Udayavni Special

“ಕೀಲು ಕುದುರೆ’ ನಾರಾಯಣಪ್ಪಗೆ ಬಂತು ಪ್ರಶಸ್ತಿ


Team Udayavani, Jan 5, 2021, 7:01 PM IST

“ಕೀಲು ಕುದುರೆ’ ನಾರಾಯಣಪ್ಪಗೆ ಬಂತು ಪ್ರಶಸ್ತಿ

ಚಿಕ್ಕಬಳ್ಳಾಪುರ: ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ 2020ನೇ ಸಾಲಿನಲ್ಲಿ ನೀಡುವ ಪ್ರಶಸ್ತಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಎಸ್‌. ಗೊಲ್ಲಹಳ್ಳಿ ಗ್ರಾಮದ ಕೀಲುಕುದುರೆ ಕಲಾವಿದ ನಾರಾಯಣಪ್ಪ ಭಾಜನರಾಗಿದ್ದಾರೆ.

ಆವಲಗುರ್ಕಿ ಅಂಚೆ ಎಸ್‌.ಗೊಲ್ಲಹಳ್ಳಿಯ ಕಲಾವಿದ ನಾರಾಯಣಪ್ಪ ಸ್ವಗ್ರಾಮದಲ್ಲಿರಾಮಭಜನೆ ಮಾಡುತ್ತಾ ಉತ್ಸವ, ಜಾತ್ರೆಯಲ್ಲಿ ಭಾಗವಹಿಸಿದ್ದರು. ತಮ್ಮ 13ನೇ ವರ್ಷದ ವಯಸ್ಸಿನಲ್ಲಿ ಕೀಲುಕುದುರೆ ಕಲೆ ಕರಗತ ಮಾಡಿಕೊಂಡು ಕೋಲಾರ ಮತ್ತುಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆಯುವ ಕನ್ನಡಪರ ಕಾರ್ಯಕ್ರಮ, ರಾಜ್ಯೋತ್ಸವ, ಸಾಹಿತ್ಯ ಸಮ್ಮೇಳನ, ಕರಗ ಮಹೋತ್ಸವ ಮತ್ತಿತರ ಕಾರ್ಯಕ್ರಮಗಳಲ್ಲಿ ಕೀಲುಕುದುರೆ ಕಲೆ ಪ್ರದರ್ಶನ ನೀಡುತ್ತಿದ್ದರು.

2019ರಲ್ಲಿ ನಡೆದ ಮೈಸೂರು ದಸರಾದಲ್ಲಿಯೂ ತಮ್ಮ ಕಲೆ ಪ್ರದರ್ಶನ ಮಾಡಿದ್ದಾರೆ. ಅದರಲ್ಲದೆ ನಿರ್ದೇಶಕ ಆರ್‌.ಚಂದ್ರ ನಿರ್ದೇಶನದ ಲಕ್ಷ್ಮಣ ಚಲನಚಿತ್ರದಲ್ಲಿಯೂ ಕಲೆ ಪ್ರದರ್ಶನ ಮಾಡಿದ್ದಾರೆ. 2018ನೇ ಸಾಲಿನಲ್ಲಿ ಜಿಲ್ಲಾ ಮಟ್ಟದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕಲಾವಿದ ನಾರಾಯಣಪ್ಪ ಶ್ರೀಬಂಡೆಮ್ಮ ಜಾನಪದ ಮತ್ತು ಸಾಂಸ್ಕೃತಿಕ ಕಲಾ ಸಂಘ ಸ್ಥಾಪಿಸಿ ಆಸಕ್ತ ಮತ್ತು ಉತ್ಸಾಹಿ ಯುವಕರಿಗೆ ಮರಗಾಲು ಕುದುರೆ, ಗಾರುಡಿಗೊಂಬೆ, ನವೀಲು ಕುಣಿತ, ಕರಡಿ ಕುಣಿತ, ಕೀಲುಕುದುರೆ ಕಲೆಯನ್ನು ಉಚಿತವಾಗಿ ಕಲಿಸುತ್ತಿದ್ದಾರೆ. 2ನೇ ತರಗತಿ ವ್ಯಾಸಂಗ ಮಾಡಿದರೂ ಕಲೆಯಲ್ಲಿ ಪದವಿ ಪಡೆದಿದ್ದಾರೆ ಎಂದರು ತಪ್ಪಾಗುವುದಿಲ್ಲ. ನೆರೆ ರಾಜ್ಯದ ವಿಜಯವಾಡದಲ್ಲಿ ನಡೆಯುವ ರಥೋತ್ಸವ ಮತ್ತು ಗೋವಾ ರಾಜ್ಯದಲ್ಲಿ ನಡೆಯುವ ಉತ್ಸವಗಳಲ್ಲಿಯೂ ಕಲೆಯನ್ನು ಪ್ರದರ್ಶನ ಮಾಡಿ ಗಮನ ಸೆಳೆದಿದ್ದಾರೆ. ವ್ಯವಸಾಯ ಮಾಡಿಕೊಂಡು ನಾರಾಯಣಪ್ಪ ಜೀವನ ನಡೆಸುದ್ದಾರೆ.

