ಮುಂಗಾರು ಹೊಸ್ತಿಲಲ್ಲಿ ಕಳೆಗಟ್ಟಿದ ರಾಸುಗಳ ಸಂತೆ


Team Udayavani, Jun 7, 2023, 3:55 PM IST

ಮುಂಗಾರು ಹೊಸ್ತಿಲಲ್ಲಿ ಕಳೆಗಟ್ಟಿದ ರಾಸುಗಳ ಸಂತೆ

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಮುಂಗಾರು ಹಂಗಾಮು ಹೊಸ್ತಿಲಲ್ಲಿರುವ ರೈತರು ಈಗ ರಾಸುಗಳ ಸಂತೆಯತ್ತ ತಮ್ಮ ಚಿತ್ತ ಹರಿಸಿದ್ದಾರೆ. ಹಲವು ತಿಂಗಳಿಂದ ಚರ್ಮಗಂಟು ರೋಗದ ಕಾರಣಕ್ಕೆ ಜಿಲ್ಲಾಡಳಿತ ಹೇರಿದ್ದ ನಿಷೇಧ ತೆರವಾಗುತ್ತಿದ್ದಂತೆ ಜಿಲ್ಲೆಯಲ್ಲಿ ನಡೆಯುವ ರಾಸುಗಳ ಸಂತೆ ಕಳೆಗಟ್ಟಿದೆ.

ಹೌದು, ಹೇಳಿ ಕೇಳಿ ಜಿಲ್ಲೆಯು ಕೃಷಿ ಪ್ರಧಾನವಾಗಿದ್ದು, ನೀರಾವರಿಗಿಂತ ಮಳೆ ಆಶ್ರಿತ ಕೃಷಿ ಭೂಮಿ ವ್ಯಾಪಕವಾಗಿದ್ದು, ಈ ಬಾರಿ ಬರೋಬ್ಬರಿ 1.48 ಲಕ್ಷ ಹೆಕ್ಟೇರ್‌ ಪ್ರಮಾಣದಲ್ಲಿ ಬಿತ್ತನೆಗೆ ಸಜ್ಜಾಗುತ್ತಿದ್ದಂತೆ ರೈತರು ಉಳುವ ಎತ್ತುಗಳಿಗೆ ಹುಡುಕಾಟ ನಡೆಸಿದ್ದಾರೆ.

ಕೃಷಿ ಕಾರ್ಯಗಳಿಗೆ ಬೆನ್ನೆಲುಬು: ಎಷ್ಟೇ ಆಧುನಿಕ ತಂತ್ರ ಜ್ಞಾನ ಬೆಳೆದರೂ ರೈತರು ಉಳುಮೆಯಿಂದ ಹಿಡಿದು ಬಿತ್ತನೆ ಕಾರ್ಯವನ್ನು ಜೋಡೆತ್ತುಗಳ ಮೂಲಕ ಮಾಡು ವ ಸಂಪ್ರದಾಯವನ್ನು ಇಂದಿಗೂ ಹೊಂದಿದ್ದಾರೆ. ಸಣ್ಣ ಪುಟ್ಟ ರೈತರಿಗಿಂತ ಹೆಚ್ಚು ಹಿಡುವಳಿ ಭೂಮಿ ಹೊಂದಿರುವ ರೈತರು ಈಗ ವರ್ಷವಿಡೀ ತಮ್ಮ ಕೃಷಿ ಕಾರ್ಯಗಳಿಗೆ ಬೆನ್ನ ಲುಬಾಗಿರುವ ಜಾನುವಾರುಗಳ ಖರೀದಿಗೆ ಮುಂದಾಗಿದ್ದಾರೆ.

