ಇನ್ನೂ ಫೈನಲ್ ಆಗದ ಅಭ್ಯರ್ಥಿಗಳು

Team Udayavani, May 10, 2019, 12:26 PM IST

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಇನ್ನೂ ಅಂತಿಮ ಗೊಳ್ಳದ ಹಿನ್ನೆಲೆಯಲ್ಲಿ ಗುರುವಾರ ದಿಂದ ಉಮೇದುವಾರಿಕೆ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡರೂ ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ಹಾಗೂ ಬಾಗೇ ಪಲ್ಲಿ ಪುರಸಭೆಗೆ ಒಂದು ನಾಮ ಪತ್ರವೂ ಮೊದಲ ದಿನ ಸಲ್ಲಿಕೆ ಯಾಗಿಲ್ಲ.

ಅಂತಿಮ ಕಸರತ್ತು: ಜಿಲ್ಲೆಯ ಶಿಡ್ಲಘಟ್ಟ ನಗರಸಭೆ 31 ವಾರ್ಡ್‌ ಹಾಗೂ ಬಾಗೇಪಲ್ಲಿ ಪುರಸಭೆಯ 23 ವಾರ್ಡ್‌ಗಳಿಗೆ ಮೇ.29 ರಂದು ಚನಾವಣೆ ನಿಗದಿಪಡಿಸಿ ಜಿಲ್ಲಾಧಿಕಾರಿಗಳು ಚುನಾ ವಣಾ ಆಧಿಸೂಚನೆ ಹೊರಡಿಸಿದ್ದು, ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಲು ಮೇ.16 ಕೊನೆ ದಿನವಾಗಿದ್ದರೂ ರಾಜಕೀಯ ಪಕ್ಷಗಳು ಇನ್ನೂ ಅಭ್ಯರ್ಥಿಗಳನ್ನು ಅಂತಿಮಗೊಳಿಸು ವಲ್ಲಿ ಕಸರತ್ತು ನಡೆಸುತ್ತಿವೆ.

ಜಿಲ್ಲೆಯ ಚಿಕ್ಕಬಳ್ಳಾಪುರ, ಚಿಂತಾ ಮಣಿ, ಗೌರಿಬಿದನೂರು ನಗರಸಭೆ ಹಾಗೂ ಗುಡಿಬಂಡೆ ಪಟ್ಟಣ ಪಂಚಾ ಯಿತಿ ಹೊರತುಪಡಿಸಿ ಕೇವಲ ಬಾಗೇ ಪಲ್ಲಿ ಪುರಸಭೆ ಹಾಗೂ ಶಿಡ್ಲಘಟ್ಟ ನಗರಸಭೆಗಳಿಗೆ ಮಾತ್ರ ಚುನಾವಣೆ ಘೋಷಣೆಯಾಗಿದೆ.

ನಾಮಪತ್ರ ಸಲ್ಲಿಕೆಗೆ ಮೇ 16 ಕೊನೆ: ನಾಮಪತ್ರ ಸಲ್ಲಿಸಲು ಮೇ 16 ಕೊನೆ ದಿನವಾಗಿದೆ. ಆದರೆ ಎರಡು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ರಾಜಕೀಯ ಪಕ್ಷಗಳು ನಡೆಸುತ್ತಿರುವುದರಿಂದ ಯಾರು ಅಂತಿಮವಾಗಿ ಆಯ್ಕೆಗೊಂಡಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಅಖಾಡ ಸದ್ಯಕ್ಕೆ ತಣ್ಣಗಿದೆ. ವಿವಿಧ ವಾರ್ಡ್‌ಗಳಲ್ಲಿ ಒಂದೊಂದು ಪಕ್ಷದಿಂದ ನಾಲ್ಕೈದು ಮಂದಿ ಅಭ್ಯರ್ಥಿಗಳು ಇರುವುದ ರಿಂದ ಅಭ್ಯರ್ಥಿಗಳನ್ನು ಅಂತಿಮ ಗೊಳಿಸುವುದು ನಾಯಕರಿಗೆ ತಲೆ ನೋವಾಗಿದೆ.

