ತ್ಯಾಜ್ಯ ನೀರಿನಿಂದ ಹಿಪ್ಪು ನೇರಳೆ ತೋಟ

Team Udayavani, May 17, 2019, 1:43 PM IST

chikk-4

ಚಿಕ್ಕಬಳ್ಳಾಪುರ: ವ್ಯರ್ಥವಾಗುತಿದ್ದ ಮನೆ ಬಳಕೆ ನೀರನ್ನೇ ಬಳಸಿಕೊಂಡು ತಾಲೂಕಿನ ಕುಪ್ಪಳ್ಳಿಯ ರೈತ ಮುನಿಯಪ್ಪ ಹಿಪ್ಪುನೇರಳೆ ಸೊಪ್ಪಿನ ತೋಟ ಬೆಳೆದು ಜಿಲ್ಲೆಯ ಇತರೇ ರೈತರಿಗೆ ಮಾದರಿಯಾಗಿದ್ದು, ಮುನಿಯಪ್ಪ ತೋಟ ಈಗ ಇತರೇ ರೈತರಿಗೆ ಪ್ರಯೋಗಾಲಯ ಶಾಲೆಯಾಗಿ ಪರಿಣಮಿಸಿದೆ.

ಇತ್ತೀಚಿಗೆ ಬಯಲುಸೀಮೆಯಲ್ಲಿ ತೀವ್ರ ಮಳೆ ಕೊರತೆ, ಅಂತರ್ಜಲ ಕುಸಿತದಿಂದ ಕೈಕೊಡುತ್ತಿರುವ ಕೊಳವೆ ಬಾವಿಗಳಿಂದ ಲಕ್ಷಾಂತರ ರೂ. ಬಂಡವಾಳ ಹಾಕಿ ಕೈಸುಟ್ಟುಕೊಳ್ಳುತ್ತಿರುವ ರೈತರು ನೊಂದು ಕೃಷಿಯಿಂದ ವಿಮುಖರಾಗುತ್ತಿರುವ ಸಂದರ್ಭದಲ್ಲಿ ಮುನಿಯಪ್ಪ ಕೊಳಚೆ ನೀರನ್ನು ಬಳಸಿ ಹಿಪ್ಪುನೇರಳೆ ಸೊಪ್ಪು ಬೆಳೆದಿದ್ದಾರೆ.

ವ್ಯರ್ಥ ನೀರು ಸಂಗ್ರಹ: ಎರಡು ವರ್ಷಗಳ ಹಿಂದೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ)ಯೋಜನೆಯಡಿ ತಮ್ಮ ಮಳೆ ಆಶ್ರಿತ 30 ಗುಂಟೆ ಜಮೀನಿನಲ್ಲಿ ಹಿಪ್ಪುನೇರಳೆಯ 330 ಸಸಿಗಳನ್ನು ನಾಟಿ ಮಾಡಿಸಿದರು. ಬೇಸಿಗೆಯಲ್ಲಿ ಮರಗಡ್ಡಿ ಬೆಳೆಸಲು ಮುನಿಯಪ್ಪ ಟ್ಯಾಂಕರ್‌ ನೀರು ಮೊರೆ ಹೋಗುತ್ತಿದ್ದರು.

ಟ್ಯಾಂಕರ್‌ ನೀರಿನ ಖರ್ಚು, ಸೊಪ್ಪಿನ ಆದಾಯ ಸರಿ ಹೊಂದದಿರುವುದರಿಂದ ನೀರಿನ ಬಗ್ಗೆ ಪರ್ಯಾಯ ಯೋಚನೆ ಮಾಡುವ ಸಂದರ್ಭದಲ್ಲಿ ತ್ಯಾಜ್ಯ ನೀರಿನ ಬಳಕೆಯ ಚಿಂತನೆ ಮಾಡಿ ತನ್ನ ಮನೆ, ತಟ್ಟೆ, ಪಾತ್ರೆ, ಬಟ್ಟೆ ತೊಳೆದು ವ್ಯರ್ಥವಾಗುವ ನೀರನ್ನು ಸಂಗ್ರಹಿಸಿ ರೇಷ್ಮೆ ಸೊಪ್ಪು ಬೆಳೆಯಲು ನಿರ್ಧರಿಸಿದರು.