ಜೋಡೆತ್ತು ಖರೀದಿ ವಾಡಿಕೆ: ಜಿಲ್ಲೆಯಲ್ಲಿ ನಡೆಯು ತ್ತಿರುವ ಜಾನುವಾರುಗಳ ಸಂತೆ ರೈತರಿಂದ ಹೌಸ್‌ಫ‌ುಲ್‌ ಆಗಿ ಜಾನುವಾರುಗಳ ಕೊಡು ಕೊಂಡುಕೊಳ್ಳುವಿಕೆಯ ಭರಾಟೆ ಜೋರಾಗಿದೆ. ಬೇಸಿಗೆ ಶುರುವಾಗುವ ಹೊತ್ತಿಗೆ ಬಹಳಷ್ಟು ರೈತರು ಮೇವು, ಕುಡಿಯುವ ನೀರಿನ ಕೊರತೆ ಕಾರಣಕ್ಕೆ ತಮ್ಮಲ್ಲಿರುವ ಉಳುವ ಎತ್ತುಗಳನ್ನು ಮಾರಾಟ ಮಾಡಿ ಮುಂಗಾರು ಶುರುವಾಗುವ ಹೊತ್ತಿಗೆ ಜೋಡೆತ್ತುಗಳನ್ನು ಖರೀದಿಸುವ ವಾಡಿಕೆ ಇದೆ.

ಪಳಗಿರುವ ಜೋಡೆತ್ತುಗಳತ್ತ ಚಿತ್ತ: ಜಾನುವಾರುಗಳ ವಾರ ಸಂತೆಗೆ ದೂರದ ಊರುಗಳಿಂದ ಜೋಡೆತ್ತುಗಳನ್ನು ಕರೆ ತಂದು ರೈತರು, ವ್ಯಾಪಾರಸ್ಥರು ಮಾರಾಟದಲ್ಲಿ ತೊಡಗಿದ್ದು, ಸಂತೆಗಳಿಗೆ ಬರುವ ರೈತರು ಕೃಷಿ ಚಟುವಟಿಕೆಗಳಲ್ಲಿ ಪಳಗಿರುವ ಜೋಡೆತ್ತುಗಳನ್ನು ಅಳೆದು ತೂಗಿ ಖರೀದಿಗೆ ಮುಂದಾಗಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಶನಿವಾರ ದನಗಳ ಸಂತೆ ನಡೆದರೆ, ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಪ್ರತಿ ಭಾನುವಾರ ನಡೆಯುತ್ತಿದೆ. ಈ ಸಂತೆಗಳಿಗೆ ಆಂಧ್ರದ ಮದನಪಲ್ಲಿ, ಚಿತ್ತೂರು, ಕೋಲಾರ, ಹೊಸಕೋಟೆ, ದೊಡ್ಡಬಳ್ಳಾಪುರ, ತುಮಕೂರು ಜಿಲ್ಲೆಗಳಿಂದಲೂ ರೈತರು ಆಗಮಿಸಿ ಬೇಕಾದ ಎತ್ತುಗಳನ್ನು ಮಧ್ಯವರ್ತಿಗಳ ಮುಖಾಂತರ ಖರೀದಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.

ಗರಿಷ್ಠ 1.50 ಲಕ್ಷ ವರೆಗೂ ಜೋಡೆತ್ತು ಮಾರಾಟ!: ಜಿಲ್ಲಾದ್ಯಂತ ಕೃಷಿ ಚಟುವಟಿಕೆಗಳು ವೇಗ ಪಡೆದಿರುವ ಹಿನ್ನೆಲೆಯಲ್ಲಿ ಉಳುವ ಎತ್ತುಗಳಿಗೆ ಸಹಜವಾಗಿಯೇ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ಬೆಲೆ ಕೇಳಿದ ಕೂಡಲೇ ರೈತರು ಕಂಗಾಲಾಗುತ್ತಿದ್ದಾರೆ. ಕನಿಷ್ಠ 20 ಸಾವಿರದಿಂದ ಶುರುವಾಗುವ ಜೋಡೆತ್ತುಗಳ ಬೆಲೆ 1.50 ಲಕ್ಷ ವರೆಗೂ ಮಾರಾಟ ಆಗುತ್ತಿವೆ. ಕೆಲ ರೈತರು ಹಣ ಎಷ್ಟಾದರೂ ಪರವಾಗಿಲ್ಲ, ಜಾತಿಯಲ್ಲಿ ದುಡಿಬೇಕು, ಕೆಲಸ ಮಾಡಬೇಕೆಂಬ ನಿಟ್ಟಿನಲ್ಲಿ ಲಕ್ಷಾಂತರ ರೂ. ಹಣ ಸುರಿದು ಜೋಡೆತ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ.

