ಸಿದ್ದು ಮಾಡಿದ ಪಾಪದಿಂದ ನಾನು ಕಾಂಗ್ರೆಸ್‌ ಬಿಟ್ಟೆ: ಸುಧಾಕರ್‌

ಸಿದ್ದರಾಮಯ್ಯ ವರ್ಸಸ್‌ ಸುಧಾಕರ್‌

Team Udayavani, Jan 24, 2023, 11:05 PM IST

ಸಿದ್ದು ಮಾಡಿದ ಪಾಪದಿಂದ ನಾನು ಕಾಂಗ್ರೆಸ್‌ ಬಿಟ್ಟೆ: ಸುಧಾಕರ್‌

ಚಿಕ್ಕಬಳ್ಳಾಪುರ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹುಟ್ಟಿದಾಗಲೇ ಕಾಂಗ್ರೆಸ್‌ನಲ್ಲಿರಲಿಲ್ಲ. ಜನತಾ ದಳದಲ್ಲಿದ್ದು ಎಲ್ಲ ಬಗೆಯ ಅಧಿಕಾರ ಅನುಭವಿಸಿ, ಅಧಿಕಾರದ ಆಸೆಗಾಗಿಯೇ ಕಾಂಗ್ರೆಸ್‌ಗೆ ಬಂದರು. ಇವರು ಮಾಡಿದ ಪಾಪದ ಕೆಲಸದಿಂದಾಗಿಯೇ ನಾನು ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಬಂದೆ ಎಂದು ಆರೋಗ್ಯ ಸಚಿವ ಡಾ| ಕೆ. ಸುಧಾಕರ್‌ ಹೇಳಿದರು.

ತಾಲೂಕಿನ ಅಜ್ಜವಾರದಲ್ಲಿ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಕಾಂಗ್ರೆಸ್‌ನವರು ಪ್ರಜಾಧ್ವನಿ ಯಾತ್ರೆ ಹೆಸರಿನಲ್ಲಿ ನನ್ನ ವಿರುದ್ಧ ಪ್ರಚಾರ ಸಭೆ ಮಾಡಿದ್ದಾರೆ. ಆದರೆ ನಾನು ಮಾಡಿದ ಆರೋಪಗಳಿಗೆ ಒಂದೇ ಒಂದು ಉತ್ತರ ನೀಡಲು ಸಾಧ್ಯವಾಗಿಲ್ಲ. ಆದರ ಬದಲಿಗೆ ವೈಯಕ್ತಿಕ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯನವರು ಒಂದೊಂದೇ ಕ್ಷೇತ್ರ ಹುಡುಕಾಡುತ್ತಿದ್ದಾರೆ. ವರುಣಾ, ಚಾಮುಂಡೇಶ್ವರಿ, ಬಳಿಕ ಕೋಲಾರಕ್ಕೆ ಹೋಗಿದ್ದಾರೆ ಎಂದು ಅಣಕಿಸಿದರು.

ಯಾರು, ಯಾರಿಗೆ ದುಡ್ಡು ಕೊಟ್ಟಿದ್ದರು?
ಬೆಂಗಳೂರು: ಕಾಂಗ್ರೆಸ್‌ ಹೈಕಮಾಂಡ್‌ಗೆ ರಾಜ್ಯದಿಂದ ನಾವು ದುಡ್ಡು ಕೊಟ್ಟಿದ್ದೆವು ಎಂದು ಆರೋಗ್ಯ ಸಚಿವ ಡಾ| ಕೆ.ಸುಧಾಕರ್‌ ಆರೋಪ ಮಾಡಿದ್ದಾರೆ. ಯಾರು, ಯಾರಿಗೆ ದುಡ್ಡು ಕೊಟ್ಟಿದ್ದರು ಎನ್ನುವುದನ್ನು ದಿ| ಅನಂತಕುಮಾರ್‌ ಮತ್ತು ಬಿ.ಎಸ್‌. ಯಡಿಯೂರಪ್ಪ ಮಾತನಾಡಿಕೊಂಡಿದ್ದ ಲೀಕ್ಡ್ ವೀಡಿಯೋ ನೋಡಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಸಚಿವ ಸುಧಾಕರ್‌ ಮೊದಲು ನಾವು ಬಯಲು ಮಾಡಿದ ಸುಮಾರು ಐದು ಸಾವಿರ ಕೋಟಿ ರೂ. ಮೊತ್ತದ ಕೊರೊನಾ ಭ್ರಷ್ಟಾಚಾರದ ಬಗ್ಗೆ ಮಾತನಾಡಲಿ. ದುಡ್ಡಿನ ಲಾಲಸೆಗಾಗಿ ಅಮಾಯಕ ಜನರ ಜತೆ ಚೆಲ್ಲಾಟ ನಡೆಸಿದವರಿಗೆ ನನ್ನ ವಿರುದ್ಧ ಆರೋಪ ಮಾಡಲು ಯಾವ ನೈತಿಕತೆ ಇದೆ ಎಂದು ಟ್ವೀಟ್‌ ಮೂಲಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ನನ್ನ ವಿರುದ್ಧ 35 ಸಾವಿರ ಕೋಟಿ ರೂ.ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಕೊರೊನಾ ಕಾಲದಲ್ಲಿ ಮಾಸ್ಕ್, ಸ್ಯಾನಿಟೈಸರ್‌ಗಳನ್ನು ಬಿಡದೆ ಖಜಾನೆ ಲೂಟಿ ಮಾಡಿದವರು ನನ್ನ ವಿರುದ್ಧ ಆರೋಪ ಮಾಡುತ್ತಿರುವುದು ಹಾಸ್ಯ ಪ್ರಸಂಗದಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.

