ಗ್ರಾಮಪಂಚಾಯಿತಿಗಳಲ್ಲಿ ಆಧಾರ್‌ ನೋಂದಣಿ ಬಂದ್‌!


Team Udayavani, May 20, 2019, 3:00 AM IST

grama

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಾರಿಗೊಂಡಿರುವ ಮಾದರಿ ನೀತಿ ಸಂಹಿತೆ ಪರಿಣಾಮ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಜಿಲ್ಲೆಯ ಗ್ರಾಪಂಗಳಲ್ಲಿ ಆಧಾರ್‌ ನೋಂದಣಿ ಪ್ರಕ್ರಿಯೆ ಕಳೆದ ಎರಡು ತಿಂಗಳಿಂದ ಸ್ಥಗಿತಗೊಂಡಿರುವುದರಿಂದ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಆಧಾರ್‌ ಮಾಡಿಸಲು ಪೋಷಕರು ಇನ್ನಿಲ್ಲದ ಪರದಾಟ ನಡೆಸುವ ದೃಶ್ಯಗಳು ಜಿಲ್ಲೆಯಲ್ಲಿ ಸಾಮಾನ್ಯವಾಗಿವೆ.

ಆಧಾರ್‌ಗೆ ಹೆಚ್ಚಿದ ಮಹತ್ವ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿಯೊಂದು ಯೋಜನೆಗೂ ಈಗ ಆಧಾರ್‌ ಕಡ್ಡಾಯಗೊಳಿಸಿರುವುದರಿಂದ ಆಧಾರ್‌ಗೆ ಹೆಚ್ಚಿನ ಮಹತ್ವ ಬಂದಿದೆ. ಆದರೆ ಕಾಲಮಿತಿಯೊಳಗೆ ಆಧಾರ್‌ ಸಿಗದೇ ಸರ್ಕಾರದ ಸೌಲಭ್ಯಗಳು ಜನ ಸಾಮಾನ್ಯರಿಗೆ ದೂರವಾಗಿ ಯೋಜನೆಗಳ ಲಾಭ ಜನರ ಪಾಲಿಗೆ ಸಿಗದಂತಾಗಿದೆ.

ಶಾಲಾ ದಾಖಲಾತಿಗೆ ಆಧಾರ್‌ ಕಡ್ಡಾಯ: ಸದ್ಯ ಜಿಲ್ಲಾದ್ಯಂತ ಶಾಲಾ, ಕಾಲೇಜುಗಳು 2019-20ನೇ ಸಾಲಿನ ಶೈಕ್ಷಣಿಕ ವರ್ಷದ ಆರಂಭಕ್ಕೆ ಸಿದ್ಧತೆ ನಡೆಸಿಕೊಳ್ಳುತ್ತಿವೆ. ದಾಖಲಾತಿ ಪ್ರಕ್ರಿಯೆಗಳು ಎಲ್ಲಾ ಕಡೆ ಶುರುವಾಗಿವೆ. ಆದರೆ ಬ್ಯಾಂಕ್‌ ಖಾತೆ ತೆರೆಯುವುದರಿಂದ ಹಿಡಿದು ಜಾತಿ, ಆದಾಯ ಪ್ರಮಾಣ ಪತ್ರ ಮಾಡಿಸಲು ಹಾಗೂ ಶಾಲಾ, ಕಾಲೇಜುಗಳಲ್ಲಿ ದಾಖಲಾತಿಗಾಗಿ ಆಧಾರ್‌ ಸಂಖ್ಯೆ ಕೊಡುವುದು ಕಡ್ಡಾಯವಾಗಿರುವುದರಿಂದ ಸದ್ಯ ಆಧಾರ್‌ಗೆ ಪರದಾಡುತ್ತಿರುವ ಸನ್ನಿವೇಶಗಳು ಎಲ್ಲೆಡೆ ಕಂಡುಬರುತ್ತಿವೆ.

ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಗ್ರಾಪಂ ಕಚೇರಿಗಳಲ್ಲಿ ಮಾಡಲಾಗುತ್ತಿದ್ದ ಆಧಾರ್‌ ನೋಂದಣಿ ಪ್ರಕ್ರಿಯೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿರುವುದರಿಂದ ಜನ ಸಾಮಾನ್ಯರು ಆಧಾರ್‌ ನೋಂದಣಿಗೆ ಅಲೆದಾಡಬೇಕಿದೆ.

