸ್‌ ಮಾಡಿಸಿ ಪ್ರವೇಶದ ಬಳಿ ಗೇಟಿಗೆ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಫ್ಲೆಕ್ಸ್‌ ಅಳವಡಿಸಲಾಗಿತ್ತು. ಈ ಹಿಂದೆ ಸರ್ಕಾರ ಶಾಲೆಗಳನ್ನು ಆರಂಭಿಸಲು ಮುಂದಾಗುತ್ತಿದ್ದಂತೆ ಅತಂಕಕ್ಕೆ ಒಳಗಾಗುತ್ತಿದ್ದ ಪೋಷ ಕರು ಈ ಬಾರಿ ತಾವೇ ಖುದ್ದಾಗಿ ಮಕ್ಕಳನ್ನು ಶಾಲೆಗಳಿಗೆ ಕರೆತಂದರು. ಇದರಿಂದ ಮೊದಲನೆ ದಿನವೇ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿತ್ತು.  ಶಿಕ್ಷಕರೊಂದಿಗೆ ಶಾಲಾಭಿವೃದ್ಧಿ ಸಮಿತಿಯ ಸದಸ್ಯರೂ ಸೇರಿ ಮಕ್ಕಳನ್ನು ಸ್ವಾಗತಿಸಿದರು.  ಪರಸ್ಪರ ಹೊಸವರ್ಷದಶುಭಾಶಯ ವಿನಿಮಯ ಮಾಡಿಕೊಂಡರು. ಪಾಲಕರ ಅನುಮತಿ ಪತ್ರದೊಂದಿಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಪ್ರವೇಶದಲ್ಲಿಯೇ ತಾಪಮಾನ ಪರೀಕ್ಷೆಗೊಳಪಡಿಸಿ ಕೈಗಳಿಗೂ ಸ್ಯಾನಿಟೈಸರ್‌ ಸಿಂಪಡಿಸಿ, ತರಗತಿಗಳಲ್ಲಿ ನಿಗದಿತ ಅಂತರದಲ್ಲಿ ಕುಳ್ಳರಿಸಲಾಗಿತ್ತು.  ಸರಸ್ವತಿ ಪೂಜೆ ನೆರ ವೇರಿಸಿ ತರಗತಿಗಳನ್ನು ಆರಂಭಿಸಿದರು. ಕಳೆದ ಒಂಭತ್ತು ತಿಂಗಳಿಂದ ಶಾಲೆಯ ಮುಖನೋಡದ ಮಕ್ಕಳು ತಮ್ಮ ಸಹಪಾಠಿಗಳನ್ನು ಕಂಡು ಖುಷಿಪಟ್ಟರು.

ಬಿಇಒ ಪ್ರತಿಕ್ರಿಯೆ: ತಾಲೂಕಿನಲ್ಲಿ 255 ಪ್ರಾಥಮಿಕ ಶಾಲೆಗಳಿದ್ದು, ಎಲ್ಲವನ್ನೂ ಆರಂಭಿಸಲಾಗಿದೆ. ಊಟ ತಿಂಡಿ ಹಾಗೂ ಕುಡಿಯುವ ನೀರನ್ನು ಮಕ್ಕಳೇ ತಮ್ಮ ಮನೆಗಳಿಂದ ತರಬೇಕಾಗಿದೆ. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಮಾತ್ರ ತರಗತಿಗಳನ್ನು ನಡೆಸುವುದರಿಂದನೀರು ತರದ ಮಕ್ಕಳಿಗೆ ಕುಡಿಯಲು ಬಿಸಿನೀರು ಒದಗಿಸಲು ಕ್ರಮಕೈಗೊಳ್ಳಲಾಗಿದೆ. ಮೊದಲ ದಿನವೇಮಕ್ಕಳಹಾಜರಾತಿ ಚೆನ್ನಾಗಿದೆ. ಮುಂದಿನ ದಿನಗಳಲ್ಲಿ ಇದುಇನ್ನೂ ಹೆಚ್ಚಿಗೆ ಆಗಲಿದೆ. ಶೇ.50ಕ್ಕೂ ಹೆಚ್ಚು ಪ್ರೌಢಶಾಲಾವಿದ್ಯಾರ್ಥಿಗಳು ಹಾಜರಾಗಿದ್ದರು ಎಂದು ಶಿಕ್ಷಣಾಧಿಕಾರಿ ಎಸ್‌.ಸಿ. ಶಿವಮೂರ್ತಿ ತಿಳಿಸಿದರು.

ಮೊದಲ ದಿನ ಕೋವಿಡ್ ಪ್ರಬಂಧ ಬರೆದ ಮಕ್ಕಳು :

ಕೊಳ್ಳೆಗಾಲ: ಕೋವಿಡ್  ನಿಯಂತ್ರಣಕ್ಕೆ ಸರ್ಕಾರ ಎಲ್ಲಾ ರೀತಿಯ ಕ್ರಮ ಅನುಸರಿಸಿ ಶಾಲಾ ಕಾಲೇಜು ಆರಂಭಿಸಿದ್ದು, ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಸಹಕರಿಸಬೇಕು ಎಂದು ಶಾಸಕ ಎನ್‌.ಮಹೇಶ್‌ ಮನವಿ ಮಾಡಿದರು.