ಈ ಮೊದಲು ಕೇವಲ 10 ರೂ.ಗಳಿಗೆ ಕಾರ್ಯಕ್ರಮ ನಡೆಸಿಕೊಟ್ಟಿರುವ ಕಲಾವಿದ ನಾರಾಯಣಪ್ಪ ಅವರ ಕಲೆ ನೋಡಿ ಗ್ರಾಮ ಸೇವಕ ಶಿವಣ್ಣ ಎಂಬವರು ಮೊದಲು ಚಿತ್ರಾವತಿಯಲ್ಲಿ ಕಾರ್ಯಕ್ರಮ ನಡೆಸಿಕೊಡಲು ಅವಕಾಶ ಮಾಡಿಕೊಟ್ಟು 500 ರೂ.ಗಳ ಪ್ರೋತ್ಸಾಹಧನ ನೀಡಿದ್ದರು. ಅದೇ ರೀತಿಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಅರಣ್ಯ ಇಲಾಖೆ ಮೂಲಕ ನಡೆದ ಕಾರ್ಯಕ್ರಮದಲ್ಲಿ 1 ಸಾವಿರ ರೂ. ಗಳ ಸಂಭಾವನೆ ಪಡೆದಿದ್ದರು.

ರಾಜ್ಯದ ತುಮಕೂರು, ರಾಯಚೂರು,ಬೆಳಗಾವಿ, ಮೈಸೂರು, ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆ ಸಹಿತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಲೆ ಪ್ರದರ್ಶನ ಮಾಡಿದ್ದಾರೆ. ವೇಷಭೂಷಣ, ಕಲೆ ಪ್ರದರ್ಶನ ಮಾಡಲು ವಸ್ತುಗಳನ್ನು ಸ್ವಂತ ತಯಾರಿಸಿಕೊಂಡಿದ್ದಾರೆ. ಜತೆಗೆ ಗ್ರಾಮದಲ್ಲಿ ಉತ್ಸಾಹಿ ಯುವಕರಿಗೆ ತರಬೇತಿಯನ್ನೂ ನೀಡುತ್ತಿದ್ದಾರೆ.