20 ರಿಂದ 30ಮಂದಿಗೆ ಅವಕಾಶ: ಜಿಲ್ಲೆಯ ಕೆಲವೊಂದು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಆಧಾರ್‌ ನೋಂದಣಿಗೆ ಅವಕಾಶ ಕೊಡಲಾಗಿದ್ದರೂ ಸಾಕಷ್ಟು ವಿಳಂಬ ಆಗುತ್ತಿದೆ. ದಿನಕ್ಕೆ ಕೇವಲ 20 ರಿಂದ 30 ಮಂದಿಗೆ ಆಧಾರ್‌ ನೋಂದಣಿಗೆ ಬ್ಯಾಂಕ್‌ಗಳು ಟೋಕನ್‌ ವಿತರಿಸುತ್ತಿರುವುದರಿಂದ ಬೆಳಗ್ಗೆ 4 ಗಂಟೆಗೆ ಬಂದು ಸಾಲುಗಟ್ಟಿ ನಿಂತರೂ ಬ್ಯಾಂಕ್‌ಗಳಲ್ಲಿ ಆಧಾರ್‌ ಪಡೆಯಲು ಟೋಕನ್‌ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.

ನಿತ್ಯ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಜಿಲ್ಲಾ ಕೇಂದ್ರಕ್ಕೆ ಬರುವ ರೈತಾಪಿ ಜನ ಬಂದ ದಾರಿಗೆ ಸುಂಕ ಇಲ್ಲ ಎನ್ನುವಂತೆ ಆಧಾರ್‌ ಪಡೆಯಲು ಸಾಧ್ಯವಾಗದೇ ಬರಿಗೈಯಲ್ಲಿ ವಾಪಸ್ಸು ಹೋಗುವಂತಾಗಿದೆ. ಜಿಲ್ಲೆಯ ಪ್ರತಿ ತಾಲೂಕು ಕೇಂದ್ರಗಳಲ್ಲಿ ತಲಾ ಒಂದೊಂದು ಬ್ಯಾಂಕ್‌ನಲ್ಲಿ ಮಾತ್ರ ಆಧಾರ್‌ಗೆ ಬಯೋಮೆಟ್ರಿಕ್‌ ತೆಗೆಯುತ್ತಿದ್ದು, ದಿನಕ್ಕೆ 25 ರಿಂದ 30 ಮಂದಿಗೆ ತೆಗೆಯಲು ಸಾಧ್ಯವಾಗುತ್ತಿದೆ. ಆದರೆ ಪ್ರತಿ ನಿತ್ಯ ನೂರಾರು ಮಂದಿ ಆಧಾರ್‌ ಕಾರ್ಡ್‌ಗಾಗಿ ಬ್ಯಾಂಕುಗಳಿಗೆ ಲಗ್ಗೆ ಹಾಕಿದರೂ ಪ್ರಯೋಜನವಾಗುತ್ತಿಲ್ಲ.

ಜಿಲ್ಲಾ ಕೇಂದ್ರದಲ್ಲಿ ಆಧಾರ್‌ಗೆ ಸಂಕಷ್ಟ: ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ಆಧಾರ್‌ ಪಡೆಯುವುದು ಜನ ಸಾಮಾನ್ಯರಿಗೆ ಗಗನ ಕುಸುಮವಾಗಿದೆ. ಜಿಲ್ಲಾ ಕೇಂದ್ರದಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿವೆ. ನಗರದ ಕೆನರಾ ಬ್ಯಾಂಕ್‌ ಹಾಗೂ ಎಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದಲ್ಲಿ ಮಾತ್ರ ಆಧಾರ್‌ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದರೂ ದಿನಕ್ಕೆ 20 ರಿಂದ 30 ಮಂದಿಗೆ ಮಾತ್ರ ಅವಕಾಶ ದೊರೆಯುತ್ತಿದೆ.

