
ಗುಡಿಬಂಡೆ: ಕಿಡಿಗೇಡಿಗಳ ಕೃತ್ಯಕ್ಕೆ 10 ಸಾವಿರ ಮೀನುಗಳ ನಾಶ
Team Udayavani, Jan 24, 2023, 4:31 PM IST

ಗುಡಿಬಂಡೆ: ತಾಲೂಕಿನ ಹಳೇ ಗುಡಿಬಂಡೆ ಗ್ರಾಮದ ವಾಸಿಯಾದ ಶ್ರೀನಿವಾಸ್ ಎಂಬ ಯುವ ರೈತನ ಜಮೀನಿನಲ್ಲಿನ ಮೀನು ಸಾಕಾಣಿಕೆ ಹೊಂಡಕ್ಕೆ ಕಿಡಿಗೇಡಿಗಳು ವಿಷ ಬೆರಸಿದ ಕಾರಣ ಸುಮಾರು 10 ಸಾವಿರಕ್ಕೂ ಹೆಚ್ಚು ಮೀನು ಮರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಶ್ರೀನಿವಾಸ ಎಂಬ ಯುವ ರೈತ ತಮ್ಮ ಜಮೀನಿನಲ್ಲಿರುವ ಸುಮಾರು ೪ ತಿಂಗಳ ಹಿಂದೆ ಕೈ ಸಾಲ ಮಾಡಿಕೊಂಡು ಹೊಸದಾಗಿ ಮೀನು ಸಾಕಾಣಿಕೆ ಮಾಡಲು ಹೊಂಡ ತೆಗೆದು ಸುಮಾರು 18 ಸಾವಿರ ಮೀನು ಮರಿಗಳನ್ನು ಬಿಟ್ಟಿದ್ದು, ಅವುಗಳು ಉತ್ತಮ ಬೆಳವಣಿಗೆಯಲ್ಲಿದ್ದು, ಇನ್ನೇನು ಅವು ದೊಡ್ಡದಾಗಿ ಅವುಗಳನ್ನು ಮಾರಾಟ ಮಾಡಿದರೆ, ಅವುಗಳ ಮಾರಾಟದಿಂದ ಬಂದ ಹಣದಲ್ಲಿ ಕೈ ಸಾಲ ತೀರುವಳಿ ಮಾಡಿ, ಆರ್ಥಿಕವಾಗಿ ಸದೃಢರಾಗ ಬಹುದು ಎಂದು ಆಸೆ ಇಟ್ಟುಕೊಂಡಿದ್ದ ಯುವ ರೈತನ ಬಾಳಲ್ಲಿ ಯಾರೋ ಕಿಡಿಗೇಡಿಗಳು ಹಾಕಿದ ವಿಷದಿಂದಾಗಿ ಸುಮಾರು 10 ಸಾವಿರದಷ್ಟು ಮೀನು ಮರಿಗಳು ಸಾವನ್ನಪ್ಪಿದ್ದು, ರೈತನ ಬಾಳಲ್ಲಿ ಏಕಾಏಕಿ ಬರಸಿಡಿಲು ಬಡಿದಂತಾಗಿದೆ. ಮೀನು ಮರಿಗಳ ಸಾವಿನಿಂದ ರೈತನಿಗೆ ಸುಮಾರು 2.50 ಲಕ್ಷ ರೂಪಾಯಿಗಳು ನಷ್ಟ ಉಂಟಾಗಿದೆ ಎಂದು ರೈತ ಶ್ರೀನಿವಾಸ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
