ಉಪ ಮಾರುಕಟ್ಟೆ ನಿರ್ಮಾಣ ಯಾವಾಗ?


Team Udayavani, Mar 28, 2023, 1:12 PM IST

tdy-15

ಗುಡಿಬಂಡೆ: ಚುನಾವಣೆ ಮುಗಿದು ಮತ್ತೂಂದು ಚುನಾವಣೆ ಬರುತ್ತಿದ್ದರು ತಾಲೂಕಿನಲ್ಲಿ ಎಪಿಎಂಸಿ ಮಾರುಕಟ್ಟೆ ತೆರೆಯಲು ಜನ ಪ್ರತಿನಿಧಿಗಳ ಹಾಗೂ ಅಧಿಕಾರಿಗಳು ಬೇಜಾವಾಬ್ದಾರಿ ತನ ತೋರುತ್ತಿರುವುದರಿಂದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2007 ರಲ್ಲಿಯೇ ಬಾಗೇಪಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾರಂಭವಾಗಿದ್ದು, ಆ ಸಮಯದಲ್ಲಿಯೇ ಗುಡಿಬಂಡೆ ತಾಲೂಕಿನಲ್ಲಿ ಉಪ ಮಾರುಕಟ್ಟೆಯನ್ನು ಪ್ರಾರಂಭಿಸಲು ಘೋಷಣೆ ಮಾಡಲಾಗಿತ್ತು ಎಂದು ಎಪಿಎಂಸಿ ಅಧಿಕಾರಿಗಳೇ ಹೇಳುತ್ತಿದ್ದಾರೆ. ಅಂದಿನಿಂದಲೂ ಉಪಮಾರುಕಟ್ಟೆ ಪ್ರಾರಂಭಿಸಲು ಎಪಿಎಂಸಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ನಡುವೆ ಸೂಕ್ತ ಜಾಗ ಕೋರಿ ಹಗ್ಗ ಜಗ್ಗಾಟಗಳೇ ನಡೆದು ಹೋಗಿ, ಕಂದಾಯ ಇಲಾಖೆ ಜಾಗ ಗುರುತಿಸಿ ಕೊಟ್ಟರು, ಈಗ ಎಪಿಎಂಸಿ ಅಧಿಕಾರಿಗಳು ಮಾತ್ರ ಮಾರುಕಟ್ಟೆ ಸ್ಥಾಪಿಸಲು ಬೇಜಾಬ್ದಾರಿ ತನ ತೋರುತ್ತಿರುವುದು ದುರಂತ.

ತರಕಾರಿ ಮಾರುಕಟ್ಟೆಗೆ ಸಾಗಲು ನಿತ್ಯವು ಪರದಾಟ: ತಾಲೂಕಿನಿಂದ ರೈತರು ಪ್ರತಿ ದಿನ ಬೆಳೆಗಳನ್ನು ಸಾಗಿಸಲು ಹತ್ತಿರದ 20 ಕಿಮೀ ದೂರದಲ್ಲಿರುವ ಬಾಗೇಪಲ್ಲಿ ಎಪಿಎಂಸಿ ಹೊರತು ಪಡಿಸಿ, ಗೌರೀಬಿದನೂರು, ಚಿಕ್ಕಬಳ್ಳಾಪುರ, ಹಿಂದೂಪುರ ಮಾರುಕಟ್ಟೆಗಳಿಗೆ ಹೋಗಲು ಸುಮಾರು 35 ರಿಂದ 45 ಕಿ.ಮೀ ಬೆಳೆಗಳನ್ನು ಬಾಡಿಗೆ ವಾಹನದಲ್ಲಿ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಬರಬೇಕಾದ ಪರಿಸ್ಥಿತಿಯಲ್ಲಿ ರೈತರು ಇದ್ದು, ಅಲ್ಲಿಗೆ ಹೋಗಿ ಮಾರಾಟ ಮಾಡಿದ ನಂತರ ಕೆಲವೊಮ್ಮೆ ಸಾಗಾಣಿಕೆ ವೆಚ್ಚವೂ ಸಹ ಬಾರದೇ ದುಬಾರಿ ವೆಚ್ಚ ಭರಿಸುವ ಸ್ಥಿತಿ ಇದೆ.