ಪ್ರತಿಫ‌ಲಕ್ಕೆ ವಿಳಂಬ ಇಲ್ಲ: ಕಳೆದ ಮೂರು ತಿಂಗಳಿಂದ ಮನೆಯಲ್ಲಿ ಸಂಗ್ರಹವಾಗುವ ತ್ಯಾಜ್ಯ ನೀರನ್ನು 20 ಲೀ. ಕ್ಯಾನ್‌ಗಳಿಗೆ ತುಂಬಿಕೊಂಡು ತೋಟದಲ್ಲಿ ಗಿಡಗಳಿಗೆ ಹರಿಸಲು ಮುಂದಾದ ಮುನಿಯಪ್ಪಗೆ ಅದರ ಪ್ರತಿಫ‌ಲ ತಿಳಿಯಲು ಹೆಚ್ಚು ದಿನ ಕಾಯಲಿಲ್ಲ.

ಹನಿ ನೀರಾವರಿ ಮಾದರಿಯಲ್ಲಿ ಗಿಡಗಳಿಗೆ ನೀರುಣಿಸಿದರೆ ಇನ್ನೂ ಹೆಚ್ಚು ಪ್ರಯೋಜನಕಾರಿ ಎಂಬುದನ್ನು ಅರಿತು ಖಾಲಿ ಯಾದ ಕುಡಿಯುವ ನೀರಿನ ಬಾಟಲಿಗಳನ್ನು ಸಂಗ್ರಹಿಸಿ ಗಿಡ ಗಳಿಗೆ ಬುಡಕ್ಕೆ ಕಟ್ಟಿ ಅವುಗಳಿಗೆ ನೀರು ತುಂಬಿಸಿದರು. ಹೀಗಾಗಿ ಮುನಿಯಪ್ಪ ಪ್ರಯೋಗ ಯಶಸ್ಸು ಕಂಡು ಈಗ 30 ಗುಂಟೆ ಜಮೀನಲ್ಲಿ ಹಿಪ್ಪುನೇರಳೆ ಸೊಪ್ಪು ಸಾಕಷ್ಟು ಇಳುವರಿ ಜೊತೆಗೆ ಗುಣಮಟ್ಟದ ಸೊಪ್ಪು ಬೆಳೆದಿದ್ದಾರೆ.

ಒಟ್ಟಿನಲ್ಲಿ ಜಿಲ್ಲೆಯ ಹನಿ ಹನಿ ನೀರಿಗೂ ಹಾಹಾಕಾರ ಎದುರಾಗಿ ರೈತರು ಲಕ್ಷಾಂತರ ರೂ. ವೆಚ್ಚ ಮಾಡಿ ಹಾಕಿಸುತ್ತಿ ರುವ ಕೊಳವೆ ಬಾವಿಗಳು ವಿಫ‌ಲವಾಗಿ ಕೃಷಿ ಚಟುವಟಿಕೆಗಳಿಂದ ದೂರ ಸರಿಯುತ್ತಿರುವ ಸಂದರ್ಭದಲ್ಲಿ ಕುಪ್ಪಳ್ಳಿಯ ರೈತ ಮುನಿಯಪ್ಪ ತನ್ನ ಅಲ್ಪ ಜಮೀನಿನಲ್ಲಿ ತ್ಯಾಜ್ಯ ನೀರು ಬಳಸಿ ಕೊಂಡು ರೇಷ್ಮೆ ಸೊಪ್ಪು ಬೆಳೆದಿರುವುದು ನಿಜಕ್ಕೂ ಶ್ಲಾಘನೀಯ ವಿಚಾರ.