ನನಗೆ ಕಲೆ ಮೂಲಕ ಹಣಸಂಪಾದನೆ ಮಾಡುವುದಕ್ಕಿಂತಲೂ ಕಲೆಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿಬೆಳೆಸಬೇಕೆಂಬ ಆಸೆಯಿದೆ. ಊರಲ್ಲಿಯುವಕರಿಗೆ ತರಬೇತಿ ಕೊಡುತ್ತಿದ್ದೇನೆ. ಜಿಲ್ಲಾ ಕೇಂದ್ರದಲ್ಲಿ ಕಲಾವಿದರಿಗೆ ಅನುಕೂಲ ಕಲ್ಪಿಸಲು ಒಂದು ಸುಸಜ್ಜಿತ ಕೇಂದ್ರವನ್ನು ತೆರೆದರೆ ಕಲಾವಿದರಿಗೆ ಅನುಕೂಲವಾಗುತ್ತದೆ. ನಾರಾಯಣಪ್ಪ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ

ಎಸ್‌.ಗೊಲ್ಲಹಳ್ಳಿಯ ಗ್ರಾಮದಲ್ಲಿ ಕೀಲುಕುದುರೆ, ಗಾರುಡಿಗೊಂಬೆ, ನವೀಲುಕುಣಿತ, ಕರಡಿ ಕುಣಿತದ ಕುರಿತು ತಂದೆಯವರು ಆಸಕ್ತಿ ಹೊಂದಿರುವರಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ರೇಷ್ಮೆ, ಹೈನುಗಾರಿಕೆ, ತರಕಾರಿ ಉತ್ಪಾದನೆ ಜತೆಗೆ ಕಲಾವಿದರ ಜಿಲ್ಲೆಯಾಗಬೇಕು ಎನ್ನುವುದೇ ತಂದೆಯ ಆಶಯವಾಗಿದೆ. ಮಂಜುನಾಥ್‌, ಕಲಾವಿದ ಹಾಗೂ ನಾರಾಯಣಪ್ಪ ಅವರ ಪುತ್ರ

 