ಬಹಳಷ್ಟು ಮಂದಿ ಆಧಾರ್‌ ಕಾರ್ಡ್‌ನ್ನು ಹೊಸದಾಗಿ ಪಡೆಯುವುದಕ್ಕಿಂತ ತಿದ್ದುಪಡಿಗೆ ಹೆಚ್ಚು ಅರ್ಜಿಗಳು ಹಾಕುತ್ತಿರುವುದರಿಂದ ನೋಂದಣಿ ಕೇಂದ್ರಗಳು ಜನಸಂದಣಿಯಿಂದ ಕೂಡಿವೆ. ಕಾಲಮಿತಿಯೊಳಗೆ ಅರ್ಜಿ ಹಾಕಲು ಸಾಧ್ಯವಾಗದೇ ಆಧಾರ್‌ ನೋಂದಣಿ ಕೇಂದ್ರಗಳಿಗೆ ನಿತ್ಯ ಸುತ್ತಾಡುವಂತಾಗಿದೆ.

ಗ್ರಾಪಂಗಳಲ್ಲಿ ಅವಕಾಶ ಇರಬೇಕಿತ್ತು: ಗ್ರಾಪಂಗಳಲ್ಲಿ ಆಧಾರ್‌ ನೋಂದಣಿಗೆ ಅವಕಾಶ ಕಲ್ಪಿಸಿದ್ದರೆ ಅನುಕೂಲವಾಗುತ್ತಿತ್ತು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಜಿಲ್ಲಾ ಕೇಂದ್ರಕ್ಕೆ ಆಧಾರ್‌ ತೆಗೆಸಲು ಬರುತ್ತಾರೆ. ಇಲ್ಲಿ ನಿತ್ಯ 20 ರಿಂದ 30 ಮಂದಿಗೆ ಮಾತ್ರ ನೋಂದಣಿಗೆ ಅವಕಾಶ ಇದೆ. ಬಹಳಷ್ಟು ಮಂದಿ ವಾಪಸ್ಸು ಹೋಗುತ್ತಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಾದರೂ ನೋಂದಣಿ ಅವಕಾಶ ಕೊಡಬಹುದಿತ್ತು ಎಂದು ಜಿಲ್ಲಾ ಕೇಂದ್ರದ ಬ್ಯಾಂಕ್‌ನಲ್ಲಿ ಆಧಾರ್‌ ನೋಂದಣಿ ಮಾಡಿಸುವ ತಮ್ಮ ಹೆಸರು ಹೇಳಲು ಇಚ್ಛಿಸದ ನೋಡಲ್‌ ಅಧಿಕಾರಿಯೊಬ್ಬರು ಉದಯವಾಣಿಗೆ ತಿಳಿಸಿದರು.

ಮಧ್ಯ ಮಧ್ಯೆ ಕೈ ಕೊಡುವ ಸರ್ವರ್‌: ಇಡೀ ಜಿಲ್ಲೆಗೆ ಸೇರಿ ಕೇವಲ ನಾಲ್ಕೈದು ಬ್ಯಾಂಕ್‌ಗಳಲ್ಲಿ ಮಾತ್ರ ಆಧಾರ್‌ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಕೆಲವೊಮ್ಮೆ ಮಧ್ಯೆ ಮಧ್ಯೆ ಕೈ ಕೊಡುತ್ತಿರುವ ಸರ್ವರ್‌ ಸಮಸ್ಯೆಯಿಂದ ಆಧಾರ್‌ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡು ಸಾರ್ವಜನಿಕರು ಊಟ, ತಿಂಡಿ ಇಲ್ಲದೇ ದಿನವಿಡೀ ಸಾಲಗಟ್ಟಿ ನಿಂತು ಆಧಾರ್‌ ಪಡೆಯಬೇಕಿದೆ.

ಇದರ ನಡುವೆ ಆಧಾರ್‌ ಕಡ್ಡಾಯವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ನೋಂದಣಿ ಕೇಂದ್ರಗಳು ಗ್ರಾಹಕರಿಂದ ಹೆಚ್ಚುವರಿ ಶುಲ್ಕ ವಸೂಲಿ ದಂಧೆಗೆ ಇಳಿದಿವೆ. ನೋಂದಣಿ ಕೇಂದ್ರದ ಸಿಬ್ಬಂದಿ ಕೈಗೆ ಕಾಸು ಕೊಟ್ಟರೆ ಆಧಾರ್‌ ನೋಂದಣಿ ಬೇಗ ಮಾಡಿಸುವ ಕಾರ್ಯಗಳು ನಡೆಯುತ್ತಿವೆ.