ಸಮೃದ್ಧ ಇಳುವರಿ

ಎರಡು ವರ್ಷದ ಹಿಂದೆ ಹಳ್ಳದ ನೀರು ತಂದು ತೋಟಕ್ಕೆ ಹಾಕುತ್ತಿದ್ದೆ. ಈಗ ಹಳ್ಳ ಕೂಡ ಒಣಗಿದೆ. 1,500ರಿಂದ 1,900 ಅಡಿ ಆಳಕ್ಕೆ ಕೊಳವೆಬಾವಿ ಕೊರೆಯಿಸಿದರೂ ನೀರು ಸಿಗುವುದು ಖಚಿತವಿಲ್ಲ. ಹಿಡುವಳಿ ಬೇರೆ ಚಿಕ್ಕದು. ನೀರಿಗಾಗಿ ಏನು ಮಾಡೋಣ ಎಂದು ಯೋಚಿಸುತ್ತಿದ್ದಾಗ ವ್ಯರ್ಥವಾಗುತ್ತಿದ್ದ ಮನೆ ಬಳಕೆ ನೀರು ಗಮನಕ್ಕೆ ಬಂತು. ಪ್ರತಿ ದಿನ ಮನೆಯಲ್ಲಿ ಸಂಗ್ರಹವಾಗುವ ತ್ಯಾಜ್ಯ ನೀರನ್ನು ಬಳಸಿಕೊಂಡು ಹೀಪ್ಪು ನೇರಳೆ ಸೊಪ್ಪು ಬೆಳೆದಿದ್ದೇನೆ. ಇಳುವರಿ ಕೂಡ ಚೆನ್ನಾಗಿ ಬಂದಿದೆ ಎಂದು ಮುನಿಯಪ್ಪ ಸಂತಸದಿಂದ ನುಡಿದರು.

ಟಾಪ್ ನ್ಯೂಸ್

ಮುಂಗಾರು ಅಧಿವೇಶನದ ಬಳಿಕ ಅಜಿತ್ ಬಣದ ಕೆಲವು ಶಾಸಕರು ಪಕ್ಷಾಂತರಗೊಳ್ಳಲಿದ್ದಾರೆ: Rohit Pawar

ಮುಂಗಾರು ಅಧಿವೇಶನದ ಬಳಿಕ ಅಜಿತ್ ಬಣದ ಕೆಲವು ಶಾಸಕರು ಪಕ್ಷಾಂತರಗೊಳ್ಳಲಿದ್ದಾರೆ: Rohit Pawar

2-

ಗ್ರಾಮದ ಸಮಸ್ಯೆ ಪರಿಹಾರಕ್ಕೆ 100% ಮತ

ಬಸ್‌ ಟಿಕೆಟ್‌ ದರ ಏರಿಕೆ? ನಾಲ್ಕೂ ನಿಗಮಗಳಿಂದ ಶೇ. 25 ಹೆಚ್ಚಳಕ್ಕೆ ಪ್ರಸ್ತಾವನೆ

ಬಸ್‌ ಟಿಕೆಟ್‌ ದರ ಏರಿಕೆ? ನಾಲ್ಕೂ ನಿಗಮಗಳಿಂದ ಶೇ. 25 ಹೆಚ್ಚಳಕ್ಕೆ ಪ್ರಸ್ತಾವನೆ

Udupi ಇನ್ನು ಮುತ್ತು ರತ್ನ ನಗರಿ! ಕೇಂದ್ರ ಸರಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಪರಿಕಲ್ಪನೆ

Udupi ಇನ್ನು ಮುತ್ತು ರತ್ನ ನಗರಿ! ಕೇಂದ್ರ ಸರಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಪರಿಕಲ್ಪನೆ

1-24-tuesday

Daily Horoscope: ಉದ್ಯೋಗದಲ್ಲಿ ನಿರೀಕ್ಷೆ ಮೀರಿ ಪ್ರಗತಿ, ಮನೋಬಲದಿಂದ ಕಾರ್ಯಸಿದ್ದಿ

ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ!

Kannada ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ! ಕಾಸರಗೋಡಿನಂತೆ ಗಡಿಭಾಗದಲ್ಲಿ ಮಹಾ ಉದ್ಧಟತನ

ಮೂರೂವರೆ ತಾಸು ಬಿಎಸ್‌ವೈ ವಿಚಾರಣೆ ; ಅಪ್ರಾಪ್ತ ವಯಸ್ಕಳಿಗೆ ನಾನು ತೊಂದರೆ ನೀಡಿಲ್ಲ

ಮೂರೂವರೆ ತಾಸು ಬಿಎಸ್‌ವೈ ವಿಚಾರಣೆ ; ಅಪ್ರಾಪ್ತ ವಯಸ್ಕಳಿಗೆ ನಾನು ತೊಂದರೆ ನೀಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Monsoon: ಕುರಿ, ಕೋಳಿ ಸಾಕಾಣಿಕೆ ಜೋರು!