ಜಾಗ ಗುರುತಿಸಿ ಮಂಜೂರಾತಿಗೆ ಸಲ್ಲಿಕೆ: 2017ರಲ್ಲಿ ಗುಡಿಬಂಡೆ ತಾಲೂಕಿನ, ಪಲ್ಲೆಗಾರಹಳ್ಳಿ ಗ್ರಾಮದ ಸರ್ವೆ ನಂ. 8/1ಬಿ ರಲ್ಲಿ 14.05 ಎಕರೆ ಜಮೀನು ಮಂಜೂರಾತಿ ತೀರ್ಮಾನಿಸಿ ಅದರಂತೆ ತಹಶೀಲ್ದಾರ್‌ ರಿಗೆ ಜಮೀನು ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಮನವಿ ಸಲ್ಲಿಸಲಾಗಿದೆ.

ಸರ್ಕಾರಕ್ಕೆ ಶುಲ್ಕ ಪಾವತಿಸಿದರೆ ಮಂಜೂರು: ಎಪಿಎಂಸಿ ಸಮಿತಿ ಕೋರಿಕೆಯಂತೆ ಜಮೀನು ಮಂಜೂರು ಮಾಡಲು ತಹಶೀಲ್ದಾರ್‌ ಗುಡಿಬಂಡೆ ರವರು ಜಮೀನು ಮಂಜೂರು ಮಾಡಲು ಸರ್ಕಾರ ವಿಧಿಸುವ ಮೊತ್ತ ಪಾವತಿಸಲು, ಕೋರಿಕೆದಾರರು ಒದಗಿಸುವ ಸೌಲಭ್ಯಗಳ ಬಗ್ಗೆ ನೀಲಿನಕಾಶೆ, ಯೋಜನಾ ಮತ್ತು ಅಂದಾಜು ಪಟ್ಟಿ ನೀಡುವಂತೆ 2018ರಲ್ಲಿ ರಂದು ಪತ್ರ ನೀಡಿದ್ದಾರೆ, ಕಂದಾಯ ಅಧಿಕಾರಿಗಳು ಷರತ್ತುಗಳು ವಿಧಿಸಿದ್ದೇ ತಡ, ಜಮೀನು ಮಂಜೂರಾತಿ ವಿಚಾರ ಅಲ್ಲಿಗೆ ಕೈ ಬಿಟ್ಟು, ಶಾಸಕರು ಇತರೆ ಮುಖಂಡರು ಪ್ರಸ್ತಾಪಿಸಿದಾಗ ಅರ್ಜಿ ಸಲ್ಲಿಸುವಲ್ಲಿ ಅಧಿಕಾರಿಗಳು ವಿಳಂಬ ಧೋರಣೆ ವಹಿಸಿದ್ದಾರೆ.

