ಗಡಿರೇಖೆ ಗುರುತು ಸಭೆಗೆ ಕೃಷ್ಣಾರೆಡ್ಡಿ, ವಿ.ಮುನಿಯಪ್ಪ ಗೈರು


Team Udayavani, Mar 4, 2020, 3:00 AM IST

gadirekhe

ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚೇಳೂರು ಹೋಬಳಿಯನ್ನು ಹೊಸ ತಾಲೂಕಾಗಿ ರಚಿಸುವ ನಿಟ್ಟಿನಲ್ಲಿ ಮಂಗಳವಾರ ನಗರದ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ತಾಲೂಕಿಗೆ ಗಡಿರೇಖೆ ಗುರುತಿಸುವ ದಿಸೆಯಲ್ಲಿ ಏರ್ಪಡಿಸಲಾಗಿದ್ದ ಚುನಾಯಿತ ಜನಪ್ರತಿನಿಧಿಗಳ ಸಭೆಗೆ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಮಾತ್ರ ಹಾಜರಾಗಿದ್ದರಿಂದ ಸಭೆ ಅಪೂರ್ಣಗೊಂಡಿದೆ.

ಕಚೇರಿಯಲ್ಲಿ ಸಭೆ: ಹಿಂದಿನ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಚೇಳೂರು ಹೋಬಳಿಯನ್ನು ಹೊಸ ತಾಲೂಕಾಗಿ ಘೋಷಿಸಿದ್ದರು. ಆದರೆ ವರ್ಷದಿಂದ ಹೊಸ ತಾಲೂಕಿಗೆ ಗಡಿರೇಖೆ ಗುರುತಿಸದ ಕಾರಣ ತಾಲೂಕು ರಚನೆ ವಿಳಂಬ ಆಗಿತ್ತು. ಆದರೆ ಜಿಲ್ಲೆಗೆ ಹೊಸದಾಗಿ ಆಗಮಿಸಿರುವ ಉಪ ವಿಭಾಗಾಧಿಕಾರಿ ಎ.ಎನ್‌.ರಘುನಂದನ್‌ ಆಸಕ್ತಿ ವಹಿಸಿ ಹೋಬಳಿ ಜನರ ಬೇಡಿಕೆಯಂತೆ ಹೊಸ ತಾಲೂಕಿಗೆ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಗಡಿರೇಖೆ ಗುರುತಿಸಲು ತಮ್ಮ ಕಚೇರಿಯಲ್ಲಿ ಸಭೆ ಕರೆಯಲಾಗಿತ್ತು.

ಸಭೆ ಮುಂದೂಡಿಕೆ: ಸಭೆಗೆ ಚಿಂತಾಮಣಿ ಕ್ಷೇತ್ರದ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಹಾಗೂ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿಗೆ ಆಹ್ವಾನಿಸಲಾಗಿತ್ತು. ಆದರೆ ಸಭೆಗೆ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಮಾತ್ರ ಭಾಗವಹಿಸಿ ಉಳಿದ ಚಿಂತಾಮಣಿ ಹಾಗೂ ಶಿಡ್ಲಘಟ್ಟ ಶಾಸಕರು ಅನಿವಾರ್ಯ ಕಾರಣಗಳಿಂದ ಸಭೆಯಿಂದ ದೂರ ಉಳಿದ ಕಾರಣ ಸಭೆಯನ್ನು ಮುಂದೂಡಲಾಯಿತು ಎಂದು ಸಭೆ ಬಳಿಕ ಉಪ ವಿಭಾಗಾಧಿಕಾರಿ ಎ.ಎನ್‌.ರಘುನಂದ್‌ ಉದಯವಾಣಿಗೆ ತಿಳಿಸಿದರು.