ನಮ್ಮಲ್ಲಿದ್ದ ಜೋಡೆತ್ತುಗಳನ್ನು 6 ತಿಂಗಳ ಹಿಂದೆ ಚರ್ಮಗಂಟು ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾರಾಟ ಮಾಡಿದ್ದೆವು. ಈಗ ಹೊಸ ಜೋಡೆತ್ತುಗಳನ್ನು ಖರೀದಿಸಲು ಸಂತೆಗೆ ಬಂದಿರುವೆ. ದರ ನೋಡಿದರೆ ವಿಪರೀತ ಇದೆ, 30 ರಿಂದ 50 ಸಾವಿರ ಒಳಗೆ ಜೋಡೆತ್ತುಗಳನ್ನು ಖರೀದಿಸಲು ನಿರ್ಧರಿಸಿದ್ದೇನೆ. ●ಸಿದ್ದಪ್ಪ, ಪೋಶೆಟ್ಟಿಹಳ್ಳಿ ರೈತ

75 ಸಾವಿರಕ್ಕೆ ಕೇಳಿದರೂ ಕೊಡಲಿಲ್ಲ ನಾವು ಸಾಕಿರುವ ಹಳ್ಳಿಕಾರ್‌ ಜೋಡೆತ್ತು ಗಳನ್ನು 75 ಸಾವಿರಕ್ಕೆ ಕೇಳುತ್ತಿದ್ದರೂ ನಾವು ಕೊಡುತ್ತಿಲ್ಲ. ಕನಿಷ್ಠ 80 ಸಾವಿರ ಕೊಟ್ಟರೆ ಮಾರಾಟ ಮಾಡುತ್ತೇನೆ. ಈ ವರ್ಷ ಹೊಸ ಜೋಡೆತ್ತುಗಳನ್ನು ಖರೀದಿಸಬೇಕೆಂದು ಹಳೆ ಜೋಡೆತ್ತುಗಳನ್ನು ಮಾರಾಟ ಮಾಡಲು ನಿರ್ಧರಿಸಿದೇನೆ. ●ಅರುಣ್‌ ಕುಮಾರ್‌, ಯುವ ರೈತ, ಗೊಂದಲಹಳ್ಳಿ, ಚಿಕ್ಕಬಳ್ಳಾಪುರ ತಾ.

-ಕಾಗತಿ ನಾಗರಾಜಪ್ಪ

ಟಾಪ್ ನ್ಯೂಸ್

Brahmavar ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Brahmavar ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Moodabidri: ಉದ್ಯಮಿ ಮನೆಯಲ್ಲಿ ರೂ.1.5 ಲಕ್ಷ ಕಳ್ಳತನ