ಜೊತೆಗೆ ಎದುರಾಗಳಿಗಳನ್ನು ಮಣಿ ಸಲು ಹಣ, ಜಾತಿ, ಪ್ರಭಾವ ಇರುವ ಅಭ್ಯರ್ಥಿಗಳನ್ನು ಹುಡುಕಾಟ ನಡೆಸುತ್ತಿರುವುದರಿಂದ ನಾಮಪತ್ರ ಸಲ್ಲಿಕೆ ಕಾರ್ಯ ಜಿಲ್ಲೆಯಲ್ಲಿ ಚುರುಕು ಗೊಂಡಿಲ್ಲ.

ದಳ, ಕಾಂಗ್ರೆಸ್‌ ಪೈಪೋಟಿ: ಶಿಡ್ಲಘಟ್ಟ ದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ನೇರ ಹಣಾಹಣಿ ನಡೆಯ ಲಿದ್ದು, ಬಾಗೇಪಲ್ಲಿ ಪುರಸಭೆ ಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್‌ ಹಾಗೂ ಸಿಪಿಎಂ ನಡುವೆ ಸ್ಪರ್ಧೆ ನಡೆಯಲಿದೆ. ಶಿಡ್ಲಘಟ್ಟದಲ್ಲಿ ಹಾಲಿ ಜೆಡಿಎಸ್‌ ಅಧಿಕಾರದಲ್ಲಿದ್ದು, ಕಾಂಗ್ರೆಸ್‌ ವಿರೋಧ ಪಕ್ಷದಲ್ಲಿದೆ.

ಬಾಗೇಪಲ್ಲಿ ಪಟ್ಟಣದಲ್ಲಿ ಪಕ್ಷೇತರರ ನೆರವಿನೊಂದಿಗೆ ಕಾಂಗ್ರೆಸ್‌ ಆಡಳಿತ ನಡೆಸಿತ್ತು. ಸಿಪಿಎಂ ವಿರೋಧ ಪಕ್ಷವಾಗಿ ಕೆಲಸ ಮಾಡಿತ್ತು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ರಾಜಕೀಯ ಚಿತ್ರಣ ಬದ ಲಾಗಿದ್ದು ಅದು ಸ್ಥಳೀಯ ಸಂಸ್ಥೆಗಳ ಮೇಲೆ ತುಸು ಪರಿಣಾಮ ಬೀರುವ ಸಾಧ್ಯತೆ ಇದೆ.

ಶಿಡ್ಲಘಟ್ಟದಲ್ಲೀಗ ಕಾಂಗ್ರೆಸ್‌ ಶಾಸಕರು ಇರುವುದರಿಂದ ಶಾಸಕ ವಿ. ಮುನಿಯಪ್ಪಗೆ ನಗರಸಭೆ ಚುನಾವಣೆ ಪ್ರತಿಷ್ಠೆಯಾಗಿದೆ. ಅದೇ ರೀತಿ ಬಾಗೇಪಲ್ಲಿಯಲ್ಲೂ ಕೂಡ ಹಾಲಿ ಕಾಂಗ್ರೆಸ್‌ ಶಾಸಕ ಎಸ್‌.ಎನ್‌.ಸುಬ್ಟಾರೆಡ್ಡಿಗೆ ಪ್ರತಿಷ್ಠೆಯಾಗಿರುವುದ ರಿಂದ ಇಬ್ಬರು ಶಾಸಕರು ಹಲವು ದಿನಗಳಿಂದ ಕ್ಷೇತ್ರದಲ್ಲಿ ಬೀಡುಬಿಟ್ಟು ಅಭ್ಯರ್ಥಿಗಳನ್ನು ಆಯ್ಕೆಗೊಳಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೇ 16 ರಂದು ಕೊನೆ ದಿನಾಂಕವಾಗಿದೆ. ಮೇ 17 ರಂದು ನಾಮಪತ್ರ ಪರಿಶೀಲನೆ ನಡೆಯುವುದು. ಮೇ 20 ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕವಾಗಿರುತ್ತದೆ. ಮೇ 29 ರಂದು ಮತದಾನ ನಡೆಯಲಿದ್ದು, ಮೇ 30 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
ಅನಿರುದ್ಧ್ ಶ್ರವಣ್‌, ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಡೀಸಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