chiಅಖಾಡದಲ್ಲಿ ನಾನೇ ಇದ್ದಿದ್ದರೆ ಫ‌ಲಿತಾಂಶ ಬೇರೆಯೇ ರೀತಿಯಲ್ಲಿ ಇರುತ್ತಿತ್ತು: ಪ್ರದೀಪ್‌

ಅಖಾಡದಲ್ಲಿ ನಾನೇ ಇದ್ದಿದ್ದರೆ ಫ‌ಲಿತಾಂಶ ಬೇರೆಯೇ ರೀತಿಯಲ್ಲಿ ಇರುತ್ತಿತ್ತು: ಪ್ರದೀಪ್‌

Chikkaballapura; ಸುಧಾಕರ್ ಗೆ ಜನಾಭಿಪ್ರಾಯ ಸಿಕ್ಕಿದೆ, ಆದರೆ ರಾಜೀನಾಮೆ….:ಪ್ರದೀಪ್ ಈಶ್ವರ್

Chikkaballapura; ಸುಧಾಕರ್ ಗೆ ಜನಾಭಿಪ್ರಾಯ ಸಿಕ್ಕಿದೆ, ಆದರೆ ರಾಜೀನಾಮೆ….:ಪ್ರದೀಪ್ ಈಶ್ವರ್

manchenahalli

Manchenahalli; ವಿದ್ಯುತ್ ಸ್ಪರ್ಶವಾಗಿ ಕಂಬದಲ್ಲಿಯೇ ಮೃತಪಟ್ಟ ಬೆಸ್ಕಾಂ ಸಿಬ್ಬಂದಿ

3-gudibande

Gudibanda: ಕಾರು ಅಪಘಾತ: ಮೂವರು ಬೆಸ್ಕಾಂ ಸಿಬ್ಬಂದಿಗಳು ಸಾವು

MUST WATCH

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

udayavani youtube

ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಆಡಳಿತ ಮಾಡಲು ಅಸಮರ್ಥರು

udayavani youtube

ಬಿಜೆಪಿ ಹಿರಿಯ ಮುಖಂಡ ಎಂ.ಬಿ‌.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

ಹೊಸ ಸೇರ್ಪಡೆ

ಮುಂಗಾರು ಅಧಿವೇಶನದ ಬಳಿಕ ಅಜಿತ್ ಬಣದ ಕೆಲವು ಶಾಸಕರು ಪಕ್ಷಾಂತರಗೊಳ್ಳಲಿದ್ದಾರೆ: Rohit Pawar

ಮುಂಗಾರು ಅಧಿವೇಶನದ ಬಳಿಕ ಅಜಿತ್ ಬಣದ ಕೆಲವು ಶಾಸಕರು ಪಕ್ಷಾಂತರಗೊಳ್ಳಲಿದ್ದಾರೆ: Rohit Pawar

2-

ಗ್ರಾಮದ ಸಮಸ್ಯೆ ಪರಿಹಾರಕ್ಕೆ 100% ಮತ

ಬಸ್‌ ಟಿಕೆಟ್‌ ದರ ಏರಿಕೆ? ನಾಲ್ಕೂ ನಿಗಮಗಳಿಂದ ಶೇ. 25 ಹೆಚ್ಚಳಕ್ಕೆ ಪ್ರಸ್ತಾವನೆ

ಬಸ್‌ ಟಿಕೆಟ್‌ ದರ ಏರಿಕೆ? ನಾಲ್ಕೂ ನಿಗಮಗಳಿಂದ ಶೇ. 25 ಹೆಚ್ಚಳಕ್ಕೆ ಪ್ರಸ್ತಾವನೆ

Udupi ಇನ್ನು ಮುತ್ತು ರತ್ನ ನಗರಿ! ಕೇಂದ್ರ ಸರಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಪರಿಕಲ್ಪನೆ

Udupi ಇನ್ನು ಮುತ್ತು ರತ್ನ ನಗರಿ! ಕೇಂದ್ರ ಸರಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಪರಿಕಲ್ಪನೆ

1-24-tuesday

Daily Horoscope: ಉದ್ಯೋಗದಲ್ಲಿ ನಿರೀಕ್ಷೆ ಮೀರಿ ಪ್ರಗತಿ, ಮನೋಬಲದಿಂದ ಕಾರ್ಯಸಿದ್ದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.