ಪಟ್ಟಣದ ಸರ್ಕಾರಿ ಎಸ್‌ವಿಕೆ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಹೊಸ ವರ್ಷದ ಶುಭಾಶಯವನ್ನು ಹೇಳುವ ಮೂಲಕ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು. ಮೊದಲ ದಿನವೇ ಶಾಲೆಯಲ್ಲಿ ಕೊರೊನಾದ ಬಗ್ಗೆ ಪ್ರಬಂಧ ಬರೆಯಿಸಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದ ಶಿಕ್ಷಕರ ಪ್ರಯತ್ನಕ್ಕೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ರೀತಿ ದ್ವಿತೀಯ ಪಿಯುಸಿ ಕಾಲೇಜುಗಳಲ್ಲೂ ಕೋವಿಡ್ ಕುರಿತು ಪ್ರಬಂಧ ಬರೆಯಿಸುವುದರಿಂದ ಎಲ್ಲ ವಿದ್ಯಾರ್ಥಿಗಳಲ್ಲಿ ಕೊರೊನಾ ಭಯ ಹೋಗಲಾಡಿಸಬಹುದು. ವಿದ್ಯಾರ್ಥಿಗಳನ್ನು ಪೋಷಕರು ಪ್ರೋತ್ಸಾಹಿಸಬೇಕು. ಕೋವಿಡ್ ಎಂದು ಹೆದರಬಾರದು ಎಂದು ಸಲಹೆ ನೀಡಿದರು.

2ನೇ ಹಂತದ ಕೋವಿಡ್ ಹರಡುತ್ತಿದೆ ಎಂದು ಪ್ರಚಾರವಾಗಿದ್ದು, ಇದಕ್ಕೆ ಹೆದರಬಾರದು. ಇದರಿಂದ ಯಾರಿಗೂ ಯಾವುದೇ ಅಪಾಯ ಆಗುವುದಿಲ್ಲ. ಧೈರ್ಯವಾಗಿ ಇರಬೇಕು ಎಂದು ಶಾಸಕರು, ಸರ್ಕಾರ ನೀಡಿರುವ ಎಲ್ಲಾ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಶಿಕ್ಷಕ ವೃಂದಕ್ಕೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಕವಿತಾ, ನಗರಸಭಾ ಸದಸ್ಯ ನಾಸೀರ್‌ ಷರೀಫ್, ಬಿಇಒ ಚಂದ್ರಪಾಟೀಲ್‌, ಬಿಆರ್‌ಸಿ ಮಂಜುಳಾ, ಉಪ ಪ್ರಾಂಶುಪಾಲ ಮಹದೇವ ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು

ಟಾಪ್ ನ್ಯೂಸ್

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

Untitled-1

100 ಕೋಟಿ ಡೋಸ್‌ ದಾಖಲೆ: ಹೊಸ ಮೈಲಿಗಲ್ಲು; ದೇಶಾದ್ಯಂತ ಸಂಭ್ರಮ

ಶತಕೋಟಿ  ಡೋಸ್‌ ದಾಖಲೆ

ಶತಕೋಟಿ ಡೋಸ್‌ ದಾಖಲೆ

ಜನರ ಒಗ್ಗಟ್ಟಿನಿಂದಲೇ ಶತಕೋಟಿ ಸಾಧನೆ

ಜನರ ಒಗ್ಗಟ್ಟಿನಿಂದಲೇ ಶತಕೋಟಿ ಸಾಧನೆ

ಲಸಿಕೆ ನೀಡಿಕೆಯಲ್ಲಿ ದೇಶದ ಚರಿತ್ರಾರ್ಹ ಸಾಧನೆ

ಲಸಿಕೆ ನೀಡಿಕೆಯಲ್ಲಿ ದೇಶದ ಚರಿತ್ರಾರ್ಹ ಸಾಧನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chamarajanagara news

ಹಾವು ಕಡಿದು ಯುವಕ ಸಾವು

ಟಿಪ್ಪರ್ – ಕಾರು ನಡುವೆ ಭೀಕರ ಅಪಘಾತ : ಓರ್ವ ಸ್ಥಳದಲ್ಲೆ ಸಾವು , ನಾಲ್ವರಿಗೆ ಗಾಯ

ಟಿಪ್ಪರ್ – ಕಾರು ನಡುವೆ ಭೀಕರ ಅಪಘಾತ : ಓರ್ವ ಸ್ಥಳದಲ್ಲೇ ಸಾವು , ನಾಲ್ವರಿಗೆ ಗಾಯ

Tiger wounded in combat

ಕಾದಾಟದಲ್ಲಿ ಗಾಯಗೊಂಡ ಹುಲಿ

CHAMARAJANAGARA NEWS

ಬುದ್ಧ ಭೂಮಿಯ ಮೊದಲ ಮನಶಾಸ್ತ್ರಜ್ಞ: ಮಹೇಶ್‌

yalandooru news

ತಿಂಡಿ ತಿನ್ನಲೆಂದು ಹೋಟೆಲ್‌ ಗೆ ಹೊರಟವ ನಡುದಾರಿಯಲ್ಲೇ ಉಸಿರು ಚೆಲ್ಲಿದ!

MUST WATCH

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

udayavani youtube

ಅಬ್ಬಾ ಬದುಕಿದೆ ಬಡ ಜೀವ ! ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ಶ್ವಾನದ ಕಥೆ

ಹೊಸ ಸೇರ್ಪಡೆ

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

12 ವರ್ಷದ ಬಾಲಕಿಯಿಂದ ಸ್ಕಾಟ್ಲೆಂಡ್‌ ಜೆರ್ಸಿ ವಿನ್ಯಾಸ!

12 ವರ್ಷದ ಬಾಲಕಿಯಿಂದ ಸ್ಕಾಟ್ಲೆಂಡ್‌ ಜೆರ್ಸಿ ವಿನ್ಯಾಸ!

Untitled-1

100 ಕೋಟಿ ಡೋಸ್‌ ದಾಖಲೆ: ಹೊಸ ಮೈಲಿಗಲ್ಲು; ದೇಶಾದ್ಯಂತ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.