 

ಟಾಪ್ ನ್ಯೂಸ್

ARUN SINGH

BJP: ವಿಪಕ್ಷ ನಾಯಕನ ಆಯ್ಕೆ- ನಾಳೆ ಅರುಣ್‌ ಸಿಂಗ್‌ ಆಗಮನ

accident 2

ನಿಂತಿದ್ದ ಲಾರಿಗೆ ಕ್ರೂಸರ್‌ ಢಿಕ್ಕಿ: ಐವರ ಸಾವು

mobile

ನಕಲಿ ಬ್ಯಾಂಕ್‌ ಅಧಿಕಾರಿಗಳ “KYC ಅಪ್‌ಡೇಟ್‌” ಖೆಡ್ಡಾ !

HDK HDD

ಸೋಲು ಶಾಶ್ವತ ಅಲ್ಲ- ಮರಳಿ ಪಕ್ಷ ಕಟ್ಟೋಣ: ಆತ್ಮಾವಲೋಕನ ಸಭೆಯಲ್ಲಿ HDD, HDK ಕರೆ

cow

Karnataka: ಗೋಹತ್ಯೆ ನಿಷೇಧ ಕಾಯ್ದೆ ವಾಪಸ್‌- ಮುಂದುವರಿದ ಗೊಂದಲ

applle

iOS 17 ವರ್ಷನ್‌ ಬಿಡುಗಡೆ

CC CAMERAS

ಕಾಸರಗೋಡು: AI ಕೆಮರಾ ನಿಗಾ ಆರಂಭ- ಮೊದಲ ದಿನ 1,040 ನಿಯಮ ಉಲ್ಲಂಘನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಾಲಿನ ದರ ಕಡಿತಕ್ಕೆ ಕಿಡಿ

ಹಾಲಿನ ದರ ಕಡಿತಕ್ಕೆ ಕಿಡಿ

ಪಾಠಕ್ಕೂ ಸೈ, ಪರಿಸರ ಜಾಗೃತಿಗೂ ಜೈ

ಪಾಠಕ್ಕೂ ಸೈ, ಪರಿಸರ ಜಾಗೃತಿಗೂ ಜೈ

Congress condition government: BJP workers protest in Chikkaballapur

ಕಾಂಗ್ರೆಸ್ ಕಂಡಿಷನ್ ಸರ್ಕಾರ: ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಗೃಹಜ್ಯೋತಿ: 2.20 ಲಕ್ಷ ಕುಟುಂಬಕ್ಕೆ ಲಾಭ

ಗೃಹಜ್ಯೋತಿ: 2.20 ಲಕ್ಷ ಕುಟುಂಬಕ್ಕೆ ಲಾಭ

ಮಕ್ಕಳಿದ್ದರೂ ಶಿಕ್ಷಕರಿಲ್ಲ, ಮುಚ್ಚುವ ಸ್ಥಿತಿಯಲ್ಲಿ 15 ಶಾಲೆಗಳು

ಮಕ್ಕಳಿದ್ದರೂ ಶಿಕ್ಷಕರಿಲ್ಲ, ಮುಚ್ಚುವ ಸ್ಥಿತಿಯಲ್ಲಿ 15 ಶಾಲೆಗಳು

MUST WATCH

udayavani youtube

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಹೊಸ ಸೇರ್ಪಡೆ

ARUN SINGH

BJP: ವಿಪಕ್ಷ ನಾಯಕನ ಆಯ್ಕೆ- ನಾಳೆ ಅರುಣ್‌ ಸಿಂಗ್‌ ಆಗಮನ

accident 2

ನಿಂತಿದ್ದ ಲಾರಿಗೆ ಕ್ರೂಸರ್‌ ಢಿಕ್ಕಿ: ಐವರ ಸಾವು

mobile

ನಕಲಿ ಬ್ಯಾಂಕ್‌ ಅಧಿಕಾರಿಗಳ “KYC ಅಪ್‌ಡೇಟ್‌” ಖೆಡ್ಡಾ !

HDK HDD

ಸೋಲು ಶಾಶ್ವತ ಅಲ್ಲ- ಮರಳಿ ಪಕ್ಷ ಕಟ್ಟೋಣ: ಆತ್ಮಾವಲೋಕನ ಸಭೆಯಲ್ಲಿ HDD, HDK ಕರೆ

cow

Karnataka: ಗೋಹತ್ಯೆ ನಿಷೇಧ ಕಾಯ್ದೆ ವಾಪಸ್‌- ಮುಂದುವರಿದ ಗೊಂದಲ