ಚುನಾವಣೆ ವೇಳೆ ಮಾತ್ರ ಅಭಿವೃದ್ಧಿ ಘೋಷಣೆ : ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ಜನ ಪ್ರತಿನಿಧಿಗಳು ರೈತರನ್ನು ಓಲೈಕೆ ಮಾಡಲು ಶೀಘ್ರದಲ್ಲೇ ಗುಡಿಬಂಡೆ ತಾಲೂಕಿನಲ್ಲಿ ಎಪಿಎಂಸಿ ಮಾರುಕಟ್ಟೆ ಸ್ಥಾಪನೆ ಮಾಡುತ್ತೇವೆ ಎಂದು ಭರವಸೆಗಳನ್ನು ಕೊಡುತ್ತಾ ಕಾಲಹರಣ ಮಾಡುತ್ತಿದ್ದಾರೆಯೇ ಹೊರತು ಅದನ್ನು ಜಾರಿಗೆ ತರಲು ಮಾತ್ರ ಪ್ರಯತ್ನ ಪಡೆದ ಕಾರಣ, ರಾಜಕಾರಣಿಗಳ ಬೇಜವಾಬ್ದಾರಿ ತನಕ್ಕೆ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ಗುಡಿಬಂಡೆ ತಾಲೂಕಿನಲ್ಲಿ ಪ್ರಮುಖವಾಗಿ ಕೃಷಿಯೇ ಅದಾಯ ಮೂಲವಾಗಿದ್ದು, ಇಲ್ಲಿ ಸ್ಥಳಿಯವಾಗಿ ಮಾರುಕಟ್ಟೆ ಇಲ್ಲದೆ, ಬೇರೆಡೆಗೆ ಸಾಗಾಣಿಕೆ ಮಾಡಬೇಕಾದ ಪರಿಸ್ಥಿತಿ ಇರುವುದರಿಂದ, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಮಾರುಕಟ್ಟೆ ಪ್ರಾರಂಭಿಸಬೇಕು. ●ಮಧು.ವೈ. ಪಿ.ಎಸ್‌.ಎಸ್‌.ಮುಖಂಡ, ಹಳೇ ಯರ್ರಹಳ್ಳಿ

ತಾಲೂಕಿನಲ್ಲಿ ಕೃಷಿ, ತೋಟಗಾರಿಕೆ ಬೆಳೆಗಳನ್ನು ಮಾರಾಟ ಮಾಡಲು ಮಾರುಕಟ್ಟೆ ಇಲ್ಲದ ಕಾರಣ ಬೇರೆಡೆಗೆ ಹೋಗಿ ಮಾರಾಟ ಮಾಡಬೇಕಾಗಿದ್ದು, ಇದರಿಂದ ಬರುವ ಆದಾಯವೂ ಕಡಿಮೆಯಾಗಿ, ರೈತರು ಸಾಲದ ಸುಳಿಗೆ ಸಿಲುಕುವಂತಾಗಿದೆ. ಶೀಘ್ರದಲ್ಲೇ ತಾಲೂಕಿನಲ್ಲಿ ಮಾರುಕಟ್ಟೆ ಸ್ಥಾಪನೆ ಮಾಡಲು ಕ್ರಮ ವಹಿಸಬೇಕು. -ಪಿ.ಆರ್‌.ಸುದೀಪ್‌, ರೈತ, ಪೋಲಂಪಲ್ಲಿ

  • ನವೀನ್‌ಕುಮಾರ್‌

ಟಾಪ್ ನ್ಯೂಸ್

world cup 2023

World Cup 2023 ಭಾರತ ತಂಡ; ಗಾಯಾಳು ಅಕ್ಷರ್ ಪಟೇಲ್ ಬದಲಿಗೆ ಅನುಭವಿ ಸ್ಪಿನ್ನರ್ ಆಯ್ಕೆ

1-sad-sad

Karnataka Bandh; ದಕ್ಷಿಣ ಕನ್ನಡ, ಉಡುಪಿ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ

1-ssadas

World Cup Cricket ; ಯಾವುದೇ ತಂಡದ ಆಟಗಾರರಿಗೆ ಗೋಮಾಂಸ ಲಭ್ಯವಿಲ್ಲ

Gundlupet: ಚಿನ್ನದ ವ್ಯಾಪಾರಿಯ ಕಾರು ಅಡ್ಡಗಟ್ಟಿ 44 ಲಕ್ಷ ರೂ. ದರೋಡೆ

Gundlupet: ಚಿನ್ನದ ವ್ಯಾಪಾರಿಯ ಕಾರು ಅಡ್ಡಗಟ್ಟಿ 44 ಲಕ್ಷ ರೂ. ದರೋಡೆ

udVitla ವಿದ್ಯಾರ್ಥಿನಿಗೆ ಕಿರುಕುಳ: ಯುವಕನ ಮೇಲೆ ಪೋಕ್ಸೋ ಪ್ರಕರಣ ದಾಖಲು

Vitla ವಿದ್ಯಾರ್ಥಿನಿಗೆ ಕಿರುಕುಳ: ಯುವಕನ ಮೇಲೆ ಪೋಕ್ಸೋ ಪ್ರಕರಣ ದಾಖಲು

Punacha village: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತ ದೇಹ ಕೆರೆಯಲ್ಲಿ ಪತ್ತೆ