Moodabidri: ಉದ್ಯಮಿ ಮನೆಯಲ್ಲಿ ರೂ.1.5 ಲಕ್ಷ ಕಳ್ಳತನ

1-sasadsa

2nd ODI ; ಆಸೀಸ್ ವಿರುದ್ಧ ಭರ್ಜರಿ ಜಯ : ಸರಣಿ ವಶ ಪಡಿಸಿಕೊಂಡ ಟೀಮ್ ಇಂಡಿಯಾ

Katapadi: ಮಟ್ಕಾ ಅಡ್ಡೆಗೆ ದಾಳಿ ; ವ್ಯಕ್ತಿ ಸೆರೆ

Katapadi: ಮಟ್ಕಾ ಅಡ್ಡೆಗೆ ದಾಳಿ ; ವ್ಯಕ್ತಿ ಸೆರೆ

Fraud Case ಶಂಕರಪುರ: ಬ್ಯಾಂಕ್‌ ಕೆವೈಸಿ ಮಾಹಿತಿ ಪಡೆದು ಹಣ ವಂಚನೆ: ದೂರು

Fraud Case ಶಂಕರಪುರ: ಬ್ಯಾಂಕ್‌ ಕೆವೈಸಿ ಮಾಹಿತಿ ಪಡೆದು ಹಣ ವಂಚನೆ: ದೂರು

1-sasadas

Pavagada ; ಹಾವು ಕಡಿದು ಅರು‌ ವರ್ಷದ ಬಾಲಕ ಸಾವು: ಆಸ್ಪತ್ರೆ ಎದುರು ಪ್ರತಿಭಟನೆ

Ullal ನೇತ್ರಾವತಿ ಸೇತುವೆಯಲ್ಲಿ ಮೀನು ಸಾಗಾಟದ ಪಿಕಪ್‌ ವಾಹನ ಪಲ್ಟಿ

Ullal ನೇತ್ರಾವತಿ ಸೇತುವೆಯಲ್ಲಿ ಮೀನು ಸಾಗಾಟದ ಪಿಕಪ್‌ ವಾಹನ ಪಲ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Government land: ಜಿಲ್ಲಾದ್ಯಂತ ಒತ್ತುವರಿ ತೆರವಿಗೆ ಕಾದಿದೆ 800 ಎಕರೆ!

Government land: ಜಿಲ್ಲಾದ್ಯಂತ ಒತ್ತುವರಿ ತೆರವಿಗೆ ಕಾದಿದೆ 800 ಎಕರೆ!

TDY-12

Chikkaballapur: ಜಿಲ್ಲೆಯಲ್ಲಿ ಅಕ್ರಮ-ಸಕ್ರಮ: ತಿರಸ್ಕೃತ ಅರ್ಜಿಗಳೇ ಹೆಚ್ಚು!

TDY-11

Teacher: ಅನಕ್ಷರಸ್ಥರಿಗೆ ಅಕ್ಷರ ಬಿತ್ತಿದ ನಾರಾಯಣಸ್ವಾಮಿ

tdy-17

Custard Apple: ಬರದ ತೀವ್ರತೆಗೆ ಕಣ್ಮರೆಯಾದ ಸೀತಾಫ‌ಲ!

Thieves: ಕೊನೆಗೂ ಪೊಲೀಸರ ಬಲೆಗೆಬಿದ್ದ ದಾಳಿಂಬೆ ಹಣ್ಣು ಕಳ್ಳರು

Thieves: ಕೊನೆಗೂ ಪೊಲೀಸರ ಬಲೆಗೆಬಿದ್ದ ದಾಳಿಂಬೆ ಹಣ್ಣು ಕಳ್ಳರು

MUST WATCH

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

ಹೊಸ ಸೇರ್ಪಡೆ

1-sasad

Kalasa: ಹೃದಯಾಘಾತದಿಂದ ಎಎಸ್‌ಐ ಸಾವು

RAMA LINGA REDDY

Politics: “ಡಿಕೆಶಿ ಸಿಎಂ” ಚರ್ಚೆ ಅನವಶ್ಯಕ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ

alchohol

AI News: ಮದ್ಯ ಸಂಸ್ಥೆಗೆ ಎಐ CEO

S JAISHANKAR

UNO: ಜಗತ್ತಿನಲ್ಲಿ ಈಗಲೂ ದ್ವಂದ್ವ ನಿಲುವು: ಜೈಶಂಕರ್‌ 

MANIPUR ARMY

Manipur: ಮಾಮೂಲಿ ಟ್ರಕ್‌ಗಳಿಗೆ ಸೇನೆ ಮಾದರಿ ಬಣ್ಣ ಬಳಿದ ಬಂಡುಕೋರರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.