
ಬೆಲೆ ಬಾಳುವಮರಗಳ ಮಾರಾಟ
Team Udayavani, Aug 9, 2018, 2:53 PM IST

ಚಿಂತಾಮಣಿ: ನಗರದ ಮಹಿಳಾ ಕಾಲೇಜಿನ ಪಕ್ಕದಲ್ಲಿರುವ ಬೆಸ್ಕಾಂ ವಸತಿಯ ಆವರಣದಲ್ಲಿ ಹಲವು ವರ್ಷಗಳಿಂದ ಬೆಳೆದ ಬೆಲೆಬಾಳುವ ಮರಗಳನ್ನು ಮಾರಾಟ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅರಣ್ಯ ಇಲಾಖೆಗೆ ಮಾಹಿತಿ ನೀಡದೆ, ಕೆಇಬಿ ವಸತಿ ಆವರಣದಲ್ಲಿ ಬೆಳೆದಿದ್ದ ಬೆಲೆಬಾಳುವ ಮರಗಳನ್ನು ಬೆಸ್ಕಾಂ ಸಿಬ್ಬಂದಿಯೊಬ್ಬರು ಕಡಿದು ಮಾರಾಟ ಮಾಡಿರುವ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಮರಗಳನ್ನು ಕಡಿದ ಬೆಸ್ಕಾಂ ಅಧಿಕಾರಿ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ದೂರು ದಾಖಲು ಮಾಡಿದ್ದಾರೆ.
ನೇರಳೆ, ಮಾವು ಸೇರಿದಂತೆ ವಿವಿಧ ಜಾತಿಯ ಮರಗಳನ್ನು ಕಡಿದಿದ್ದು, ಸುಮಾರು 30 ಸಾವಿರಕ್ಕೂ ಹೆಚ್ಚು ಬೆಲೆ
ಬಾಳುವ ಮರಗಳಾಗಿವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಬೆಸ್ಕಾ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಶಿವಕುಮಾರ್ ಅರಣ್ಯ ಇಲಾಖೆಗೆ ಸೇರಿದ್ದ ಮರಗಳನ್ನು ಕಡಿದವರಾಗಿದ್ದು, ಇವರ ವಿರುದ್ಧ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿ ಜಯಚಂದ್ರ
ತಿಳಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Meramec Caverns:ನಿಸರ್ಗದ ರಚನೆಗೆ ಮನಸೋಲದವರ್ಯಾರು….ವಿಸ್ಮಯ, ಕೌತುಕಗಳ ಆಗರ ಗುಹೆಗಳು

Chincholi: ಜನತಾ ದರ್ಶನ ಪೂರ್ವ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ

News: ಲಾರಿ ಮಾಲೀಕರ ಸಮಸ್ಯೆ ಸಹಿತ ವಿವಿಧ ಬೇಡಿಕೆಗಳ ಬಗ್ಗೆ ಸಚಿವ ರಾಮಲಿಂಗ ರೆಡ್ಡಿಗೆ ಮನವಿ

Ramnagar: ಡಿಕೆಶಿ ಕೋಟೆಯಲ್ಲಿ ಮೈತ್ರಿ ಕಮಾಲ್ ಮಾಡುತ್ತಾ?

Lack of facilities: ಸೌಲಭ್ಯಗಳೇ ಇಲ್ಲದ ಜಕ್ಕಳ್ಳಿ ಸ್ಥಿತಿ ಶೋಚನೀಯ