Punacha village: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತ ದೇಹ ಕೆರೆಯಲ್ಲಿ ಪತ್ತೆ

Sirsi ಸನಾತನ ಧರ್ಮ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ: ಸೋದೆ ಶ್ರೀ

Sirsi ಸನಾತನ ಧರ್ಮ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ: ಸೋದೆ ಶ್ರೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadasdasd

Chikkaballapur: ನಾಳೆ ಶಾಲಾ, ಕಾಲೇಜುಗಳಿಗೆ ರಜೆ ಇಲ್ಲ

tdy-7

koosina mane: 145 ಗ್ರಾಪಂಗಳಲ್ಲಿ ಕೂಸಿನ ಮನೆ ತೆರೆಯಲು ಸಿದ್ಧತೆ

2-gudibande

Gudibande: ಬುದ್ದಿ ಹೇಳಿದ್ದಕ್ಕೆ ಪೊಲೀಸರ ಬೈಕ್ ಗೆ ಬೆಂಕಿ ಇಟ್ಟ ಭೂಪ

Urea: ಜಿಲ್ಲಾದ್ಯಂತ ಯೂರಿಯಾಗೆ ಭಾರೀ ಡಿಮ್ಯಾಂಡ್‌!

Urea: ಜಿಲ್ಲಾದ್ಯಂತ ಯೂರಿಯಾಗೆ ಭಾರೀ ಡಿಮ್ಯಾಂಡ್‌!

tdy-12

janata darshan: ಉಸ್ತುವಾರಿ ಸಚಿವರ ಜನತಾ ದರ್ಶನದಲ್ಲಿ ಸಮಸ್ಯೆಗಳ ಸ್ಫೋಟ!

MUST WATCH

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

udayavani youtube

ಪೆಂಡಾಲ್ ಹಾಕುವ ವಿಚಾರಕ್ಕೆ ಗಲಾಟೆ; ನೆರೆಮನೆಯಾತನ ರಿಕ್ಷಾಕ್ಕೆ ಬೆಂಕಿಯಿಟ್ಟ ವ್ಯಕ್ತಿ

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

ಹೊಸ ಸೇರ್ಪಡೆ

world cup 2023

World Cup 2023 ಭಾರತ ತಂಡ; ಗಾಯಾಳು ಅಕ್ಷರ್ ಪಟೇಲ್ ಬದಲಿಗೆ ಅನುಭವಿ ಸ್ಪಿನ್ನರ್ ಆಯ್ಕೆ

1-sadasdasd

Chikkaballapur: ನಾಳೆ ಶಾಲಾ, ಕಾಲೇಜುಗಳಿಗೆ ರಜೆ ಇಲ್ಲ

1-sad-sad

Karnataka Bandh; ದಕ್ಷಿಣ ಕನ್ನಡ, ಉಡುಪಿ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ

1-ssadas

World Cup Cricket ; ಯಾವುದೇ ತಂಡದ ಆಟಗಾರರಿಗೆ ಗೋಮಾಂಸ ಲಭ್ಯವಿಲ್ಲ

Gundlupet: ಚಿನ್ನದ ವ್ಯಾಪಾರಿಯ ಕಾರು ಅಡ್ಡಗಟ್ಟಿ 44 ಲಕ್ಷ ರೂ. ದರೋಡೆ

Gundlupet: ಚಿನ್ನದ ವ್ಯಾಪಾರಿಯ ಕಾರು ಅಡ್ಡಗಟ್ಟಿ 44 ಲಕ್ಷ ರೂ. ದರೋಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.