ಮೊಮ್ಮಕ್ಕಳದು ಆಧಾರ್‌ ತಿದ್ದುಪಡಿ ಆಗಬೇಕಿದೆ. ಆದರೆ ನೋಂದಣಿ ಅಧಿಕಾರಿಗಳು ದಿನಕ್ಕೊಂದು ದಾಖಲೆ ತನ್ನಿಯೆಂದು ದಿನ ವಾಪಸ್ಸು ಕಳುಹಿಸುತ್ತಾರೆ. ಆರೇಳು ದಿನಗಳಿಂದ ಬಂದು ಹೋಗುತ್ತಿದ್ದೇನೆ. ಅಧಿಕಾರಿಗಳಿಗೆ ಮಾನವೀಯತೆ ಇಲ್ಲ. ಆಧಾರ್‌ ತಿದ್ದುಪಡಿ ಮಾಡಿಕೊಡುವಂತೆ ಕೇಳಿಕೊಂಡರೂ ಏನೇನೋ ಸಬೂಬು ಹೇಳುತ್ತಾರೆ. ಗ್ರಾಪಂಗಳಲ್ಲಿ ನೋಂದಣಿ ಕಾರ್ಯ ಸ್ಥಗಿತಗೊಂಡಿರುವುದರಿಂದ ನಮಗೆ ತುಂಬಾ ಸಮಸ್ಯೆ ಆಗಿದೆ.
-ವೆಂಕಟರಾಯಪ್ಪ, ಹಳೇಹಳ್ಳಿ ನಿವಾಸಿ

ಟಾಪ್ ನ್ಯೂಸ್

Thirthahalli ರಭಸವಾಗಿ ಹರಿಯುತ್ತಿರವ ಹಳ್ಳದಲ್ಲಿ ಈಜಿ ವಿದ್ಯುತ್ ಲೈನ್ ಸರಿ ಮಾಡಿದ ಸಿಬ್ಬಂದಿ

Thirthahalli ರಭಸವಾಗಿ ಹರಿಯುತ್ತಿರವ ಹಳ್ಳದಲ್ಲಿ ಈಜಿ ವಿದ್ಯುತ್ ಲೈನ್ ಸರಿ ಮಾಡಿದ ಸಿಬ್ಬಂದಿ

mamata

Bangladesh crisis: ಸಂತ್ರಸ್ತರು ನಮ್ಮ ಮನೆ ಬಾಗಿಲಿಗೆ ಬಂದರೆ ಆಶ್ರಯ ನೀಡುತ್ತೇವೆ: ಮಮತಾ

police crime

UP: ದೇವಾಲಯದೊಳಗೆ ನುಗ್ಗಿ ವಿಗ್ರಹಗಳಿಗೆ ಹಾನಿ: 3 ಮಂದಿಯ ಬಂಧನ

Ankola-Cm

Hill Slide: ಶಿರೂರಿಗೆ ಸಿಎಂ ಸಿದ್ದರಾಮಯ್ಯ ಭೇಟಿ, ರಕ್ಷಣಾ ಕಾರ್ಯ ಪರಿಶೀಲನೆ

1—ddsdsa

1 Second ಮಹತ್ವ!; ಚಿಕ್ಕಮಗಳೂರಿನಲ್ಲಿ ಚಲಿಸುತ್ತಿದ್ದ ಕಾರಿನ ಬಾನೆಟ್ ಮೇಲೆ ಬಿದ್ದ ಬೃಹತ್ ಮರ

13

Guru Purnima Spcl: ತಾಯಿ ಜನ್ಮ ಕೊಟ್ಟಳು, ಗುರು ಪುನರ್ಜನ್ಮಕೊಟ್ಟರು!