ಮೂರು ತಾಲೂಕು ಗ್ರಾಪಂಗಳ ಸೇರ್ಪಡೆ: ಜಿಲ್ಲೆಯಲ್ಲಿ ಏಳನೇ ತಾಲೂಕಾಗಿ ಉದಯವಾಗಲಿರುವ ಚೇಳೂರು ತಾಲೂಕಿಗೆ ಜಿಲ್ಲೆಯ ಬಾಗೇಪಲ್ಲಿ, ಶಿಡ್ಲಘಟ್ಟ ಹಾಗೂ ಚಿಂತಾಮಣಿ ತಾಲೂಕಿನ ಹಲವು ಗ್ರಾಪಂಗಳ ಹಾಗೂ ಹೋಬಳಿಗಳು ಸೇರ್ಪಡೆ ಆಗುವ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿಗಳು ಚುನಾಯಿತ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದು ಸೌಹಾರ್ದಯುತವಾಗಿ ಹೊಸ ತಾಲೂಕಿಗೆ ಗಡಿರೇಖೆ ಗುರುತಿಸಲು ಸಭೆ ಕರೆದಿದ್ದರು. ಆದರೆ ಬಜೆಟ್‌ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಭೆಗೆ ಶಿಡ್ಲಘಟ್ಟ ಹಾಗೂ ಚಿಂತಾಮಣಿ ಶಾಸಕರು ಬರಲು ಸಾಧ್ಯವಾಗದೇ ಸಭೆ ಮುಂದೂಡಿದ್ದು, ಮತ್ತೂಂದು ದಿನಾಂಕ ನಿಗದಿಪಡಿಸಿ ವಿಸ್ತೃತವಾಗಿ ಚರ್ಚೆ ನಡೆಸಿ ಗಡಿರೇಖೆ ಗುರುತಿಸಲಾಗುವುದು ಎಂದು ಉಪ ವಿಭಾಗಾಧಿಕಾರಿಗಳು ಸಭೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಚೇಳೂರು ಹೊಸ ತಾಲೂಕು ರಚನೆಗೆ ಗಡಿರೇಖೆ ಗುರುತಿಸಲು ಉಪ ವಿಭಾಗಾಧಿಕಾರಿಗಳು ಸಭೆ ಕರೆದಿದ್ದರು. ಶಾಸಕಾಂಗ ಪಕ್ಷದ ನಾಯಕರು ಕಡ್ಡಾಯವಾಗಿ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕೆಂದು ವಿಪ್‌ ಜಾರಿ ಮಾಡಿದ್ದರಿಂದ ತಡವಾಗಿ ಸಭೆಯಲ್ಲಿ ಭಾಗವಹಿಸಿದ್ದೆ.
-ಎಸ್‌.ಎನ್‌.ಸುಬ್ಬಾರೆಡ್ಡಿ, ಬಾಗೇಪಲ್ಲಿ ಶಾಸಕರು

ಟಾಪ್ ನ್ಯೂಸ್

1-fdfd

ಬಿಜೆಪಿಯನ್ನು ವಿರೋಧಿಸುವವರು ಒಂದಾಗಬೇಕು: ಮಮತಾ ಭೇಟಿ ಬಳಿಕ ಪವಾರ್

ವಿಮಾನ ನಿಲ್ದಾಣಕ್ಕೆ ಆಗಮಿಸುವ ಎಲ್ಲ ಅಂತರರಾಷ್ಟ್ರೀಯ ಪ್ರಯಾಣಿಕರ ತಪಾಸಣೆ : ಬೊಮ್ಮಾಯಿ

ಅಂತರರಾಷ್ಟ್ರೀಯ ವಿಮಾನದಲ್ಲಿ ಬರುವ ಎಲ್ಲ ಪ್ರಯಾಣಿಕರ ತಪಾಸಣೆ : ಬೊಮ್ಮಾಯಿ

1-g

‘ಗೇಮ್ ಓವರ್’, ‘ಗೇಮ್ ಸ್ಟಾರ್ಟ್’ ಮದುವೆಯಲ್ಲಿ ಗಮನ ಸೆಳೆದ ಬರಹ !!

1-vish

ಗೋಪಾಲಕೃಷ್ಣ ಯಾಕೆ ನನ್ನ ಕೊಲೆಗೆ ಸಂಚು ಹೂಡಿದರೋ ಗೊತ್ತಿಲ್ಲ: ಎಸ್.ಆರ್.ವಿಶ್ವನಾಥ್

1-pp

ಮಹಿಳಾ ಪೇದೆಯ ಲಿಂಗ ಬದಲಾವಣೆಗೆ ಗೃಹ ಇಲಾಖೆ ಅನುಮತಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 620 ಜಿಗಿತ; 17,000 ಅಂಕಗಳ ಗಡಿ ದಾಟಿದ ನಿಫ್ಟಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 620 ಜಿಗಿತ; 17,000 ಅಂಕಗಳ ಗಡಿ ದಾಟಿದ ನಿಫ್ಟಿ