ಎಂ.ಎ.ತಮೀಮ್‌ ಪಾಷಾ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Untitled-1

ಥಾಯ್ಲೆಂಡ್‌ ಬ್ಯಾಡ್ಮಿಂಟನ್‌: ಸಾತ್ವಿಕ್‌-ಚಿರಾಗ್‌ಗೆ ಸೋಲು

Untitled-1

ಜೋ ಬೈಡನ್ ನನಗೆ ಹಿಂದಿನಿಂದಲೂ ಪರಿಚಯ : ಅಶೋಕ ಖೇಣಿ

ಕೋವಿಡ್ ಲಸಿಕೆ ನೀಡಿದ್ದಕ್ಕೆ ಭಾರತಕ್ಕೆ ಬ್ರೆಜಿಲ್‌, ವಿಶ್ವಸಂಸ್ಥೆ ಅಭಿನಂದನೆ

ಕೋವಿಡ್ ಲಸಿಕೆ ನೀಡಿದ್ದಕ್ಕೆ ಭಾರತಕ್ಕೆ ಬ್ರೆಜಿಲ್‌, ವಿಶ್ವಸಂಸ್ಥೆ ಅಭಿನಂದನೆ

ಕೋವಿಡ್ ಹಿನ್ನೆಲೆ: ಬಜೆಟ್‌ ಗಾತ್ರ ತಗ್ಗಿಸುವುದು ಅನಿವಾರ್ಯ: ಸಿಎಂ

ಕೋವಿಡ್ ಹಿನ್ನೆಲೆ: ಬಜೆಟ್‌ ಗಾತ್ರ ತಗ್ಗಿಸುವುದು ಅನಿವಾರ್ಯ: ಸಿಎಂ

ಕೆಪಿಎಸ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ-ಆರು ಮಂದಿ ಬಂಧನ

ಕೆಪಿಎಸ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ-ಆರು ಮಂದಿ ಬಂಧನ

ಮಂಡ್ಯ ಅಕ್ರಮ ಗಣಿಗಾರಿಕೆಗಳ ಮೇಲೆ ಪೊಲೀಸರ ದಾಳಿ : ಸ್ಫೋಟಕ ವಸ್ತುಗಳ ವಶ

ಮಂಡ್ಯ ಅಕ್ರಮ ಗಣಿಗಾರಿಕೆಗಳ ಮೇಲೆ ಪೊಲೀಸರ ದಾಳಿ : ಸ್ಫೋಟಕ ವಸ್ತುಗಳ ವಶ

fire

ರಸ್ತೆಗೆ ಹಾಕಿದ ಹುರುಳಿಕಾಳು ಸಿಪ್ಪೆ ಕಾರಿನ ಚಕ್ರಕ್ಕೆ ಸಿಲುಕಿ ಬೆಂಕಿ: ಹೊತ್ತಿ ಉರಿದ ಕಾರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Farmers’ rally against central government on 26th

26ರಂದು ಕೇಂದ್ರ ಸರ್ಕಾರದ ವಿರುದ್ಧ  ರೈತರ ರ್ಯಾಲಿ

more than 70  stork death

70ಕ್ಕೂಹೆಚ್ಚು ಕೊಕ್ಕರೆ ಸಾವು

Message of Equality in Ambigara Chaudhayya

ಅಂಬಿಗರ ಚೌಡಯ್ಯ ವಚನಗಳಲ್ಲಿ ಸಮಾನತೆ ಸಂದೇಶ

Employment is guaranteed by living

ಉದ್ಯೋಗ ಖಾತ್ರಿಯಿಂದ ಜೀವನ ಹಸನು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಂಚಲನ ಸೃಷ್ಠಿಸಿದ ಜಿಲ್ಲಾಧಿಕಾರಿಗಳ ನೋಟಿಸ್

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಂಚಲನ ಸೃಷ್ಠಿಸಿದ ಜಿಲ್ಲಾಧಿಕಾರಿಗಳ ನೋಟಿಸ್

MUST WATCH

udayavani youtube

ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ

udayavani youtube

ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್

udayavani youtube

ತಲೆಕೂದಲು, ಮೀಸೆ ಬೋಳಿಸುವಂತೆ ರಾಗಿಂಗ್: ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳ ಬಂಧನ

udayavani youtube

ನೇತಾಜಿಯವರ ಜನ್ಮ ದಿನದಂದು ಅವರ ಆಪ್ತರ ಪುತ್ರಿಯಾದ ಜೊತೆ ಉಡುಪಿಯಲ್ಲಿ ಮಾತುಕತೆ,

udayavani youtube

ಮಂಗಳೂರು ಪೊಲೀಸರ ಭರ್ಜರಿ ಬೇಟೆ: 44 ಕೆಜಿ ಗಾಂಜಾ ವಶ, ಏಳು ಆರೋಪಿಗಳ ಬಂಧನ

ಹೊಸ ಸೇರ್ಪಡೆ

ಗುಂಪಿನಿಂದ ಥಳಿತ: ಯುವಕ ಸಾವು

ಗುಂಪಿನಿಂದ ಥಳಿತ: ಯುವಕ ಸಾವು

Untitled-1

ಗೆಳೆಯರು ನನ್ನನ್ನು ಒಂಟಿ ಮಾಡಿದರು: ವಿಶ್ವನಾಥ್‌

Untitled-1

ಥಾಯ್ಲೆಂಡ್‌ ಬ್ಯಾಡ್ಮಿಂಟನ್‌: ಸಾತ್ವಿಕ್‌-ಚಿರಾಗ್‌ಗೆ ಸೋಲು

ಭಾರತವನ್ನು ಸೋಲಿಸಲು ಮೈದಾನದಾಚೆಗೂ ಆಸೀಸಿಗರ ಕಿತಾಪತಿ

ಭಾರತವನ್ನು ಸೋಲಿಸಲು ಮೈದಾನದಾಚೆಗೂ ಆಸೀಸಿಗರ ಕಿತಾಪತಿ

Untitled-1

ಜೋ ಬೈಡನ್ ನನಗೆ ಹಿಂದಿನಿಂದಲೂ ಪರಿಚಯ : ಅಶೋಕ ಖೇಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.