ಆಸ್ಪತ್ರೆಯಲ್ಲಿ ಸಮರ್ಪಕ ಸೇವೆ ಸಿಗದೆ ಯುವಕ ಸಾವು: ಆರೋಪ
Team Udayavani, Sep 19, 2022, 7:45 PM IST
ಗುಂಡ್ಲುಪೇಟೆ (ಚಾಮರಾಜನಗರ): ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮತ್ತು ಆ್ಯಂಬುಲೆನ್ಸ್ ನಲ್ಲಿ ಸಮರ್ಪಕ ಸೇವೆ ಸಿಗದೆ ಯುವಕನೊಬ್ಬ ಮೃತಪಟ್ಟಿರುವ ಆರೋಪ ಕೇಳಿಬಂದಿದೆ.
ಚಿತ್ರದುರ್ಗ ಮೂಲಕ ಅನಿಲ್ (32) ಮೃತಪಟ್ಟ ಯುವಕ. ಇವರು ಕುಟುಂಬ ಸಮೇತವಾಗಿ ತಾಲ್ಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಆಗಮಿಸಿ ದರ್ಶನ ಮುಗಿಸಿ ವಾಪಸ್ ಬರುವಾಗ ಉಸಿರಾಟದ ಸಮಸ್ಯೆ ಉಂಟಾಗಿದೆ. ತಕ್ಷಣ ಆ್ಯಂಬುಲೆನ್ಸ್ ನಲ್ಲಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕರೆತಲಾಯಿತು. ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದ ಕಾರಣ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಮೈಸೂರಿನ ಖಾಸಗಿ ಗೆ ಕಳುಹಿಸಲು ಪ್ರಯತ್ನಿಸುತ್ತಿದ್ದಾಗಲೇ ಮೃತಟ್ಟಿದ್ದರು ಎಂದು ಮೃತರ ಸಂಬಂಧಿಗಳು ಆರೋಪಿಸಿದರು.
ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗುತ್ತದೆ. ಜೀವ ಉಳಿಯುತ್ತದೆ ಎಂಬ ಆಸೆಯೊಂದಿಗೆ ಬಂದರೆ ಇಲ್ಲೆ ಜೀವ ಹೋಯಿತು. ಏಕೆ ಆಸ್ಪತ್ರೆಗೆ ಬರಬೇಕು ಎಂದು ಪತ್ನಿ ಲಕ್ಷ್ಮೀ ಹಾಗೂ ಕುಟುಂಬಸ್ಥರು ರೋಧಿಸಿದರು.
ಈ ಕುರಿತು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಂಜುನಾಥ್ ಪ್ರತಿಕ್ರಿಯೆ ನೀಡಿ, ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಆಗಿಲ್ಲ. ಮೃತ ಯುವಕರಿಗೆ ಕಾರ್ಡಿಯಕಾರೆಸ್ಟ್ ಆಗಿದೆ. ಆಕ್ಸಿಜನ್ ಕೊಟ್ಟು ಮೈಸೂರಿಗೆ ಕಳುಹಿಸುವ ಸಂದರ್ಭದಲ್ಲಿ ಆಯಿತು. ಮತ್ತೆ ಒಳಗೆ ಕರೆದು ಚಿಕಿತ್ಸೆ ನೀಡಿದರೂ ಪ್ರಯೋಜನ ಆಗಲಿಲ್ಲ ಎಂದು ತಿಳಿಸಿದರು.