Tharun Sudhir:‌ ತನ್ನ ಜೀವನದ ಹೀರೋಯಿನ್ ಪರಿಚಯಿಸಲು ರೆಡಿಯಾದ ತರುಣ್‌ ಸುಧೀರ್

Tharun Sudhir:‌ ತನ್ನ ಜೀವನದ ಹೀರೋಯಿನ್ ಪರಿಚಯಿಸಲು ರೆಡಿಯಾದ ತರುಣ್‌ ಸುಧೀರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chikkaballapur: Siddaramaiah should resign if there is morality: MP Dr K Sudhakar

Chikkaballapur: ನೈತಿಕತೆ ಇದ್ದರೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು: ಸಂಸದ ಡಾ.ಕೆ.ಸುಧಾಕರ್

Mysore ಮೂಡಾ ಹಗರಣ… ಸಿಎಂ ಸಿದ್ದರಾಮಯ್ಯಗೆ ಕಪ್ಪು ‌ಚುಕ್ಕೆ: ನಟ ಚೇತನ್ ಆರೋಪ

MUDA Scam: ಸಿಎಂ ಸಿದ್ದರಾಮಯ್ಯಗೆ ಕಪ್ಪು ‌ಚುಕ್ಕೆ… ಸಿಬಿಐ ತನಿಖೆಗೆ ವಹಿಸಿ: ನಟ ಚೇತನ್

4-gudibande

Gudibanda: ಎರಡು ಪ್ರತ್ಯೇಕ ಅಪಘಾತ; ಒಬ್ಬ ಸವಾರ ಸ್ಥಳದಲ್ಲೇ ಸಾವು

ಪ್ರದೀಪ್ ಈಶ್ವರ್ ವಿರುದ್ದ ಅಸಮಾಧಾನ; ಗ್ಯಾರೆಂಟಿ ಯೋಜನೆ ಪ್ರಾಧಿಕಾರಕ್ಕೆ ಮುನಿಯಪ್ಪ ರಾಜೀನಾಮೆ

Pradeep Eshwar ವಿರುದ್ದ ಅಸಮಾಧಾನ; ಗ್ಯಾರೆಂಟಿ ಯೋಜನೆ ಪ್ರಾಧಿಕಾರಕ್ಕೆ ಮುನಿಯಪ್ಪ ರಾಜೀನಾಮೆ

3-Chikkaballapur

Chikkaballapur: ಹಾಲಿನ ದರ ಕಡಿತಗೊಳಿಸಿರುವ ಕೋಚಿಮುಲ್ ವಿರುದ್ದ ಉಪವಾಸ ಸತ್ಯಾಗ್ರಹ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Thirthahalli ರಭಸವಾಗಿ ಹರಿಯುತ್ತಿರವ ಹಳ್ಳದಲ್ಲಿ ಈಜಿ ವಿದ್ಯುತ್ ಲೈನ್ ಸರಿ ಮಾಡಿದ ಸಿಬ್ಬಂದಿ

Thirthahalli ರಭಸವಾಗಿ ಹರಿಯುತ್ತಿರವ ಹಳ್ಳದಲ್ಲಿ ಈಜಿ ವಿದ್ಯುತ್ ಲೈನ್ ಸರಿ ಮಾಡಿದ ಸಿಬ್ಬಂದಿ

mamata

Bangladesh crisis: ಸಂತ್ರಸ್ತರು ನಮ್ಮ ಮನೆ ಬಾಗಿಲಿಗೆ ಬಂದರೆ ಆಶ್ರಯ ನೀಡುತ್ತೇವೆ: ಮಮತಾ

police crime

UP: ದೇವಾಲಯದೊಳಗೆ ನುಗ್ಗಿ ವಿಗ್ರಹಗಳಿಗೆ ಹಾನಿ: 3 ಮಂದಿಯ ಬಂಧನ

Ankola-Cm

Hill Slide: ಶಿರೂರಿಗೆ ಸಿಎಂ ಸಿದ್ದರಾಮಯ್ಯ ಭೇಟಿ, ರಕ್ಷಣಾ ಕಾರ್ಯ ಪರಿಶೀಲನೆ

Guru Purnima Spcl: ವೈಎನ್‌ಪಿ ಎಂಬ ಅಪರೂಪದ ಶಿಕ್ಷಕರು

Guru Purnima Spcl: ವೈಎನ್‌ಪಿ ಎಂಬ ಅಪರೂಪದ ಶಿಕ್ಷಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.