ರಾಮಲಿಂಗಾರೆಡ್ಡಿ

ಯಾವ ಸಮಯದಲ್ಲಿ ಏನು ಮಾಡಬೇಕೆಂಬ ಪ್ರಜ್ಞೆ ಬಿಜೆಪಿಯವರಿಗಿಲ್ಲ: ರಾಮಲಿಂಗಾರೆಡ್ಡಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದಿನಿಂದ ನಂದಿಗಿರಿಧಾಮ ಪ್ರವಾಸಿಗರಿಗೆ ಮುಕ್ತ

ಇಂದಿನಿಂದ ನಂದಿಗಿರಿಧಾಮ ಪ್ರವಾಸಿಗರಿಗೆ ಮುಕ್ತ

ಬೆಳೆ ನಾಶ

ಲಕ್ಷಾಂತರ ರೂ. ಬೆಳೆ ನಾಶವಾದ್ರೂ ತಿರುಗಿ ನೋಡಿಲ್ಲ..!

4nandibetta

ಚಿಕ್ಕಬಳ್ಳಾಪುರ: 3 ತಿಂಗಳ ಬಳಿಕ ಸಾರ್ವಜನಿಕರಿಗೆ ನಂದಿಬೆಟ್ಟ ಪ್ರವೇಶಕ್ಕೆ ಮುಕ್ತ

1sudhakar

ಓಮಿಕ್ರಾನ್ ಸೋಂಕಿನ ಕುರಿತು ಆತಂಕ ಬೇಡ: ಸಚಿವ ಡಾ.ಕೆ.ಸುಧಾಕರ್

ಬೆಟ್ಟ

ಅವನತಿಯ ಅಂಚಿನಲ್ಲಿ ಸುರಸದ್ಮಗಿರಿ ಬೆಟ್ಟ

MUST WATCH

udayavani youtube

ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ

udayavani youtube

ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕಾಡಿನಲ್ಲಿ ಹೂತಿಟ್ಟ ರೀತಿಯಲ್ಲಿ ಪತ್ತೆ, ಕೊಲೆ ಶಂಕೆ

udayavani youtube

ತುಂಗಭದ್ರಾ ನದಿಯಿಂದ ಹಳ್ಳಗಳಿಗೆ ಬಂದ ಮೊಸಳೆ! ಜನರಲ್ಲಿ ಆತಂಕ

udayavani youtube

ದಾಂಡೇಲಿ :ತಹಶೀಲ್ದಾರ್ ಕಚೇರಿ ಆವರಣದಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ

udayavani youtube

ಮನೆ ಮಂದಿ ಬರುವಿಕೆಗಾಗಿ ದಾಂಡೇಲಿಯ ಬಸ್ ನಿಲ್ದಾಣದಲ್ಲಿ ಕಾಯುತ್ತಿರುವ ವಯೋವೃದ್ದೆ

ಹೊಸ ಸೇರ್ಪಡೆ

1-fdfd

ಬಿಜೆಪಿಯನ್ನು ವಿರೋಧಿಸುವವರು ಒಂದಾಗಬೇಕು: ಮಮತಾ ಭೇಟಿ ಬಳಿಕ ಪವಾರ್

ರೂಪಾಂತರಿ ಭೀತಿ ; ಮತ್ತದೇ ನಿರ್ಲಕ್ಷ್ಯ ನೀತಿ! ಮಾಸ್ಕ್ ಕಡ್ಡಾಯವಿಲ್ಲ

ರೂಪಾಂತರಿ ಭೀತಿ ; ಮತ್ತದೇ ನಿರ್ಲಕ್ಷ್ಯ ನೀತಿ! ಮಾಸ್ಕ್ ಕಡ್ಡಾಯವಿಲ್ಲ

ಆನ್‌ಲೈನ್‌ ಬಳಕೆದಾರರು ಎಚ್ಚರ ತಪ್ಪಿದರೆ ಅನಾಹುತ

ಆನ್‌ಲೈನ್‌ ಬಳಕೆದಾರರು ಎಚ್ಚರ ತಪ್ಪಿದರೆ ಅನಾಹುತ

ಬೆಳೆಹಾನಿ ಪರಿಹಾರಕ್ಕೆ ರೈತರ ಒತ್ತಾಯ

ಬೆಳೆಹಾನಿ ಪರಿಹಾರಕ್ಕೆ ರೈತರ ಒತ್ತಾಯ

ಅಂಬೇಡ್ಕರ್‌ ಕಟ್ಟೆ ಧ್ವಂಸ-ಪ್ರತಿಭಟನೆ

ಅಂಬೇಡ್ಕರ್‌ ಕಟ್ಟೆ ಧ್ವಂಸ-ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.